Oppanna.com

ಶುದ್ಧಮುದ್ರಿಕೆ -ಭಾಗ -6

ಬರದೋರು :   ವಿಜಯತ್ತೆ    on   05/06/2020    1 ಒಪ್ಪಂಗೊ

ಶುದ್ಧಮುದ್ರಿಕೆ -ಭಾಗ -6
(ಕೊಳೆ, ಶುದ್ಧ ಅಡಿಗೆ, ಇತರ)
ಮದಾಲಾಣ ಅಜ್ಜಿಯಕ್ಕೊ ಹೇಳೆಂಡಿದ್ದ ಕೊಳೆ,ಶುದ್ಧ ಈಗಾಣವಕ್ಕೆ ಅರ್ಥ ಅಪ್ಪದು ಕಷ್ಟವೇ. ಅದರ ಪಾಲುಸೆಂಡು ಬಪ್ಪದೂ ಬ0ಙವೆ ಹೇಳುವೊ°..ಈಗಾಣ ಧಾವಂತ ಜೀವನದ ಪರಿಸ್ಥಿತಿಗೆ ಈ ಮಾತು ಸರಿಯೇ.
ಮುಂದಾಣವಕ್ಕೆ ಅರಡಿವಲೆ ಬೇಕಾಗಿ ಎನ್ನ ಗಮನಕ್ಕೆ ಬಂದದರ ನಿಂಗಳ ಮುಂದೆ ಹಾಕ್ತೆ..
1.ಅಡಿಗೆ ಕೋಣೆಲಿ ಅಶನದ ಕೊಳೆ ರಜ ಕಡ್ಪ.ಹಾಂಗೇ ದೋಸೆ, ಇಡ್ಳಿ,ಕೊಟ್ಟಿಗೆ, ಹೀಂಗೆ ಅಕ್ಕಿ ಐಟಮ್ಸ್ ಕೊಳೆಯೆ.
2.ಆದರೆ ಬೆಳ್ತಿಗೆ ಅಕ್ಕಿ ಅಶನ,ಕೊಯಿಶೆಕ್ಕಿ ಅಶನದಷ್ಟು ಕಠಿಣದ್ದಲ್ಲ. ಕಾರಣ, ಬೆಳ್ತಿಗೆ ಅಕ್ಕಿಗೆ ಭತ್ತ ಬೇಶದ್ದೆ ಅಕ್ಕಿ ಮಾಡುವದು.
3.ಈ ಕಾರಣ  ಇದು ದೇವರ ನೈವೇದ್ಯಕ್ಕೆ, ಒಪ್ಪತ್ತು,ಕೆಲವು ವ್ರತಂಗೊಕ್ಕೆ, ಅನುಪತ್ಯಂಗೊಕ್ಕೆ, ಸಮಾರಾಧನಗೆ ಯೋಗ್ಯ.
4. ಒಪ್ಪತ್ತು ವ್ರತಂಗೊ ಕೆಲವಾರು ಇದ್ದು. ಕಾರ್ತಿಕ ಸೋಮವಾರ(ಕಾರ್ತಿಕ ಮಾಸಲ್ಲಿ ಬಪ್ಪ ಸೋಮವಾರ), ತಿಂಗಳು ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಏಕಾದಶಿ, ಪ್ರದೋಶ, ಹೀಂಗೆ ಹಲವು.
5. ಏಕಾದಶಿಗೆ ನಿರಾಹಾರ. ಬೊಂಡ ವಗೈರೆ ಪಾನೀಯ ಕುಡಿವಲಕ್ಕು.ಇರುಳಿಂಗೊಂದು ಲಘು ಉಪಾಹಾರ.
6. ಏಕಾದಶಿ ಆಚರಿಸಿದೊವು ಮಾರಣೆದಿನ ದ್ವಾದಶಿ ಆಚರಣೆ ಮಾಡ್ಳಿದ್ದು.ಅದಕ್ಕೆ  ಉದಿಯಪ್ಪಾಣ ಪಲಾರ, ಅಂದು ನೆಲ್ಲಿಕಾಯಿ ತಂಬುಳಿ ವಿಶೇಷ. ಎನ್ನ ದೊಡ್ಡ ಅತ್ಯೋರು ಒಬ್ಬ ಅವರ ದ್ವಾದಶಿ ಪಲಾರಂದ ಅಲ್ಲಿದ್ದ ಇತರರಿಂಗು ಕೊಡುಗು.ಒಂದಿಷ್ಟು ತಿನ್ನದ್ರೆ ಅವಕ್ಕೆ ಹಿತಾಗ.
7. ಅಕ್ಕಿಯ ಹೊರತಾಗಿ ಉಪವಾಸ, ವ್ರತಾದಿಗೊಕ್ಕೆ ರಾಗಿ,ಗೋದಿ, ಹಸರು,ಕಡ್ಳೆ ಮೊದಲಾದ ಧಾನ್ಯಂಗೊ ಅಕ್ಕು.
8.ವ್ರತ,ಒಪ್ಪತ್ತು ಮೊದಲಾದ ಕಾರ್ಯಕ್ಕೆ ಊಟದ ಮದಲು ಗೋಗ್ರಾಸ ಕೊಟ್ಟಿಕ್ಕಿ ಉಣ್ಣೆಕ್ಕು.(ಈಗ ನಮ್ಮ ಶ್ರೀ ಗುರುಗೊ ನಿತ್ಯ ಗೋಗ್ರಾಸ ಕೊಡ್ಳೆ ಬೇಕು ಹೇಳತ್ತವು).
9.ಇನ್ನು ಹಾಲು ಮಜ್ಜಿಗ್ಗೆ ಶುದ್ಧ ಹೆಚ್ಚು. ಅದರಲ್ಲೂ ದನದ ಹಾಲಿಂಗೆ ಒಳ್ಳೆತ ಶುದ್ಧ. ದನದ ಹಾಲು+ಮಜ್ಜಿಗೆ ಕಾರ್ಬಾರ ಎಲ್ಲ ದೇವರೊಳ.
10.ದನದ ಹಾಲು, ತುಪ್ಪ ವಗೈರೆ ಪೂಜಗೆ ನೈವೇದ್ಯಕ್ಕೆ ಅಗತ್ಯ.
11. ಎಮ್ಮೆ ಹಾಲು+ ಮಜ್ಜಿಗೆ ಎಲ್ಲ ಅಡಿಗೆ ಒಳ.ಅಥವಾ ಕೈಸಾಲೆ(ಅಡಿಗೆ ಒಳಂದ ಹೆರಾಣದ್ದು)ಲಿ.ಇದು ಪೂಜಗೆ ವರ್ಜಯ.
12. ಮದಲಿಂಗೆ ಹಾಲು,ಮಜ್ಜಿಗೆ ಮಡಗಲೆ ಸಿಕ್ಕಕಟ್ಟುವದು.ಇದಕ್ಕೆ ಎರುಗು ವಗೈರೆ ಬಾರ.
13. ಪಂಚಗವ್ಯ- ಗೋಮಯ,ಗೋಮೂತ್ರ,ಹಾಲು,ಮೊಸರು,ತುಪ್ಪ. ಇದು ಐದು ಬಗೆ ದನದ್ದು ಆಯೆಕ್ಕು. ಅದರ ಎಲ್ಲಾ ಬಗೆ ಕೂಡಿ ತಯಾರುಸೆಕ್ಕು ಮತ್ತೊಬ್ಬ ಬ್ರಾಹ್ಮಣ.
14.  ಸೂತಕ ಶುದ್ಧಕ್ಕೆ ಪಂಚಗವ್ಯವ ಕುಟುಂಬದವು ಅಲ್ಲದ್ದೆ ಬೇರೆವು  ತಯಾರಿಸಿ ತಂದು ದರ್ಭೆಕೊಚ್ಚಿಲ್ಲಿ ಮನೆ ಇಡೀ ತಳಿವದು, ಸಕ್ಕಣಲ್ಲಿ ಅಂಗೈಗೆ ಹಾಕಿ ಕುಡಿವಲೆ ಕೊಡುವದು.
15. ಪಂಚಗವ್ಯ ಏವದೇ ಸೂತಕ ಮತ್ತೆ ಇತರ ಶುದ್ಧಕ್ಕೆ ಪ್ರೋಕ್ಷಣೆ ಹಾಂಗೂ ಸೇವನೆ.
16. ಅದಲ್ಲದ್ದೆ ಪಂಚಗವ್ಯ ಮಾನವ ದೇಹದ ಇತರ   ದೋಷ ನಿವಾರಣೆಗೆ ಒಳ್ಳೆಯ ಗವ್ಯ ಹೇಳಿ ಆಯುರ್ವೇದ ಹೇಳುತ್ತು. ಈಗಾಣ ಲೆಕ್ಕಲ್ಲಿ ವೈರಸ್ ನಿರೋಧಕ.
17. ಮದಲಿಂಗೆ ಹೆರಾಣವಕ್ಕೆ(ಇದು ನಿಂಗೊಗೆ ಅರ್ಥ ಆದಿಕ್ಕು)ಎತ್ತರಕೆ ಕೈಗೆ ಹಾಕುವದು. ಕೈಂದ ಕೈಗೆ ಪಗರ್ಲಿಲ್ಲೆ. ಈ ಬಗ್ಗೆ ಸಣ್ಣದಿಪ್ಪಗ ಒಂದಾರಿ ಅಜ್ಜಿ ಹತ್ರೆ ಕೇಳಿತ್ತೆ. ಅಂಬಗ..”ಅವು ಮಾಂಸ ತಿಂಬವು. ಅದಲ್ಲಿ ದೋಷ ಇದ್ದು. ಒಂದು ರೀತಿ ವಾಸನೆ!”. ಹೇಳಿತ್ತವು.
18. ಎಂತ ದೋಷಾ!. ಈಗ ಹೇಳುವ ವೈರಸ್ ಆಗಿಕ್ಕೊ..ಉಮ್ಮಪ್ಪ!!.
19. ಮದಲಾಣವರತ್ರಂದ ಹೆಚ್ಚಿನ ವಿವರ ಸಿಕ್ಕಿಕ್ಕ. ಕೇಳಿರೆ, ತೊಳಚ್ಚಲಾಗ ಹೇಳಿ ಕಳುಸುಗು.
20. ಮತ್ತೆ ಕೊಳೆ ಮುಟ್ಟೀರೆ ಕೈನಾದುದು ಹೇಂಗೆ? ಕೇಳ್ತೀರೋ?.
21. ನಿಜವಾಗಿಯೂ ಕೈತೊಳೆಕು. ಆದರೆ ಪ್ರತಿ ಸ್ಟೆಪ್ಪಿಲ್ಲಿಯೂ ಕೈತೊಳದು ಪೂರೈಸುಗೊ!. ಬಲದಕೈ ಕೊಳೆಯಾದರೆ;ಎಡದ ಕೈಲಿ ನೀರಿದ್ದ ಗ್ಲಾಸೊ,ಚೆಂಬೋ ಓರೆಮಾಡಿ ನೀರು ಸೋಂಕುಸಿ ಬಿಡುವದು.ಎಡದಕೈ ಆದರೆ ಬಲದ್ದಲ್ಲಿ; ಎರಡೂ ಕೈ ಕೊಳೆಯಾದರೆ ಬೇರೆ ಯವರತ್ರೆ ನೀರು ಹಾಕಲೆ ಹೇಳಿಕ್ಕುವದು!!.
22ಎನ್ನ ಗಮನಕ್ಕೆಬಂದದರ,ನೆಂಪಾದ್ದರ ನಿಂಗಳ ಮುಂದೆ ತಯಿಂದೆ. ಇದಲ್ಲಿ ಊರಿಂದ ಊರಿಂಗೆ ಕೆಲವು ಬದಲಾವಣೆ ಇಕ್ಕು.
~~~~~***~~~~~
ಲೇ.~ವಿಜಯಾಸುಬ್ರಹ್ಮಣ್ಯ, ಕುಂಬಳೆ

One thought on “ಶುದ್ಧಮುದ್ರಿಕೆ -ಭಾಗ -6

  1. ಉತ್ತಮ ಮಾಹಿತಿ.ಗೊಂತಿಲ್ಲದ್ದ ಎಷ್ಟೋ ವಿಷಯಂಗೊ ಈ ಲೇಖನ ಮಾಲೆಂದಾಗಿ ಗೊಂತಾತು.ವಿಜಯತ್ತೆಗೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×