Oppanna.com

ಕಾಂಬಿ ಚಿಕ್ಕಮ್ಮನ ಮದ್ದು

ಬರದೋರು :   ಅನಿತಾ ನರೇಶ್, ಮಂಚಿ    on   21/07/2014    9 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ವರ್ಷಕ್ಕೊಂದು ಸರ್ತಿ ಜ್ವರ ಹೇಳಿಯೋ, ಮೂರ್ನಾಲ್ಕು ಸರ್ತಿ ಶೀತ ಹೇಳಿಯೋ, ತಿಂಗಳಿಗೆ ಎರಡು ದಿನ ತಲೆಬೇನೆ ಹೇಳಿಯೋ ಎಂಕ್ಟಪ್ಪಚ್ಚಿ ಮನುಗಿದ್ದು ಬಿಟ್ರೆ ಈ ಎಂಬತ್ತಮೂರನೇ ವರ್ಷಲ್ಲೂ ಅವ ಗಟ್ಟಿ. ಈಗಲೂ ಅಡಕ್ಕೆಯ ಹಲ್ಲಿಲೇ ಹೊಡಿ ಮಾಡಿ ಎಲೆಡಕ್ಕೆ ತಿಂಬದು ಅವ ಹೇಳಿರೆ ಅದರಲ್ಲಿ ಚೋದ್ಯ ಎಂತ ಇಲ್ಲೆ. ‘ತುಂಬಾ ಗಟ್ಟಿದ್ದು ಅಗೀಬೇಡಿ’ ಹೇಳಿ ಡಾಕ್ಟ್ರ ಹೇಳಿದ್ದು ಕೇಳದ್ದೆ ಇದು ಐದನೇ ಹಲ್ಲು ಸೆಟ್ಟು ಅವಂದು. ಅಲ್ಲ.. ಮತ್ತೆ ಎಲೆಡಕ್ಕೆ ಅಗಿವಲೆಡಿಯದ್ದ ಹಲ್ಲು ಸೆಟ್ಟು ಇದ್ದರೆಂತ ಇಲ್ಲದ್ದೆರಂತ? ಅಶನ ಇಷ್ಟು ಮುರುಡ್ಸಿ ನುಂಗುಲೆ ಎಡಿತ್ತಿಲ್ಲೆಯೋ.. ಅದಕ್ಕೆ ಹಲ್ಲು ಸೆಟ್ಟೇ ಬೇಕೋ ಹೇಳುದು ಅವನ ಹನ್ನೆರಡಾಣೆ ಪ್ರಶ್ನೆ. ಒಪ್ಪದ್ದೇ ಇಪ್ಪಲೆಡಿಗೋ ಅದರ..

ಈಗಾಣ ತಲೆಬೆಶಿ ಹಲ್ಲು ಸೆಟ್ಟಿಂದಲ್ಲ… ಎಲ್ಲಿತ್ತೋ ಏನೋ ಒಂದು ಹೊಸಾ ಕಾಲೆ ಬಂದು ಎಂಕ್ಟಪ್ಪಚ್ಚಿಯ ಹಿಡ್ಕೊಳ್ಳೆಕ್ಕಾ?

ಬಲದ ಕೈ ಒಂದು ಎಂತ ಮಾಡಿರೂ ಮೇಲಂಗೆ ಹೋಗಾ.. ಹೋಗದ್ದರೆ ಎಂತ ಕೆಳವೇ ಇರ್ಲಿ ಹೇಳಿ ನಿಂಗ ಹೇಳುವಿ . ಆದರೆ ಬೇನೆ ಅಪ್ಪದು ಅವಂಗನ್ನೆ .. ಅವನ ಪಿರಿ ಪಿರಿ ತಡೆಯದ್ದೆ ಒಂದೆರಡು ದಿನ ಕಾಂಬಿ ಚಿಕ್ಕಮ್ಮನತ್ರೆ ಎಣ್ಣೆ ಉದ್ದಿತ್ತು. ಕೈಗೆ ಬೆಶಿನೀರಿನ ಶೇಕ ಕೊಟ್ಟತ್ತು ..ಎಲ್ಲಾ ಆತು .. ಅಷ್ಟಪ್ಪಗ ತೆಕ್ಕೋ… ಕೈ ಕಂಡಾಬಟ್ಟೆ ಬೀಗಿತ್ತು..

ಅಯ್ಯೋ.. ಎಂಕ್ಟಪ್ಪಚ್ಚಿ ಕೈಯಲ್ಲ ..ಕಾಂಬಿ ಚಿಕ್ಕಮ್ಮಂದು .. ಮತ್ತೆಂತ ಮಾಡುದು ಎಂಕ್ಟಪ್ಪಚ್ಚಿ ಅದೇ ಎಣ್ಣೆಯ ಕಾಂಬಿ ಚಿಕ್ಕಮ್ಮನ ಕೈಗೆ ಉದ್ದಿದ..ಅದೇ ಕುಪ್ಪಿಲಿ ಬೆಶಿ ನೀರು ತುಂಬ್ಸಿ ಶೇಕ ಕೊಟ್ಟ.
ಕಾಂಬಿ ಚಿಕ್ಕಮ್ಮ ಉಶಾರಾದರೂ ಎಂಕ್ಟಪ್ಪಚ್ಚಿಯ ಕೈ ಬೇನೆ ರಜ್ಜವೂ ಸುದಾರ್ಸಿದ್ದಿಲ್ಲೆ.
ಹೋಮಿಲಿ ಇದ್ದ ಎಲ್ಲಾ ಮದ್ದು ಮಾಡಿ ಮುಗುದಪ್ಪಗ ಹೋಮಿಯೋಪತಿ ನೆಂಪಾತು.. ರಜ್ಜ ಶುಗರ್ ಇದ್ದು ಹೇಳಿ ಎಂತದಕ್ಕೂ ಸಕ್ಕರೆ ಹಾಕದ್ದೆ ಕುಡಿವ ತಿಂಬ ಎಂಕ್ಟಪ್ಪಚ್ಚಿಗೆ ಇದು ಒಳ್ಳೇ ಪೆಪ್ಪುರುಮಿಂಟಿನ ಹಾಂಗೆ ಲಾಯ್ಕಾತು. ಒಂದೆರಡು ತಿಂಗಳು ದೂಡಿದ.

ಉಹೂಂ… ಈಗ ಪ್ರಿಡ್ಜಿನ ಮೇಲೆ ಮಡುಗಿದ ಮಾತ್ರೆ ತೆಗವಲೆ ಕೂಡ ಬೇರೆ ಜೆನ ಬೇಕಾತು.. ಇದು ತಿಂಬಲೆ ಲಾಯ್ಕಾವ್ತರೂ ಕೈ ಬೇನೆಗಾಗ ಹೇಳಿದ್ದೇ ಅಪ್ಪಚ್ಚಿ ಆಯುರ್ವೇದ, ಇಂಗ್ಲೀಷು ಮದ್ದು ಎಲ್ಲವನ್ನೂ ಒಟ್ಟೊಟ್ಟಿಂಗೆ ಶುರು ಮಾಡಿದ.

ಈಗ ವೆಂಕ್ಟಪ್ಪಚ್ಚಿ ಉಂಬಲೆ ಕೂದರೆ ಕೋಳಿ ಒಕ್ಕಿದ ಹಾಂಗೆ ಉಂಬದು.ಯಾವಾಗ ನೋಡಿರೂ, ಬಾಯಿ ಹುಣ್ಣು , ಹೊಟ್ಟೆ ಸರಿ ಇಲ್ಲೆ ಹೇಳುವ ಎಲ್ಲಾ ಕಾಯಿಲೆಗಳ ಪಟ್ಟಿಯು ಇದರೊಟ್ಟಿಂಗೆ ಸೇರಿ ಇನ್ನಷ್ಟು ಮದ್ದಿನ ಕುಪ್ಪಿ ಫ್ರಿಡ್ಜಿನ ಮೇಲೆ ಕೂದತ್ತು.. ಈಗಂತೂ ಎಂಕ್ಟಪ್ಪಚ್ಚಿಗೆ ಉಣ್ಣದ್ದೆಯೂ ಹೊಟ್ಟೆ ತುಂಬಿಸಿಕೊಂಬಲೆ ಎಡಿಗು.. ಮಾತ್ರೆ ನುಂಗಿಯೇ..
ಮೊನ್ನೆ ಮೊನ್ನೆ ಒಂದು ಜೆಂಬ್ರಕ್ಕೆ ಹೋದಿಪ್ಪಗ ಕಾಂಬಿ ಚಿಕ್ಕಮ್ಮಂಗೆ ಆರೋ ಹೇಳಿದವು.. ಫಿಸಿಯೋತೆರಪಿ ಮಾಡಿರೆ ಬೇನೆ ಕಮ್ಮಿ ಆವ್ತು ಹೇಳಿ..
ಮನೆಗೆ ಬಂದದೇ ಕಾಂಬಿ ಚಿಕ್ಕಮ್ಮ ಫ್ರಿಡ್ಜಿನ ಮೇಲಿಪ್ಪ ಎಲ್ಲಾ ಮಾತ್ರೆಗಳನ್ನು ಅಬ್ಬಿ ಒಲೆಗೆ ತಳ್ಳಿತ್ತು. ಇರುಳಾಣ ಮೀಯಾಣಕ್ಕೆ ನೀರು ಬೆಶಿ ಅಪ್ಪಲೆ ಸಾಕಾತಿದ.
ಮರದಿನ ವೆಂಕ್ಟಪ್ಪಚ್ಚಿಯ ಫಿಸಿಯೋತೆರಪಿ ಶುರು ಆತು.

ಡಾಕ್ಟ್ರನಲ್ಲಿಗೆ ಹೋಯೆಕ್ಕಾರೆ ನಾಲ್ಕು ಕಿಲೋಮೀಟರ್ ಇದ್ದು.. ನೆಡಕ್ಕೊಂಡು ಹೋಪಲೆಡಿಯ.. ಅದೂ ಉದ್ಯಪ್ಪಗ ಎಂಟು ಗಂಟೆಂದ ಒಂಬತ್ತೂವರೆಯ ಒಳ ತಲ್ಪೆಕ್ಕು.. ಮತ್ತೆಂತ ಮಾಡುದು ಬಸ್ಸೇ ಗತಿ ಅಷ್ಟೇ.. ಪೇಷಂಟಿನ ಒಬ್ಬನೇ ಕಳ್ಸುಲಾವ್ತಾ.. ಕಾಂಬಿ ಚಿಕ್ಕಮ್ಮಂದೇ ಉದೆಕಾಲಕ್ಕೆ ಐದು ಗಂಟೆಗೇ ಎದ್ದು ಹೆರಡುಲೆ ಶುರು ಮಾಡಿ ಹೇಂಗೋ ಬಸ್ಸು ಬಪ್ಪ ಹೊತ್ತಿಂಗೆ ರೆಡಿ ಆತು. ಇಡೀ ಬಸ್ಸಿಲಿ ಶಾಲೆ ಮಕ್ಕಳ ದಿಮ್ಕು. ಕೂಪಲೆ ಬಿಟ್ಟು ನಿಂಬಲೇ ಜಾಗೆ ಇಲ್ಲೆ.. ಸೀನಿಯರ್ ಸಿಟಿಜನ್ ಅಲ್ಲದಾ ಹೇಳಿ ಆರಾರು ಸೀಟು ಬಿಟ್ಟು ಕೊಡುಗಾ ಹೇಳಿ ನೋಡಿದವು ಇಬ್ರುದೇ.. ಒಬ್ಬನೂ ಇವರ ಹೊಡೆಂಗೇ ನೋಡಿದ್ದವಿಲ್ಲೆ..
ಹೇಂಗೋ ಎತ್ತಿತ್ತು ಅಲ್ಲಿಗೆ ಹೇಳುವ..

ಆ ಡಾಕ್ಟ್ರ ಸಣ್ಣ ಪ್ರಾಯದವ.
ನೋಡಿದ ಕೂಡ್ಲೇ.. ‘ನಿಂಗೊಗೆಷ್ಟಾತು ಪ್ರಾಯ’ ಹೇಳಿ ಕೇಳಿದ.
‘ಎಂಬತ್ತಮೂರು ಆತಷ್ಟೇ ..’
‘ಅಪ್ಪೋ.. ಹಾಂಗಾರೆ ನಿಂಗಳ ಪ್ರಾಯಕ್ಕೆ ನಿಂಗ ಬಾರೀ ಹೆಲ್ದೀ ಇದ್ದಿ.. ‘
ಎಂಕ್ಟಪ್ಪಚ್ಚಿಗೆ ಕೊಶಿ ಆತು.
‘ಈಗೆಂತ ಪ್ರಾಬ್ಲೆಮ್ ನಿಂಗೊಗೆ’
‘ಎಂತ ಇಲ್ಲೆ.. ರಜ್ಜ ಕೈ ಬೇನೆ ಇದಾ.. ಈ ಬಲದ ಕೈ ಮೇಲೆ ಹೋವ್ತಿಲ್ಲೆ..’
‘ಅಪ್ಪೋ.. ಇದರ ಗುಣ ಮಾಡುದು ಬಾರೀ ಸುಲಭ..’ ಮೊದಾಲು ಐನೂರು ರೂಪಾಯಿ ಫೀಸು ಕಟ್ಟಿ ಹೇಳಿದ. ಅದೆಂತಕೆ ಮೊದಾಲು ಕಟ್ಟುದು ಹೇಳಿ ಎಂಕ್ಟಪ್ಪಚ್ಚಿ ಕೇಳಿದ್ದಕ್ಕೆ ‘ಮತ್ತೆ ನಿಂಗಳ ಕೈ ಕಿಸೆವರೆಗೂ ನೆಗ್ಗುಲಾಗದ್ದರೆ ಹೇಳಿ ಅಷ್ಟೇ.. ಹ್ಹೆ ಹ್ಹೆ’ ಹೇಳಿದ ಆವಾ
.. ಎಂತದೋ ಒಂದು ಗೋಂದಿನ ಹಾಂಗಿಪ್ಪದರ ಎಂಕ್ಟಪ್ಪಚ್ಚಿಯ ಕೈಗೆ ಉದ್ದಿದ. ಮತ್ತೊಂದು ಸಣ್ಣ ಮಂದೆ ಇಪ್ಪ ಮಿಷನ್ನಿನ ಅಲ್ಲಿಗೆ ಮಡುಗಿ ಸುತ್ತ ಸುತ್ತ ಸುತ್ತಿಸಿದ. ಗೋಡೆಂದ ರಜ್ಜ ದೂರ ನಿಲ್ಸಿ ಇದಾ ಈಗ ಬಲದ ಕೈ ಬೆರಳಿಲಿ ಗೋಡೆಲಿ ಚಿತ್ರ ಬರದ ಹಾಂಗೆ ಮಾಡಿ ಹೇಳಿದ. ಮತ್ತೆ ಎದುರಂಗೆ ಕೈಯ ಉರುಟುರುಟು ಸುತ್ತಿಸಿ ಹೇಳಿದ.. ಇನ್ನು ನೆಲಲ್ಲಿ ಕೂದು ಕೈಯ ನೆಲಲ್ಲೇ ಅತ್ತಂದಿತ್ತ ಇತ್ತಂದತ್ತ ಹನ್ಸುಲೆ ಹೇಳಿದ.. ಇದನ್ನೆ ಮನೆಗೆ ಹೋಗಿ ದಿನಲ್ಲಿ ನಾಲ್ಕು ಸರಿ ಮಾಡೆಕ್ಕು.. ಬೇಗ ಗುಣ ಆವ್ತು..

ಕಾಂಬಿ ಚಿಕ್ಕಮ್ಮ ಡಾಕ್ಟ್ರ ಎಂತೆಲ್ಲಾ ಹೇಳಿದ್ದು ಎಂಕ್ಟಪ್ಪಚ್ಚಿಗೆ ಹೇಳಿ ಸರಿಯಾಗಿ ಕೇಳಿಕೊಂಡತ್ತು.. ಹೇಂಗೂ ಪೇಟೆಗೆ ಬಂದಾಯ್ದಲ್ಲದ.. ಹೋಟೆಲ್ಲಿಂಗೆ ಹೋಗಿ ಒಂದು ಮಸಾಲೆ ದೋಸೆ ತಿಂಬ ಆಗದೋ.. ಮತ್ತೆ ಎನ್ನ ಮನೆಲಿ ಸುತ್ತುವ ವಾಯಿಲ್ ಸೀರೆಗ ಎಲ್ಲಾ ಹರುದು ಕೀತಾಯ್ದು.. ಅದೊಂದು ನಾಲ್ಕು ತೆಕ್ಕೊಳ್ಳೆಕ್ಕು.. ಒಂದರಿ ವಸ್ತ್ರದ ಅಂಗಡಿಗೂ ನುಗ್ಗುವ ಆತೋ.. ಹೇಳಿತ್ತು.. ಎಂಕ್ಟಪ್ಪಚ್ಚಿಗೆ ಎದೆ ಒಡವದೊಂದು ಬಾಕಿ ಹೆಂಡತಿಯ ಪಟ್ಟಿ ಕೇಳಿ..

ಮರದಿನ ಉದ್ಯಪ್ಪಗ ಅಪ್ಪಚ್ಚಿ ಹೆರಡುವಾಗ ಕಾಂಬಿ ಚಿಕ್ಕಮ್ಮ ಹೇಳಿತ್ತು.. ‘ನಿಂಗ ಇನ್ನು ಫಿಸಿಯೋತೆರಫಿ ಗೆ ಹೋಯೆಕ್ಕು ಹೇಳಿ ಇಲ್ಲೆ.. ದಿನಾ ಒಂದೊಂದು ಕೋಣೆಯ ಸ್ವಿಚ್ ಬೋರ್ಡಿನ ಸುತ್ತ ಇಪ್ಪ ಬಲೆ ಕಸವು ಕ್ಲೀನ್ ಮಾಡಿ ಕೋಣೆಯ ನೆಲ ಉದ್ದಿ.ಅವ ಹೇಳಿದ ಒಂದನೇ ಮತ್ತು ಮೂರನೇ ವ್ಯಾಯಾಮ ಆವ್ತು..ಮತ್ತೆ ಅಡುಗೆ ಮನೆಗೆ ಬಂದು ದೋಸೆ ನಿಂಗಳೇ ಎರೆರಿ.. ಎರಡನೇ ವ್ಯಾಯಾಮ ಆವ್ತು.. ದಿನಾಗಳು ಅವಂಗೆ ಕೊಡುವ ಐನೂರು ರೂಪಾಯಿ ಎನಗೆ ಕೊಡಿ .. ಬಪ್ಪ ತಿಂಗಳಿಲಿ ಒಂದು ಚೈನ್ ಮಾಡ್ಸುವೆ’ ಹೇಳಿತ್ತು

ಮರದಿನಂದ ಎಂಕ್ಟಪ್ಪಚ್ಚಿ ಬೇನೆ ಹೇಳಿ ಹೇಳಿದ್ದರ ಆರೂ ಕೇಳಿದ್ದವಿಲ್ಲೆ..

9 thoughts on “ಕಾಂಬಿ ಚಿಕ್ಕಮ್ಮನ ಮದ್ದು

  1. ಎಂಕಟನ ಸಂಕಟದ ಶುದ್ದಿ ನೈಜವಾಗಿದ್ದು, ಓದಿ ತುಂಬಾ ನೆಗೆ ಬಂತು. ನಿನಗೆ ಆನು, ಎನಗೆ ನೀನು ಹೇಳುವ ಅಜ್ಜ-ಅಜ್ಜಿಯರ ಅನುರೂಪ ದಾಂಪತ್ಯ ಕಂಡು ಕೊಶಿಯಾತು. ಕೂಡುಕುಟುಂಬಂಗೊ ಕಡಮ್ಮೆ ಆಗಿ, ಮಕ್ಕೊ ಪುಳ್ಯಕ್ಕೊ ಎಲ್ಲಿಯೊ ಇದ್ದೊಂಡು, ಅಜ್ಜ-ಅಜ್ಜಿ ಬೇರೆಯಾಗಿ ಇಪ್ಪಂತಹ ಸಮಾಜದ ಹುಳುಕಿನ
    ವ್ಯಂಗ್ಯ ತರಂಗದ ಒಟ್ಟಿಂಗೆ ಅನಿತಕ್ಕ ತೋರುಸಿದ್ದವು. ಮಕ್ಕೊ ಅಪ್ಪ-ಅಮ್ಮನ ಅವರ ಕೊನೆಗಾಲಲ್ಲಿ ಬಿಟ್ಟು ಹಾಕಲಾಗ ಹೇಳುವ ಉತ್ತಮ ಸಂದೇಶವನ್ನುದೆ ಕೊಟ್ಟಿದವು.

  2. “ಮರದಿನಂದ ಎಂಕ್ಟಪ್ಪಚ್ಚಿ ಬೇನೆ ಹೇಳಿ ಹೇಳಿದ್ದರ ಆರೂ ಕೇಳಿದ್ದವಿಲ್ಲೆ”. ಸೂಪೆರ್ ಆಯಿದು ನೆಗೆ ಮಾಡಿ ಸಾಕಾತು

  3. ಕಾಂಬಿ ಚಿಕ್ಕಮ್ಮನ ಮದ್ದು ಮಾಡುಲೆ ಮನಸ್ಸು ಮಾತ್ರ ಬೇಕು. ಅಷ್ಟು ಲಾಯಕ ಸುಲಭ ಖರ್ಚಿಲ್ಲದ್ದದು!

  4. ಬಸ್ಸಿಲ್ಲಿ ಅಪ್ಪಚ್ಚಿ ಆಗದ್ದರೂ ಮನೆಲಿ ಅಪ್ಪಚ್ಚಿ ಆದ ಎಂಕಟಪ್ಪಚ್ಚಿಯ ಕಥೆ ಲಾಯಕಾಯಿದು.ಮತ್ತೆ ಕಾಂಬೊ.

  5. ಎಂಕ್ಟಪ್ಪಚ್ಚಿಯ ಬೇನೆ ಗುಣ ಆತೋ ಗೊಂತಿಲ್ಲೇ. ಎನಗಂತೂ ನೆಗೆ ಮಾಡಿ ಅಳ್ಳೆ ಬಿರುದತ್ತು. ಒಳ್ಳೆ ರಸಾಯನ.
    ಹೆಚ್ಚಿನ ಬೇನೆಗಳ ಮನೇಲಿ ಮಾಡ್ತ ಕೆಲಸಂಗಳೇ ಗುಣ ಮಾಡಿ ಕೊಡ್ತು. ವ್ಯಾಯಾಮ, ಪರಿಶ್ರಮದ ಕೆಲಸ ಮಾಡಿಂಡು ಇದ್ದರೆ ಬೇನೆ ಹತ್ತರೆ ಬಪ್ಪಲೆ ಹೆದರುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×