Oppanna.com

'ಅಡಿಗೆ ಸತ್ಯಣ್ಣ°' – 41 (ಬೆಶಿ ಬೆಶಿ ಶುದ್ದಿ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   19/12/2013    17 ಒಪ್ಪಂಗೊ

ಚೆನ್ನೈ ಬಾವ°

ಇದು ಬೆಶಿ ಬೆಶಿ ಶುದ್ದಿ
ದಶಂಬ್ರ 14, 2013 ಶನಿವಾರ.
ಸತ್ಯಣ್ಣಂಗೆ ರಜೆ. ಎಲ್ಲಿಯೂ ಬುಕ್ಕು ಆದ್ದು ಇತ್ತಿಲ್ಲೆ. ಹಾಂಗೆ ಮನೆಲಿ ಕೂಬಲಿಪ್ಪ ಅಪರೂಪದ ಸಮೆಯ.
13ಕ್ಕೆ ಇರುಳು ಚುಳ್ಳಿಕ್ಕಾನ ಅನುಪ್ಪತ್ಯ ಮುಗುಶಿ ಅಡಿಗೆ ಸತ್ಯಣ್ಣ° ಮನಗೆ ಬಪ್ಪಗ ಮನೆಲಿ ಬಿನ್ನೆರು ಇದ್ದವು.adige satyanna 5 ಸತ್ಯಣ್ಣ° ಯಾವಾಗಲೂ ತಿರುಗಾಟಲ್ಲಿಯೇ ಇಪ್ಪದಿದಾ, ಹಾಂಗೆ ನೆಂಟ್ರುಗೊ ಎಲ್ಲ ಬಂದರೆ ಅವರ ಒಟ್ಟಿಂಗೆ ಸಮೆಯ ಕಳವಲೆ ಸಿಕ್ಕುತ್ಸದೇ ಕಮ್ಮಿ.
ಬಿನ್ನೆರು ಹೇದರೆ ಅಲ್ಪ ಜೆನ ಏನೂ ಇಲ್ಲೆಪ. ಸತ್ಯಣ್ಣನ ಅಕ್ಕನ ಮಗಳದಾ ಮಾಲತಿ.
ಬರೇ ಮಾಲತಿ ಹೇದರೆ ನಿಂಗೊಗೇಂಗೆ ಗೊಂತಕ್ಕಲ್ಲದ?! . ಮಾಲತಿಯ ಗುರ್ತ ಇಲ್ಲಿ ಹೇಳೇಕ್ಕನ್ನೆ ಈಗಂಬಗ-
ಸತ್ಯಣ್ಣಂಗೆ ಒಂದೇ ಒಂದು ಅಕ್ಕ ಇಪ್ಪದು. ಅಪ್ಪಾ ?
ಅದು ಕನ್ಯಾನಕ್ಕೆ ಕೊಟ್ಟದು. ನೆಂಪಿದ್ದಾ?
ಅದರ ಮಗಳು ಮಾಲತಿ. ರಾಮಕುಂಜಕ್ಕೆ ಕೊಟ್ಟದು. ಅವ° ಹೈದರಾಬಾದಿಲ್ಲಿ ಇರ್ಸು ಎಂತ್ಸೋ ಪೇಟೆ ಉದ್ಯೋಗಲ್ಲಿ.
ಅವಂಗೆ ಒಂದು ತಿಂಗಳಿಂಗೆ ಸಿಂಗಾಪುರಕ್ಕೆ ಆಪೀಸು ವಿಷಯಲ್ಲಿ ಹೋಪಲಿಪ್ಪ ಕಾರಣ ಇದು ಅಲ್ಲಿ ಒಬ್ಬನೆ ಆವ್ಸೆಂತಕೆ ಹೇದು ಊರಿಂಗೆ ಬಂದ್ಸು
ಹಾಂಗೆ ಊರಿಂಗೆ ಬಂದ ಮಾಲತಿ, ಅಬ್ಬೆ ಮನಗೂ ಬಂದೋಳು ಅಲ್ಲಿಂದ ಪ್ರೀತಿಯ ಸೋದರ ಮಾವನ ಮನಗೆ ಬಂದ್ಸಿದಾ.
ಮಾಲತಿಗೊಬ್ಬ° ಮಾಣಿ. ಒಂದು ವರುಷ ನಾಕು ತಿಂಗಳು.
ತಾನೆ ತಾನೆ ಮಾಡಿ ನಡೆತ್ತ°, ಹಲ್ಲು ಬಂದು ತೊರುಸುತ್ತ ಕಾರಣ ಸಿಕ್ಕಿದ್ದರ ಬಾಯಿಗೆ ಹಾಕಿ ಕಚ್ಚುತ್ತ° ಏವುದಾರು ಅವಂಗೆ ಸಮ ಆಗದ್ರೆ ದೊಡಾಕೆ ಬೊಬ್ಬೆ ಹೊಡದು ಊರೊಂದು ಮಾಡ್ತ°!! 🙂
ಸತ್ಯಣ್ಣ ಚುಳ್ಳಿಕ್ಕಾನಂದ ಮುಗುಶಿ ಮನಗೆ ಎತ್ತುವಾಗ ಗಂಟೆ ಹನ್ನೊಂದು ಕಳುದ್ದು. ಮಾಣಿ ಒರಗದ್ದೆ ಇತ್ತಿದ್ದ°, ಹೊಸಾ ಜಾಗೆ ಆದ ಕಾರಣವೋ ಏನ.
ಸತ್ಯಣ್ಣ ಬಂದಪ್ಪದ್ದೇ ಅಬ್ಬೆ ಮಾಣಿಗೆ ಅಜ್ಜ ಹೇದು ಪರಿಚಯ ಮಾಡಿತ್ತು. ಎಷ್ಟು ದೂರ ಇದ್ದರೆ ಎಂತ ನೆತ್ತರ ಕಾಂಬಗ ಹತ್ತರೆ ಆಗದ್ದೆ ಇರ್ತೋ, ಮಾಣಿಗೆ ಅಜ್ಜನ ಕೊಶೀ ಆತು. ಸೊಸಗೆ ಒರಗುತ್ತ ಹೊತ್ತು ಆವ್ತಷ್ಟೇ . ಶಾರದಕ್ಕ, ರಮ್ಯ , ಮಾಲತಿ ಮನಿಗಿದ್ದವಷ್ಟೆ.
ಸತ್ಯಣ್ಣ ಬಂದ ಕೂಡ್ಳೆ ಎಲ್ಲೋರು ಎದ್ದು ಲೈಟು ಹಾಕಿ ಕೂದೊಂಡು ಸುಮಾರ ಹೊತ್ತ ಅದು ಇದು ಲಟ್ಟು ಲುಸ್ಕು ಹೇದು ಅಲ್ಲಿ ಇಲ್ಯಾಣ ಒರ್ತಮಾನ ಮಾತಾಡಿದ್ದಾತು. ಮಾಣಿ ಸತ್ಯಣ್ಣನ ಕಾಲಿಲಿಯೇ ಒರಗಿದ° ಇವರ ಮಾತಿನ ಜೋಗುಳಕ್ಕೆ!!
ಸೊಸೆ ಅಂದು ಮದುವೆ ಕಳುದಿಕ್ಕಿ ಸಮ್ಮಾನಕ್ಕೆ ಬಂದೋಳು ಮತ್ತೆ ಬಂದ್ಸು ಇದು ಈಗ ಇದಾ. ಹಾಂಗೆ ಮಾತಾಡ್ಳೆ ಸುಮಾರು ಇತ್ತಿದ್ದು
ಅಂತೂ ಎಲ್ಲ ಮಾತಾಡಿ ಬಚ್ಚಿಯಪ್ಪಗ ಗಂಟೆ ಒಂದುವರೆ ಕಳುತ್ತನ್ನೇ ಹೇದು ಎಲ್ಲ ಒರಗಿದವು ಅವರವರ ಹಸೆಲಿ 😀
~
ದಶಂಬ್ರ ಚಳಿ
ಮಾಣಿಯ ಅಬ್ಬೆ ಅಪ್ಪಂಗೆ ಚಳಿ ಬಿಡೆಕ್ಕಾರೆ ಸೂರ್ಯ ಕಾಲುವಾಶಿ ಬಾನಲ್ಲಿ ಕಾದಾಯೇಕು.
ಆದರೆ ಮಾಣಿಗೆ ಸೂರ್ಯೋದಯಕ್ಕೇ ಎಚ್ಚರಿಗೆ ಆಯ್ದು. ಎದ್ದು ಕೂದೊಂಡು ಗೆಂಟು ಹಿಡಿವಲೆ ಸುರುಮಾಡಿದ°
ಸತ್ಯಣ್ಣಂಗೆ ರಜೆ ಅದಾ. ಸುರುವಿಲ್ಯೇ ಹೇಯ್ದೆ
ಸತ್ಯಣ್ಣ° ಎದ್ದವನೇ ಕಂಬುಳಿ ಮೇಗಂದಲೂ ಕೆಳಂದಲೂ ಒಂದೊಂದು ಹೊದಕ್ಕೆ ಹಾಕ್ಯೊಂಡು ಗುಸುಂಗುಸುಂ ಸುರುಮಾಡಿದ ಆ ಮಾಣಿಯ ‘ಚಾಮಿ ಕುಂಞಿ, ಒಪ್ಪ ಕುಂಞಿ, ಏಳು ಕುಂಞಿ, ಬಾ ಕುಂಞಿ’  ‘ಹರೇ ರಾಮ ಹರೇ ಕೃಷ್ಣ’ ಹೇದುಗೊಂಡು ಕರ್ಕೊಂಡು ಮುಟ್ಟೆಲಿ ಕೂರ್ಸಿಯೊಂಡು ಹಾಸಿಗೆಲಿ  ಕೂದ°
ಹಾಂಗೆ ಹಿಡ್ಕೊಂಡು ಕೂದರೆ ಅಂವ° ತಳಿಯದ್ದೆ ಕೂರ್ತನೋ! . ಅವನತ್ರೆ ಏನಾರು ಮಾತಾಡ್ಯೊಂಡು ಮಂಗಣೆ ಮಾಡದ್ರೆ ಆವ್ತೋ! ಚಳಿಲಿ ಅವಂಗೆ ಕುಟುಕುಟು ಹೇಳ್ತಲ್ಲಿ.
ಸತ್ಯಣ್ಣ° ಮತ್ತೆ ಮುಟ್ಟೆಲಿ ಕೂರ್ಸಿದ ಮಾಣಿಯ ಕೈಗಳ ತಟ್ಟಿಯೊಂಡು ಸುರುಮಾಡಿದ ‘ಜಯ್ ಜಯ್ ವಿಠಲ ಪಾಂಡುರಂಗ, ಜಯ ಹರಿ ವಿಠಲ ಪಾಂಡುರಂಗ’
ಸತ್ಯಣ್ಣನ ಹಿತವಾದ ರಾಗಕ್ಕೆ ಮಿತವಾಗಿ ಕಾವು ಕೊಟ್ಟೊಂಡಿಪ್ಪದು ಮಾಣಿಗೆ ರಜ ಬೆಚ್ಚಂಗೆ ಆಗಿ ರಜಾ ಹೊತ್ತಿಂಗೆ ಸಮಾಧಾನ ಆತು. 😀
~
ಸತ್ಯಣ್ಣಂಗೆ  ಹಾಂಗೆ ಉದಿಯಪ್ಪಗ ಎದ್ದಿಕ್ಕಿ ಅಂತೇ ಹಾಸಿಗೆಲಿ ಕೂಬ ಅಭ್ಯಾಸ ಇಲ್ಲೆ ಅದಾ.
ಶಾರದಕ್ಕ ಬೆಶಿ ಬೆಶಿ ಚಾಯ ಮಾಡಿ ತಂದು ಕೊಟ್ಟತ್ತು ಬೆಡ್ಡು ಚಾಯೆ
ಮುಟ್ಟೆಲಿ ಮಾಣಿಗೆ ಕಾವು ಕೊಟ್ಟೊಂಡಿದ್ದ ಸತ್ಯಣ್ಣ ಬೆಶಿ ಬೆಶಿ ಚಾಯವ ಅತ್ತಿತ್ತೆ ಮಾಡ್ಯೊಂಡು ಊಪಿ ಊಪಿ ಮಾಣಿಗೆ ತೋರ್ಸ್ಯೊಂಡು ಕುಡಿವಲೆ ಸುರುಮಾಡಿದ° ‘ಆವ್.. ಉಜ್ಜೀ …ಉಜ್ಜೀ ಆವ್ ಆವ್’
ಎಡೆಡೆಲಿ ತಣುದ ಬೆಶಿ ಕಾಲಿ ಗ್ಲಾಸಿನ ಸತ್ಯಣ್ಣ ಮಾಣಿಯ ಕೈಗೆ ತಾಗುಸಿ ಉಜ್ಜಿ ಮಾಡ್ತದು ಮಾಣಿಗೆ ಕೊಶಿ ಆತು ಕಾಣುತ್ತು. ಮಾಣಿಯೂ ಸುರುಮಾಡಿದ ಸತ್ಯಣ್ಣ ಮಾಡ್ತಾಂಗೆ…  ಆ… ವುಜ್ಜೀ…  😀
~
ಸತ್ಯಣ್ಣನ ಚಾಯ ಕುಡಿದ ಗ್ಲಾಸು ಕೂಡ ತಣುದತ್ತು.
ಇನ್ನಾಣದ್ದು ಒಂದು ಈಡು ಎಲೆ ತಿಂಬದು.
ಮಾಣಿಯ ಕೈಗೆ ಅಡಿಕೆ ಹೋಳು ಮಡಿಗೆ ಅಕ್ಕೆ ಅಕ್ಕೆ ಆ…ಮ್ಮ್, ಅಯ್ಯ ಅಯ್ಯ ಆ..ಮ್ಮ್, ಹೊಗೆಸೊಪ್ಪು ಖಾರ ಬೇಡಾ… ಹೇದು ಸ್ವಾಹ ಮಾಡಿದ್ದಾತು
ಬಾಯಿಲಿಪ್ಪದು ಕಡದು ನೊಂಪು ಆದಪ್ಪಗ ಒಂದರಿ ಜಾಲ ಕರೇಂಗೆ ಹೋಗದ್ದೆ ಕಳಿತ್ತ.
ಮಾಣಿಯ ಕರ್ಕೊಂಡು ಈ ಹನಿಗೆ ಜಾಲಿಂಗೆ ಹೋವ್ಸು ಬೇಡ ಹೇದು ಮಾಣಿಯ ಹಸೆಲಿ ಕೂರ್ಸಿ ‘ಅಜ್ಜ° ಈಗ ಬತ್ತೆ ಕುಂಞಿ’ ಹೇದು ಎದ್ದಿಕ್ಕಿ ಹೋದ° ಅಡಿಗೆ ಸತ್ಯಣ್ಣ° 😀
~
ಸತ್ಯಣ್ಣ° ಜಾಲ ಕರೆಂಗೆ ಹೋದವ° ಆಚಿಗೆ ಹೋಗಿ ಅವನ ಕೆಲಸ ಎಲ್ಲ ಮುಗಿಶಿ ಬರೆಕ್ಕಾರೆ ಮಾಣಿಗೆ ಚಳಿ ಸುರುವಾತು. ಸಾಲದ್ದಕ್ಕೆ ಒಬ್ಬನನ್ನೇ ಕೂರ್ಸಿಕ್ಕಿ ಹೋದ್ದದು ಬೇರೆ!
ಬೆರ್ರೇ..ನೆ ಸುರುಮಾಡಿದ°
ಕೊಂಗಾಟ ಸೊಸೆ ಕೊಂಗಾಟ ಮಾಣಿ ಕೂಗುಸ್ಸು ಕೇಟಪ್ಪದ್ದೆ ಎದ್ದಿಕ್ಕಿ ಬಪ್ಪದು ಬೇಡ ಹೇದು ಸತ್ಯಣ್ಣ ಬೇಗ ಬಂದು ಮಾಣಿಯ ಕರ್ಕೊಂಡು ವಾಪಾಸು ಕಾವು ಕೊಡ್ಳೆ ಸುರುಮಾಡಿದ°.
ಅಂತೇ ಕೂದರೆ ಆವ್ತ. ಕೆಲಸವೂ ಆಗೆಡದಾ!!
ಸತ್ಯಣ್ಣ ಶಾರದಕ್ಕನತ್ರೆ ಹೇದ° – ‘ಮಸರು ಆನು ಕಡೆತ್ತೆ ಇಂದು’ ಹೇದು
ಒಳ ದೇವರೊಳ ಮೂಲೆಲಿ ಮಡಿಗಿದ ಮಸರ ಬರಣಿಯ ಹತ್ರೆ ಹೋಗಿ ಮಂಥು ಹಾಕಿ ಬಳ್ಳಿ ಹಾಕಿ ಸತ್ಯಣ್ಣ ಮಾಣಿಯ ಮುಟ್ಟೆಲಿ ಕೂರ್ಸಿಯೊಂಡು ಮಸರು ಕಡವಲೆ ಸುರುಮಾಡಿದ ಮಾಣಿಯ ಕೈಯನ್ನೂ ಸೇರ್ಸಿಯೊಂಡು – ‘ಜಳುಂ ಬುಳು ಬೋಚು…’ 😀

ಮಾಣಿಗೆ ಹೀಂಗಿರ್ಸದರ ಕಂಡೇ ಗೊಂತಿಲ್ಲದ್ದೆ ಇಪ್ಪಗ ಭಾರೀ ಕುತೂಹಲವೂ, ಕೊಶೀಯೂ ಆಗಿ ನೆಗೆನೆಗೆ ಮಾಡಿಗೊಂಡಿತ್ತಿದ್ದ, ಮಸರು ಕಡದು ಮಜ್ಜಿಗೆ ಆಗಿ ಬೆಣ್ಣೆ ಬಪ್ಪನ್ನಾರವೂ!
~
ಸತ್ಯಣ್ಣಂಗೆ ಬೋಚು ಕಡದಾದಪ್ಪಗ ಶಾರದಕ್ಕಂಗೆ ಅಕ್ಕಚ್ಚು ಕೊಟ್ಟಿಕ್ಕಿ ಹಾಲು ಕರದಿಕ್ಕಿ ಆಚಿಗೆ ದೋಸೆ ರೆಡಿ ಮಾಡಿ ಆಗಿತ್ತಿದ್ದು ಶಾರದಕ್ಕಂಗೆ.
ತೆಳ್ಳವು ದೋಸೆ.
ಸತ್ಯಣ್ಣಂಗೂ ಬಟ್ಳು ಮಡಿಗಿ ಆದಪ್ಪದ್ದೆ ಒಲೆಬುಡ ಹತ್ರೆಯೇ ಮಾಣಿಗೂ ಒಂದು ಬಟ್ಳು ಮಡಿಗಿ ದೋಸೆ ತಿಂಬಲೆ ಸುರುಮಾಡಿದ
ಮಾಣಿಗೆ ಹಾಂಗೆ ತಟ್ಟೆಲಿ ಕೊಟ್ರೆ ತುಂಡು ಮಾಡಿ ತಿಂಬಲೆ ಅರಡಿಗ!
ಸತ್ಯಣ್ಣನೇ ಸಣ್ಣ ಸಣ್ಣಕೆ ತುಂಡುಸಿ ಬಿಕ್ಕಿ ಹಾಕಿದ ತಟ್ಟೇಲಿ ಮೆಲ್ಲಂಗೆ ಆ..ಮ್ಮ್ ಆ..ಮ್ಮ್ ಮಾಡು ಹೇದು.
ಅಂತೇ ದೋಸೆ ತಿಂಬಲೆ ಆರಿಂಗಾರು ಮೆಚ್ಚುಗೋ!?, ಕರೆಲಿ ಒಂದಿಷ್ಟು ಸಕ್ಕರೆಯನ್ನೂ, ರಜ್ಜ ಜೇನವನ್ನೂ ಬಳ್ಸಿತ್ತು ಅಜ್ಜಿ ‘ಅದ್ದಿ ಅದ್ದಿ ತಿನ್ನಾತೋ’ ಹೇದು.
ಅವನೇ ಆಗಿ ಅದ್ದಿ ತಿಂತಷ್ಟು ದೊಡ್ಡ ಅಲ್ಲದ್ದ ಕಾರಣ ಸತ್ಯಣ್ಣನೇ ದೋಸೆ ತುಂಡಿಂಗೆ ಜೇನ ಸಕ್ಕರೆ ಅದ್ದಿ ಅದ್ದಿ ಬಟ್ಲಿಲಿಡೀ ಮಡಗಿದ!
ಮಾಣಿ ಚಂದಕೆ ತಟ್ಟೆ ಅತ್ತೆ ಕವುಂಚಿ ಪೂರ ನೆಲಕ್ಕಕ್ಕೆ ಬಿಕ್ಕಿದ° .. ಹಾ.. ಎಂತ ರುಚಿ ಈಗ! ಹೇದು ಅಲ್ಲಿಂದ ಬಾಯಿಗೆ ಮೂಗಿಂಗೆ ಮೋರಗೆ ಒಟ್ಟಿಂಗೆ ಆ..ಮ್ಮ್ಮ್ಮ್
ಸತ್ಯಣ್ಣಂದು ಮತ್ತೆ ಸುರುವಾತು- ‘ತೆಳ್ಳವಲ್ಲದೋ… ಮಾಣಿಗೆ ಕರ್ಕು ಬಳ್ಸು’
ಮಾಣಿಗೆ ಬಳ್ಸಿಯಪ್ಪದ್ದೆ ಸತ್ಯಣ್ಣ ಹೇದು ಕೊಟ್ಟ ಮಾಣಿಗೆ .. ಇದ ಕುಂಞಿ.. ಕಕ್ಕು’ 😀
~
ಉದಿಯಪ್ಪಾಣ ದೊಡ್ಡ ಕೆಲಸ ದೋಸೆ ತಿಂಬದು ಮುಗಾತು.
ಇನ್ನೆಂತರ ?! ಮಜ್ಜಾನ ಮಾಡೆಕು
ಅದರಿಂದ ಮದಲೆ ಮೀಯೆಕು, ಅದರಿಂದ ಮದಲೆ ದೇವರಿಂಗೆ ಹಾಕಲೆ ನಾಕು ಪೀಪಿ ಕೊಯ್ಯೆಕು, ದನಗೊಕ್ಕೆ ತಿಂಬಲೆ ಹಾಕೆಕು. ಎಂತ ಮಾಡೆಕ್ಕಾರು ಈ ಚಳಿ ಬಿಟ್ಟು ಆಯೇಕ್ಕನ್ನೇ ಖರ್ಮ!
ಮಾಣಿಯ ಸೊಂಟಲ್ಲಿ ಎತ್ತಿಯೊಂಡು ಬೇಲಿ ಕರೇಲಿ ಇತ್ತಿದ್ದ ದಾಸನ ಹೂಗು ನಾಕು, ಹಬ್ಬಲ್ಲಿಗೆ, ಮಂಜಟಿ, ಗೋರಂಟಿ, ಕೇಪುಳ, ಕರವೀರ ಹೂಗ ಕೊಯ್ದು ತಂದಾತು, ತೊಳಶಿ ಕಟ್ಟೆಂದ ಎರಡು ತೊಳಶಿ ಸಾನ ‘ಇದಾ ಪೂಪಿ, ಚಾಮಿಗೆ’ ಹೇದು ಮಾಣಿಗೆ ತೋರ್ಸಿಯೊಂಡು. 😀
~
ಗಂಟೆ ಹತ್ತು ಸಾನ ಆಯ್ದಿಲ್ಲೆ. ಈಗಳೆ ಎಂತರ ಮೀವದು ಹೇದು ಒಂದು ವಾದದ ಎಡೆಕ್ಕಿಲಿಯೂ ಹೋಗಿ ಸತ್ಯಣ್ಣ ಮಾಣಿಯ ಕರಕ್ಕೊಂಡು ಅಬ್ಬಿಕೊಟ್ಟಗ್ಗೆ ಹೋಗಿ ಮಾಣಿಯ ತಲಗೂ ಎರಡು ಚೆಂಬು ನೀರ ಹೊಯ್ದಿಕ್ಕಿ ತನ್ನ ತಲಗೂ ಚೆರಿಗೆ ನೀರ ಕಾಲಿ ಮಾಡಿ, ವಾಪಾಸು ಬಾವಿಂದ ನಾಕು ಕೊಡಪ್ಪಾನ ನೀರೆಳದು ಚೆರಿಗ್ಗೆ ತುಂಬುಸಿ ಒಲಗೆ ಎರಡು ಹಾಳೆ, ಎರಡು ಕೊತ್ತಳಿಗೆ ಚಳ್ಳಿ, ಪೂಜಗೆ ಕೊಡಪ್ಪಾನಲ್ಲಿ ನೀರೆಳದು ತಂದು ಮಡಿಗಿ ಆತು.
ಪೇಟೆ ಮಾಣಿಗೆ ಆ ಅಜ್ಜನ ಮನೆಲಿ ಅಲ್ಪ ಕೆಲಸಂಗ ಕಾಂಬಗ ಕೊಶಿ ಆತು ಕಾಣುತ್ತು. ಅಜ್ಜನ ಬೆನ್ನಾರಿಕೆ ಇತ್ತಿದ್ದ°
ಅಜ್ಜನ ಮುಟ್ಟೆಲಿಯೇ ಕೂದೊಂಡು ‘ಚಾಮಿ ಚಾಮಿ.. ಓಂಬುಚ  ಓಂಬುಚ’  ಮಾಡಿ ಆತು. ಮಾಣಿ ಹೂಗ ತೋಕಿ, ನೀರ ಚೆಲ್ಲಿ, ಮಣಿ ಆಡ್ಸಿ, ಚಕ್ರ ತಾಳ ಹೆಟ್ಟಿ ಹ್ಹು! ಒಟ್ಟು ಗೌಜಿಲಿ ಪೂಜೆ ಮಾಡಿದ° . 😀
ಅಜ್ಜ-ಪುಳ್ಳಿ ಮಾಡಿದ ಇಂದ್ರಾಣ ಪೂಜೆ ಚಾಮಿಗೆ ಕೊಶೀ ಆಗಿ ನೇವೇದ್ಯವ ಉಂಡಿಕ್ಕಿದನೋ ಹೇಳ್ತ ಹಾಂಗೆ ಆತು!! 😀
~
ಪೂಜೆ ಆತು. ಮಜ್ಜಾನ ಆಯ್ದಿಲ್ಲೆ
ಇನ್ನೆಂತ ಮಾಡ್ಸು. ತೋಟಕ್ಕೆ ಹೋಪೋ ಹೇದರೆ ಸತ್ಯಣ್ಣಂಗೆ ತೋಟ ಇಲ್ಲೆ.
ಹಾಂಗೇಳಿ ಎದುರಾಣ ಪದ್ಯಂಬಟ್ಟನ ತೋಟಕ್ಕೆ ಹೋಗಿ ಹಾಳೆಯೋ, ಬಾಳೆಯೋ, ಕುಂಬಾಳೆಯೋ ಅಲ್ಲ ಒಂದೆಡಗೆ ಹುಲ್ಲು ಕೆರಸುತ್ತಕ್ಕೋ ಪದ್ಯಂಬಟ್ಟನ ಆಕ್ಷೇಪ ಎಂತ್ಸೂ ಇತ್ತಿಲ್ಲೆ.
ನೆರೆಕರೆ ಆಗ್ಯೊಂಡು ಪದ್ಯಂಬಟ್ಟ° ಸತ್ಯಣ್ಣಂಗೆ ಅಷ್ಟು ಅನೂಕೂಲಲ್ಲಿ ಇದ್ದ°
ಹಾಂಗೇದು ಈಗ ಮಾಣಿಯ ತೋಟಕ್ಕೆ ಕರಕ್ಕೊಂಡೋಗಿ ಹೆಡಗೆ ಹುಲ್ಲ ಕೆರಸಿಯೊಂಡು ಕೂದರೆ ಮಾಣಿಗೆ ನುಸಿ ಕಚ್ಚಿ ಸುಟ್ಟವು ನೆಗೆಯದೋ
ಅಂದರೂ ಮಾಣಿಗೆ ತೋಟ ನೋಡೆಡದೋ !
ಸೊಸೆ ಮಾಣಿಗೆ ಉದ್ದಾಕೈ ಅಂಗಿ, ಕಾಲು ಮುಚ್ಚುತ್ತಟ್ಟಷ್ಟು ಉದ್ದಾ ಪೇಂಟು, ಹನಿ ಬಡಿತ್ತಕ್ಕೆ ತಲೆಗೊಂದು ಟೊಪ್ಪಿ ಕೊಟ್ಟದರ ಹಾಕ್ಸಿಯೊಂಡು ಮಾಣಿಯ ತೋಟಕ್ಕೆ ಅಂತೇ ಉದ್ದಾಕೆ ಕರಕ್ಕೊಂಡೋಗಿ ಎರಡು ಕುಂಬಾಳೆ, ಹಾಳೆ ತಂದು ಜಾಲಿಲ್ಲಿ ಹಾಕಿದ್ದಾತು.
ಮಾಣಿಗೆ ಅದರ ತೋರ್ಸಿ ಸತ್ಯಣ್ಣ ಬಾಯಿಪಾಠ ಹೇಳ್ಸಿದ ಮಾಣಿಗೆ – ‘ಹಾಳೆ.. ಬಾಳೆ.. ಕುಂಬಾಳೆ’ .
ಕೂಂಬಾಳೆಯ ಪದ ಹೇಳ್ಸಿಗೊಂಡು ಉಂಬೆಗೂ, ಕಂಜಿಗೂ ತಿನ್ನುಸಿದ್ದದಾತು ಕುಂಞಿ ಮಾಣಿ.
ಕಂಜಿ ತಿಂಬದು ಹೇಂಗೆ ಹೇಳಿಯೂ ಮಾಣಿ ಮಾಡಿ ತೋರ್ಸಿದ!
ಕಂಜಿಗೂ ಅದರ ಹಾಳಿತದವ° ಕೆದೆಗೆ ಬಂದ ಕೊಶಿ, ಲಾಗ ತೆಗದತ್ತದಾ!!:D
~
ಇನ್ನು ಚಾವಡಿಲಿ ಕೂದೊಂಡು ಮಜ್ಜಾನ ಮಾಡೇಕ್ಕದ.
ಎಡೆಲಿ ಮಾಣಿಗೆ ಜಾಯಿ, ಸತ್ಯಣ್ಣಂಗೆ ಚಾಯ ಆತು
ಸತ್ಯಣ್ಣ ಮಾಣಿಯ ತಲೆಲಿ ಒಂದು ಕಸವು ಮಡಗಿ ಸುರುಮಾಡಿದ ‘ಕಳ್ಳರ ತಲೆಯಲಿ ಕಸವುಂಟು ಹಬ್ಬಾ ಕಳಿಯದೆ ಹೋಗಾದು’
ಸತ್ಯಣ್ಣ ತಲೆಲಿ ಕಸವು ತುಂಡು ಮಡುಗುತ್ಸು , ಮಾಣಿ ಅದರ ಬಲ್ಗಿ ಇಡ್ಕುದು. ಗಂಟೆ ಅರ್ಧ ಅದರ್ಲಿ ಹೋತು 😀
~
ಸತ್ಯಣ್ಣಂಗೆ ಹೊತ್ತು ಹೋಪಲೆ ಅಲ್ಪ ಕೆಲಸ ಇದ್ದು
ಆದರೆ ಮಾಣಿಗೆ ಕೆಲಸ ಇಲ್ಲದ್ರೆ ಹೊತ್ತು ಹೋವ್ತಿಲ್ಲೆ
ಸತ್ಯಣ್ಣ ಮಾಣಿಗೆ ಬೇಕಾಗಿ ಮತ್ತೊಂದು ಸುರುಮಾಡಿದ° – “ಕಣ್ಣಾ ಮುಚ್ಚೆ ಕಾಡೇಗೂಡೆ ಉದ್ದಿನ ಮೂಟೆ ಉರುಳಿ ಹೋತು ನಿಮ್ಮಯ ಹಕ್ಕಿ ಹಾರಿ ಹೋತು ಎಂಗಳ ಹಕ್ಕಿ ಬಿಟ್ಟೇ ಬಿಟ್ಟೆ..”   (ಉಮ್ಮ! ಸತ್ಯಣ್ಣಂಗೆ ಬಾಯಿಗೆ ಬಪ್ಪಾಂಗೆ ಸರೀ ಹೇದ°)  😀
~
ಮಾಣಿಗೆ ಬಚ್ಚಿತ್ತು. ಇನ್ನೀಗ ಒಂದು ಒರಕ್ಕು ಆಯೇಕು
‘ಹೋಗಬ್ಬೋ ಒರಗು’ ಹೇದರೆ ಅವ° ಹೋಗಿ ಒರಗುತ್ತನೋ!
ಸತ್ಯಣ್ಣನೇ ಮಾಣಿಯ ಹಸೆಲಿ ಮನುಶಿ ಸುರುಮಾಡಿದ° ‘ವೋ..ಮೇ ಬಾಬಗೇ… ದಾದೀ….ಬಾಬಗೇ… ವೋಮೆ’
ಅಜ್ಜನ ಹಿತವಾದ ರಾಗಕ್ಕೆ ಮಾಣಿಗೆ ಅಲ್ಲಿಗೆ ಒರಕ್ಕು ಬಂತು 😀
~
ಗಂಟೆ ಎಷ್ಟು ಆತು ಗೊಂತಿಲ್ಲೆ.
ಪಳ್ಳಿಲಿ ಬಾಂಕು ಕೇಟತ್ತು. ಶಾರದಕ್ಕನ ಲೆಕ್ಕಲ್ಲಿ ಹೊತ್ತು ಮಜ್ಜಾನ ಆತು
ರಮ್ಯಂಗೆ ‘ಬಟ್ಳು ಮಡುಗು ಕೂಸೆ’ ಹೇದಿಕ್ಕಿ ಶಾರದಕ್ಕ ಮೀವಲೆ ಹೋತು
ಒಂದನೇ ಹಂತಿಲಿ ಸತ್ಯಣ್ಣ, ಮಾಲತಿ, ಮಾಣಿ ಊಟಕ್ಕೆ ಕೂದವು.
ಮಾಣಿಗೆ ಕುಂಞಿ ಬಟ್ಳ ಮಡಿಗಿ ಸತ್ಯಣ್ಣ ತೋರ್ಸಿ ಹೇದ° – ‘ಇದಾ ದೊಡ್ಡಾ ಬಟ್ಳು..’
ಮಾಲತಿ ತಾನೂ ಉಂಡುಗೊಂಡು ಮಾಣಿಗೂ ‘ದೊಡ್ಡ ಬಾಯಿ ದೊಡ್ಡ ಬಾಯಿ ಆ..ಮ್ಮ್’
ಅದು ಸಾಲದ್ದಕ್ಕೆ ಮಾಣಿ ಬಟ್ಳಿಲ್ಲಿ ಬಳ್ಸಿದ್ದರ ಅತ್ತೆ ತೋಕಿ ಚಾಂದ್ರಾಣ ಮಾಡಿ ಬಟ್ಳು ಕಾಲಿ ಮಾಡಿಯಪ್ಪದ್ದೆ ಊಟವೂ ಆತು. 😀
~
ಉಂಡಾತು . ಎರಡ್ಣೇ ಹಂತಿಲಿ ಶಾರದಕ್ಕನೂ ರಮ್ಯನೂ. ಮಾಲತಿ ಬಳ್ಸುಲೆ
ಸತ್ಯಣ್ಣ° ಮಾಣಿಯ ಮೇಪಲೆ
ಬೆಶಿಲು ಕಾದರೂ ಚಳಿ ಇದ್ದನ್ನೇ
ಹಸೆ ಬಿಡುಸಿ ಚಾವಡಿಲಿ ಅಜ್ಜನೂ ಪುಳ್ಳಿಯೂ ಹೊಡಚ್ಚಿದವು.
ಸತ್ಯಣ್ಣಂಗೆ ಮಧ್ಯಾಹ್ನ ಉಂಡಿಕ್ಕಿ ಒರಗುತ್ತ ಅಭ್ಯಾಸ ಇಲ್ಲದ್ರೂ ರಜಾ ಮನುಗಿ ಕಣ್ಣಡ್ಡ ಹೋವ್ತ ಕ್ರಮ ಇದ್ದು
ಆದರೆ ಮಾಣಿ ಬಿಟ್ಟು ಬೇಕನ್ನೆ ಕಣ್ಣಡ್ಡ ಹೋಪಲೆ
ಸತ್ಯಣ್ಣ ಮಾಣಿಯ ಹತ್ರೆ ಎಳಕ್ಕೊಂಡು ಕಾಲಪಾದಲ್ಲಿ ಕೂರ್ಸಿ – ಉಕ್ಕಾಚು.., ಉಕ್ಕಂಬೋಚು…, ಬಾಲೆ ಮಗುರುಂಡು ಮಗುರುಂಡು ಮಗುರುಂಡು’ 
ಅಜ್ಜನದ್ದೂ ಪುಳ್ಳಿದೂ ಗೌಜಿಯೇ ಗೌಜಿ ಹ್ಹು. 😀
~
ಇನ್ನೆಂತರ..
ಹೊತ್ತೋಪಗಾಣ ಕಾಪಿ. ಹಪ್ಪಳ ಸುಟ್ಟಾಕಿದ್ದು, ಬಟಾಟೆ ಚಿಪ್ಸು, ಗೆಣಂಗು ಹೊರುದ್ದದು.
ಅಂದಿಂಗೆ ಅಟ್ಟೆ.
ಕುಂಬ್ಳೆ ಅಜ್ಜನಲ್ಲಿ ಅಳಿಯನ ಸವಾರಿ ಬಯಿಂದು ಹೇದು ಕುಂಬ್ಳೆ ಅಜ್ಜ ಬೇಕುಬೇಕಾದ್ಸು ಪೂರಾ ಮಾಡ್ಸಿದ್ದವಡ್ಡ ಹೇದು ದೊಡ್ಡಭಾವ ಸತ್ಯಣ್ಣಂಗೆ ಫೋನು ಮಾಡಿ ಎಡಕ್ಕಿಲಿ ಹೇದವು.
ಛೆ! ಇಲ್ಲಿಯೂ ಪೂರಿ, ಬಾಜಿ, ಹಲ್ವಂಗೊ ಎಲ್ಲ ಮಾಡ್ಲೆ ಆವುತ್ತಿತ್ತು, ಮಾಣಿಯ ಆಡ್ಸುತ್ತದರಲ್ಲಿ ಬೇರೆ ಎಂತ್ಸೂ ಕೆಲಸ ಆಯಿದಿಲ್ಲೆ! ಹೇದು ಸತ್ಯಣ್ಣ ಮನಸ್ಸಿಲೇ ಹೇಳಿಗೊಂಡ°.
ಎರಡು ದಿನ ಅಕ್ಕನೂ, ಸೊಸೆಯೂ ಇದ್ದರೆ ಪಾಕ ಎಂತಾರು ಮಾಡಿಕ್ಕುವ ರಂಗನನ್ನೂ ಬರ್ಸಿ ಹೇದು ಗ್ರೇಶಿದ°.
ಇನ್ನೆಂತಾರು ಮತ್ತೆ ಹೊತ್ತೋಪಗ ಮಾಡುವೋ ಹೇದು ಶಾರದಕ್ಕ°
ಮಾಣಿಗೆ ಎಂತ್ಸರ ಇನ್ನೀಗ ಹೊಸತ್ತು ಹೇದುಕೊಡ್ಸು ?
ಸತ್ಯಣ್ಣ° ಮಾಣಿಯ ಹೆಗಲ್ಲಿ ಕೂರ್ಸಿ ತೋಂಪಟ ತೋಂಪಟ  ನಾಕು ಸರ್ತಿ ಸುತ್ತುಬಂದು ಕೆಳ ಇಳುಶಿ ಮಾಡಿಗೊಂಡು ಮಾಣಿ ಕಿಟಿಕಿಟಿ ನೆಗೆ ಮಾಡಿದ್ದದಾತು.
ಹೊತ್ತು ತಿರುಗಿ ಬಚ್ಚಿ ಅಪ್ಪಗ ಕಾಲು ನೀಡಿ ಅಜ್ಜನೂ ಪುಳ್ಳಿಯೂ ಕೂದವು. ಸತ್ಯಣ್ಣ ಮಾಣಿಯ ಕಾಲು ಉದ್ದಿಗೋಂಡು ಹೇದ-
ಜಾಲಕೆತ್ತಿ ಸಗಣ ಉಡುಗಿ ಕೆಮ್ಮಣ್ಣು ಕಿಟ್ಟಿ ಸೇಡಿಯ ಬರದು… ಮಳೆ ಬಂದು ಹೋತು… ಮಳೆ ಬಂದು ಹೋತು ಹೇಳಿ ಅವನ ಇಡೀ ಮೈ ಉದ್ದಿ ಅಪ್ಪಗ ಮಾಣಿಗೆ ಭಾರೀ ಕೊಶೀ ಆತದಾ…
ಮತ್ತಾಣದ್ದು ಇನ್ನೊಂದು ವಿದ್ಯೆ- ಮಾಣಿಯ ಬೆನ್ನಿಲ್ಲಿ ಕೂರ್ಸಿಯೊಂಡು ಬಟ್ಟಂಗೋಣಿ ಉಪ್ಪು ವೇಣೋ ಪಟ್ರಿಚ್ಚ..ಪುರ್ರು ಪುರ್ರುರ್  ಪುರ್ರ್ರ್ರು.
ಇದು ನಾಕಾವೃತ್ತಿದು.
ಮತ್ತಾಣದ್ದು – “ಕೂಕಿ.. ಕಂಡತ್ತು”. ಐದಾವೃತ್ತಿ .

ಇನ್ನು ಒಂದರಿ ಮಾಣಿಗೆ ರಜಾ ರೆಷ್ಟು  😀
~
ರಜಾ ರೆಷ್ಟು ಹೇದ ಮತ್ತೆ ಮೂರ್ಸಂಧಿ ವರೇಂಗೆ ಎಲ್ಲ ಒರಗುತ್ತ ಕ್ರಮ ಇಲ್ಲೆನ್ನೆ!.
ಮನೆಲಿಪ್ಪೋರು ಆಚಿಗೆ ಹೋಗಿ ಈಚಿಗೆ ಬರೇಕ್ಕಾರೆ ಮಾಣಿಗೆ ಎದ್ದು ತರ್ಕ ಸುರುಮಾಡಿ ಆಯ್ದು
ಮಾಣಿಗೆ  ಜಾಯಿ ಕುಡುದಾತು.
ಈಗ ಮೂರ್ಸಂಧಿ ಅಪ್ಪಂದ ಮದಲಾಣ ಚಾ ಸಮಯ
ಅಜ್ಜಿ ಮಾಡಿಕೊಟ್ಟ ಉಜ್ಜಿ ಉಜ್ಜಿ ಚಾಯ ಊಪಿ ಊಪಿ ಕುಡುದಾತು.
ಅಜ್ಜನೂ ಪುಳ್ಳಿಯೂ ಕೆಲಸಲ್ಲಿ ತೆರಕ್ಕು.
ಏವುದು ?
ಸುರುವಾಣದ್ದು –ಹಾಳೆ ಬಾಳೆ ಕುಂಬಾಳೆ …ಪುಟ್ಟು ಕೈ ಮೊಗಚ್ಚು’
ಮತ್ತಾಣದ್ದು – ದೊಡ್ಡಾ ಬಾನಿಂದು ಬೋಚೊಂದು ಬಿದ್ದತ್ತು.. ಇಲ್ಲಿ ಕುಂಞಿಂಬೆ, ಇಲ್ಲಿ ಪುಟ್ಟುಂಬೆ , ಇಲ್ಲಿ ಕೆಂಪಿ, ಇಲ್ಲಿ ಕಾರ್ಚಿ, ಇಲ್ಲು ಹುಲ್ಲಾಕುತ್ಸು, ಇಲ್ಲಿ ಅಕ್ಕಚ್ಚು ಹಾಕುತ್ಸು, ಅಜ್ಜಾನ ಮನಗೆ ಹೋಪ ದಾರಿ ಕಾಣುತ್ತಿಲ್ಲೆ ಕಾಣುತ್ತಿಲ್ಲೆ  ಕಾಣುತ್ತಿಲ್ಲೆ ಕಿಳಿಕಿಳೀ..
ಉಪ್ಫ್! ಅದು ಬೊಡುದತ್ತು.
ಮತ್ತೆ ಅವಲಕ್ಕಿ ಧವಲಕ್ಕಿ ಕಾಂಚನ ಮಿಣಿ ಮಿಣಿ ಧಾಮ್ ಧೂಮ್ ಧಸ್ಕುಂ ಪುಸ್ಕುಂ ಕೈಂಯ್ಯಂ ಕೊಟ್ರೆ
ಮಾಣಿಯ ತಲಗೆ ನಾಕ ಹೆಟ್ಟಿ ಆತು. ಮಾಣಿ ತಲೆ ಉದ್ದಿಗೊಂಡಾತು 😀
~
ದೀಪ ಹೊತ್ಸಿ ಆತು. ಅಜ್ಜಿ ಒಟ್ಟಿಂಗೆ ಮಾಣಿಗೆ ಚಾಮಿ ಚಾಮಿ ಮಾಡಿಯಾತು
ಸತ್ಯಣ್ಣಂಗೂ ಮಿಂದು ಇರುಳಾಣ ಪೂಜೆ ಆತು.
ಇನ್ನೀಗ ಊಟಂದ ಮದಲೆ ರಜಾ ಪುರುಸೊತ್ತಿದ್ದು
ಎಂತ್ಸರ ಮಾಣಿಗೆ ಈಗ ಪಾಠ ಮಾಡುತ್ಸು ?
ಸತ್ಯಣ್ಣಂಗೆ ನೆಂಪಾತು ಆಟ. ಬಲಿಪ್ಪಜ್ಜನ ಪದ
ಸತ್ಯಣ್ಣ ಮಾಣಿಯ ಎದುರೆ ಕೂರ್ಸ್ಯೊಂಡು ಸುರುಮಾಡಿದ ಕೈಲಿ ಒಂದು ಸಣ್ಣ ಕೋಲ ಹಿಡ್ಕೊಂಡು – ‘ಗಜಮುಖದವಗೆ ಗಣಪಗೆ..’ .
ಅದಾದಿಕ್ಕಿ ಸೀದ ನಾಕು ಏರು ಪದ – ಇತ್ತಲು ಹತ್ತಿತು ಕರ್ಣಾರ್ಜುನರಿಗೆ ಕಾಳಗ …..ಯ್ಯೆ ಯ್ಯೆ ಯ್ಯೇ..!

ಮಾಣಿಗೂ ‘ಯ್ಯೆ ಯ್ಯೆ ಯ್ಯೇ..’  😀
~
ಮತ್ತಾಣದ್ದು ಇರುಳಾಣ ಊಟ. ತಾಜಾ ಗಂಜಿಯೂಟ ಅಂದಿಂಗೆ
ಉಂಡಿಕ್ಕಿ ಕೈತೊಳವಲೆ ಜಾಲ ಕೊಡಿಯಂಗೆ ಬಂದ ಸತ್ಯಣ್ಣಂಗೆ ಮೇಲೆ ಚಂದಪ್ಪ ಚಾಮಿ ಕಂಡತ್ತು
ಮಾಣಿಯ ಜಾಲಿಂಗೆ ಕರಕ್ಕೊಂಡು ಬಂದು ‘ಅದಾ ಚಂದಪ್ಪ ಚಾಮಿ… ಬಾ ಬಾ ಚಂದಪ್ಪ ಚಾಮಿ.. ಚಂದಪ್ಪ ಚಾಮಿ ಬನ್ನಿ ಬನ್ನಿ… ಹೇದು ಹೇಳ್ಯೊಂಡಿಪ್ಪಾಂಗೆ ..
ಅಲ್ಲ., ಆ ಹನಿಗೆ ಜಾಲಿಲ್ಲಿ ನಿಂದೊಂಡು ನಿಂಗೊ ಎಂತ ಮಾಡ್ಸಪ್ಪ ಹೇದು ಒಳಂದ ಕೇಟಪ್ಪಗಳೇ ಸತ್ಯಣ್ಣಂಗೆ ಗೊಂತಾದ್ದು – ‘ಓಹ್ ಹನಿ ಬೀಳ್ತಪ್ಪೋ , ಶೀತ ಸೆಮ್ಮ ಸುರುವಕ್ಕು ಕುಂಞಿ,  ಹೋಪ° ಒಳ’ ಹೇದು ಒಳಬಂದವು 😀
~
ಚಳಿ ಜೋರಿದ್ದು. ಆಚೊರಿಶಾಣ ಹಾಂಗೆ ಅಲ್ಲ.
ಮಾಣಿಯ ಮುಟ್ಟೆಲಿ ಕೂರ್ಸ್ಯೊಂಡು ‘ಚಳಿ ಚಳಿ ಮುದುಕ.. ಮಕ್ಕಳ ಕೊರಳಿಗೆ ಪದಕ’
ಮತ್ತೆ ರಜಾ ಹೊತ್ತು ‘ತಾರಮ್ಮಯ್ಯಾ ತೋರಮ್ಮಯ್ಯಾ..’
ಇನ್ನು ಮಾಣಿ ಒರಗೆಕು
ಒರಗೆಕ್ಕಾರೆ ಅಂತೆ ಆವ್ತೋ. ಏವುದಾರು ಪದ ಹೇದೇ ಆಯೇಕು.
ಬಲಿಪ್ಪನ ಪದ ಹೇಳಿರೆ ಮಾಣಿ ಒರಗುತ್ತದು ಬಿಟ್ಟು ಕೊಣಿವಲೆ ಸುರುಮಾಡುಗು
ಹಾಂಗಾಗಿ ಸಮಾಧಾನ ಭಕ್ತಿರಸದ್ದೇ ಸುರುಮಾಡಿದ° ಸತ್ಯಣ್ಣ –
ಹರೇ ರಾಮ ಹರೇ ಕೃಷ್ಣ..
ಸಾಂಬಸದಾಶಿವ ಸಾಂಬಸದಾಶಿವ  ಸಾಂಬಸದಾಶಿವ ಸಾಂಬಶಿವ..
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ..
ಶ್ರೀ ರಾಮ ಜಯ ರಾಮ ಜಯ ಜಯ ರಾಮ , ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಮಾಣಿಗೆ ಒರಕ್ಕು ಬಂತು. ದೀಪದ ಬೆಣಚ್ಚಿ  ನಂದ್ಸಿ ಮನೆಯೋರು ಒರಗಿದವು.
ಸತ್ಯಣ್ಣಂಗೆ ನಾಳೆಯೂ ರಜೆಯಡ. ಎಲ್ಲಿಗೂ ಹೋಪಲೆ ಇಲ್ಲೆಡ. ಏನಾರು ವಿಶೇಷ ಅಡಿಗೆ ಇದ್ದರೆ ನಾಳಂಗೆ ಇಕ್ಕಂಬಗ ಅಪ್ಪೋ. 😀
 
 
ಹೇದಾಂಗೆ ..ಸತ್ಯಣ್ಣಂಗೆ ಈ ಪದ್ಯಂಗೊ ಎಲ್ಲ ಮರದ್ದಡ ಈಗ. ನಿಂಗೊ ಆರಿಂಗಾರು ಇಡೀ ಪದ್ಯ ಗೊಂತಿದ್ದರೆ ನೆಂಪು ಮಾಡುಸೆಲೆಡಿಗೊ 
***

***   😀 😀 😀  ***

 
 
 
 

17 thoughts on “'ಅಡಿಗೆ ಸತ್ಯಣ್ಣ°' – 41 (ಬೆಶಿ ಬೆಶಿ ಶುದ್ದಿ ವಿಶೇಷಾಂಕ)

  1. ಆಹಾ…ಪಟ್ಟುಕ್ಕಾಚು ಆಯಿದು ಅಪ್ಪಚ್ಚಿ…’ಸತ್ಯಣ್ನನ ಜೋಕುಗೊ’ ಬರೇ ಜೋಕುಗೊ ಅಲ್ಲ,ಅಲ್ಲಿ ಹವ್ಯಕ ಭಾಷೆಯ ಸೊಗಡು ಇದ್ದು,ನಮ್ಮಆಚಾರ ವಿಚಾರಂಗ,ಸಂಪ್ರದಾಯೊಂಗೊ ಇದ್ದು.ಅದಲ್ಲದ್ದೆ ಸಾಮಾಜಿಕ ಕಳಕಳಿಯೂ ಕಾಣುತ್ತು.ನೆಗೆಯ ರಸದೌತಣ ಅಂತೂ ಇದ್ದೇ ಇದ್ದು.ಹೀಂಗಿಪ್ಪ ಸತ್ಯಣ್ಣನ ಜೋಕುಗೊಹೀಂಗೇ ಮುಂದುವರಿಯಲಲೀಳಿ ಎನ್ನ ಅಪೇಕ್ಷೆ.

  2. ಸಣ್ಣಕಿಪ್ಪಗ ಹೇಳ್ಯೊಂಡಿದ್ದಿದ್ದ ಮಾತುಗಳ ಕೇಳಿ “ಓ, ಹೀಂಗೊಂದು” ಇದ್ದತ್ತು ಹೇಳಿ ಆತು. ಮರದು ಹೋದ ಮಕ್ಕಳ ಮಾತುಗಳ ನೆಂಪು ಮಾಡಿದ ಸತ್ಯಣ್ಣ/ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ. ನಲುವತ್ತೊಂದು ಹಿಡುದ ಸತ್ಯಣ್ಣಂಗೆ ನಮೋ ನಮ: ಎನಗೂ ಸತ್ಯಣ್ಣ ಹೇಳಿರೆ ತುಂಬಾ ಪ್ರೀತಿ.

  3. ಈ ಹಾಸ್ಯ ಬರಹ ಭಾರೀ ಲಾಯಕ ಆಯಿದು. ಹಳ್ಳಿ ಜೀವನದ ವಿವರಣೆ. ಸತ್ಯ ಅಣ್ಣನ ಇನ್ನೊಂದು ರೂಪ…ಕೆಲವು ಜನಕ್ಕೆ ಇಷ್ಟ ಆಗ . ಅದು ಅವರವರ ಅಭಿಪ್ರಾಯ .ಎಲ್ಲರ ಅಭಿಪ್ರಾಯವನ್ನೂ ಗೌರವಪೂರ್ಣವಾಗಿ ಸ್ವಾಗತಿಸುವ .

  4. “ಸತ್ಯಣ್ಣ” ನಮ್ಮೊಳವೇ ಇಪ್ಪ, ನಮ್ಮ ಬಲಿನ ಕುಟು೦ಬದ ಒ೦ದು ಭಾಗ ಆಗಿಹೋಯಿದಾ..!!
    ಹಾಸ್ಯಕ್ಕೆ ಆದರೂ… ನಮ್ಮ ಹಳ್ಳಿ ಜೀವನ ನಮ್ಮೊಳವೇ ಇಪ್ಪ ಒಬ್ಬ ಸರಳ ಜೇವಿಯ ಬದುಕು,
    ಜೇವದನ ಎಡರು ತೊಡರು.. ಎಡಕ್ಕಿಲ್ಲಿ ಇಪ್ಪ ಹಾಸ್ಯವ ನಮ್ಮ ಜೇವನಲ್ಲಿ ಏವುದೋ ಒ೦ದು ಕ೦ಡೊ ಕೇಳಿದ ಕಥೆಯೇ ಆದಿಕ್ಕು…
    ಇದರ ಈ ರೀತಿಲಿ ಚೇ೦ದಕೆ ಬರಕ್ಕೊ೦ಡು ನಮ್ಮೆ ಎಲ್ಲರ ಪ್ರೀತಿ ಪಾತ್ರರಾ ನಮ್ಮ – ಚೆನ್ನೈ ಭಾವನ ಸಾಧನೆಗೆ ಅನ೦ತಾನ೦ತ ದನ್ಯವಾದ…
    ಹರೇ ರಾಮ..

  5. ಚೆನ್ನೈ ಭಾವಾ, ಇದಂತೂ ಸೂಪರ್ ಆಯಿದು. ಸುರುವಿಂದ ಕಡೆ ವರೇಂಗೆ ನೆಗೆ ಮಾಡಿ ಸಾಕಾತು. ನಮ್ಮ ಊರಿನ ಮಕ್ಕಳಾಟದ ನೈಜ ಚಿತ್ರಣ.
    ಹೆಚ್ಚೂ ಕಮ್ಮಿ ಎಲ್ಲಾ ಹಾಡುಗಳನ್ನೂ ನೆನಪುಮಾಡಿಸಿದ್ದಿ.
    ಒಂದು ಹಾಡು ಎನಗೆ ನೆನಪಿದ್ದು,
    ಚಳಿ ಚಳಿ ಎಂದರೆ ಮುದುಕ
    ಮಕ್ಕಳ ಕೊರಳಿಗೆ ಪದಕ
    ಪ್ರಾಯ ಹೋದರೆ ಮುದುಕ
    ಪ್ರಾಣಾ ಹೋದರೆ ಬದುಕ.

    1. ಒಂದು ತಪ್ಪಾಯಿದು, ತಿದ್ದುತ್ತೆ.
      ಚಳಿ ಚಳಿ ಎಂದರೆ ಉದಕ
      ಮಕ್ಕಳ ಕೊರಳಿಗೆ ಪದಕ
      ಪ್ರಾಯ ಹೋದರೆ ಮುದುಕ
      ಪ್ರಾಣ ಹೋದರೆ ಬದುಕ.

  6. ಪುಳ್ಳಿ ಒಟ್ಟಿಂಗೆ ಅಜ್ಜನ ದಿನಚರಿ ಫ಼ಸ್ಟ್ ಕ್ಲಾಸ್ ಆಯಿದು. ಹಳ್ಳಿ ಮನೆಯ ನೈಜ ವಾತಾವರಣ.
    ಹಳೇ ಕಾಲವ ಒಂದರಿಯಂಗೆ ನೆಂಪು ಮಾಡಿ ಕೊಟ್ಟತ್ತು.
    ಸತ್ಯಣ್ಣ ಅಡಿಗೆ ಮಾಡ್ಲೆ ಮಾತ್ರ ಹುಷಾರಿ ಹೇಳಿ ಜಾನ್ಸಿರೆ, ಪುಳ್ಳಿಯ ಕೊಂಗಾಟ ಮಾಡಿ ಆಡ್ಸಲೂ ಹುಷಾರಿಯೇ.

  7. ಒಂದು ಒಳ್ಳೇ ಪ್ರಯೋಗ ಚೆನ್ನೈ ಭಾವ. ಒಪ್ಪಣ್ಣ ಅವನದ್ದೇ ರೀತಿಯಲಿ ನಮ್ಮ ಪುರಾತನ ಜೀವನ ಸಂಸ್ಕೃತಿಯ ವಿವರಿಸಿದರೆ, ನಮ್ಮ ಸತ್ಯಣ್ಣ ಲಘು ಹಾಸ್ಯಲ್ಲಿ ವಿವರಿಸುತ್ತಾ ಇದ್ದ°. ಈ ಕಂತಿಲ್ಲಿ ಬಂದ ಸನ್ನಿವೇಶಂಗಳ ಈಗಾಣ ಕಾಲಲ್ಲಿ ಹೆಚ್ಚಿನ ಮನೆಗಳಲ್ಲಿ ನೋಡ್ಳೆ ಸಾಧ್ಯವಿಲ್ಲೆ. ಗಂಭೀರ ಚಿಂತನೆ ಮಾಡುವ ಅಗತ್ಯವ ಈ ಕಂತು ತೋರ‍್ಸುತ್ತು…

  8. ಯೇ ಬಾವಾ
    ಸತ್ಯಣ್ಣ ಅಸ್ಟೋತ್ತು ಹಿಳ್ಳೆ ಮಾಣಿಯ ಹಿಡ್ಕೊಂಡರೂ ಉಚ್ಚು ಮಾಡಿದ್ದನಿಲ್ಲೆಯೋ? ಅಲ್ಲಾ ಈಗಾಣ ಕಾಲದೋರು ಹಾಕುತ್ತ ಪೆಶಲ್ಲು ಚಡ್ಡಿ ಮಣ್ಣೊ ಹಾಕಿದ್ದೋ ಅವನಮ್ಮ.. ಅಲ್ಲಾ ನಾಚಿಕೆಲಿ ನಿಂಗೊಗೆ ಹೇಳಿದ್ದನಿಲೆಯೋ ಸತ್ಯಣ್ಣ..
    ಎಂತಾರು ರೈಸಿದ್ದು ಬಾವಾ.!

  9. Thank God there is no editing here.I am fed up with Satyanna and the so called jokes.I can’t laugh at those even if somebody tickles me…

    1. ಯೆ ಮಾವ
      ಇದು ಎಂತ್ಸರ ಬರದ್ದು ನಿಂಗೊ.
      ಅಕೇರಿಂದ ಮೊದಲಾಣ ಶಬ್ದವ ಓ ಮನ್ನೆ ಒಂದು ಕುಪ್ಪಿಲಿ ಬರದ್ದು ನೋಡಿದ್ದೆ ಎಂತ್ಸರ ಕೇಟದ್ದಕ್ಕೆ ಪೇಟೆ ಬಾವ ಉಪ್ಪಿನಕಾಯಿ ಹೇಳಿತ್ತ..
      ಹಾಂಗಾಗಿ ನಿಂಗೊ ಬರದ್ದು ಸತ್ಯಣ್ಣನ ಜೋಕುಗೊ ಇಲ್ಲದ್ರೆ ಊಟಕ್ಕಿಲ್ಲದ ಉಪ್ಪಿನಕಾಯಿ ಆದಾಂಗೆ ಅಕ್ಕು ಹೇದು ತಿಳ್ಕೊಳ್ತೆ..

      1. I really like Satyanna Jokes… they are good, hats off to chennai bhaava for giving these jokes. keep it up…

  10. ಪುಳ್ಯಕ್ಕಳ ಕೊಂಗಾಟ ಮಾಡ್ಲೂ ಸತ್ಯಣ್ನ ಉಶಾರಿಯೇ. ಶಾಬ್ಬಾಸ್.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×