“ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೆ”-{ಹವ್ಯಕ ನುಡಿಗಟ್ಟು-37}

“ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೆ”-{ಹವ್ಯಕ ನುಡಿಗಟ್ಟು-37}

.ಆನು ಸಣ್ಣದಿಪ್ಪಗ, ರಜೆ ಸಿಕ್ಕಿಯಪ್ಪಗ ಅಜ್ಜನ ಮನಗೆ ಹೋಪದು, ಅಲ್ಲಿ ಚಿಕ್ಕಮ್ಮನ ಮಕ್ಕೊ,ಬಾವಂದ್ರು, ಅತ್ತಿಗೆಕ್ಕೊ ಎಲ್ಲ ಸೇರಿ ಆಡುವದಿದ.ಜಾಲಿಲ್ಲಿ ಅಡಕ್ಕೆ ಹರಗೆಂಡಿದ್ದರೂ ಎಂಗೊಗೆ ಗಣ್ಯ ಇಲ್ಲೆ.ಅಜ್ಜ ಅಡಕ್ಕಗೆ ಎರಡು ದಿನಕ್ಕೊಂದಾರಿ ಕೈ ಹಾಕಿ ಸರಿಮಾಡಿದ್ದು ಎಂಗಳ ಆಟಂದಾಗಿ ’ಚಾನಾಹಾನಿ’ ಆಕ್ಕು. ಎದುರೆ ಆರ ಕಂಡತ್ತೊ ಅವರತ್ರೆ;  “ಅಡಕ್ಕೆ ಹರಗಿದಲ್ಲಿ ಆಡೆಡಿ ಹೇಳಿದ್ದಲ್ಲೊ?” ಅಜ್ಜ ಬೈವಗ,ಎಂಗೊ ಮತ್ತೊಬ್ಬನ ದೂರು ಹಾಕುದು.ಅಷ್ಟೊತ್ತಿಂಗೆ ಅಜ್ಜ “ಎಲ್ಲ…ಒಂದೆ ನಿಂಗೊ. ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೆ” ಹೇಳುಗು. ಅಂಬಗ ಮಾತಾಡದ್ದೆ ಬೈಗಳು ತಿಂದೊಂಡು ಹೋದರೂ ಅಜ್ಜಂಗೆ ತೆಳಿವಾಡಪ್ಪಗಳೋ ಇರುಳು ಅಜ್ಜ ಕತೆ ಹೇಳ್ತ ಸಮಯಲ್ಲಿಯೊ ಆನು ಕೇಳುದು. ಅಜ್ಜ, ನಿಂಗೊ ಆಗ ಹೇಳಿದ್ದಲ್ಲೊ “ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೇಳಿ. ಮತ್ತೆ ಏವದರಲ್ಲಿ ಕಡೆ-ಕೊಡಿ ಇದ್ದು?ಎಂತಕೆ ಹಾಂಗೆ ಹೇಳುದು!?.

ಅದುವೋ.., ಎಲ್ಲಾ ಹಣ್ಣುಗೊಕ್ಕು,ನೆಟ್ಟಿಕಾಯಿಗು, ಹಲ-ಫಲಂಗೊಕ್ಕೆ ಕಡೆಲಿ ಹೆಚ್ಚಿಗೆ ರುಚಿ. ಹಣ್ಣುಗೊ ಕೊಡಿಲಿ ಸೀವು ಕಮ್ಮಿ.ಮಾವಿನ ಹಣ್ಣಿನ, ಹಲಸಿನ ಹಣ್ಣಿನ ನೋಡು. ಆ ಒಳ್ಳೆ ಸೀವಿದ್ದ ಹೊಡೆಯನ್ನೇ ಕಾಕೆ, ಕುಂಡೇಚ ತೋಡುದು. ನೆಟ್ಟಿಕಾಯಿಯು ಅಷ್ಟೆ. ಕಡೆಲಿ ಒಳ್ಳೆ ತುಂಬಿಯೊಂಡಿದ್ದರೆ; ಕೊಡಿಲಿ ಪೊಳ್ಳು!.ಬೆಲ್ಲಕ್ಕೆ ಎಲ್ಲಾ ಹೊಡೆಲಿಯೂ ಒಂದೇ ಸೀವು!. ಹಾಂಗಾಗಿ ಈ ಮಾತು ಉಂಟಾದ್ದು”. ಹೇಳಿಯಪ್ಪಗ ವಿಷಯ ಗೊಂತಾತು.

ಒಂದು ಅಬ್ಬೆ ಮಕ್ಕಳನ್ನೊ,ಒಂದು ಸಮುದಾಯವನ್ನೊ ಅಸಮಾಧಾನಂದ[ರೆಜಾ ಕೋಪಲ್ಲಿ] ಎಲ್ಲ ಒಂದೇ ಹಾಂಗೆ ಹೇಳುವಗ; ಬೆಲ್ಲಲ್ಲಿ ಕಡೆ-ಕೊಡಿ ಇಲ್ಲೆ.ಹೇಳುವ ಮಾತು ನಮ್ಮದಲ್ಲಿ ಹೆಚ್ಚಾಗಿ ಬಳಸುತ್ತೊವು.

ವಿಜಯತ್ತೆ

   

You may also like...

6 Responses

 1. Keshava Prakash says:

  ಬೆಲ್ಲಲ್ಲಿ ಇಲ್ಲದ್ದರೂ ಕಬ್ಬಿಲ್ಲಿ ಒಪ್ಪಲೇ ಬೇಕನ್ನೆ! ಕುಶಾಲಿಂಗೆ ಹೇಳಿದೆ ಅಷ್ಟೆ!

 2. ಬೊಳುಂಬು ಗೋಪಾಲ says:

  ಬೆಲ್ಲವ ಎಲ್ಲಿ ನಕ್ಕಿದರೂ ಸೀವೇ. ನುಡಿಗಟ್ಟು ಅರ್ಥವತ್ತಾಗಿ ರಸವತ್ತಾಗಿದ್ದು. ಹಾಗಲಕಾಯಿಯನ್ನುದೆ ಇದೇ ಲೆಕ್ಕಕ್ಕೆ ತೆಕ್ಕೊಳೆಕೋ ಹೇಳಿ.

 3. ಚೆನ್ನೈ ಭಾವ° says:

  ಹ್ಹಾ.. ಅದು ಸಮ. ಎಂಗಳ ಇಲ್ಲಿ ಸಿಕ್ಕುದು ಉಂಡೆ ಬೆಲ್ಲ ಇದಾ. ಇದರ ಕಡೆ ಕೊಡಿ ನೋಡ್ಸೇಂಗಪ್ಪಾ ಹೇದು ಗ್ರೇಶ್ಯೊಂಡಿತ್ತಿದ್ದೆ ಆನು. ಇನ್ನು ನೋಡ್ಳೆ ಹೋಯೇಕ್ಕೂದು ಇಲ್ಲೆ ಅಂಬಗ. ಹರೇ ರಾಮ ವಿಜಯತ್ತೆ.

 4. ರಘು ಮುಳಿಯ says:

  ವಿಜಯತ್ತೆ ,
  ತಾಳಮದ್ದಲೆಗೆ ಒಳ್ಳೆ ಸಾಮಗ್ರಿ ಇದು .. ಧನ್ಯವಾದ .

 5. ಬೊಳುಂಬು ಗೋಪಾಲ ,ಚನ್ನೈ ಭಾವ ,ರಘುಮುಳಿಯ ಎಲ್ಲ ಅಳಿಯಂದ್ರಿಂಗೂ ಪ್ರಕಾಶಂಗು ಪ್ರೀತಿಪೂರ್ವಕ ಧನ್ಯವಾದ.ಗೋಪಾಲ..,ಹಾಗಲಕಾಯಿಯ ಮಾಂತ್ರ ಬೆಲ್ಲದ ಒಟ್ಟಿಂಗೆ ಹೋಲುಸಲಿಲ್ಲೆ ಮಿನಿಯ .ಏಕೆ ಕೇಳು? ಇದು ಪ್ರೀತಿ[ಸಿಹಿ] ಬೈಗಳು!.

 6. ಬೊಳುಂಬು ಗೋಪಾಲ says:

  ಬೆಲ್ಲದ ಹಾಂಗೆ ಹಾಗಲ ಕಾಯಿಗುದೆ ಕೊಡಿಕಡೆ ಹೇಳಿ ಇಲ್ಲೆ ಹೇಳಿ ಹೇಳಿದೆ ಅಷ್ಟೆ. ಬೆಲ್ಲ ಬೆಲ್ಲವೇ, ಹಾ.ಕಾ. ಹಾ.ಕಾಯಿಯೇ. ಅಪ್ಪು. ಆದರೆ ಹಾಗಲ ಕಾಯಿ ತಾಳಿಂಗೆ ಬೆಲ್ಲ ಹಾಕದ್ದೆ ಅಕ್ಕೊ ??

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *