Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 22 (ಚಾತುರ್ಮಾಸ್ಯ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   08/08/2013    13 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣ ಚಾತುರ್ಮಾಸ್ಯಕ್ಕೆ ಕೂದನೋ ಗ್ರೇಶಿದಿರೋ ?! .
ಅದಲ್ಲ. ಮತ್ತೆಂತರ?.
ಅಡಿಗೆ ಸತ್ಯಣ್ಣ ಚಾತುರ್ಮಾಸ್ಯಕ್ಕೆ ಮಾಣಿಮಠಕ್ಕೆ ಹೋದ ಶುದ್ದಿಗೌಜಿ ವಿಶೇಷಾಂಕ ಇದು.-
~
1
ಮಾಣಿಮಠಕ್ಕೆ ಚಾತುರ್ಮಾಸ್ಯಕ್ಕೆ ಹೋಯೇಕು ಹೇದು ಓ ಮನ್ನೆಂದಲೇ ಲೆಕ್ಕ ಹಾಕ್ಯೊಂಡಿದ್ದ ಅಡಿಗೆ ಸತ್ಯಣ್ಣ°
ಮನೆಯೋರ ಸೌಕರ್ಯ ದಿನ ಕೂಡಿ ಬಾರದ್ದೆ ಇಂದು ನಾಳೇದು ಮುಂದೆ ಹೋಗ್ಯೊಂಡಿತ್ತಿದ್ದು
ಹೀಂಗೆ ಮನ್ನೆ ಮಾಣಿಮಠಕ್ಕೆ ಹೋಪದು ಹೇದು ನಿಘಂಟು ಮಾಡಿ ಆ ದಿನ ಉದಿಯಾತು
ಇನ್ನೆಂತ ಮಿಂದಿಕ್ಕಿ ಹೆರಡೋದು ಹೇಳಿಗೊಂಡಿಪ್ಪಗ ಮೊಬೈಲು ‘ವಾತಾಪಿ..’ ಹಾಡ್ಳೆ ಸುರುಮಾಡಿತ್ತು
ಆಚಿಗಂದ ಮಾತಾಡಿಡ  ಕುಪ್ಪೆಟ್ಟಿ ಅತ್ತೆ ಹೇಳಿತ್ತು-  “ಸತ್ಯಣ್ಣ, 8-45ಕ್ಕೆ ಕುಪ್ಪೆಟ್ಟಿಲ್ಲಿ ಸಿಕ್ಕಿರೆ ಒಟ್ಟಿಂಗೆ ಹೋಪಲಕ್ಕು, ಎಂಗೊ ಕಾರ್ಲಿ ಹೋವ್ತೆಯೋ, ಬತ್ತರೆ ಜಾಗೆ ಇದ್ದು”
ಸತ್ಯಣ್ಣ ಹೇದ – “ಎನಗೆ ಕುಪ್ಪೆಟ್ಟಿಗೆ ಬಂದು ಮಾಣಿಮಠಕ್ಕೆ ಹೋವ್ಸು ತುಂಬಾ ಸುತ್ತು. ಎಂಗೊ ಇಲ್ಲಿಂದ ನೇರ ಅಲ್ಲಿಗೆ ಬತ್ತ್ಯೋ°”
ಆಚಿಗಂದ ಅತ್ತೆ – “ಇದು ಕುಪ್ಪೆಟ್ಟಿ ಸತ್ಯಣ್ಣ ಅಲ್ಲದೋ”?
ಸತ್ಯಣ್ಣ – “ಅಲ್ಲ ., ಆನು ಅಡಿಗೆ ಸತ್ಯಣ್ಣ°, ಪೆರ್ಲ.” 😀
****
2
ಈ ಸರ್ತಿ ಗುರುಗಳ ವರ್ಧಂತಿ ಉತ್ಸವದ ದಿನ ಮೂವತ್ತೇಳು ಹೂಗಿನ ರಂಗೋಲಿ ಹಾಕಿ, ಅದರ ಮೇಗೆ ಗುರುಗೊ ನೆಡಕ್ಕೊಂಡು ಬತ್ತ ನಮುನೆ ಮಾಡ್ಳಕ್ಕು ಹೇದು ಶ್ರೀಅಕ್ಕ ಸಲಹೆ ಕೊಟ್ಟಿತ್ತಿದ್ದವು.
ಆ ಪ್ರಕಾರ ಮಹಿಳಾ ಸಭೆ ಕೆಲಸ ಸುರು ಮಾಡಿತ್ತು.
ಹೂಗಿನ ರಂಗೋಲಿ ಹಾಕಲೆ ರಮ್ಯಂದೇ ಸೇರಿತ್ತಿದ್ದು.
ಕರೆಲಿ ಕೂದು ನೋಡಿಗೊಂಡಿದ್ದ ಸತ್ಯಣ್ಣ ಹೇಳಿದನಡ –  “ಹೋ, ಎನ್ನ ಮಗಳಿಂಗೂ ರಂಗೋಲಿ ಹಾಕಲೆ ಅರಡಿತ್ತು. ಇನ್ನು ಬೆಂಗ್ಳೂರು ಹೊಡೆಂಗೆ ಮದುವೆ ಮಾಡಿ ಕೊಡ್ತದಕ್ಕೆ ಅಡ್ಡಿಲ್ಲೆ” -!
ಅಂಬಗ ಬೆಂಗ್ಳೂರ ಮಾಣಿಯೊಬ್ಬ° – “ಎಂಗಳ ಮನೆ ಹತ್ರೆ ಆದರೆ ಉದಿಯಪ್ಪಗೆದ್ದಾಂಗೆ ರಂಗೋಲಿ ಹಾಕುತ್ತರ ಕಾಂಬಲಕ್ಕೋದು” ಹೇದುಗೊಂಡನಡ –  ಹೇದು ಬೈಲಿಲಿ ಶುದ್ದಿ  😀
 
****
3
ಅಡಿಗೆ ಸತ್ಯಣ್ಣ ಮಾರುತಿ800ಲೇ ಕುಟುಂಬ ಸಮೇತ ಮಾಣಿಮಠಕ್ಕೆ ಹೋದ್ದು. ರಂಗಣ್ಣ ಕಾರು ತಿರುಗಿಸ್ಯೊಂಡು ಬಂದದು. ಮಾಣಿ ಮಠಕ್ಕೆತ್ತುವಾಗ ಹತ್ತಕ್ಕೆ ಹತ್ತು ನಿಮಿಷ ಬಾಕಿ.

ಅಡಿಗೆ ಸತ್ಯಣ್ಣ ಮಾಣಿ ಮಠಲ್ಲಿ - ವೆಂಕಟ್ ಕೋಟೂರ್ ಭಾವನ ಕೆಮರದೊಳಂದ
ಅಡಿಗೆ ಸತ್ಯಣ್ಣ ಮಾಣಿ ಮಠಲ್ಲಿ – ವೆಂಕಟ್ ಕೋಟೂರ್ ಭಾವನ ಕೆಮರದೊಳಂದ

ಮಾಣಿ ಮಠಲ್ಲಿ  ಆಂಜನೇಯನ ಒಂದು ಪಟವ ಆಂಜನೇಯನ ಗುಡಿಯ ಹತ್ತ್ರೆ ಹಾಕಿದ್ದಲ್ಲದಾ ಕಂಬಕ್ಕೆ?
ಈ ಜೆನಂಗ ಬಂದೋರು ಪೂರಾ ಅದರ ಬುಡಲ್ಲೆ ಮೆಟ್ಟು ಮಡಿಗಿ ಹೋದವತ್ತೆ!
ಹೂಗಿನ ಮಾಲೆಯ ಅಲಂಕಾರ ಮಾಡಿಗೊಂಡಿದ್ದ ಆಣುಗೋಕ್ಕೆ ಅದು ಕಂಡತ್ತು.
ಅವು ಹೇಳುದು ಕೇಳಿತ್ತು ಸತ್ಯಣ್ಣಂಗೆ- “ಇದು ಎಂತದ್ದು? ಹನುಮಂತನ ಚಿತ್ರದ ಬುಡದಲ್ಲೇ ಚಪ್ಪಲಿ ಬಿಟ್ಟು ಹೋಗಿದ್ದಾರೆ. ಅಷ್ಟೂ ಗೊತ್ತಾಗುವುದಿಲ್ವಾ” ?!!
“ಆಯ್ತು, ಗಡಿಬಿಡಿಯಲ್ಲಿ ಬಿಟ್ಟು ಹೋಗಿದ್ದಾರೆ, ನೀವು ಪಟವನ್ನು ಗುಡಿಯ ಎದುರಿಗೆ ಕಟ್ಟಿ ಕೊಡಿ”- ಹೇದು ಹೇಳಿದವು ಆರೋ.
ಪಾಪ!, ಅಷ್ಟು ಕೆಲಸ ಮಾಡಿ ಕೊಟ್ಟವು.
ಈಗ ಹನುಮಂತ ಕೊಶೀಲಿ ಹನುಮಂತನ ಗುಡಿಯ ಎದುರೇ ಭಜನೆ ಮಾಡ್ತಾ ಇದ್ದ!!
ಕೂಡ್ಳೆ ರಂಗಣ್ಣ ಹೇದ° “ಚಪ್ಪಲಿಯ ಹನುಮಂತ ಕಾಯಲಿ ಹೇದು ಬಿಟ್ಟಿಕ್ಕಿ ಹೋದ್ದಾಯ್ಕು” ಹೇದು ಇವಕ್ಕೆ ಹೇಳುಲೆ  ಆವುತ್ತಿತ್ತಿಲ್ಯಪ್ಪ!! 😀
ಅದಕ್ಕೆ ಸತ್ಯಣ್ಣ ಹೇದ°-  “ಆ ಆಣುಗೊಕ್ಕೆ ಇಪ್ಪ ಬುದ್ಧಿ ನಮ್ಮವಕ್ಕೆ ಬಂತಿಲ್ಲೆನ್ನೆ!! ಕಲಿಕಾಲ”  😀

****
4
ದ್ವಾರ ಕಳುದ ಕೂಡ್ಲೇ ಸಿಕ್ಕುದು “ಶಬರಿ ಆತಿಥ್ಯದ ಕುಟೀರ”.  ಅದು ನಮ್ಮ ಹೆಮ್ಮಕ್ಕಳ ಸಾಮ್ರಾಜ್ಯ!
ಬಂದವರ ‘ಹರೇರಾಮ’ ಹೇಳಿ ಸ್ವಾಗತ ಮಾಡಿ, ಕೊದಿಶಿ ತಣಿಶಿದ ನೀರು, ಬೆಲ್ಲ, ಕೊಟ್ಟು ಮುಂದೆ ಕಳುಸುವದು (ಕೆಲವು ಜನ ಬೆಲ್ಲವ ಮುಷ್ಟಿಲಿ ಬರುಂಬಿ ಬಾಯಿಗೆ ಹಾಕುತ್ತವು!)
ಹೆಮ್ಮಕ್ಕೊಗೆ ಅರಿಶಿನ ಕುಂಕುಮ ಮತ್ತೆ ನಿತ್ಯ ನಡದ ಕುಂಕುಮಾರ್ಚನೆ ಪ್ರಸಾದ ಕೊಡುವದು.
ಹೆಚ್ಚಿನವಕ್ಕೆ ಅದಕ್ಕೆ ಪುರುಸೊತ್ತು ಇರ್ತಿಲ್ಲೆ,  ಸೀದಾ ನೆಡೆತ್ತವು .
ಹೋಪಗ ಬಲತ್ತಿಂಗೆ ತಿರುಗಿ ಆಂಜನೇಯಂಗೆ ಒಂದು ನಮಸ್ಕಾರ ಮಾಡಿಕ್ಕಿ, ಹೇಳಿ ಹೇಳುವದು.
ಆದರೆ ಇದೀಗ ಹೊಸತ್ತಾಗಿ ಬಂದವಕ್ಕೆ ಇದ್ಯಾವುದೂ ಅಂದಾಜಿ ಆವ್ತಿಲ್ಲೆ. ಎಲ್ಲೆಲ್ಲಿ ಎಂತೆಂತೆಲ್ಲ ಹೊಸತ್ತು ನಡದ್ದು, ಹೇಂಗೆ ಹೋಯೇಕು, ಎಂತ ಮಾಡೆಕು ಹೇದೆಲ್ಲ.
ಅಂತೆ ಕೊರಳು ಎಕ್ಕಳಿಸಿಗೊಂಡು ಮುಂದೆ ದೂರಲ್ಲಿ ಆರಾರು ಗುರ್ತದೋರು ಇದ್ದವಾ?!., ಬಂದಾತು..,  ಇನ್ನು ಊಟಕ್ಕೆಲ್ಲಿ?! – ಹೇದು ಹುಡ್ಕುವವರ ಹಾಂಗೆ.
ಸೇವಗೆ ಹೇದೇ ಸಂಕಲ್ಪಮಾಡಿಗೊಂಡು ಬಂದ ಸತ್ಯಣ್ಣಂಗೆ ಮನಸ್ಸಿಲ್ಲ್ಯೇ ತೋರಿತ್ತು – ಇವ್ವು ಅನುಪ್ಪತ್ಯದ ಹೇಳಿಕೆ ಹೇದು ಗ್ರೇಶ್ಯೊಂಡು ಬಂದದೋದು!  😀
****
5
ಚಾತುರ್ಮಾಸ್ಯಕ್ಕೆ ಶಿಷ್ಯರ ಮನೆಂದ ಬಂದ  ಯಾವುದೇ ಸುವಸ್ತು ಶಬರಿ ಆತಿಥ್ಯದ ನಂತರ ಸಿಕ್ಕುವ ಸುವಸ್ತುವಿನ ಕೌಂಟರಿನ ಉದಯಣ್ಣನ ಪುಸ್ತಕಲ್ಲಿ ಎಂಟ್ರಿ ಆಗಿಕ್ಕಿ ಮತ್ತೆ ಕೆಳಾಣ ಉಗ್ರಾಣಕ್ಕೆ ಹೋಪದಿದಾ !
ಬಾಳೆಲೆ, ಬಾಳೆ ಗೊನೆ, ಮಜ್ಜಿಗೆ, ಹಾಲು, ಸಮಿತ್ತುಗೊ, ಹೂಗುಗೋ, ಹಲಸಿನ ಚೆಕ್ಕೆ, ಗೋಟು ಕಾಯಿ ಇತ್ಯಾದಿ ಸುಮಾರು ನಮ್ಮಲ್ಲಿ  ನಿತ್ಯ ಇಪ್ಪದರ ತತ್ತವು.
ಈಗ ತುಪ್ಪ ತತ್ತವು. ಅದು- ಶುದ್ಧದ್ದು, ಅಡಿಗೆಗೆ ಇಪ್ಪದು ಹೇದು ಎರಡು ನಮೂನೆ ಇದ್ದಿದಾ!
ಅದು ಎರಡೂ ಹೋಪದು ಉಗ್ರಾಣಕ್ಕೇ.
ಅಡಿಗೆ ಸತ್ಯಣ್ಣನ ಒಟ್ಟಿಂಗೇ ಇದ್ದ ರಂಗಣ್ಣ ಕೇಟ – ಅಪ್ಪೋ ಮಾವ°, ಅಲ್ಲಿ ಬಟ್ಟಮಾವನೂ, ಅಡಿಗೆ ಮಾವನೂ ಹೇಂಗೆ ಅದರ ಪಾಲು ಮಾಡುಗು?!!.
ಸತ್ಯಣ್ಣ° ಹೇದ° – ಅದಕ್ಕೂ ಅಲ್ಲಿ ಜೆನ ಇದ್ದು. ನೀ ತಲೆಬೆಶಿ ಮಾಡೆಡ. ಬಾ ಹೋಪೋ ಮುಂದೆ” 😀
****
6
ಸುವಸ್ತುವಿನ ಕೌಂಟರು ಕಳುದು ಮುಂದೆ ಏವ ಹೊಡೆನ್ಗೆ ಬೇಕಾದರೂ ಹೋಪಲಕ್ಕು.
ಅಲ್ಲಿಂದ ಬಲತ್ತಿಂಗೆ ಹೋದರೆ ಹೊಸಾ ಹಾಲ್
ನಡೂಕಂಗೆ ಹೋದರೆ ನಮ್ಮ ಮಠ
ಎಡತ್ತಿನ್ಗೆ ಒಂದು ಉಂಬೆಯೂ ಒಂದು ಪುಟ್ಟು ಕಂಜಿಯೂ ಇದ್ದು, ಅಲ್ಲಿಯೇ ಗೋ ತುಲಾಭಾರ ಅಪ್ಪದು.
ಅದರ ಕರೆಯಾಣ ಒರುಂಕಿಲಿ  ಮುಂದೆ ಹೋದರೆ ಅಕೇರಿಗೆ ಸಿಕ್ಕುದು ಸಾಂಸ್ಕೃತಿಕ ಕಾರ್ಯಕ್ರಮ ಅಪ್ಪ ಸಣ್ಣ ವೇದಿಕೆ ಆಂಜನೇಯ ವೇದಿಕೆ
ಸತ್ಯಣ್ಣ ರಂಗಣ್ಣಂಗೆ ತೋರ್ಸಿ ಹೇದಾ° “ಇದಾ…, ಅಲ್ಲಿ ನುಸಿ ಹಾರಿಗೊಂಡು ಇಪ್ಪದು, ನುಸಿ ವಾದನದ ಎಡೆಲಿ ಸಂಗೀತ, ಹಾಡುಗ ಏಕವ್ಯಕ್ತಿ ಯಕ್ಷಗಾನ ಇತ್ಯಾದಿ ನಡವದು”! 😀
****
7
ಮಠದ ಒಳ ಬಡಗ ಬಾಗಿಲಿಲಿ ಹೆರ ಹೋಪಗ ನಮ್ಮ ಹಳೆ ಹಾಲ್‍ಲಿ ಯಾಗಶಾಲೆ ಇಪ್ಪದು
ನಮ್ಮ ಬಟ್ಟಮಾವಂದ್ರು ನವಗೆ ಅಲ್ಲಿಯೇ ಸಿಕ್ಕುದು
ರಾಮತಾರಕ ಯಜ್ಞ ಆವುತ್ತಾ ಇದ್ದು
ಒಂದು ದಿಕ್ಕೆ ಕೂದು  ಮಾಡಿದ ರಾಮತಾರಕ ಮಂತ್ರದ ಲೆಕ್ಕ ಅಲ್ಲಿ ಕೌಂಟರಿಲಿ ಕೊಡೆಕ್ಕಡ.
ಸತ್ಯಣ್ಣಂಗೆ ಹೋಪಗ ಮಾತ್ರ ಪುರುಸೋತ್ತಪ್ಪದು ಹೇಳಿ ಬಸ್ಸಿಲ್ಲಿ ಹೋಪಗ ಬಾಯಿಲಿ ಹೇಳಿದ್ದದು ಲೆಕ್ಕ ಇಲ್ಲೆಡ!!
ರಂಗಣ್ಣನ ಹಾಂಗೆ ಇಪ್ಪ ಅಂಬೇರ್ಪಿನವ್ವು ಮೊಬಾಯಿಲಿಲಿ ರಿಕಾರ್ಡು ಮಾಡಿದ್ದದರ ಹಾಕುತ್ತವಲ್ಲದಾ, ಅದರ ಕೇಳಿದ್ದೂ ಲೆಕ್ಕ ಇಲ್ಲೆಡ!
ಒಂದು ದಿಕ್ಕೆ ಕೂದು ಶುದ್ಧ ಮನಸ್ಸಿಲಿ ರಾಮನ ಜಾಂನ್ಸಿ ಲೆಕ್ಕ ಮಾಡಿದ್ದದರ ಯಾಗ ಶಾಲೇಲಿ ಲೆಕ್ಕ ಕೊಡೆಕ್ಕು ಹೇಳಿ ಮಿತ್ತೂರು ಶ್ರೀನಿವಾಸ ಬಟ್ಟಮಾವ ಹೇಳಿದ್ದದು..
ಒಟ್ಟಿಂಗೆ ಬಂದ ರಮ್ಯ ಎಲ್ಲಿ ಹೋತಪ್ಪ ಹೇದು ತಿರಿಗಿ ಹುಡ್ಕಿಯೊಂಡಿದ್ದ ರಂಗಣ್ಣಂಗೆ ಅಡಿಗೆ ಸತ್ಯಣ್ಣ ಹೇದ- “ದಾರಿ ಲೆಕ್ಕ ಇಲ್ಲಿಗೆ ಬೇಡಡ, ಇಲ್ಲಿ ಕೂದೊಂಡು ಹೊಸ ಲೆಕ್ಕ ಹಾಕೆಕಡ 😀
****
8
ಹೊಸ ಹೋಲ್‍ನ ಕೆಳ ಭೋಜನ ಶಾಲೆ
ಅಲ್ಲಿ ಈಗಾಣ ಹೊಸ ಕ್ರಮಲ್ಲಿ ಅಡಿಗೆ ಇಪ್ಪದಿದಾ.. ಸ್ಟೀಮು!!
ಸತ್ಯಣ್ಣ ನ್ಗೆ ಅದು ಅರಡಿಗೊ ?
ಒಲೆ ಮಡಗಿ ಕಾಸುದರ ಸತ್ಯಣ್ಣ ಮಾಡುದು ಅಲ್ಲದಾ?!
ಅಡಿಗೆ ಎರಡಿದ್ದಿದಾ.. ಮೇಲೆ ವೈದಿಕದವಕ್ಕೆ, ಪರಿವಾರದವಕ್ಕೆ ಹಳೆ ಅಡಿಗೆ ಶಾಲೆಲಿ ಅಡಿಗೆ
ಮತ್ತೆ ಎಲ್ಲೊರಿಂಗೆ ಹೊಸ ಪಾಕಶಾಲೆಲಿ ಅಡಿಗೆ, ಮೇಲೆ ಕೆಳ ಹೇಳಿ ತಿರುಗಿ ತಿರುಗಿ ರಂಗಣ್ಣಂಗೆ ಬಚ್ಚಿ, ಮೊಬೈಲು ಕಿಸೆಂದ ಏವಾಗ ಒಂದರಿ ಕೈಲಿ ಹಿಡಿವಲೆ ಈ ಮಾವ ಬಿಡುಗೋ ಹೇದು ಒಳಂದೊಳವೇ ಹೊಣಕ್ಕೊಂಡಿದ್ದ ರಂಗಣ್ಣಂಗೆ ಸತ್ಯಣ್ಣ ಹೇದ° – ರಂಗಣ್ಣೋ, ಗಂಟೆ ಹತ್ತುವರೆ ಆತಷ್ಟೇ. ನೀನು ಸೇವೆ ಮಾಡ್ತರೆ ಅಲ್ಲಿ ಸೇರಿಗೊಂಬಲಕ್ಕು. ಆನು ಓ ಅಲ್ಲಿ ಕೂದೊಂಡು ರಾಮಜೆಪ ಮಾಡ್ತೆ”.
ಕೆಣಿಯ ರಂಗಣ್ಣ ಹೇದ°- ಆನೊಬ್ಬನೇ ಅಲ್ಲಿ ಹೋದರೆ ಮಾವ°, ನಿಂಗೊ ಬೈಂದಿಲ್ಲಿರೋ ಹೇದು ಎಲ್ಲೋರು ಎನ್ನನ್ನೇ ಕೇಳುಗು. ಆನೂ ನಿಂಗಳೊಟ್ಟಿಂಗೆ ಜೆಪಕ್ಕೆ ಸೇರುತ್ತೆ. 😀
****
9
ಮಾಣಿ ಮಠಲ್ಲಿ ಗೌಜಿ. ಓ ಮನ್ನೆ ಆಂಜನೇಯಂಗೆ “ವಡೆ ಕಣಜ” ಸೇವೆ.
ಮಧೂರ ಗಣಪ್ಪಂಗೆ ಮೂಡಪ್ಪ ಮಾಡ್ತ ಹಾಂಗೆ ಹೇಳ್ಳಕ್ಕು.
ಹನುಮನ ಸಂಪೂರ್ಣ ವಡೆ (ಉದ್ದಿನ ತೂತು ವಡೆ)ಲಿ ಮುಚ್ಚಿ, ಪೂಜೆ. ಗುರುಗೋ ಬಂದು  ಮಂಗಳಾರತಿ , ಅಷ್ಟಾವಧಾನ ಸೇವೆ ಇತ್ಯಾದಿ.
ಸತ್ಯಣ್ಣನೂ ರಂಗಣ್ಣನೂ  ಇತ್ತವು ಹೇಳಿ ಬೇರೆ ಹೇಳೆಕ್ಕೂಳಿಯೇ ಇಲ್ಲೆನ್ನೇ .
ರಂಗಣ್ಣಂಗೆ ಇದರ ನೋಡಿ ಅದ್ಭುತ ಹೇಳಿ ಕಂಡತ್ತು.
ಹತ್ರೆ ಇಪ್ಪ ಸತ್ಯಣ್ಣನ ಹತ್ರೆ ಕೇಳಿದ ” ಮಾವ°, ಇಷ್ಟು ವಡೆ ಮಾಡೆಕ್ಕಾರೆ, ಉದ್ದಿನ ಬೇಳೆ ಎಷ್ಟು ಬೇಕು, ಎಣ್ಣೆ ಎಷ್ಟು ಬೇಕು, ಎಂತರಲ್ಲಿ ಹೊರಿತ್ತು ಇತ್ಯಾದಿ  ಇತ್ಯಾದಿ.
ಭಕ್ತಿಲಿ  ಕೈ ಮುಗುದು ನಿಂದೊಂಡಿತ್ತಿದ್ದ  ಸತ್ಯಣ್ಣ೦ಗೆ ಪಿಸುರು ಬಾರದ್ದಿಕ್ಕೋ?
ರಂಗಣ್ಣನತ್ರೆ ಕಣ್ಣರಳಿಸಿ ಸತ್ಯಣ್ಣ ಹೇದ° – “ನಿನಗೆ ಅದೆಲ್ಲಾ ಲೆಕ್ಕ ಎಂತಕೆ ಈಗ? ಭಕ್ತಿಲಿ ಕೈ ಮುಗುದು ನಿಲ್ಲು, ಪ್ರಸಾದ ಕೊಟ್ಟ ದರ ತೆಕ್ಕೊಂಡು ಹೋಗು.  ಗೋಮಯಕ್ಕೆ ಬಂದವಂಗೆ ದನದ ರೇಟು ಎಂತಕೆ”?? 😀
****
10
ಮನ್ನೆ ಮಾಣಿಮಠಲ್ಲಿ ಬೈಲಿನ ‘ಅಟ್ಟಿನಳಗೆ’ ಶ್ರೀಗುರುಗಳಿಂದ ಬಿಡುಗಡೆ ಆತು
‘ಅಟ್ಟಿನಳಗೆ’ ಎಂತೆಂತೆಲ್ಲ ಇದ್ದು ಬೇಶಿ ಮಡಿಗಿದ್ದದು ಹೇದು ಗುರುಗಳು ಒಂದರಿ ಕಣ್ಣಾಡಿಸಿ ನೋಡಿ ಆತು
ಸಭೆಲಿ ಓ ಅಷ್ಟು ದೂರಕೆ ಗೋಡೆಕರೇಲಿ ಅಡಿಗೆ ಸತ್ಯಣ್ಣನೂ ಇದ್ದ°
ಸತ್ಯಣ್ಣ ಸಭೆಲಿ ಎಷ್ಟು ದೂರಲ್ಲಿ ಇದ್ದರೆಂತ?!., ಶ್ರೀ ಗುರುಗಳ ದೃಷ್ಟಿಗೆ ಬಿದ್ದ°
ಅಲ್ಲಿಂದಲೇ ದೆನಿಗೊಂಡವು ಬಾ ಇತ್ತೆ ಹೇದು.
“ನೀಯೆಂತಕೆ ಅಷ್ಟು ದೂರ ಹೋಗಿ ನಿಂದುಗೊಂಡದು?” – ಗುರುಗಳು ಕೇಳಿದವು.
“ಸಂಸ್ಥಾನ!, ಇದರ್ಲಿ ಆನೆಂತದೋ ಕುಶಾಲಿಂಗೆ ಹೇಳಿದ್ದರ ಎಲ್ಲ ರೆಕಾರ್ಡು ಮಾಡಿ ಬರದು ಹಾಕಿದ್ದವಡ. ಈಗೆಲ್ಯಾರು ಆನು ಎದುರೆ ಸಿಕ್ಕಿರೆ …..” – ಸತ್ಯಣ್ಣ ಬಗ್ಗಿ ನಿಂದುಗೊಂಡ°
“ಅದೆಕ್ಕೆಂತಕೆ ನೀನು ಯೋಚನೆ ಮಾಡ್ತೆ. ನೀನು ಬೈಲಿಲಿ ಸೇವೆ ಮಾಡಿದ್ದೆ. ಅದುವೇ ಕೊಶಿ. ರಾಮನ ಪಟ್ಟಾಭಿಷೇಕಲ್ಲಿ ಕಪಿಗಳೂ ಇತ್ತವಲ್ಲದ., ಎಲ್ಲೋರೂ ರಾಮಂಗೆ ಕೊಂಗಾಟವೇ ಅಲ್ಲದ” – ಗುರುಗಳು ಯೇವತ್ರಾಣ ನೆಗೆಮೋರೆಲಿಯೇ ಸಮಾಧಾನ ಹೇದವು ಸತ್ಯಣ್ಣಂಗೆ.
ಗುರುಗಳ ಬಾಯಿಂದಲೇ ಇಷ್ಟು ಕೇಳಿದಮತ್ತೆ ಅಡಿಗೆ ಸತ್ಯಣ್ಣಂಗೂ ಸಮಾಧಾನ ಆತು. 😀
~~
11
ಹೊತ್ತೋಪಗ ರಾಮ ಕಥೆ
ಇಬ್ರೂದೆ ಕೇಳಿಕ್ಕಿಯೇ ಹೋಪದು ಹೇದು ನಿಘಂಟು ಮಾಡಿದವು.
ಸತ್ಯಣ್ಣ,ರಂಗಣ್ಣ  ಇಬ್ರೂ ಹಾಲ್  ಒಳ ಒಟ್ಟಿ೦ಗೆ ಕೂದವು .
ಗುರುಗೋ ಭಕ್ತಿಲಿ ರಾಮ ಭಕ್ತ ಆಂಜನೇಯನ ಕತೆ ಸುರು ಮಾಡಿದವು. ರೆಜ ಹೊತ್ತಪ್ಪಗ ರಂಗಣ್ಣ೦ಗೆ ಸಂಶಯ ಬಪ್ಪಲೆ ಸುರು ಆತು.
ಮೆಲ್ಲಂಗೆ ಸತ್ಯಣ್ಣನತ್ರೆ ಕೇಳಿದ “ಹೆರ ಮೆಟ್ಟಿನ ಜೋಡು ಮಡುಗಿದ್ದಲ್ಲದೋ, ಹೋಪಗ ಸಿಕ್ಕುಗಾಯಿಕ್ಕು”
ಗುರುಗೋ ಪ್ರವಚನಲ್ಲಿ ಹೇಳಿದವು “ದೇವಸ್ಥಾನದ  ಹೆರ ಮೆಟ್ಟು ಮಡುಗಿ ದೇವರಿಂಗೆ ಕೈ ಮುಗಿವಾಗ ಮೆಟ್ಟಿನದ್ದೇ ಧ್ಯಾನ ಮಾಡಿರೆ, ನಮನ ಸಲ್ಲುವದು ಮೆಟ್ಟಿಂಗೆ ಹೊರತು ದೇವರಿಂಗೆ ಅಲ್ಲ”
ರಂಗಣ್ಣಂಗೆ ತಲೆ ಬೆಶಿ ಆತು.. ಆನು ಮನಸ್ಸಿಲ್ಲಿ ಜಾನ್ಸಿದ್ದು, ಗುರುಗೊಕ್ಕೆ ಹೇಂಗೆ  ಗೊಂತಾತು?!
ಮೆಲ್ಲಂಗೆ ಸತ್ಯಣ್ಣ ನತ್ರೆ ಕೇಳಿದ. “ಎನ್ನ ಮನಸ್ಸಿಲ್ಲಿ ಇಪ್ಪದು ಗುರುಗೊಕ್ಕೆ ಹೆಂಗೆ ಗೊಂತಾತು? ಹೇಳಿ
ಸತ್ಯಣ್ಣ° ಹೇದ° –  “ಅದಕ್ಕೇ ಅವು ಗುರುಗೋ”
ರಾಮಕತೆ ಮತ್ತೆ ಅಕೇರಿಯವರೇಗೆ ಕೇಳಿಕ್ಕಿಯೇ ಅಲ್ಲಿಂದ ಎದ್ದವು, ಮತ್ತೆ ಉಂಡಿಕ್ಕಿ ಮನಗೆ ಹೆರಡ್ಳೆ ಹೆರಬಪ್ಪಗ ಮೆಟ್ಟು ಅಲ್ಲಿಯೇ ಇದ್ದತ್ತು.
“ಎಲ್ಲ ಗುರುಗಳ ಆಶೀರ್ವಾದ, ದೇವರ ಮಹಿಮೆ” ಹೇದು ಸತ್ಯಣ್ಣನೂ ರಂಗಣ್ಣನೂ ಹೇಳಿಗೊಂಡವು ಅಕೇರಿಗೆ. 😀
****
12
ಮಾಣಿಮಠಲ್ಲಿ ಮನ್ನೆ ನಮ್ಮ ಗುರುಗೊ ಅಟ್ಟಿನಳಗೆ ಬಿಡುಗಡೆ ಮಾಡಿದ್ದದು ಎಲ್ಲೋರಿಂಗೂ ಕೊಶಿ ಆಯ್ದಡ
ಬಿಡುಗಡೆ ಮತ್ತೆ ಅಲ್ಲಿ ಒಂದು ಮಾರಾಟ ಕೌಂಟರೂ ಸುರುವಾತು. ಬೈಲ ಜೆನಂಗೊ ಮಾರಾಟ ಮಾಡಿಗೊಂಡಿತ್ತವು.
ರಾಮಕತೆ ಸುರುವಾತು., ಊಟವೂ ಆತು, ಸತ್ಯಣ್ಣನೂ ಉಂಡಿಕ್ಕಿ ಬಂದ.
ಹೋಪಲಪ್ಪಗ ಒಂದರಿ ಕೌಂಟರ್ಲಿ ಕೂದವರತ್ರೆ ಹೇಳಿಕ್ಕಿ ಹೋಪೋ ಹೇದು ಕೌಂಟರ್ನ ಹತ್ರೆ ಬಂದಪ್ಪಗ ನೀನು ರಜಾ ಹೊತ್ತು ನೋಡಿಗೊ ಸತ್ಯಣ್ಣ, ಎಂಗೋಗಿ ಉಂಡಿಕ್ಕಿ ಬತ್ತೆ ಹೇದು ಕೌಂಟರ್ಲಿ ಕೂದೊಂಡಿದ್ದ ಡೈ. ಬಾವನೂ, ತೆಕು ಮಾವನೂ ಹೇದವು.
ಆತಪ್ಪ, ನೋಡಿಗೊಳ್ತೆ ಹೇದು ಸತ್ಯಣ್ಣ ಕೂದು ಅವರ ಊಟಕ್ಕೆ ಕಳ್ಸಿಕೊಟ್ಟ
ಉಂಡಿಕ್ಕಿ ಬಂದು ನೋಡುವಾಗ ಸತ್ಯಣ್ಣ ಕೂದೊಂಡು ಪೈಸೆ ಎಣುಸುತ್ತದು ಕಾಣುತ್ತು
“ಎಂತ ಸತ್ಯಣ್ಣ, ಪುಸ್ತಕ ರಜಾ ಮಾರಾಟ ಮಾಡಿದೆಯೋ ಅಂಬಗ” – ಕೇಟವು 
ಸತ್ಯಣ್ಣ ಹೇದ° – “ಪುಸ್ತಕ  ಎನಗೊಂತಿಲ್ಲೆ. ಆನು ಕೂದೊಂಡಿಪ್ಪಗ ಸುಮಾರು ಜೆನ ಬಂದು ‘ಅಟ್ಟಿನಳಗೆ’ ಇದ್ದೋ, ‘ಅಟ್ಟಿನಳಗೆ’ ತೆಕ್ಕೊಂಡೆ ಹೇದು ಹೇಳಿ ಪೈಸೆ ಕೊಟ್ಟಿಕ್ಕಿ ಹೋದವಿದಾ” 😀
***

  *** 😀 😀 😀  ***

13 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 22 (ಚಾತುರ್ಮಾಸ್ಯ ವಿಶೇಷಾಂಕ)

  1. ಆನುದೇ ಮೊನ್ನೆ ಮಠಕ್ಕೆ ಹೋಗಿ ರಾಮಕಥೆ ಕೇಳಿಕ್ಕಿ ಬಂದೆ,  ಇಂದು ಈ ಲೇಖನ,  ಚಿತ್ರ ಕಂಡತ್ತು.  ಹೋಗಿ ಬಂದ ಗೌಜಿ ತಿರುಗಾ ನೆನಪ್ಪಾಗಿ ಕೊಶೀ ಆತು…

  2. ಹರೇ ರಾಮ. ಅತ್ತಿನಳಗೆಲಿ ಅಡಿಗೆಸತ್ಯಣ್ಣನ ಜೋಕು ಭಾರೀ ಲಾಯಿಕಾಯಿದು ಇದು ಇದ್ದದು ಅಟ್ಟಿನಳಗ್ಗೆ ಒಂದು ತೂಕ ಹೆಚ್ಹೇ ಹೇಳ್ಳಕ್ಕು.

  3. ಸತ್ಯಣ್ಣನ ಜೋಕುಗಳ ಮೂಲಕ, ಮಾಣಿ ಮಠದ ಎಲ್ಲಾ ಜಾಗೆಗಳ ವಿವರಣೆ, ಚಾತುರ್ಮಾಸ್ಯದ ಚಿತ್ರ ಮನಸ್ಸಿಂಗೆ ಬಪ್ಪ ಹಾಂಗೆ ಮಾಡಿದ್ದು ತುಂಬಾ ಚಂದ ಆಯಿದು…. ಮೊನ್ನೆ ಮಾಣಿ ಮಠದ ಉದ್ಘಾಟನೆ ಸಮಯಲ್ಲಿ ಅಲ್ಲಿಗೆ ಹೋದ ಕಾರಣ, ಹನುಮನ ಗುಡಿ, ಮಾಣಿ ಮಠ, ಹಳೆ ಹಾಲ್, ಈಗಾಣ ಹೊಸ ಹಾಲ್, ಅಡಿಗೆ ಕೊಟ್ಟಗೆ ಎಲ್ಲ ಮನಸ್ಸಿಲ್ಲಿ ಬಂತು…. ಖುಶಿ ಆತು ಚೆನ್ನೈ ಭಾವಾ….

  4. ಸತ್ಯಣ್ಣ ಮಠಲ್ಲಿ ನಿಂಗಲ ಸುಧರಿಕೆ ಎಂತ ಇಲ್ಯೊ? ಬರಿ ಬಾಯಿ ಪಟಾಕಿ ಮಾತ್ರವೋ??

  5. ಚೆಲ..ಸತ್ಯಣ್ಣನೇ..ಅದೇ ಚೀಲ,ಅದೇ ವಾಚು..ಅಪ್ಪು ಇವನೇ ಮನ್ನೆ ಮಠಲ್ಲಿ ಸಿಕ್ಕಿದ್ದು..ಕೋಟೂರಣ್ಣನ ಕೆಮರಕ್ಕೆ ಪೋಸು ಲಾಯ್ಕಕೆ ಕೊಟ್ಟಿದ°.

  6. ಅಲ್ಲಾ ಈ ಅಟ್ಟಿನಳಗ್ಗೆ ಪೈಸೆ ಎಷ್ಟಡಾ? ಹೋಪೋರಿದ್ದವು. ನವಗೊಂದು ಬೇಕಾತು.

    1. ಎ೦ಭತ್ತು ರೂಪಾಯಿ ಭಾವ. ತೆಕ್ಕೊ೦ಡು ಓದಿ,ಓದಿಕ್ಕಿ ಅಭಿಪ್ರಾಯ ಹೇಳಿ.

  7. ಮಾಣಿ ಮಠಲ್ಲಿ ಸತ್ಯಣ್ಣ ರೈಸಿದ.
    ಕೋಟೂರಣ್ಣನ ಕೆಮರಾಕ್ಕೆ ಸಿಕ್ಕಿದ ಪಟ ಅಂತೂ ಭರೀ ಲಾಯಿಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×