‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 7

ಕಳದವಾರದ್ದು ಕಳುದವಾರಕ್ಕೆ. ಈ ವಾರದ್ದು ಈ ವಾರಕ್ಕೆ. ಕಳದ ವಾರದ್ದು ಓದಿ ಆಗದ್ರೆ ಅದಕ್ಕೆ ಅಡಿಗೆ ಸತ್ಯಣ್ಣ ಜವಾಬುದಾರ ಅಲ್ಲಡ. ಮನ್ನೆಯೇ ಹೇಳಿದ್ದ°. ಹಾಂಗಾರೆ ಈ ವಾರ ಎಂತಾತು ಹೇದು ಇಲ್ಲಿ ನೋಡುವೋ° –

 

1.

 

aduge satyanna

ಚಿತ್ರ ಕೃಪೆ:
ವೆಂಕಟ್ ಕೋಟೂರ್

ಅಡಿಗೆ ಸತ್ಯಣ್ಣ ಈ ಸರ್ತಿ ವಿಷುವಿಂಗೆ ದೊಡ್ಡ ಮಗಳು ರಾಧೆಯ ಮನಗೆ ಬೆಂಗಳೂರಿಂಗೆ ಹೋದ್ದು ಗೊಂತಿದ್ದನ್ನೇ.. 

ಅಲ್ಲಿಂದ ಬಂದವನೇ ಮಠಕ್ಕೆ ರಾಮೋತ್ಸವಕ್ಕೆ ಹೋಯೇಕು ಹೇಳಿ ಆತು ಸತ್ಯಣ್ಣಂಗೆ..

ಹೋಪಗ ಕೊಡೆಯಾಲಂದ ರೈಲಿಲಿ ಹೋಯೇಕು ರೈಲಿಲಿ ಹೋಪಲೆಡಿಗಪ್ಪಷ್ಟು ದೂರ. ಮತ್ತೆ ಬಸ್ಸು ಹಿಡ್ಕೊಂಬದು ಹೇದಾತು..

ಆದರೆ ರೈಲಿಲಿ ಟಿಕೇಟು ಇಲ್ಲ ಹೇಳಿ ಆತು. ಅಂಬಗ ತತ್ಕಾಲ ಸಿಕ್ಕುತ್ತೋ ನೋಡ್ತೆ ಹೇದು ಹೇದ° ಒಬ್ಬ ಕೊಡೆಯಾಲದ ಮೀಸೆ ಭಾವಯ್ಯ°…

ತತ್ಕಾಲಲ್ಲಿ ಸಿಕ್ಕಿತ್ತು ಟಿಕೇಟು. ಇದಾ ಒರಿಜಿನಲ್ ಐ.ಡಿ ಕಾರ್ಡ್ ಎಂತಾರು ತೋರ್ಸೆಕು ರೈಲಿಲ್ಲಿ ಟಿಕೇಟಿನೊಟ್ಟಿಂಗೆ ಹೇದು ಒಪ್ಪಿಸಿಬಿಟ್ಟಿದವು ಸತ್ಯಣ್ಣಂಗೆ ಮೀಸೆ ಭಾವಯ್ಯ..

ರೈಲು ಹೆರಟತ್ತು. ಉಡುಪಿಗೆ ಎತ್ತುವಾಗ ರೈಲು ಟಿಕೇಟು ಚೆಕ್ಕು ಮಾಡ್ತ ಮನುಷ್ಯ° ಬಂತು ಟಿಕೇಟಿಲ್ಲಿ ಎಂತದೋ ಗೀಚಿ ವಾಪಾಸು ಕೊಟ್ಟತ್ತು ಆಯ್ತು ಭಟ್ರೇ ಹೇದು.

ಸತ್ಯಣ್ಣ ವೋಟಾರು ಐ.ಡಿ ಕಾರ್ಡ್ ಮಡಿಕ್ಕೊಂಡಿತ್ತಿದ್ದ ಚೀಲಲ್ಲಿ. ತೆಗದು ತೋರ್ಸಿದ° ..

ಅದೆಲ್ಲ ಬೇಡ ಭಟ್ರೇ.. ಕೂತುಕ್ಕೊಳ್ಳಿ ಹೇಳಿತ್ತು ಚೆಕ್ಕರ°..

ಸತ್ಯಣ್ಣಂಗೆ ಸಮಾಧಾನ ಆತಿಲ್ಲೆ. ಇದೆಂತರ ಐ.ಡಿ ಕಾರ್ಡ್ ನೋಡಿದ್ದಿಲ್ಲೇ! ಹೇದು ಮತ್ತೂ ಅನುಮಾನ ಬಂತು.

ಸತ್ಯಣ್ಣ ಹೇದ°.. – “ಹಾಂಗೆಲ್ಲ ಆವ್ತಿಲ್ಲೆ. ನೀನು ಟಿಕೇಟು ಚೆಕ್ಕರ ಅಲ್ಲದೋ. ನೀನು ಇದರ ನೋಡೇಕಿದಾ. ನಿನಗೆ ತೋರ್ಸಲೆ ಹೇಳಿಯೇ ಒರಿಜಿನಲ್ ಮನೆಂದ ತೆಕ್ಕೊಂಡು ಬಂದದಾನು… . ಒಂದಾರಿ ನೀನು ನೋಡಿಕ್ಕಿದಾ” ಹೇದು ಅದರ ಮೋರಗೆ ಹಿಡುದು ತೋರ್ಸಿ ನೋಡ್ಸಿಯೇ ಬಿಟ್ಟ° ಅಡಿಗೆ ಸತ್ಯಣ್ಣ°!! 😀

~ ~

 

2.

 

ಸತ್ಯಣ್ಣನ ರೈಲು ಮುಂದೆ ಸಾಗಿತ್ತು..

ಉಡುಪಿ ದಾಂಟಿ ರಜಾ ಮುಂದೆ ಹೋಪಗ ರೈಲಿಲಿ ಬೊಂಡ ಮಾರಿಗೊಂಡು ಬಂತು.

ಬೊಂಡ ದೊಡ್ಡಕ್ಕೆ ಇತ್ತಿದ್ದು.. ಪೆರ್ಲ ಬ್ಯಾರಿ ಅಂಗಡಿಲಿ ಸಿಕ್ಕುತ್ತಾಂಗೆ ಸಣ್ಣದಲ್ಲ..

ಪೆರ್ಲಲ್ಲಿ ಆ ಬರೇ ಸಣ್ಣ ಬೊಂಡಕ್ಕೆ ಮುವತ್ತು ರೂಪಾಯಿ ಕೊಟ್ಟು ಕುಡಿತ್ತ ಕ್ರಮ ಇದ್ದು ಸತ್ಯಣ್ಣಂಗೆ ಒಂದೊಂದರಿ..

ಇದಕ್ಕೆ ಎಷ್ಟು ಹೇದು ಕೇಳಿಯಪ್ಪಗ ಮುವತ್ತು ಹೇಳಿತ್ತು..

ಎಲಾ! ಇದಕ್ಕೂ ಮುವತ್ತೋ.. ಇಷ್ಟು ದೊಡ್ಡದಕ್ಕೆ. ಅಂಬಗ ಇರಲಿ ಹೇಳಿ ಹೇದ° ಸತ್ಯಣ್ಣ°..

ಒಂದು ಕುಡುದಪ್ಪಗ ನೀರು ಲಾಯಕ ಭರ್ತಿ ಇತ್ತಿದ್ದು.., ತಿಂಬಲೆ ಬೊಂಡವೂ ಇತ್ತಿದ್ದು..

ಆ ಪೆರ್ಲದ ಬ್ಯಾರಿ ಮೋಸ ಮಾಡ್ತು ಹೇದು ಸತ್ಯಣ್ಣ ಇನ್ನೊಂದು ಬೊಂಡ ಕೊಂಡಾ ಹೇದು ಕೆತ್ತಿ ಕುಡುದಾ..

ಅದಕ್ಕೆ ಎಷ್ಟು ಕೇಳಿಯಪ್ಪಗ ಮುವತ್ತು ಹೇಳಿತ್ತು ಆ ಮನುಷ್ಯ°.

ಚೆಲ! ಇದೂ ಮೋಸ ಮಾಡುತ್ತನ್ನೇ!… ದೊಡ್ಡ ಬೊಂಡಕ್ಕೂ ಮುವತ್ತು ರುಪಾಯಿ, ಸಣ್ಣ ಬೊಂಡಕ್ಕೂ ಮುವತ್ತು ರೂಪಾಯಿ. ಇನ್ನು ಬೊಂಡವ ಕಿಲೋ ತೂಗಿಯೇ ತೆಗವದು ಒಳ್ಳೆದು ಹೇದು ತೀರ್ಮಾನ ಮಾಡಿದ ಅಡಿಗೆ ಸತ್ಯಣ್ಣ°. 😀

 

~ ~

 

3.

 

ಸತ್ಯಣ್ಣನ ರೈಲು ಮುಂದೆ ಹೋಗಿಯೊಂಡಿತ್ತಿದ್ದು..

ಸಮುದ್ರ ಕರೇಲಿ ಹೋಪ ಕಾರಣ ಒಳ್ಳೆ ಗಾಳಿಯೂ..

ಸತ್ಯಣ್ಣನ ಚೀಲಲ್ಲಿ ಮೊಬೈಲು ಕೂಗಲೆ ಸುರುಮಾಡಿತ್ತು..

ಸತ್ಯಣ್ಣ°  ಮರದುಹೋಗಿ ಮಗಳ ಮೊಬೈಲ ಚೀಲಲ್ಲಿ ಹಾಕಿತ್ತಿದ್ದ°!..

ಚೀಲಂದ ತೆಗದು “ಹರೇ ರಾಮ” ಹೇಳಿ ಮೊಬೈಲಿ ಮಾತಾಡ್ಳೆ  ಸುರುಮಾಡಿದ°..

ಆಚ ಹೊಡೆಂದ ಎಂತದೋ ಹೇಳಿಗೊಂಡಿತ್ತವು…. ಸತ್ಯಣ್ಣಂಗೆ ಮೊಬೈಲಿಲಿ ಹೀಂಗೆಲ್ಲ ಮಾತಾಡಿ ಅಭ್ಯಾಸವೂ ಇಲ್ಲೆ.  ಆಚಿಗೆಂದ ಎಂತರ ಹೇಳ್ತದೂ ಕೇಳುತ್ತಿಲ್ಲೆ.

ಸತ್ಯಣ್ಣ ಹೇಳಿದ°… – “ಆನು ಹೀಂಗೆ ರೈಲಿಲಿ ಹೋವ್ತಾ ಇದ್ದೆ. ಗಾಳಿಗೆ ಮಾತಾಡಿದ್ದು ಕೇಳುತ್ತಿಲ್ಲೆ. ನಿಂಗೊ ಮಗಳ ಮೊಬೈಲಿಂಗೆ ಫೋನ್ ಮಾಡಿ.. ಅದು ವಿವರ ಕೇಳಿ ತಿಳ್ಕೊಂಗು..,  ಆನು ಮನಗೆ ಹೋಗಿಕ್ಕಿ  ಅದರತ್ರಂದ ವಿಷಯ ಕೇಳಿ ತಿಳ್ಕೊಳ್ತೆ ಆತೋ!”. 😀

 

~ ~

 

4.

 

ಸತ್ಯಣ್ಣನ ರೈಲು ಮುಂದೆ ಮುಂದೆ ಹೋವ್ತಾ ಇದ್ದು…

ತಟುಕು ಬುಡಕ್.. ತಟುಕು ಬುಡುಕು..

ಸುಮಾರು ದೂರ ಹೋಗಿ ….. ಒಂದು ಸ್ಟೇಶನ್ ಮದಲೆ ಒಂದು ಟ್ರಾಕಿಂದ ಮತ್ತೊಂದು ಟ್ರಾಕಿಂಗೆ , ಅದರಿಂದ ಮತ್ತೆ ಮತ್ತೊಂದು ಟ್ರಾಕಿಂಗೆ ಹೀಂಗೆ ಬದಲ್ಸಿಗೊಂಡು ಬಲದ ಹೊಡೆಲಿ ಬಂದು ಗೊಂಡಿತ್ತಿದ್ದ ರೈಲು ಎಡೆದ ಹೊಡೆಂಗೆ ಬಂದು ಸ್ಟೇಶನ್ ಲಿ ನಿಂದತ್ತು.

ಎದುರಂದ ಒಂದು ರೈಲು ಕ್ರೋಸ್ ಅಯೇಕು ಹೇಳಿ ಇಲ್ಲಿ ನಿಂದತ್ತು ರೈಲು..

ಸತ್ಯಣ್ಣ° ಬಗ್ಗಿ ನೋಡಿಕ್ಕಿ ಹೇಳಿದ° – “ಎಲಾ!, ಈ ರೈಲು ಟ್ರಾಕ್ ಬಿಟ್ಟು ಹೋವ್ತೇ ಇಲ್ಲೆ. ಮಾರ್ಗಲ್ಲಿ ಹೋಗಿತ್ತಿದ್ರೇ ಆಗಳೇ ಹೋಗಿ ಸೇರ್ಲಾವ್ತಿತ್ತು. ಏಕೆ ಇವಕ್ಕೆ ಅರಡಿತ್ತಿಲ್ಲೇದು!” 😀

 

~ ~

 

5.

 

ಅಡಿಗೆ ಸತ್ಯಣ್ಣ ರೈಲು ಬಸ್ಸು ಆಗ್ಯೊಂಡು ಹೇಂಗೋ ಮಧ್ಯಾಹ್ನ ಮೂರು ಗಂಟೆಗಪ್ಪಗ ಮಠಕ್ಕೆ ಎತ್ತಿದ ..

ಹೊಟ್ಟೆ ಹಶುವಾಗಿ ತಲೆ ತಿರುಗಿ ಎದುರು ಹೋವ್ತವನ ಬೆನ್ನು ಕಂಡುಗೊಂಡಿತ್ತು ಅಡಿಗೆ ಸತ್ಯಣ್ಣಂಗೆ..

ಅಲ್ಲಿಗೆ ಎತ್ತಿಯಪ್ಪದ್ದೆ ಎಡೆಪ್ಪಾಡಿ ಭಾವ° ಎದೂರೆ ಸಿಕ್ಕಿದವು. ಕೈ ಕಾಲು ತೊಳ್ಕಂಡು ಮದಾಲು ನಿಂಗೊ ಉಂಡಿಕ್ಕಿ ಬನ್ನಿ ಸತ್ಯಣ್ಣ ಹೇದವು ಎಡೆಪ್ಪಾಡಿ ಭಾವ°..

ಸತ್ಯಣ್ಣ° ಹೋಗಿ ಭೋಜನ ಶಾಲಗೆ ಹೋಗಿ ಉಂಬಲೆ ಕೂದ°..

ಅಲ್ಲಿಯಾಣ ಊಟದ ಕ್ರಮ …ಹೇಳಿರೆ ಬಳಸುತ್ತ ಕ್ರಮ ಹೇಂಗೆ ಹೇದು ನಿಂಗೊಗೂ ಗೊಂತಿಕ್ಕು. ಅಷ್ಟೂ ಚೊಕ್ಕಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ. ಏನೋ ಶ್ರೀ ಗುರುಗಳ ಅನುಗ್ರಹಂದ ಲಾಯಕ ನಡಕ್ಕೊಂಡು ಬತ್ತಾ ಇದ್ದು.

ಅಲ್ಲಿಯಾಣ ಕ್ರಮ ನೋಡಿ ಸತ್ಯಣ್ಣಂಗೂ ಕೊಶಿಯಾತು. ಎಲ್ಲ ಸಿಂಪಲ್… ಸತ್ಯಣ್ಣನ ಹಾಂಗೇ..

ತಟ್ಟೆ ಮಡಿಗಿದವು.. ಗ್ಲಾಸು ಮಡಿಗಿದವು.., ನೀರು ಹಾಕಿದವು.., ಪಾಚ ಬಳಿಸಿದವು.., ಉಪ್ಪಿನಕಾಯಿ ಬಳಿಸಿದವು, ತಾಳು ಬಳಿಸಿದವು.. ಉಪ್ಪು ಬಳುಸಿದವು…

ಉಪ್ಪು ಹೇಳಿರೆ ನಿಂಗೊ ಗ್ರೇಶುತ್ತಾಂಗೆ ಆ ಬೆಳೀ ಹುಡಿ ಉಪ್ಪು ಅಲ್ಲ. ಕಲ್ಲು ಉಪ್ಪು ಹೊಡಿ ಮಾಡಿದ್ದದು..

ಸತ್ಯಣ್ಣಂಗೆ ಹಶುವಾಗಿ ಏನೂ ಎಡಿಯಾ…

ಪರಿಶಿಂಚನೆ ಮಾಡಿ ಉಂಬಲೆ ಸುರುಮಾಡಿದ.. ಮದಾಲು ಪಾಚ ಉಂಡ… ಉಪ್ಪಿನಕಾಯಿ ಹತ್ರೆ ರಜಾ ತೆಳು ಅರಶಿನವೋ ಕಪ್ಪೋ ಬಣ್ಣದ ಹೊಡಿ ಕಂಡತ್ತು…

ಹೋ.. ಇಲ್ಲಿ ಪಂಚಕಜ್ಜಾಯ ಮಾಡಿ ಬಳ್ಸಿದ್ದವಾಯ್ಕು ಹೇದು ಕೈಲಿ ಬಾಚಿ ಬಾಯಿಗೆ ಹಾಕಿದ…!!

ಬಾಯಿಗೆ ಹಾಕಿಯಪ್ಪಗ ರುಚಿಲಿ ಗೊಂತಾತು ಅದು ಪಂಚಕಜ್ಜಾಯ ಅಲ್ಲ.. ಅದು ಉಪ್ಪು!! 😀

 

~~

 

6.

 

ಅಡಿಗೆ ಸತ್ಯಣ್ಣಂಗೆ ಮಠಂದ ಮತ್ತೆ ಮೆಡ್ರಾಸಿಲ್ಲಿ ಅನುಪತ್ಯ.

ಹಾಂಗಾಗಿ ಅಂದು ರಾಮಕತೆಯನ್ನೂ ನೋಡಿಕ್ಕಿ ಕೊಶಿಲಿ ಮರುದಿನ ಮಧ್ಯಾಹ್ನವರೇಂಗೆ ಅಲ್ಲಿ ಇದ್ದು ಮಿಂದುಉಂಡುಗಿಂಡು ಮಾಡಿಕ್ಕಿ  ಮರುದಿನ ಮಧ್ಯಾಹ್ನ ಹೆರಟ ಅಲ್ಲಿಂದ°.

ಅಲ್ಲಿಂದ ಶಿವಮೊಗ್ಗ ಬಂದು ಅಲ್ಲಿಂದ ಬೆಂಗಳೂರಿಂಗೆ ಬಂದಪ್ಪಗ ಉದಿಗಾಲ ೫ ಗಂಟೆ ಆತು. ಅಲ್ಲಿಂದ ಕೂಡ್ಳೆ ಶತಾಬ್ದಿ ರೈಲು ಸಿಕ್ಕಿತ್ತು. ಅದರ್ಲಿ ಟಿಕೇಟು ಮಾಡಿಗೊಂಡು ಏ ಸಿ ರೈಲಿಲಿ ಕೊಶಿಲಿ ಮೆಡ್ರಾಸಿಂಗೆ ಹೆರಟ°..

ಅಡಿಗೆ ಸತ್ಯಣ್ಣಂಗೆ ತೆಂಕ್ಲಾಗಿ ರೈಲಿಲಿ ಹೋಗಿ ಅಭ್ಯಾಸ ಇದ್ದರೂ ಮೆಡ್ರಾಸಿಂಗೆ ಬಪ್ಪದು ಇದೇ ಸುರೂವಾಣ ಸರ್ತಿ..

ಅಲ್ಲಲ್ಲಿ ಏವ ಸ್ಟೇಶನ್, ಏವ ಜಾಗೆ ಹೇಳಿ ಇಣುಕ್ಕಿ ನೋಡಿಗೊಂಡಿತ್ತಿದ್ದ. ಕನ್ನಡಲ್ಲಿ ಬರಕ್ಕೊಂಡಿಪ್ಪದು ಓದಲೆ ಅರಡಿತ್ತು ಸತ್ಯಣ್ಣಂಗೆ. ಇಂಬ್ಲೀಶೋ, ತಮಿಳು ಮಣ್ಣ ಆದರೆ ಓದಲೆ ಅರಡಿಯಾ.

ಓದಲೆ ಅರಡಿಯದ್ರೆ ಎಂತಾತು. ಬಾಯಿಲ್ಲ್ಯೋ ಕೇಳ್ಳೆ ಹೇಳುಗು ನಮ್ಮ ಸತ್ಯಣ್ಣ°. ಹಾಂಗೆ ಅಲ್ಲಲ್ಲಿ ಹತ್ರೆ ಕೂದೋನತ್ರ ಕೇಳಿಗೊಂಡು ಬಂದ°..

ಹಾಂಗೆ ಓ ಅಲ್ಲಿ ಒಂದಿಕ್ಕೆ ರೈಲು ನಿಂದತ್ತು..

ಅಡಿಗೆ ಸತ್ಯಣ್ಣ ಹತ್ರೆ ಕೂದೋನತ್ರೆ ಕೇಳಿದ° – ‘ಇದೇವ ಸ್ಟೇಶನ್?’

ಆ ಜೆನ ಹೇಳಿತ್ತು – “ಆರ್ ಕೋಣ”

ಸತ್ಯಣ್ಣ° ಪುನಃ ಕೇಳಿದ – “ಇದೇವ ಸ್ಟೇಶನ್ ?”

ಆ ಜೆನ ಪುನಃ ಹೇಳಿತ್ತು – “ಆರ್ ಕೋಣ”

ಸತ್ಯಣ್ಣಂಗೆ ಪಿಸುರು ಬಂತು. ಹೇಳಿದ° … – ಅದು ಆರ ಕೋಣ ಆದರೂ ಆಗಲಿ, ಇದೀಗ ಏವ ಸ್ಟೇಶನ್ ಹೇದು ಹೇಳು ಮಾರಾಯ.

ಹತ್ರೆ ಕೂದ ಮತ್ತೊಬ್ಬಂಗೆ ಪರಿಸ್ಥಿತಿ ಅರ್ಥ ಆತು. ಅಂವ ಹೇಳಿದ° – “ಇದು ಆರ್ಕೋಣಂ ಹೇಳ್ವ ಹೆಸರಿನ ಸ್ಟೇಶನ್'”

ಈಗ ಸತ್ಯಣ್ಣಂಗೂ ಅರ್ಥ ಆತು., ಹೇಳಿದ° – “ಮತ್ತಾಂಗೆ ಸರಿ ಹೇಳ್ಳಾಗದೋಪ್ಪ ಅದಕ್ಕೆ. ಈಗ ಎನಗೂ ನಿಂಗೊ ಹೇಳಿದ್ದದು ಗೊಂತಾತು   – ಇದು.. ಆರ ಕೋಣ”. 😀

 

~~

 

7.

 

ಆರು ಗಂಟಗೆ ಬೆಂಗಳೂರಿಂದ ಹೆರಟ ಶತಾಬ್ಧಿ ಮೆಡ್ರಾಸು ಹೊಡೆಂಗೆ ಹೋವ್ತಾ ಇತ್ತಿದ್ದು..

ರೈಲು ಹೆರಟಪ್ಪದ್ದೆ ಒಂದು ಇಂಬ್ಲೀಷು ಪೇಪರು ತಂದು ಕೊಟ್ಟವು. ನವಗರಡಿಯ ಹೇದು ಕರೇಲಿ ಮಡಿಗಿದ ಸತ್ಯಣ್ಣ..

ಏಳು ಗಂಟಗೆ ಒಂದು ಗ್ಲಾಸು ಕಾಪಿ ತಂದು ಕೊಟ್ಟವು..

ಎಂಟು ಗಂಟಗೆ ಎರಡು ಬಿಸ್ಕುಟು ಎರಡು ಚೋಕಲೇಟೂ ಒಂದು ತಟ್ಟೆಲಿ ತಂದು ಮಡಗಿದವು..

ಒಂಬತ್ತು ಗಂಟಗೆ ಎರಡು ಬ್ರೆಡ್ಡು ತುಂಡು, ಬೆಣ್ಣೆ , ಜೇಮು, ಒಂದು ವಡೆ, ಸಾಂಬಾರು, ಚಟ್ನಿ, ಒಂದಿಷ್ಟು ಪೊಂಗಲು  ಒಂದು ತಟ್ಟೆಲಿ ಮಡುಗಿ ಇನ್ನೊಂದು ತಟ್ಟೆಯ ಮುಚ್ಚಿ ತಂದು ಕೊಟ್ಟವು..

ಈ ಬ್ರೆಡ್ಡಿಂಗೆ ಬೆಣ್ಣೆ ಜೇಮು ಉದ್ದಿ ಎರಡು ಕೈಲಿ ನೆಗ್ಗಿ ಹಿಡ್ಕೊಂಡು ತಿಂಬ ಚೆಂದ  ನೋಡಿಯೇ ಸತ್ಯಣ್ಣನ ಅರೆವಾಶಿ ಹಶು ತಣುದತ್ತು. ಸತ್ಯಣ್ಣಂಗೆ ಹೀಂಗಿರ್ಸ ಕೋಲ ಎಲ್ಲ ಅರಡಿಯ..

ಅದು ತಿಂದು ಮುಗುದಪ್ಪಗ ಒಂದು ಗ್ಲಾಸು ಕಾಪಿ ವಾಪಾಸು ತಂದು ಕೊಟ್ಟವು..

ಹತ್ತು ಗಂಟಗೆ ಪ್ರೂಟಿಯುದೇ ಅದರ ಉರುಪ್ಪಲೆ ಓಟೆಯೂ ಅದರ್ಲೇ ಅಂಟುಸಿ ತಂದು ಕೊಟ್ಟವು..

ಸತ್ಯಣ್ಣ ಮೆಲ್ಲಂಗೆ ಆ ಓಟೆಯ ಕುತ್ತಿ ಜ್ಯೂಸು ಉರ್ಪಿ ಕುಡುದು… ಪ್ರೂಟಿ ಪೇಕೇಟಿನ ಹಾಂಗೇ ಒಂದು ಕೈಲಿ, ಇನ್ನೊಂದು ಕೈಲಿ ಓಟೆಯನ್ನೂ ಹಿಡ್ಕೊಂಡು ಆ ತಂದುಕೊಟ್ಟ ಮನುಷ್ಯ ಬತ್ತೋಳಿ ಕಾದು ಕೂದ..

ಆ ತಂದುಕೊಟ್ಟ ಮನುಷ್ಯ ಬಂತು. ತನ್ನನ್ನೇ ನೋಡ್ತಾ ಇಪ್ಪ ಇವನತ್ರೆ ಕೇಳಿತ್ತು. ಎಂತಾತು.., ಎಂತಾಯೇಕಾತು??

ಸತ್ಯಣ್ಣ ಕಾಲಿ ಪ್ರೂಟಿ ಪೇಕೇಟಿನ ತೋರ್ಸಿ ಹೇಳಿದ… ಇದು ಕಾಲಿ ಕೊಟ್ಟಿದೆ. ಇದು ಒಟ್ಟೆ ಆಗಿಯೊಂಡಿದ್ದು. ಇದರ್ಲಿ ಎಂತ ಇಲ್ಲೆ. ಬೇರೆ ಕೊಂಡ ಎನಗೆ..

ಆ ಮನುಷ್ಯನೂ ವಾದ ಮಾಡಿತ್ತು… ಇದು ನಿಂಗೊ ಲೊಟ್ಟೆ ಹೋಳುಸ್ಸು., ಹೀಂಗೆಲ್ಲ ಒಟ್ಟೆ ಆಗಿಪ್ಪ ಪ್ರೂಟಿ ಬಾರ..

ಸತ್ಯಣ್ಣ ಹೇಳಿದ° – ನೋಡು ಮಾರಾಯ… ಎಂಗಳ ಊರಿಲ್ಲಿ ಮರಂದ ಕೊಯ್ವ ಬೊಂಡವೇ ಒಟ್ಟೆ ಆಗಿಯೊಂಡಿರ್ತು. ಮಂಗಂಗೊ ಒಟ್ಟೆ ಮಾಡಿ ನೀರು ಕುಡುದಿಕ್ಕಿ ಹೋವ್ತವು. ಮತ್ತೆ ಇಷ್ಟಕ್ಕಿಪ್ಪ ನಿನ್ನ ಪ್ರೂಟಿಯ ಒಟ್ಟೆ ಮಾಡಿರವು ಹೇದು ಎಂತ ಗ್ಯಾರಂಟಿ. ಬೇಗ ಕೊಂಡ ಎನಗೆ ಬೇರೆ ನೇರ್ಪದ ಒಟ್ಟೆ ಮಾಡದ್ದ ಪ್ರೂಟಿ.

ಆತಪ್ಪ ಇವನ ಚೊರೆ ಬೇಡ ಹೇದು ಆ ಮನುಷ್ಯ ಇನ್ನೊಂದು ಹೊಸ ಪ್ರೂಟಿ ಪೇಕೇಟು ತಂದು ಕೊಟ್ಟತ್ತು .

ಇವರತ್ರಂದ ಹೀಂಗೆ ಪೀಂಕ್ಸೆಕಿದಾ ಹೇಳಿಗೊಂಡ ತನ್ನ ಒಳದಿಕ್ಕೆ ಅಡಿಗೆ ಸತ್ಯಣ್ಣ°! 😀

 

~~

 

8.

 

ಹತ್ತು ಗಂಟಗೆ ಆರ್ಕೋಣಂ ಬಂದ ಶತಾಬ್ದಿ ರೈಲು, ಹತ್ತು ಐವತ್ತಕ್ಕೆ ಮೆಡ್ರಾಸು ಸ್ಟೇಶನಿಂಗೆ ಬಂದು ಎತ್ತಿತ್ತು…

ಎಲ್ಲೋರು ಅಂಬೇರ್ಪಂಬೇರ್ಪಿಲ್ಲಿ ಬೇಗು ನೇಲ್ಸಿ ಎದ್ದು ನಿಂದೊಂಡವು ಇಳಿವಲೆ..

ಸತ್ಯಣ್ಣ ಮಾತ್ರ ಸೀಟು ಬಿಟ್ಟು ಹಂದಿದ್ದನಿಲ್ಲೆ..

ಹತ್ರೆ ಇಪ್ಪ ಮನುಷ್ಯ° ಕೇಳಿತ್ತು – ‘ಎಂತ ನಿಂಗೊ ಇಳಿತ್ತಿಲ್ಯೋ?!’

ಸತ್ಯಣ್ಣ ಹೇದ° – ಏ ಬೋಸ.. , ನೋಡು ಇನ್ನು ಐದು ನಿಮಿಷಲ್ಲಿ ಐಸುಕ್ರೀಮು ಮಣ್ಣ ತಕ್ಕು. ಅದರ ತಿಂದಿಕ್ಕಿಯೇ ಇಳಿವಲಕ್ಕನ್ನೇ!! 😀

 

~~

9.

ಅಡಿಗೆ ಸತ್ಯಣ್ಣ° ಅಡಿಗೆ ವೃತ್ತಿ ಸುರುಮಾಡೇಕ್ಕಾರೆ ಮದಲೆ ಹೋಟ್ಳು ಮಡಿಕ್ಕೊಂಡಿತ್ತಿದ್ದ°..

ಹೋಟ್ಳು ಸುರುಮಾಡೇಕ್ಕಾರೆ ಮದಲೆ ಒಬ್ಬ ಶ್ರೀಮಂತನಲ್ಲಿ ಅಡಿಗ್ಗೆ ಇತ್ತಿದ್ದ°..

ಆ ಶ್ರೀಮಂತ ಒಳ್ಳೆ ದೈವಭಕ್ತ°. ನಿತ್ಯ ಹತ್ರೆ ಇಪ್ಪ ದೇವಸ್ಥಾನಕ್ಕೆ ಹೋಗಿ ದೇವರಿಂಗೆ ಅಡ್ಡ ಬಿದ್ದಿಕ್ಕಿ ಬಕ್ಕು..

ಒಂದಿನ ಅಲ್ಲಿಗೆ ಒಬ್ಬ° ಗುರುಗೊ ಬಂದಿತ್ತವು. ಈ ಶ್ರೀಮಂತಂಗೆ ಎರಡು ಮಾವಿನಣ್ಣು ಪ್ರಸಾದ ಸಿಕ್ಕಿತ್ತು..

ಶ್ರೀಮಂತ° ಮನಗೆ ಬಂದವನೇ ಸತ್ಯಣ್ಣನತ್ರೆ ಆ ಮಾವಿನಣ್ಣುಗಳ ಕೊಟ್ಟು ಇದರ ಕೊರದು ಮಡುಗು. ಪ್ರಸಾದ ಇದು. ಒಬ್ಬ ಅತಿಥಿ ಬಕ್ಕು ಈಗ. ಅವಂಗೆ ಕೊಟ್ಟಿಕ್ಕಿ ನಾವೂ ತಿಂಬೋ ಹೇದ°.

ಆತು ಹೇದು ಸತ್ಯಣ್ಣ ಮಾವಿನಣ್ಣಿನ ಒಳ ಕೊಂಡೋದ°.

ರಜಾ ಹೊತ್ತಿಲ್ಲಿ ಅತಿಥಿಯೂ ಬಂದ°… ಶ್ರೀಮಂತ ಅವನತ್ರೆ ಸುಖದುಃಖ ಮಾತಾಡಿಗೊಂಡಿತ್ತವು..

ಸತ್ಯಣ್ಣಂಗೆ ಈ ಮಾವಿನಣ್ಣು ನೋಡಿ ಬಾಯಿಲಿ ನೀರು ಬಂತು. ಮೆಲ್ಲಂಗೆ ಬೆರಳಿಲಿ ಅಮರ್ಸಿ ನೋಡಿದ. ಕೈ ಒಳ ಹೋತು. ಬೆರಳ ಚೀಪಿದ… ಓಹ್… ಭಾರೀ ಸೀವಿತ್ತಿದ್ದು..

ಪೀಶಕತ್ತಿ ತೆಗದು ಕೊರವಲೆ ಸುರುಮಾಡಿದ. ಬಾಯಿಲಿ ಮತ್ತೂ ಮತ್ತೂ ನೀರು ಬತ್ತಾ ಇದ್ದು ಕೊದಿ ತಡೆಯದ್ದೆ..

ಎರಡು ಹೋಳು ಬಾಯಿಗೆ ಹಾಕಿದ. ವಾಹ್ ವಾಹ್ ಭಾರೀ ಪಷ್ಟಿದ್ದು ಹೇಳಿ ಮತ್ತೆರಡು ಹೋಳು ಬಾಯಿಗೆ ಎತ್ತಿತ್ತು….

ಮತ್ತೊಂದು ಮತ್ತೊಂದು… ಮತ್ತೊಂದು………… ಹಣ್ಣು ಒಂದು ಕಾಲಿ ಆತು..

ಎರಡ್ನೇ ಹಣ್ಣು ಹಾಂಗೇ ಆತು….. ಮಾವಿನಣ್ಣು ಎರಡೂ ಕಾಲಿ..

ಅಯ್ಯನ ಮಂಡೇ ಹಣ್ಣು ಮುಗಾತನ್ನೇ. ಇನ್ನೀಗ ದನಿ ಕೇಳಿರೆ ಎಂತ ಮಾಡುಸ್ಸು?!!..

ದನಿ ಸತ್ಯಣ್ಣನ ದೆನಿಗೊಂಡು ಮಾವಿನಣ್ಣು ಕೊರದಾತೋ ಹೇದು ಕೇಟ°.

ಇಲ್ಲೆ., ಪೀಶತ್ತಿ ಬಡ್ಡು ಕೊರವಲೆ ಎಡಿತ್ತಿಲ್ಲೆ ಹೇದ°..

ಎಂತ! ಪೀಶತ್ತಿ ಬಡ್ಡೋ.!!.., ಇತ್ತೆ ಕೊಂಡ ಮಸದು ಕೊಡ್ತೆ ಹೇದು ಸತ್ಯಣ್ಣನ ಕೈಂದ ಪೀಶತ್ತಿ ತೆಕ್ಕೊಂಡು ಮನೆ ಹಿಂದಂಗೆ ಮಸವ ಕಲ್ಲಿನ ಹತ್ರಂಗೆ ಹೋದ..

ಸತ್ಯಣ್ಣ ಒಂದು ಉಪಾಯ ಮಾಡಿದ°..

ಅತಿಥಿ ಹತ್ರೆ ಬಂದು ಮೆಲ್ಲಂಗೆ ಹೇದಾ° –  “ಏ ಮಾರಾಯ! ನೀ ಎಂತಕೆ ಇಲ್ಲಿಗೆ ಬಂದದು. ಎನ್ನ ದನಿ ಕಾಳಿ ಭಕ್ತ°. ಪ್ರತಿವಾರ ಈ ದಿನ ಬಂದ ಅತಿಥಿಗಳ ಕೆಮಿ ಎರಡು ಕತ್ತರ್ಸಿ ಕಾಳಿಗೆ ಬಲಿ ಕೊಡ್ತ. ನೋಡು ಅಂವ ಪೀಶತ್ತಿ ಮಸೆತ್ತ ಇಪ್ಪದು…”

ಅತಿಥಿ ನೋಡಿದ°, ದನಿ ಪೀಶತ್ತಿ ಮಸೆತ್ತ ಇದ್ದ°… ಇವನ ಕೈ ಕಾಲು ನೆಡುಗಿತ್ತು.

ಒಂದೇಬೆಟ್ಟು ಅಲ್ಲಿಂದ ಓಡಿದ°..

ದನಿ ಒಳಬಂದವನೇ ಸತ್ಯಣ್ಣನತ್ರೆ ಕೇಳಿದ..- “ಎಲ್ಲಿದ್ದು ಮಾವಿನಣ್ಣು, ಆನೇ ಕೊರೆತ್ತೆ ಈಗ. ತಂದು ಮಡುಗಿಲ್ಲಿ..”

ಸತ್ಯಣ್ಣ ಹೇಳಿದ° – ಮಾವಿನಣ್ಣು ನೋಡಿ.. ಆ ಅತಿಥಿ ತೆಕ್ಕೊಂಡು ಓಡ್ತಾ ಇದ್ದ°!

ಆ ದನಿಯೂ ಅವನ ಹಿಂದೇ ಅಟ್ಟಿಗೊಂಡು ಓಡ್ಳೆ ಸುರುಮಾಡಿದ°.. ಇಂವ ಓಡ್ಸಿಗೊಂಡು ಬತ್ತಾ ಇದ್ದ ಹೇದು ಎರಡೂ ಕೆಮಿಗೆಂಡಗೆ ಕೈ ಮಡಿಕ್ಕೊಂಡು ಅತಿಥಿ ಇನ್ನೂ ವೇಗಲ್ಲಿ ಓಡ್ಳೆ ಸುರುಮಾಡಿದ°..

ಓಡ್ಸಿಗೊಂಡು ಹೋವ್ತ ದನಿ ಹೇದ° – ಏ ಮಾರಾಯಾ! ಎರಡಿದ್ದನ್ನೇ . ಒಂದು ಎನಗೆ ಕೊಡು.,  ಒಂದು ಕೊಡು..!

ಅತಿಥಿ ಓಡ್ಯೊಂಡೇ ಹೇದ° – “ಕೊಡೆ.. ಕೊಡೆ.,  ಆನು ಒಂದೂ ಕೊಡೆ., ಎನಗೆ ಬೇಕಿದು ಎನಗೆ ಬೇಕಿದು” 😀 😀

ಸತ್ಯಣ್ಣ° ಅಂದು ಆ ಉದ್ಯೋಗವ ಬಿಟ್ಟಂವ° ಮತ್ತೆ ಕಂಡದು ಬಣ್ಪುತ್ತಡ್ಕಲ್ಲಿ ಹೋಟ್ಲು ಸುರುಮಾಡಿದ ಮತ್ತೆಯೇ !! 😀

(* ಇದೊಂದು ಬೇರೆ ಭಾಷೆಂದ ಕದ್ದ ಕತೆ)

~~

10.

 

ಮನ್ನೆ ಮನ್ನೆ ಪುತ್ತೂರಿಲ್ಲಿ ಪ್ರತಿಷ್ಠಾನದ ಆಶ್ರಯಲ್ಲಿ ಹತ್ತು ಸಮಸ್ತರು ಸೇರಿ ಆದ ಅಷ್ಟಾವಧಾನ ಪಕ್ಕಕೆ ಆರಿಂಗೂ ಮರೆಯ..

ಹೀಂಗೊಂದು ಕಾರ್ಯಕ್ರಮ ಇದ್ದು ಹೇದು ಸಾಕಷ್ಟು ಮುಂಚಿತವಾಗಿಯೇ ಪತ್ರಿಕೆಗಳಲ್ಲಿಯೂ ಸಾಕಷ್ಟು ವರ್ತಮಾನ ಹಬ್ಬಿ ಊರಿಡೀ ಗೊಂತಾಯ್ದು..

ಎಷ್ಟೋ ಜೆನ ಎಪ್ರಿಲ್ ಇಪ್ಪತ್ತೊಂದು ಹೇದು ಕೆಲಂಡರಿಲಿ ಗುರುತು ಹಾಕಿ ಮಡಿಕ್ಕೊಂಡು ಬೇರೆ ಕಾರ್ಯಕ್ರಮ ಎಲ್ಲ ರದ್ದು ಪಡಿಸಿ ಬಂದವೂ ಇದ್ದವು..

ಒಬ್ಬಂಗೆ ಎಪ್ರಿಲ್ ಇಪ್ಪತ್ತೊಂದು ಹೇಳ್ವದು ನೆಂಪಿಲ್ಲದ್ದೆ ಮಾರ್ಚಿ ಇಪ್ಪತ್ತೊಂದಕ್ಕೇ ಅಲ್ಲಿಗೆ ಹೋಗಿ “ಇಲ್ಲಿ ಆರನ್ನೂ ಕಾಣುತ್ತಿಲ್ಲೆ.., ಎಲ್ಲಿ ಕಾರ್ಯಕ್ರಮ ಅಪ್ಪದು” ಹೇದು ಮಣಿಲ ಮಾವಂಗೆ ಫೋನ್ ಮಾಡಿ ಕೇಳಿದ ವರ್ತಮಾನ ಬೈಲಿಂಗೂ ಶುದ್ದಿ ಎತ್ತಿದ್ದು..

ಅಡಿಗೆ ಸತ್ಯಣ್ಣನೂ ಅಂದು ಅನುಪತ್ಯ ರದ್ದು ಪಡಿಸಿ, ರಮ್ಯನೂ ಅಡಿಗೆ ಸತ್ಯಣ್ಣನೂ ಹೋಪದು ಹೇದು ನಿಘಂಟು ಆಗಿದ್ದತ್ತು..

ಇದು ರಂಗಣ್ಣಂಗೂ ವಿಷಯ ಗೊಂತಾತು. ಅಡಿಗೆ ಸತ್ಯಣ್ಣಂಗೆ ಅನುಪತ್ಯ ಇಲ್ಲದ್ರೆ ರಂಗಣ್ಣಂಗೂ ಪುರುಸೊತ್ತೇ..

ರಮ್ಯನೂ ಇಂದು ಬಪ್ಪಲಿದ್ದು ಹೇದು ಗೊಂತಾಗಿ ರಂಗಣ್ಣ ಉದಿಯಪ್ಪಗಳೇ ಪುತ್ತೂರಿಲ್ಲಿ ಹಾಜರು..

ಸತ್ಯಣ್ಣ ಮಾರುತಿ800ಲಿ ರಮ್ಯನೊಟ್ಟಿಂಗೆ ಬಕ್ಕೀಗ ಹೇದು ಎಕ್ಕಳ್ಸಿ ಎಕ್ಕಳ್ಸಿ ಕಾದುಕೂದ..

ಸಮಯಕ್ಕೆ ಸರಿಯಾಗಿ ಸತ್ಯಣ್ಣ ಹಾಜರು. , ಆದರೆ.. ಮಾರುತಿ800  ಇಲ್ಲೆ ರಮ್ಯನೂ ಇಲ್ಲೆ. 🙁

ರಮ್ಯ ಬಾರದ್ದ ಮತ್ತೆ ತನಗೆಂತಿದ್ದಿಲ್ಲಿ ಇನ್ನು ಹೇದು ರಂಗಣ್ಣ ಸತ್ಯಣ್ಣಂಗೆ – “ಎನಗೆ ಅರ್ಜೆಂಟು ಸುಳ್ಯಕ್ಕೆ ಹೋಪಲಿದ್ದು” ಹೇದಿಕ್ಕಿ ಹೆರಬಂದು ಅವನ  ಎಮ್80ಯ ಪೆರ್ಲಕ್ಕೆ ತಿರುಗಿಸಿದ ! 😀

~~~

ಓಯ್… ರಮ್ಯನ ರಿಸಲ್ಟು ಬೈಂದಡಾ.., ಪಾಸಡಾ.

ನಾಳಂಗೆ ಸತ್ಯಣ್ಣನ ಮನೆಲಿ ಗುಡ್ಡು ಸೇಮಗೆ – ಮೆಣಸು ಕಾಯಿ ಮಾಡ್ತವಡೋ… ಬರೆಕಡೋ.., ಬೈಲಿಂಗೂ ಹೇಳಿಕೆ ಇದ್ದು.

ಚೀಪಗೆ  ಬೆಲ್ಲ ಹಾಕಿ ಚೀಪೆಅವಲಕ್ಕಿ  ಹೈದ° ರಂಗಣ್ಣ.

ಹೆಮ್ಮಕ್ಕೊ ಎಲ್ಲೋರು ಬಂದರೆ ಸೌಂದರ್ಯಲಹರಿ ಪಾರಯಣವೂ ಒಂದಾವೃತ್ತಿ ಮಾಡ್ಳಕ್ಕು ಹೈದು ಶಾರದಕ್ಕ°.   ಬಂದಿಕ್ಕಿ ಆತಾ.

ದಾರಿ ಗೊಂತಿದ್ದನ್ನೇ.. ?- ಪೆರ್ಲಂದ ರಜ ಮುಂದೆ ಹೋಗಿ ಬಲತ್ತಿಂಗೆ ಹೋಗಿ ಎಡತ್ತಿಂಗೆ ತಿರುಗಿ ರಜಾ ಮುಂದೆ ಹೋಪಗ ಅಲ್ಲೆ ಆ ತಿರ್ಗಾಸಿಂದ ಕೆಳ ಮಿನಿಯಾ.

ಬಾಕಿ ವಿವರ ಅಲ್ಲಿ ಮಾತಾಡಿಗೊಂಬೊ.

      ~~~~ 😀 😀 😀 ~~~

ಚೆನ್ನೈ ಬಾವ°

   

You may also like...

12 Responses

 1. ಸತ್ಯಣ್ಣನ ಮನೆ ಜಾಲಿಲ್ಲಿ ದಾಂಟಿ ಹೋಪಗ ಅಪರೂಪಕ್ಕೆ ಜೆಗಿಲಿಲಿ ಕಾಲುನೀಡಿ ಕೂದಂಡಿತ್ತಿದ್ದ. ಎನ್ನ ಕಂಡದ್ದೇ “ಬಾ ಬಾವಾ” ಹೇಳಿದ.
  ಹೋಗಿ ಕೂದೆ. ತಲೆ ಮೇಗೆ ಆಕಾಶ ಬಿದ್ದಹಾಂಗೆ ಮೋರೆ ಮಾಡಿಕೊಂದಿತ್ತಿದ್ದ. “ಎಂತ ಇಷ್ಟು ಯೋಚನೆ ಬಾವಾ” ಕೇಳಿದೆ.
  “ರಮ್ಯ ಕಾಲೇಜಿಂಗೆ ಸೇರಿದ್ದು” ಹೇಳಿದ.” ಸರಿ ಅದಕ್ಕೆಂತ?” ಕೇಳಿದೆ. ಫ್ಹೀಸೆಲ್ಲಾ ಕಟ್ಟಿ ಆಯಿದು, ಆದರೆ ಪುಸ್ತಕ, ಪೆನ್ನು, ಪೆನ್ಸಿಲು ಎಲ್ಲಾ ಕಂಡಾಬಟ್ಟೆ ಕ್ರಯ. ನಮಗೆ ಪೂರೈಸ ,ಬರೇ “ಫ್ಹೇಸ್ ಬುಕ್” ಹೇಳುವ ಒಂದು ಪುಸ್ತಕಕ್ಕೇ ರೂಪಾಯಿ 350/- ಬೇಕಡ ” ರಮ್ಯ ಹೇಳುತ್ತು” ಹೇಳಿದ. “ಅಕ್ಕ ಎಲ್ಲಿ?” ಕೇಳಿದೆ.” ಹೊಲಿಗೆ ಕ್ಲಾಸಿಂಗೆ ಸೇರಿದ್ದು”,”ಎನ್ನ ಒಬ್ಬನ ಸಂಪಾದನೆಲಿ ಇನ್ನು ರಥ ಸಾಗ” ಹೇಳಿದ.
  ಆನು ಹೇಳಿದೆ,”ನಿನ್ನ ಮಗಳದ್ದೇ ಪರವಾಗಿಲ್ಲೆ ಬಾವಾ,ಎನ್ನ ಮಗಳಿಂಗೆ ಫ್ಹೇಸ್ ಬುಕ್ ಅಲ್ಲದ್ದೆ ಟೈಂ ಟೇಬಲ್ ಫ್ಹೀಸಿಂಗೆ 300/-ರೂಪಾಯಿ ಕಟ್ಟೆಕ್ಕಡ”!!!
  ಸತ್ಯಣ್ಣಂಗೆ ರಜಾ ಸಮಾಧಾನ ಆತು. ಹೇಳಿದ “ನಾವಂತೂ ಕಲ್ತಿದಿಲ್ಲೆ,ಕೂಸುಗೊ ನಾಲ್ಕಕ್ಷರ ಕಲ್ತರೆ ಕಂಪ್ಯೂಟರ್ ಕಲ್ತ ಮಾಣಿ ಸಿಕ್ಕುಗು”.
  ಎನ್ನ ಮಗಳ ಮದುವೆ ಕನಸಿಲ್ಲಿ ಎದ್ದು ತೋಟಕ್ಕೆ ಹೆರಟೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *