“ಬೆಂದಷ್ಟು ಹೊತ್ತು ತಣಿವಲೆ ಬೇಡ” (ಹವ್ಯಕ ನುಡಿಗಟ್ಟು-7)

’ಬೆಂದಷ್ಟು ಹೊತ್ತು ತಣಿವಲೆ ಬೇಡ’ (ಹವ್ಯಕ ನುಡಿಗಟ್ಟು—7)

ಕೂಸಿಂಗೆಲ್ಲಿಂದಾರೂ ಪೊದು ಬಯಿಂದೊ ಭಾವಯ್ಯ ಕೇಳುವಗ  ಎಲ್ಲಿಯೂ ಆಯಿದಿಲ್ಲೆ.ಎಂತ ಮಾಡುಸ್ಸು ಹೇದು  ಅರಡಿತ್ತಿಲ್ಲೆ!. ಹೇಳಿರೆ; ಎಲ್ಲಿಯಾರು ಒದಗಿ ಬಕ್ಕು ಬಿಡಿ. ಬೆಂದಷ್ಟು ಹೊತ್ತು ತಣಿವಲೆ ಬೇಡ. ಹೇಳುಗು ಎನ್ನಪ್ಪ. ಆದರೆ  ಈಗೀಗಾಣ  ಅವಸ್ಥೆ

ನೋಡಿರೆ, ಕೃಷಿ,ಅಡಿಗೆ,ಪುರೋಹಿತ, ಮಾಣಿಯಂಗೊ    ಕೂಸು ಸಿಕ್ಕಿದ್ದಿಲ್ಲೇಳಿ  ಬೆಂದೊಂಡೇ ಇರೆಕಾವುತ್ತು.ಅವರ ತಣಿಶುಲೆ ಕೂಸುಸಿಕ್ಕುತ್ತಿಲ್ಲೆ ಮಿನಿಯ! ಆದರೆ ನಮ್ಮ ಶ್ರೀಗುರುಗೊ ಈ ವ್ಯಾಪ್ತಿಲಿ ಮದುವೆ ಆದವರ ವಿಶೇಷ ಸನ್ಮಾನ ಮಾಡಿ ಗುರುತಿಸುತ್ತಾಇದ್ದವು  ಹೇಳ್ವದೊಂದು ಸಂತೋಷ. ಇರಳಿ.

ಉಂಬಲೆ ದೆನಿಗೇಳಿದ ಅಬ್ಬೆ  ಬೆಶಿ-ಬೆಶಿ ಹೆಜ್ಜೆ ಬಡುಸಿಕ್ಕಿ “ಬೇಗ,ಬೇಗ  ಉಂಡಿಕ್ಕಿ ಹೋಗಿ ಶಾಲಗೆ”,  ಹೇಳುಗು. ಇದು ಕಂಡಾಬಟ್ಟೆ ಸುಡುತ್ತು. ಇದರ ಉಂಬದು ಹೇಂಗಪ್ಪ! ಹೇಳುವಗ; ಅಪ್ಪ ಅಲ್ಲಿದ್ದರೆ;  “ಊದಿ-ಊದಿ ಉಣ್ಣಿ  ಬೆಂದಷ್ಟು ಹೊತ್ತು ತಣಿವಲಿಲ್ಲೆ”. ಹೇಳುಗು.ಏವದೇ ಕಾದು ಕೂಬ್ಬ ಹೊತ್ತು ಹೇಳಿರೆ; ಬೇವಲೆ  ಅಥವಾ ಬೆಳವಲೆ. ನಾವು ಒಂದು ಫಲಕೊಡುವ ಗೆಡು ನೆಟ್ಟತ್ತು ಹೇದಾದರೂ ಅದು ಫಲಕೊಡ್ಳೆ ತಯಾರಾತು, ತೆಂಗು, ಕೊಂಬೊಡದತ್ತು, ಕಂಗು ಸಿಂಗಾರ ಬಿಟ್ಟತ್ತು, ಬಾಳೆ ಮೋತೆ ಹಾಕಿತ್ತು. ಹೇಳಿ ಆದರೆ; ಫಲ ಕೊಯ್ಯೆಕ್ಕಾರೆ  ಅಷ್ಟರವರೆಗೆ ಕಾದಷ್ಟು ಮತ್ತೆ ಕಾಯೆಕ್ಕಾಗಿಲ್ಲೆಯಿದ. ತಿಂಗಳುತುಂಬಿದ ಬಸರಿ; ಹಿಳ್ಳೆ ಮಡಿಲಿಂಗೆ  ಬಪ್ಪಲೆ ಅಷ್ಟರವರೆಗೆ ಕಾದಷ್ಟು ಮತ್ತೆ ಕಾಯೆಡನ್ನೆ!

ಹೀಂಗೆ ನುಡಿಗಟ್ಟಿಲ್ಲಿ ಶಬ್ಧಾರ್ಥ  ಮಾಂತ್ರ ಅಲ್ಲದ್ದೆ ಅಂತರಾರ್ಥಂಗೊ ಕೆಲಾವು ಇರ್ತು.ಅದರ ಅರ್ತು ಮನನ ಮಾಡಿಗೊಂಡರೆ; ಫಲ ನಿರೀಕ್ಷೆಲಿ, ತಳಮಳ, ಆತಂಕ ಕಮ್ಮಿ ಅಕ್ಕು ಹೇಳಿ  ಹಿರಿಯೋರ ಹೇಳಿಕೆ. ಒಟ್ಟಾರೆ ತಾಳ್ಮೆಗೆ  ಒಂದು ಸಂದೇಶವಾಗಿದ್ದೀ ನುಡಿ.

ವಿಜಯತ್ತೆ

   

You may also like...

12 Responses

  1. ಓಹೋ ಮಲಕ್ಕ ಅಪರೂಪಲ್ಲಿ ಬಂತೊ ಬಯಲಿಂಗೆ! ಧನ್ಯವಾದ

  2. ಮಾಲಕ್ಕ, ಅಪರೂಪಲ್ಲಿ ಬಯಿಂದು , ಮೇಲೆ ಬರದ್ದದರ ಸರಿಯಾಗಿ ಓದಿಗೊಳಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *