ವಿಶ್ವರೂಪನ ವಿರಾಟ್ ಪೂಜೆ: ಗುರುಗೊ ನೆಡೆಶುತ್ತ ಹತ್ತುಸಾವಿರನೇ ಪೂಜೆ!

March 25, 2011 ರ 12:00 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಬಟ್ಟಮಾವನ ಕಂಡು ಮಾತಾಡಿದೆ!!

ಅರ್ತಿಯಡ್ಕಲ್ಲಿ ಪೂಜೆ ಕಳಾತಿದಾ ಮೊನ್ನೆ – ಹೋಗಿತ್ತಿದ್ದೆ.
ಕಾರ್ಯಕ್ರಮ ಚೆಂದಲ್ಲಿ ಕಳಾತು, ಖಂಡಿಗೆಮದುಮ್ಮಾಯರು ಬಂದು ಸಮ್ಮಾನವೂ ಆತು.
ಚೆಂದದ ಊಟವೂ ಆತು.
ಊಟ ಆಗಿ ಪಟ್ಟಾಂಗವೂ ಆತು.
ಬಂದೋರು ಬಿರುದೂ ಆತು.
ಎಲ್ಲ ಆಗಿ ಬಟ್ಟಮಾವಂಗೆ ಒಂದೊರಕ್ಕುದೇ ಆತು.
ಇಂದು ಬಟ್ಟಮಾವನ ಹತ್ರೆ ಮಾತಾಡಿಯೇ ಮಾತಾಡೇಕು ಹೇಳಿಗೊಂಡು ನಾವುದೇ ಕೂದಿತ್ತಿದ್ದು,
– ಜೆಗಿಲಿಲಿ ಮಡಗಿದ ಬಳಂಕುತ್ತ ಪ್ಳೇಷ್ಟಿಗು ಕುರ್ಶಿಲಿ.
ಚಿಕ್ಕಮ್ಮ ಎರಡುಸರ್ತಿ ಚಾಯ ತಂದುಕೊಟ್ರೂ ಹೆರಟಿದಿಲ್ಲೆ,  😉
~

ಸಾವಿರಾರು ಪಟ್ಟು ಬೃಹದಾಕಾರದ "ಪುರುಷ"ನ ಕಾಲ್ಪನಿಕ ರೂಪ

ರಜ ಹೊತ್ತು ಕಳುದು ಮೆಲ್ಲಂಗೆ ಎದ್ದವು.
ಎದ್ದ ಹಾಂಗೇ –  ಹೆರಡ್ತ ಗವುಜಿಲಿ ಇದ್ದ ಹಾಂಗೆ ಕಂಡತ್ತು.
ಪೂಜಗೆ ಸುತ್ತಿದ ಪಟ್ಟೆಯನ್ನೂ, ಈಗ ಸುತ್ತಿಗೊಂಡಿದ್ದಿದ್ದ ಬೆಳಿಒಸ್ತ್ರವನ್ನೂ – ಕುಂಕುಮಬಣ್ಣದ ಒಸ್ತ್ರದ ಮಾರಾಪಿನ ಒಳಂಗೆ ತುಂಬುಸಿಗೊಂಡಿತ್ತಿದ್ದವು.
ಮೇಗೆ ಅಡಕ್ಕೆಸಲಕ್ಕೆಲಿ ಆರುಸಿದ್ದಿದ್ದ – ಆಗ ಮೀವ ಮದಲು ಸುತ್ತಿದ್ದಿದ್ದ  – ದಾರಿಮೈಲಿಗೆ ಒಸ್ತ್ರವ ಸುತ್ತಿಗೊಂಡಿತ್ತಿದ್ದವು.
ಇದೇ ಸಮಯ – ಹೇಳಿಗೊಂಡು ಮೆಲ್ಲಂಗೆ ಹತ್ತರೆ ಹೋಗಿ ಕೂದಂಡೆ, ಅವ್ವೇ ಮನುಗಿದ್ದ ಹುಲ್ಲಸೆಲಿ.
ಅಂಬೆರ್ಪಿಲಿದ್ದಿರೋ ಬಟ್ಟಮಾವಾ° – ಕೇಟೆ.
ಇಲ್ಲೇಪ್ಪಾ, ಹ್ಮ್? – ಹೇಳಿಗೊಂಡು ಕಾಲುನೀಡಿ ಕೂದುಗೊಂಡವು.
ಗೋಕರ್ಣಕ್ಕೆ ಹೋಪಲಿದ್ದಲ್ಲದೋ… – ಕೇಳಿಗೊಂಡು ಮಾತಾಡ್ಳೆ ಸುರುಮಾಡಿದೆ.
~

ಗೋಕರ್ಣಕ್ಕೆ ಹೋಪಲಿದ್ದು ಹೇಳ್ತದು ಮೊನ್ನೆಯೇ ಗೊಂತಾಗಿ ಹೋಪೋರೆಲ್ಲ ಒಟ್ಟಿಂಗೇ ಹೋಪದು ಹೇಳಿ ತೀರ್ಮಾನ ಆಗಿತ್ತು. ಬೈಲಿಂದ ಸುಮಾರುಜೆನ ಹೋವುತ್ತವು  – ಬಟ್ಟಮಾವನೂ ಸೇರಿಗೊಂಡು.
ಪೂಜಗೆ ಸಮ್ಮಂದಪಟ್ಟ ಕಾರ್ಯಕ್ರಮಂಗಳ ಅವು ಬಿಡುಗೋ? ಚೆಚೆ! ಅದಿರಳಿ,
ನಾಳೆ ನೆಡಿರುಳು ಬಸ್ಸು ಹೆರಡುಸ್ಸು, ಉದಿ ಬೆಣ್ಚಿಅಪ್ಪಗ ಗೋಕರ್ಣಕ್ಕೆ ಎತ್ತುತ್ತ ನಮುನೆಲಿ.

ನಾವು ಹೋಪಲಿದ್ದೋ – ಮದಲೇ ಎಂತೂ ಹೇಳಿದ್ದಿಲ್ಲೆ..
ಇನ್ನು ಸೀಟು ಇಕ್ಕೋ ಇರದೋ  – ಕೇಳೆಕ್ಕಟ್ಟೆ.
ಅಲ್ಲ, ಸೀಟಿಲ್ಲದ್ದರೆ ನೇತೋಂಡಾದರೂ ಹೋಪಲಕ್ಕು.
ಅಷ್ಟೂ ಅಲ್ಲದ್ದರೆ ದೇವಸ್ಯತ್ತೆದೋ,  ಡೆಂಟಿಷ್ಟುಮಾವಂದೋ, ಸಿದ್ದನಕೆರೆ ಅಪ್ಪಚ್ಚಿದೋ ಮಣ್ಣ – ಕಾರಿಲಿ ಜಾಗೆ ಇಕ್ಕು, ಹೇಂಗಾರೂ ಹೋತಿಕ್ಕಲಕ್ಕು, ಅದು ದೊಡ್ಡ ವಿಶಯವೇ ಅಲ್ಲ.
ಅಲ್ಲದ್ದರೆ ಕೊಡೆಯಾಲಂದ ಶರ್ಮಪ್ಪಚ್ಚಿಯ ಬಸ್ಸಾದರೂ ಇಕ್ಕು. ಹೇಂಗೂ ಈಗ ಬೊಳುಂಬುಮಾವ ಎಲ್ಲಿಗೂ ಹೆರಡವು, ಮಗನ ಪರೀಕ್ಷೆ ಲೆಕ್ಕಲ್ಲಿ! 😉
~
ತಲೆಮಾರಿಂಗೆ ಒಂದೇ ಸರ್ತಿ ಬತ್ತಂತಹಾ ಅಮೋಘ ಕಾರ್ಯಕ್ರಮ ಅಲ್ಲದೋ, ಹಾಂಗಾಗಿ ಅವಕಾಶ ಇಪ್ಪೋರೆಲ್ಲ ಹೋಯೇಕಾದ್ಸು ಮುಖ್ಯ!
ಅದೆಂತ ಅಷ್ಟು ಮುಖ್ಯ?
– ಅದನ್ನೇ ಬಟ್ಟಮಾವನ ಹತ್ರೆ ಮಾತಾಡ್ಳೆ ಹೋದ್ದು ಅಲ್ಲಿಗೆ! :-)
~

ವಿರಾಟ್-ಪುರುಷ ಹೇಳಿಗೊಂಡು ಒಂದು ಕಲ್ಪನೆ ಇದ್ದಾಡ ನಮ್ಮದರ್ಲಿ, ಹಾಳೆಬೀಸಾಳೆಯ ಕೈಲಿ ತೆಕ್ಕೊಂಡು ಮಾತಾಡ್ಳೆ ಸುರುಮಾಡಿದವು.
ಬೃಹತ್ ಬ್ರಹ್ಮಾಂಡವನ್ನೇ ಆವರಿಸಿದ, ಇಡೀ ಲೋಕದ ಎಲ್ಲದಕ್ಕೂ ಕಾರಣನಾದ ವಿರಾಡ್ರೂಪ ಅದು – ಹೇಳಿದವು.
ಆ ಬೃಹತ್ ಕಲ್ಪನೆಯ ವಿರಾಟ್ ಪುರುಷ°  ಹೇಳ್ತವು – ಹೇಳಿದವು.
ನಂಬೂರಿ ಹೇಳಿದ ನಮುನೆಲೇ – ಎಲ್ಲೋ ಕೇಳಿದಾಂಗೆ ಆವುತ್ತನ್ನೇ – ಹೇಳಿ ಆತೊಂದರಿ.
ಮತ್ತೆ ಅವ್ವೇ ಹೇಳಿದವು, ಪುರುಷ ಸೂಗ್ತ ಹೇಳಿ ಒಂದಿದ್ದು, ಅದರ್ಲಿ ಈ ಪುರುಷನ ಬಗ್ಗೆಯೇ ವಿವರಣೆ ಇಪ್ಪದು – ಹೇಳಿಗೊಂಡು.
ಒಂದರಿಯೇ ’ಓ, ಕೇಳಿದ್ದಪ್ಪು’ ಹೇಳಿ ಆತು ನವಗೆ!
~
ಮಂತ್ರ ಕಲಿಶುತ್ತಲ್ಲಿ ಸೂಕ್ತಪಾಟಂಗೊ ಸುರುಮಾಡ್ತದೇ ಈ ಪುರುಷ ಸೂಕ್ತಂದ.
ಕಲಿತ್ತಕಾಲಲ್ಲಿ ಕಲ್ತಿದು, ಆದರೆ ಅಂಬಗ ಅದರ ಪೂರ್ತಿ ಅರ್ತ ನವಗಾಯಿದೋ – ಹದಾಕೆ ಆದ್ದಷ್ಟೆ!
ಹೆಚ್ಚಿನ ಮಕ್ಕಳೂ ಹಸರುಪಾಯಸವೇ ರುಚಿ – ಹೇಳಿ ಬಿಂಗಿನೆಗೆಮಾಡ್ತಷ್ಟು ಅರ್ತ ಮಾಡಿಗೊಂಡಿರ್ತವು. ಆದರೆ ಬಟ್ಟಮಾವ ಹಾಂಗಲ್ಲ ಇದಾ – ಪುರುಷ ಸೂಕ್ತದ ಗೆರೆಗೆರೆಗಳನ್ನೂ, ಎಳೆ ಎಳೆಗಳನ್ನೂ ಹಂತಹಂತವಾಗಿ ವಿವರುಸಿಗೊಂಡು ವಿರಾಟ್-ಪುರುಷನ ರೂಪದ ವರ್ಣನೆಯ ಸುರುಮಾಡಿದವು.
ಅದೊಂದು ಬೃಹತ್ ರೂಪ!
ಈ ಭೂಮಿಯನ್ನೂ ಒಳಗೊಂಡು ಇಡೀ ವಿಶ್ವವನ್ನೇ – ಸ ಭೂಮಿಂ ವಿಶ್ವತೋ ವೃತ್ವಾ- ಆವರುಸಿದ, ಆವರುಸಿಯೂ – ಮತ್ತೆಯೂ – ಅತ್ಯತಿಷ್ಠದ್ದಶಾಂಗುಲಮ್ – ಹತ್ತಂಗುಲ ಒಳಿದಿಕ್ಕಿತ್ತಡ – ಹೇಳಿದವು ಬೀಸಾಳೆಯ ಉದ್ದ ತೋರುಸಿಗೊಂಡು.
ಹಳಬ್ಬರ ಕಲ್ಪನೆ ಕಂಡು ಆಶ್ಚರ್ಯ ಆತು ಒಂದರಿ! ವಿಶ್ವಂದಲೂ ರಜಾ ದೊಡ್ಡವೇ ಅಡ ಈ ವಿರಾಟ್ ಪುರುಷ!

ಪುರುಷ ಏವೇದಗುಂ ಸರ್ವಂ – ಎಲ್ಲವೂ ಆ ವಿರಾಟ್ಪುರುಷನಿಂದಾಗಿಯೇ, ಅವನದ್ದೇ, ಅವನೇ ಅಡ!
ಈ ಪ್ರಪಂಚದ ಇಡೀ ಜೀವಿಜಲಚರಂಗೊ ಅವನ ಕಾಲು ಅಡ. ಕಾಲು ಹೇಳಿರೆ- ಕಾಲ್ವಾಶಿ ಹೇಳಿಯೂ ಅಕ್ಕಡ.
ಒಳುದ ಮುಕ್ಕಾಲ್ವಾಶಿ – ತ್ರಿಪಾದೂರ್ಧ್ವ ಉದೈತ್ –ಮೇಗೆ ಅಂತರಿಕ್ಷಲ್ಲಿ ಇದ್ದಡ! ಅಷ್ಟು ಬೃಹತ್ ಅಡ!
ಯಜ್ಞವೂ ಅವನೇ ಅಡ, ಹವಿಷಾ  – ಹವಿಸ್ಸೂ ಅವನೇಡ, ಕಿಚ್ಚೂ ಅವನೇ, ತುಪ್ಪವೂ ಅವನೇ, ಶೆಗ್ತಿಯೂ ಅವನೇ, ಮಂತ್ರವೂ ಅವನೇ- ಸರ್ವಸ್ವವೂ ಅವನೇ, ಅವನದ್ದೇ! ನಾವೆಲ್ಲೊರೂ ನಿಮಿತ್ತ ಮಾಂತ್ರ.
ಋಗ್-ಯಜುಃ-ಸಾಮಾಥರ್ವ ವೇದಂಗೊ ಅವನಿಂದಲೇ ಉಂಟಾದ್ದಡ.
ಹಾಂಗೆಯೇ, ಬ್ರಹ್ಮ-ವೈಶ್ಯ-ಕ್ಷಾತ್ರ-ಶೂದ್ರ ನಾಲ್ಕು ವರ್ಣಂಗೊ ಅವನದ್ದೇ ಮೈಯ ವರ್ಗಂಗೊ ಅಡ! ಹೇಳಿತ್ತುಕಂಡ್ರೆ, ಅವನೇ ಒಂದು ಸಮಾಜದ ಪ್ರತಿರೂಪ ಅಡ!

ಅವನೆದುರು ಹೋಲುಸಿರೆ ಬೃಹತ್ ಸುನಾಮಿಯ ಒಂದು ಅಲೆಯ ಒಂದು ಬಿಂದುವಿನ ಒಂದು ಕಣದ ಒಂದು ಅಣುವಿನ ಒಂದು ರೇಣು! – ಹೇಳಿದವು ಭಟ್ಟಮಾವ°.
ಇನ್ನೂ ಹೇಳಿಗೊಂಡೇ ಹೋದವು, ಒಪ್ಪಣ್ಣಂಗೆ ಈಗ ನೆಂಪಿಲ್ಲೆ,
ಬೇಕಾರೆ ಅವ್ವೇ ಒಂದರಿ ಬೈಲಿಂಗೆ ಹೇಳುಲೂ ಸಾಕು ಪುರುಸೋತಿಲಿ! :-)
~

ಹರೇರಾಮದ ಬೈಲಿಲಿ(hareraama.in) ಪೂಜೆಯ ನೇರಪ್ರಸಾರ ಇದ್ದಾಡ! ನೋಡ್ತಿರಲ್ಲದೋ?

ಈ ವಿರಾಟ್ ಪುರುಷಂಗೆ ಸಾವಿರ ತಲೆ ಅಡ! ಹಾಂಗಾಗಿ ಸಾವಿರಾರು ಕಣ್ಣುಗೊ, ಕೈಕ್ಕಾಲುಗೊ ಅಡ.
ಸಾವಿರ ಹೇಳಿತ್ತುಕಂಡ್ರೆ ’ತುಂಬ’ ಹೇಳ್ತದಕ್ಕೆ ಪರಿಭಾಶೆ ಅಡ!
– ಇನ್ನೂ ಅವನ ಸ್ಪಷ್ಟ ಚಿತ್ರಣ ಸಿಕ್ಕೇಕಾರೆ ವಿದ್ವಾನಣ್ಣನ ಕೈಲಿ ಕೇಳೆಕ್ಕಡ – ಹೇಳಿದವು ಬಟ್ಟಮಾವ°.
~
ಇದೇ ವಿರಾಟ್-ಪುರುಷನ ಕಲ್ಪನೆಗೆ ನಾಳ್ತು ಗೋಕರ್ಣಲ್ಲಿ ಪೂಜೆ ಮಾಡ್ತದಡ!
ಸಹಸ್ರಭುಜ ವಿರಾಟ್-ಪುರುಷಂಗೆ, ಹತ್ತು ಸಹಸ್ರ ಪೂಜೆ ಆವುತ್ತಡ ನಾಳ್ದಿಂಗೆ.
~
ನಮ್ಮ ಗುರುಗೊ ಆರಾಧ್ಯ ಸೀತಾರಾಮ, ರಾಮಚಂದ್ರ, ಚಂದ್ರಮೌಳೀಶ್ವರ – ಇವಕ್ಕೆ ಪೂಜೆ ಮಾಡ್ತದು ಬೈಲಿನ ಎಲ್ಲೋರಿಂಗೂ ಅರಡಿಗಲ್ಲದೋ?
ಈ ಪೂಜೆಯ ಬಗ್ಗೆಯೇ ನಾವು ಅಂದೊಂದರಿ ಶುದ್ದಿ ಮಾತಾಡಿದ್ದು. ಗೊಂತಿದ್ದಲ್ಲದೋ?(ಸಂಕೊಲೆ)
ಶಂಕರಾಚಾರ್ಯರಾದಿಯಾಗಿ ಇಂದಿನಒರೆಂಗೆ ಅವಿಚ್ಛಿನ್ನವಾಗಿ ದೇವರ ಸಂಪುಟಕ್ಕೆ ನಿತ್ಯವೂ ಎರಡು ಸರ್ತಿ ಪೂಜೆ ಸಮರ್ಪಣೆ ಮಾಡ್ತದು ಇದ್ದೇ ಇದ್ದು.
ಪ್ರತಿ ಪೀಠಾಧಿಪತಿಯೂ ಪೀಠಕ್ಕೆ ಬಂದ ಕೂಡ್ಳೇ ಈ ಪೂಜೆ ಸುರುಮಾಡ್ತವಡ.
ಆ ಪೂಜೆ ಹೇಳಿತ್ತುಕಂಡ್ರೆ ಬರೇ ಪೂಜೆ ಅಲ್ಲ, ಅದೊಂದು ಸಂಸ್ಕಾರ, ಅದೊಂದು ಪಾವಿತ್ರ್ಯತೆ, ಅದೊಂದು ಶೈಲಿ, ಅದೊಂದು ಮೋಹಕತೆ! – ಬಟ್ಟಮಾವ ಹೇಳಿದವು.
ಗುರುಪೀಠಲ್ಲಿ ಕೂದಂಡು ಪೂಜೆ ಮಾಡುವಗ ಮಂತ್ರ ಹೇಳುಲಿಲ್ಲೆ, ಸಂಕಲ್ಪಮಾಡ್ಳಿಲ್ಲೆ, ಜೆಪ ಮಾಡ್ಳಿಲ್ಲೆ, – ಯೇವದೂ ಇಲ್ಲೆ.
ಬರೇ ತಂತ್ರ ಮಾಂತ್ರ ಅಡ.
ತಂತ್ರಲ್ಲೇ ಆರಾಧ್ಯ ದೇವರುಗೊಕ್ಕೆ ನವಶೆಗ್ತಿ, ದ್ವಾದಶನಾಮ, ಷೋಡಷೋಪಚಾರಂಗಳ ಕೊಡ್ತದಡ.

ಗುರುಗೊಕ್ಕೆ ಮಾಂತ್ರವೇ ಅಲ್ಲದ್ದೆ, ಪರಿವಾರದ ಅಣ್ಣಂದ್ರಿಂಗೆ, ಆ ಸಮಯಲ್ಲಿ ಸೇರಿದ ಶಿಷ್ಯಂದ್ರಿಂಗೆ – ಎಲ್ಲೋರಿಂಗೂ ಅದೊಂದು ಅವಿಸ್ಮರಣೀಯ ಕ್ಷಣ ಅಡ.
ಎಡಪ್ಪಾಡಿಬಾವನ ಹಾಂಗಿರ್ತವು ಅಂತೂ ಗುರುಗೊ ಇತ್ತಲ್ಲಿಗೆ ಹೋವುತ್ತರೆ ಪೂಜೆ ಸಿಕ್ಕುತ್ತೋ – ನೋಡಿಗೊಂಡೇ ಹೋಕು.
ಎಷ್ಟೋ ಜೆನ ಪೂಜೆ ನೋಡ್ಳೆ ಬೇಕಾಗಿಯೇ ಪ್ರಯಾಣಲ್ಲಿ ಸುಮಾರು ವಿತ್ಯಾಸಂಗಳ ಮಾಡಿಗೊಳ್ತದು ಒಪ್ಪಣ್ಣಂಗರಡಿಗು!
ಪ್ರತಿ ಪೂಜೆ ಹೇಳಿತ್ತುಕಂಡ್ರೆ ಅದೊಂದು ಚರಿತ್ರೆ ಅಡ.
~
ಪ್ರತಿ ಪೂಜೆಯೂ ಒಂದು ಚರಿತ್ರೆ ಅಪ್ಪಿದಾ!
ನಾಳ್ತು ಗೋಕರ್ಣಲ್ಲಿ ಈ ಚರಿತ್ರೆದೇ ಒಂದು ಚರಿತ್ರೆ ಆವುತ್ತಡ!
ಅಪ್ಪು, ನಮ್ಮ ಗುರುಗೊ ಮಾಡ್ತ ಹತ್ತುಸಾವಿರನೇ ಪೂಜೆ ಇದಡ!!
ಶ್ರೀಪೀಠಕ್ಕೆ ಅಧಿಪತಿ ಆದಮತ್ತೆ ಆರಂಭ ಆದ ಈ ಪೂಜಾವಿಧಾನ, ನಿರಂತರವಾಗಿ ದಿನಕ್ಕೆ ಎರಡರ ಹಾಂಗೆ, ಯೇವದೇ ನಿರ್ಬಂಧ, ತಡೆ, ಕಟ್ಟು ಇಲ್ಲದ್ದೆ ಇಂದಿನ ಒರೆಂಗೆ ನೆಡಕ್ಕೊಂಡು ಬಯಿಂದಿದಾ-
ಆ ದಿನಕ್ಕಪ್ಪಗ ಅದು ಹತ್ತುಸಾವಿರನೇ ಪೂಜೆ ಆಗಿರ್ತಾಡ.
ಅದನ್ನೇ ’ವಿರಾಟ್ ಪೂಜೆ’ ಹೇಳಿ ಆಚರಣೆ ಮಾಡ್ತದಡ.
~

ಆಗ ಮಾತಾಡಿದ ವಿರಾಟ್-ಪುರುಷನ ಬಗ್ಗೆ ಮತ್ತೊಂದರಿ ವಿವರಣೆ ಕೊಟ್ಟವು ಬಟ್ಟಮಾವ°.
ವಿಶ್ವರೂಪಿಯಾದ ವಿರಾಟ್ ಪುರುಷನೇ ಈ ಜಗದ ಅಧಿನಾಯಕ°. ನಾವೆಲ್ಲರೂ ನಿತ್ಯವೂ ಪೂಜೆ ಮಾಡ್ತದು ಅವಂಗೇ.
ಸಾವಿರಾರು ತಲೆ, ಸಾವಿರಾರು ಕೈಕ್ಕಾಲು, ಸಾವಿರಾರು ರೂಪಂಗೊ ಇಪ್ಪಂತಹ ಈ ವಿಶ್ವರೂಪಂಗೆ ನಾಳ್ತು ಗೋಕರ್ಣಲ್ಲಿ ಹತ್ತುಸಾವಿರನೇ ಪೂಜೆ ಅಡ!
ಸಾವಿರಾರು ಸಂಕೆಲಿ ಬಟ್ಟಮಾವಂದ್ರು ಒಟ್ಟಿಂಗೇ ಕೂದು ರುದ್ರ ಹೇಳ್ತದು ನೋಡ್ಳಿಪ್ಪ ಚೆಂದ ಅಡ.
~
ಗೋಕರ್ಣಲ್ಲಿ ಕೋಟಿರುದ್ರ ಇದ್ದೊಂಡು ಇಡೀ ಗೃಹಸ್ಥಸಮುದಾಯವೇ ವೈದಿಕರಾದ ಸಂಗತಿ ಬೈಲಿಂಗೆ ಗೊಂತಿಪ್ಪದೇ.
ಮೊದಲೊಂದರಿ ಆ ಶುದ್ದಿ ಮಾತಾಡಿದ್ದು – ನೆಂಪಿದ್ದಲ್ಲದೋ?
ಹಾಂಗೆ ರುದ್ರ ಕಲ್ತ ಸುಮಾರು ಜೆನ ಗೃಹಸ್ಥರು, ಅದರಿಂದ ಮದಲೇ ರುದ್ರ ಕಲ್ತ ಎಷ್ಟೋ ಬಟ್ಟಮಾವಂದ್ರು ಒಟ್ಟಿಂಗೇ, ಒಂದೇ ದಿಕ್ಕೆ ಕೂದಂಡು ಏಕಶೃತಿಲಿ, ಏಕವೇಗಲ್ಲಿ ವಿರಾಟ್-ಪುರುಷನ ರುದ್ರರೂಪವ ಸ್ತುತಿಮಾಡಿಗೊಂಡಿಪ್ಪಗ..
ಶಂಕರಾಚಾರ್ಯರಿಂದ ಇಂದಿನಒರೆಂಗೆ ನಿತ್ಯಪೂಜೆ ತೆಕ್ಕೊಂಡು ಬಂದ ಲಿಂಗರೂಪಿ ರುದ್ರಂಗೆ ಅಭಿಷೇಕ ಆವುತ್ತ ಸುಂದರ ಸನ್ನಿವೇಶ..
ಹೇಳಿದವು ಬಟ್ಟಮಾವ°.
~
ಹಾಂಗಾರೆ ಈ ಕಾರ್ಯಕ್ರಮ ಈ ಗುರುಗೊ ಪೀಠಕ್ಕೆ ಬಂದ ಮತ್ತಾಣದ್ದರ ಮಾಂತ್ರ ಲೆಕ್ಕಮಾಡಿದ ಕಾರ್ಯಕ್ರಮವೋ – ಕೇಳಿದೆ.
ಅಪ್ಪು, ಈ ಹತ್ತುಸಾವಿರ ಹೇಳಿತ್ತುಕಂಡ್ರೆ ಗುರುಪೀಠದ ಈ ತಲೆಮಾರಿನ ಕಾರ್ಯಕ್ರಮ ಅಡ.
ಇನ್ನೂ ಸ್ಪಷ್ಟವಾಗಿ ಹೇಳ್ತರೆ, ಈ ಗುರುಗೊ ಪೀಠಕ್ಕೆ ಬಂದು ದಿನಕ್ಕೆರಡು ಪೂಜೆ ಮಾಡ್ತದು – ಐದು ಸಾವಿರ ದಿನ ಆತಡ.
ಒಂದು ತಲೆಮಾರಿಂಗೆ ಒಂದೇ ಸರ್ತಿ ಸಿಕ್ಕುತ್ತದಲ್ಲದೋ – ಇದುವರೆಗೆ ಮೂವತ್ತೈದು ಸರ್ತಿ ವಿರಾಟ್-ಪೂಜೆ ಆಯಿದು.
ಇದು ಮೂವತ್ತಾರನೇ ವಿರಾಟ್-ಪೂಜೆ. ಇದರ ನೋಡ್ಳೆ ಸಿಕ್ಕುತ್ತದು ನಮ್ಮ ಪುಣ್ಯ!! – ಹೇಳಿದವು.
~
ಪರಿಕರ್ಮಿ ಶಿವಣ್ಣ ಕಟ್ಟಿತಂದ ಅಕ್ಕಿಕಾಯಿಯನ್ನೂ, ದಕ್ಷಿಣೆಗೆ ಸಿಕ್ಕಿದ ಬೆಳಿಒಸ್ತ್ರವನ್ನೂ ಮಾರಾಪು ಮಾಡಿ ಆಯಿದು.
ಒಂದು ಆಸರಿಂಗೆ ಬಂದ ಕೂಡ್ಳೆ ಕುಡುದು ಹೆರಡುದೇ ಬಾಕಿ!

ಮಾತಾಡಿಗೊಂಡಿದ್ದ ಹಾಂಗೇ ಚಿಕ್ಕಮ್ಮ ಚಾಯ ತಂದಿಕ್ಕಿದವುದೇ.
’ಅಂಬಗ ಬತ್ತೆನ್ನೇ ಗೋಕರ್ಣಕ್ಕೆ? ಅಂತೇ ಶುದ್ದಿಹೇಳಿಗೊಂಡು ಹೊತ್ತುಕಳೆತ್ತೆ, ಬಂದರೆ ಇದರ ನೋಡ್ಳಾರೂ ಸಿಕ್ಕುಗು ಇದಾ’ – ಹೇಳಿಕ್ಕಿ ಮೆಲ್ಲಂಗೆ ’ನಾರಾಯಣಾ ಗೆಂಟುಬೇನೆ’ ಹೇಳಿಗೊಂಡು ಎದ್ದವು.
ಆಚೊರಿಶ ಆ ಗೆಂಟುಬೇನೆ ಜೊರ ರಜ ಬಟ್ಟಮಾವಂಗೂ ತಾಗಿದ್ದು, ಮನೆಮನೆಗೆ ಹೋಪಗ ಜೊರದ ಗಾಳಿ ತಾಗದ್ದೆ ಇಕ್ಕೋ – ಪಾಪ!
ಅದಿರಳಿ.
~
ಎಡಪ್ಪಾಡಿಬಾವಂಗೆ ಪೋನು ಮಾಡಿ ಕೇಳಿದೆ, ಬೇರೆ ಎಂತೆಲ್ಲ ಕಾರ್ಯಕ್ರಮ ಇದ್ದು – ಹೇಳಿಗೊಂಡು.
ಆ ದಿನ ಕುಂಕುಮಾರ್ಚನೆಯೂ ಇದ್ದಡ, ಹಾಂಗಾಗಿ ಬೈಲಿನ ಅತ್ತೆಕ್ಕೊ, ಚಿಕ್ಕಮ್ಮಂದ್ರು ಬತ್ತವು. ಮತ್ತೆ ರಾಮಕಥಾ – ಹೇಳ್ತ ವಿಚಾರಲ್ಲಿ ಶ್ರೀಗುರುಗಳ ಪ್ರವಚನವೂ ಇದ್ದಾಡ.
ಅದಲ್ಲದ್ದೇ ಇನ್ನೂ ಸುಮಾರು ಕಾರ್ಯಕ್ರಮಂಗೊ ನೆಡೆತ್ತಾಡ.
ಹೇಳಿದಾಂಗೆ, ಈ ಕಾರ್ಯಕ್ರಮಂಗೊ ಹರೇರಾಮ ಬೈಲಿಲಿ ನೇರಪ್ರಸಾರಲ್ಲಿ ಬತ್ತಡ!!
ಹಾಂಗಾಗಿ ಪ್ರಪಂಚದ ಯೇವ ಮೂಲೆಲಿ ಕೂದುಗೊಂಡಿದ್ದರೂ ನೋಡ್ಳೆ ತೊಂದರೆ ಇಲ್ಲೆ.
ನಾವು ಕೂದಲ್ಲೇ, ನಮ್ಮ ಕಂಪ್ಲೀಟರಿಲೇ ಒಂದು ಸುಚ್ಚು ಒತ್ತುವಗ ಗೋಕರ್ಣದ ಅಶೋಕೆಯ ಒಳ ಎಂತ ಆವುತ್ತಾ ಇದ್ದು – ಹೇಳ್ತದು ನೋಡ್ಳಕ್ಕಡ!
ಆದರೂ ಅವಕಾಶ ಇಪ್ಪೋರು ಬಂದುಸೇರಿರೇ ಒಳ್ಳೆದು – ಹೇಳಿದ ಎಡಪ್ಪಾಡಿಬಾವ°.
~

ಹಾಂಗೆ, ಈಗ ಗೋಕರ್ಣಕ್ಕೆ ಹೋಯೇಕು ಹೇಳ್ತ ಮನಸ್ಸಾಯಿದು ಒಪ್ಪಣ್ಣಂಗೆ.
ತಲೆಮಾರಿನ ಕಾರ್ಯಕ್ರಮ ಆದ ಈ ’ವಿರಾಟ್ ಪೂಜೆ’ಗೆ ಎಲ್ಲೋರುದೇ ಹೋಪಲಿದ್ದಲ್ಲದೋ?
ಅಪೂರ್ವ ಕಾರ್ಯಕ್ರಮವ ಅನುಭವಿಸುತ್ತ ಭಾಗ್ಯ ಆ ಗುರುದೇವರು ಕೊಡ್ಳಿ ಹೇಳ್ತದು ನಮ್ಮ ಹಾರಯಿಕೆ.

ಒಂದೊಪ್ಪ:  ವಿಶ್ವಗುರುಗ ಮಾಡ್ತ ವಿರಾಟ್-ಪೂಜೆಲಿ ವಿರಾಟ್ ಶಿಷ್ಯವರ್ಗದ ವಿಶ್ವರೂಪ ಆಗಲಿ – ಹೇಳಿ ಬಟ್ಟಮಾವ° ಹೇಳಿದವು, ಮೆಟ್ಳಿಳುದು ಹೆರಡುವ ಮೊದಲು.

ಸೂ:

ವಿಶ್ವರೂಪನ ವಿರಾಟ್ ಪೂಜೆ: ಗುರುಗೊ ನೆಡೆಶುತ್ತ ಹತ್ತುಸಾವಿರನೇ ಪೂಜೆ!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಶ್ರೀಶಣ್ಣ
  ಶ್ರೀಶಣ್ಣ

  ಒಪ್ಪಣ್ಣಾ..
  [ಜೆಗಿಲಿಲಿ ಮಡಗಿದ ಬಳಂಕುತ್ತ ಪ್ಳೇಷ್ಟಿಗು ಕುರ್ಶಿಲಿ]- ಇನ್ನೊಂದು ಸರ್ತಿ ಕೂಬಗ ಜಾಗ್ರತೆ. ಬಿದ್ದ ಅನುಭವ ಎನಗೆ ಇದ್ದು.
  [ಚಿಕ್ಕಮ್ಮ ಎರಡುಸರ್ತಿ ಚಾಯ ತಂದುಕೊಟ್ರೂ ಹೆರಟಿದಿಲ್ಲೆ] ಊಟ ಆದ ಮತ್ತೆ ಚಾ, ಕಾಪಿ ಕೊಟ್ಟರೆ ಹೆರಡಲೆ ಅನುಮತಿ ಸಿಕ್ಕಿದ ಹಾಂಗೆ.
  ನಿನ್ನ ಅಭಿರುಚಿ ಆಗದ್ದೆ ಇಲ್ಲೆ.
  ಭಟ್ಟ ಮಾವ ಎದ್ದು, ಅವರತ್ರೆ ಮಾತಾಡಿ ವಿಶಯ ಸಂಗ್ರಹ ಮಾಡದ್ದೆ, ಚಿಕ್ಕಮ್ಮ ಚಾಯ ಎರಡೆರಡು ಸರ್ತಿ ತಂದು ಕೊಟ್ಟರೂ ಹೆರಡದ್ದೆ ಗಟ್ಟಿ ಕೂದ್ದು. ಒಳ್ಳೆದಾತದ. ಲೇಖನಲ್ಲಿ ಎಂಗೊಗೆ ಸುಮಾರು ವಿಶಯಂಗೊ ಸಿಕಿತ್ತು
  [ಪೂಜಗೆ ಸುತ್ತಿದ ಪಟ್ಟೆಯನ್ನೂ,…….. ದಾರಿಮೈಲಿಗೆ ಒಸ್ತ್ರವ ಸುತ್ತಿಗೊಂಡಿತ್ತಿದ್ದವು]- ಈ ಹೆರಡುತ್ತ ವಿವರಣೆ ಲಾಯಿಕ ಆಯಿದು
  [ಕೊಡೆಯಾಲಂದ ಶರ್ಮಪ್ಪಚ್ಚಿಯ ಬಸ್ಸಾದರೂ ಇಕ್ಕು] ಒಂದು ಜಾಗೆ ಕೇಳಿ ಮಡುಗಿದ್ದೆ.

  [ಹಾಳೆಬೀಸಾಳೆಯ ಕೈಲಿ ತೆಕ್ಕೊಂಡು ಮಾತಾಡ್ಳೆ ಸುರುಮಾಡಿದವು.] [ಹತ್ತಂಗುಲ ಒಳಿದಿಕ್ಕಿತ್ತಡ – ಹೇಳಿದವು ಬೀಸಾಳೆಯ ಉದ್ದ ತೋರುಸಿಗೊಂಡು.] ವಿರಾಟ್ ರೂಪದ ವಿವರಣೆ ಒಟ್ಟಿಂಗೆ ಬಟ್ಟ ಮಾವನ ಅಂಗಿಕಂಗಳೂ ಲಾಯಿಕ ಆಯಿದು
  [ಆ ಪೂಜೆ ಹೇಳಿತ್ತುಕಂಡ್ರೆ ಬರೇ ಪೂಜೆ ಅಲ್ಲ, ಅದೊಂದು ಸಂಸ್ಕಾರ, ಅದೊಂದು ಪಾವಿತ್ರ್ಯತೆ, ಅದೊಂದು ಶೈಲಿ, ಅದೊಂದು ಮೋಹಕತೆ] – ಶ್ರೀ ಗುರುಗೊ ಮಾಡುವ ಪೂಜೆಯ ವ್ಯಾಖ್ಯಾನ ಚೆಂದ ಆಯಿದು. ಎಲ್ಲವನ್ನೂ ಅಲ್ಲಿ ನೋಡಿಯೇ ಅನುಭವಿಸೆಕ್ಕು
  [ತಂತ್ರಲ್ಲೇ ಆರಾಧ್ಯ ದೇವರುಗೊಕ್ಕೆ ನವಶೆಗ್ತಿ, ದ್ವಾದಶನಾಮ, ಷೋಡಷೋಪಚಾರಂಗಳ ಕೊಡ್ತದಡ]- ಹೊಸ ವಿಶಯ ತಿಳಿಶಿ ಕೊಟ್ಟೆ
  [ಏಕಶೃತಿಲಿ, ಏಕವೇಗಲ್ಲಿ ವಿರಾಟ್-ಪುರುಷನ ರುದ್ರರೂಪವ ಸ್ತುತಿಮಾಡಿಗೊಂಡಿಪ್ಪಗ..ಶಂಕರಾಚಾರ್ಯರಿಂದ ಇಂದಿನಒರೆಂಗೆ ನಿತ್ಯಪೂಜೆ ತೆಕ್ಕೊಂಡು ಬಂದ ಲಿಂಗರೂಪಿ ರುದ್ರಂಗೆ ಅಭಿಷೇಕ ಆವುತ್ತ ಸುಂದರ ಸನ್ನಿವೇಶ..] – ಇದರ ಪ್ರತ್ಯಕ್ಷ ಅನುಭವಿಸಿ ಧನ್ಯರಪ್ಪೊ. ಮನೆಂದ ಒಬ್ಬ ಆದರೂ ಬಂದು ಭಾಗವಹಿಸೆಕ್ಕು ಹೇಳುವದು ಶ್ರೀ ಗುರುಗಳ ನಿರ್ದೇಶ.
  ಎಡಿಗಾಗದ್ದವಕ್ಕೆ ಹರೇ ರಾಮ ಸೈಟಿಲ್ಲಿ ನೇರೆ ಪ್ರಸಾರ ವೆವಸ್ಥೆ ಇದ್ದನ್ನೆ.
  ಒಂದೊಪ್ಪ ಲಾಯಿಕ ಆಯಿದು

  [Reply]

  VA:F [1.9.22_1171]
  Rating: +1 (from 1 vote)
 2. ಹಳೆಮನೆ ಅಣ್ಣ

  ಹರೇರಾಮ.ಇನ್ ಲ್ಲಿ ನೇರಪ್ರಸಾರ ಸೌಕರ್ಯ ಮಾಡಿಕೊಟ್ಟದಕ್ಕೆ ಧನ್ಯವಾದಂಗೊ ಗುರಿಕ್ಕಾರ್ರಿಂಗೆ. ವಿರಾಟ್ ಪೂಜೆಗೆ ಬಪ್ಪಲೆಡಿಯದ್ರೂ ಇಲ್ಲಿಂದಲೇ ನೋಡಿ ಆತನ್ನೆ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಶ್ಯಾಮಣ್ಣಗೋಪಾಲಣ್ಣಚೆನ್ನೈ ಬಾವ°ಮುಳಿಯ ಭಾವಡೈಮಂಡು ಭಾವವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಸಂಪಾದಕ°ಸುಭಗವಿದ್ವಾನಣ್ಣಮಂಗ್ಳೂರ ಮಾಣಿವಿಜಯತ್ತೆಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣವಿನಯ ಶಂಕರ, ಚೆಕ್ಕೆಮನೆಪೆರ್ಲದಣ್ಣವಸಂತರಾಜ್ ಹಳೆಮನೆಬೋಸ ಬಾವಚುಬ್ಬಣ್ಣvreddhiಜಯಶ್ರೀ ನೀರಮೂಲೆದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ