ದರ್ಭೆ ಕಟ್ಟುವ ಕ್ರಮ

ಕಾಟಂಗೋಟಿಗಳ ಎಡೆಲಿ ಕೆಲವೊಂದು… ಅಲ್ಲಲ್ಲ,  ಹಲವಾರು ಅತ್ಯುಪಯುಕ್ತ ಮಾಹಿತಿಗಳ ಎಡಕ್ಕಿಲ್ಲಿ ಕೆಲವೊಂದು ಕಾಟಂಗೋಟಿಗಳ ಒಪ್ಪಣ್ಣ ಬೈಲಿ ನಾವು ಮಾತಾಡುತ್ತಪ್ಪೋ!

ಹಾಂಗೆ ಓ ಅಂದು ಎಡಕ್ಕಿಲ್ಲಿ ಜನಿವಾರ ಕಟ್ಟುತ್ಸೇಂಗೆ ಹೇದು ಬಟ್ಟಮಾವ° ಜನಿವಾರ ಕಟ್ಟುತ್ತರ ನೋಡಿ ನಾವು ಕಲ್ತಿದಪ್ಪೋ! ಹಲವರಿಂಗೆ ಅದು ಉಪಯೋಗ ಆಗ್ಯೊಂಡಿಪ್ಪದು ಬೈಲಿಂಗೆ ಹೆಮ್ಮೆ.

ನಮ್ಮಲ್ಲಿ ಹಲವಾರು ಅನುಪ್ಪತ್ಯಂಗೊ ಆವುತ್ತು. ಬಟ್ಟಮಾವ ಬತ್ತವು. ಅವಕ್ಕೆ ಸಕಾಯಕ್ಕೆ ಪರಿಕರ್ಮಿ ಭಾವನೂ ಬತ್ತ. ಬಟ್ಟಮಾವನೊಟ್ಟಿಂಗೆ ಇನ್ನೂ ನಾಕು ಬಟ್ಟಮಾವಂದ್ರೂ ಬತ್ತವು. ಕಾರ್ಯಕ್ರಮ ಚೆಂದಕ್ಕೆ ನಡೆಶಿಕೊಡ್ತವು.

ಆ ಬಟ್ಟಮಾವನೊಟ್ಟಿಂಗೆ ಪೂರ್ಣಶ್ರದ್ಧಾಭಕ್ತಿಂದ ನಾವುದೇ ಸೇರಿಗೊಂಡ್ರೆ ಮಾಡಿದ ಕಾರ್ಯಕ್ಕೆ ಹೆಚ್ಚಿನ ಫಲ ಹೇಳ್ಸು ನಮ್ಮ ನಂಬಾಣಿಕೆ. ಅಲ್ಲದ್ದರೆ ಕಂಟ್ರಾಟು ಕೊಟ್ಟು ಮಾಡುಸಿದಟ್ಟೇ ಅಕ್ಕಟ್ಟೆ. ಮನೆಯವೂ ಸೇರದ್ದರೆ ಬಟ್ಟಮಾವಂದ್ರ ಬಂದ ಖರ್ಮಕ್ಕೆ ಕರ್ಮ ಮಾಡಿಕ್ಕಿ ಹೋವುತ್ತೆಪ್ಪ ಹೇದು ಜಾಂನ್ಸಿದರೂ ಅದರ ಕೊರತ್ತೆ ಹೇಳ್ವ ನೈತಿಕತೆ ನವಗೆ ಇಲ್ಲೆ.

ಮಂಡ್ಳ ಬರವದು , ಸಾಹಿತ್ಯ ಒದಗಿಸಿ ಕೊಡುವದು, ಆರತಿಗೆ ನೆಣೆ ಹಾಕುವದು, ಹೂಗು ಸಜ್ಜಿ ಮಾಡಿಕೊಡುವದು ಇದಕ್ಕೆಲ್ಲ ಬಟ್ಟಮಾವಂಗೆ ಪರಿಕರ್ಮಿಯೊಟ್ಟಿಂಗೆ ಬಾಕಿಪ್ಪ ಬಟ್ಟಭಾವಂದ್ರು ಸಹಕರುಸುತ್ತವು. ನಾವುದೇ ಅಟ್ಟಪ್ಪಗ ಬಟ್ಟಮಾವನೊಟ್ಟಿಂಗೆ ತಂಟಾಣಿಸಿಯೊಂಡಿದ್ದರೆ ನವಗೂ ಕೆಲವೊಂದು ವಿಷಯಂಗಳ ಅರ್ಥ ಮಾಡಿಗೊಂಬಲೆಡಿತ್ತು. ಕೂದೊಂಡು ಬಟ್ಟಮಾವಂಗೂ ಪಟ್ಟಾಂಗಕ್ಕೊಂದು ಪಾಸಾಡಿಗೆ ಜೆನವೂ ಆತು. ಮನೆಯವು ಸೇರಿದವು ಹೇದು ಬಟ್ಟಮಾವಂಗೆ ಕೊಶಿ, ಬಟ್ಟಮಾವನೊಟ್ಟಿಂಗೆ ಸೇರಿದ್ದೆ ಹೇದು ಮನೆಯವಕ್ಕೆ ಕೊಶಿ , ಒಟ್ಟಿಲ್ಲಿ ಕಾರ್ಯಕ್ರಮಕ್ಕೊಂದು ಮತ್ತಟ್ಟು ಕೊಶಿ.

ನಮ್ಮ ಅನುಪ್ಪತ್ಯಂಗಳಲ್ಲಿ ಪವಿತ್ರ ಕಟ್ಟುತ್ಸು , ಕೂರ್ಚೆ ಕಟ್ಟುತ್ಸು ಹೇದು ಕೆಲವು ಕೆಲಸಂಗೊ ಇರುತ್ತು ಅಪ್ಪೋ.  ನವಗುದೇ ಪವತ್ರ, ಕೂರ್ಚೆ ಕಟ್ಳೆ ಗೊಂತುಮಾಡ್ಯೊಂಡ್ರೆ ಹೇಂಗೆ ಹೇದು ಕಂಡತ್ತು.  ಹಾಂಗೆ ಪೆರಡಾಲಲ್ಲಿಪ್ಪ ತುಪ್ಪೆಕ್ಕಲ್ಲು ಶಿವರಾಮ ಬಟ್ಟಮಾವನತ್ರೆ ಕೇಟೊಂಡಪ್ಪಗ – “ಅದೆಕ್ಕೆಂತಾಯೇಕು, ನಿಂಗೊಗೆ ತಿಳ್ಕೊಂಬಲೆ ಆಸಕ್ತಿ ಇದ್ದರೆ ಎನಗೆ ಹೇಳಿಕ್ಕೊಡ್ತಕ್ಕೆ ಎಂತಕೆ ಉದಾಸನ” ಹೇದು ದರ್ಭೆ ಕೆಟ್ಟ ಮೇಗಂದ ಬಲುಗಿ ಚಕ್ಕನಾಟಿ ಕೂದ್ದೇ ಅಲ್ಲದ!

ಅವ್ವು ಹಾಂಗೇ. ಎನಗೆ ಓ ಇಂತದ್ದು ಮಂತ್ರ ಕಲಿಯೆಕು ಹೇದರೆ ಸಾಕು. ಬಾ., ಆನು ಹೇಳಿಕೊಡುತ್ತೆ ಹೇದು ಸುರುಮಾಡುದೆ. ಮತ್ತೆ ಅದಕ್ಕೆ ತಿಥಿ ವಾರ ನಕ್ಷತ್ರ ಯೋಗ ಎಡೆ ಬಿಡುವು ಹೇದು ನೋಡ್ಳೆ ಇಲ್ಲೆ. ಕಬ್ಬಿಣ ಕಾದಪ್ಪಗ ಬಡಿಯೆಕ್ಕಡ, ವಿಷಯ ಕಲಿವಲೆ ಆಸಕ್ತಿ ಬಪ್ಪಗ ಸುರುಮಾಡೆಕ್ಕಡ!

ವೀಡಿಯೋ ತಯಾರು ಮಾಡಿಕೊಟ್ಟ ತುಪ್ಪೆಕ್ಕಲ್ಲು ಶಿವರಾಮ ಬಟ್ಟಮಾವಂಗೆ ಬೈಲ ನಮನಂಗೊ.

ಅಂಬಗ ಆ ದರ್ಭೆ ಕಟ್ಟುತ್ಸೇಂಗೇದು ಅವು ಹೇದು ಕೊಟ್ಟದರ ಇಲ್ಲಿ ನೋಡ್ವೊ° ಆಗದ .

 

 

 

ಚೆನ್ನೈ ಬಾವ°

   

You may also like...

3 Responses

  1. narayana bhat pavalkody says:

    Olle upayukta

  2. Rameshwara Bhat. S says:

    ಧರ್ಬೆ ಕಟ್ಟುವ ಕ್ರಮ ತಿಳಿಸಿದ್ದು -ಒಂದು ಒಳ್ಳೆಯ ವಿಷಯ . ಆದರೆ ವೀಡಿಯೊ ವಲ್ಲಿ ರು ವ ವ ರ ಮುಖ ಕಂಡಿದಿಲ್ಲೇ .ತುಂಬಾ ಧನ್ಯವಾದಂಗೊ.ಹವ್ಯಕರಿಗೆ & ಆಸಕ್ತರಿಗೆ ಒಂದು ಉತ್ತಮ ವೀಡಿಯೊ

  3. ಉಡುಪುಮೂಲೆ ಅಪ್ಪಚ್ಚಿ says:

    ಹರೇ ರಾಮ.ಬಹಳ ಉತ್ತಮವಾದ ವಿಡಿಯೋ.ಚೆನ್ನೈ ಭಾವ೦ಗೆ ಹಾ೦ಗೂ ಭಟ್ಟ ಮಾವ೦ಗೆ ಮನಸಾ ಧನ್ಯವಾದ೦ಗಳೊಟ್ಟಿ೦ಗೆ ಆತ್ಮೀಯ ಅಭಿನ೦ದನಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *