ನೂಲಹುಣ್ಣಿಮೆ-ಮುಜುಂಗಾವು ವಿದ್ಯಾಪೀಠಲ್ಲಿ

ಹುಣ್ಣಿಮೆ-ನೂಲಹುಣ್ಣಿಮೆ

ಪಾಡ್ಯ-ಯುಗಾದಿ ಪಾಡ್ಯ, ಬಿದಿಗೆ- ಸೋಮನಬಿದಿಗೆ, ತದಿಗೆ- ಅಕ್ಷಯತದಿಗೆ, ಚೌತಿ- ವಿನಾಯಕ ಚೌತಿ, ಪಂಚಮಿ- ನಾಗರಪಂಚಮಿ, ಷಷ್ಠಿ- ಕುಕ್ಕೆ ಷಷ್ಠಿ, ಸಪ್ತಮಿ- ರಥಸಪ್ತಮಿ, ಅಷ್ಟಮಿ- ಗೋಕುಲಾಷ್ಟಮಿ, ನವಮಿ-ಮಹಾನವಮಿ, ದಶಮಿ-ವಿದ್ಯಾದಶಮಿ, ಏಕಾದಶೀ- ಪ್ರಥಮೈಕಾದಶೀ, ದ್ವಾದಶೀ- ಉತ್ಥಾನ ದ್ವಾದಶೀ, ತ್ರಯೋದಶೀ- ಶನಿತ್ರಯೋದಶೀ, ಚತುರ್ದಶೀ- ಅನಂತಚತುರ್ದಶೀ, ಹುಣ್ಣಿಮೆ- ನೂಲಹುಣ್ಣಿಮೆ, ಅಮವಾಸ್ಯೆ- ಮಹಾಲಯ ಅಮವಾಸ್ಯೆ ಇವು ಹದಿನೈದು (ಅಮಾವಾಸ್ಯೆ ಸೇರಿ ಹದಿನಾರು) ಪಂಚಪರ್ವತಿಥಿಗಳ ಹೆಸರುಗಳು. ತಿಥಿ, ನಿತ್ಯನಕ್ಷತ್ರ, ಸಂವತ್ಸರಂಗೊ ಸೌರಮಾನ ಹಾಂಗೂ ಚಾಂದ್ರಮಾನ ತಿಂಗಳ ಹೆಸರು ಇದೆಲ್ಲಾ ಸಣ್ಣದಿಪ್ಪಗ ಮೂರುಸಂಧ್ಯಪ್ಪಣ ಹೊತ್ತಿಂಗೆ ಹಿರಿಯವು ಬಾಯಿಪಾಠ ಮಾಡ್ಸಿದ್ದು ಮರದ್ದಿಲ್ಲೆಯಿದ. ಈಗಾಣವಕ್ಕೆ ಇದೆಲ್ಲ ಎಲ್ಲಿ ಗೊಂತಪ್ಪದು? ಮನೆಲಿ ಅಜ್ಜಿ ಅಜ್ಜಂದರು ಇಪ್ಪಲೆಡಿಯ! ಅಬ್ಬೆ-ಅಪ್ಪಂಗೆ ಪುರುಸೊತ್ತಿಲ್ಲೆ! ಶಾಲೆಲಿ ಹೀಂಗಿದ್ದೆಲ್ಲ ಸಿಲೆಬಸ್ಸಿಲ್ಲಿ ಇಲ್ಲೆ! ಹಾಂಗಾಗಿ ಇದೆಲ್ಲ ಕೇಳಿರೆ; ತಿಥಿ ವರ್ಷಕ್ಕೊಂದಾರಿ ಮನೆಲಿ ಮಾಡ್ತವು ಇಲ್ಲದ್ರೆ ಅಂದಿಂಗೆ ಸತ್ತವರ ಫೋಟೋ ನೋಡಿ ಕೈ ಮುಗಿತ್ತವು. ನಕ್ಷತ್ರ ಆಕಾಶಲ್ಲಿ ಕಾಣ್ತು ಹೇಳ್ತವು ಮಕ್ಕ! ಸಾಕನ್ನೆ!!

mujungavu-rakshabandhanaಶಾಲೆಗಳಲ್ಲಿ ಮುಜುಂಗಾವು ವಿದ್ಯಾಪೀಠದ ಹಾಂಗಿಪ್ಪ ಶಾಲೆಗ ರಜ ಬೇಧ ಕಾಣ್ತಾ ಇದ್ದಿದ(ಶ್ರೀ ಗುರು ಸಂಸ್ಥೆ). ಮೊನ್ನೆ ನೂಲಹುಣ್ಣಿಮೆಗೆ ರಕ್ಷಾಬಂಧನ ಹೇಳಿ ಮಾಡಿದವು. ಕುಂಬಳೆ ಮಾದರಿ (ಹೋಲಿ ಪ್ಯಾಮಿಲಿ) ಶಾಲೆಯ ಸಂಸ್ಕೃತ ಮಾಷ್ಟ್ರಾದ ಶ್ರೀಯುತ ಬಾಲಕೃಷ್ಣ ಶರ್ಮರು ಮುಖ್ಯ ಆಹ್ವಾನಿತರಾಗಿ ಸಭಾ ವೇದಿಕೆಲಿ ಮಾತಾಡಿದವು. ಅವು ಅದರ ವಿಶೇಷತೆ ಬಗ್ಗೆ ಹೇಳ್ತಾ ನಮ್ಮ ಸಂಸ್ಕೃತಿ, ಆಚಾರ-ವಿಚಾರಂಗಳ ಆಚರಣೆಲಿ ನೂಲಹುಣ್ಣಿಮೆ ವಿಶೇಷವಾದ್ದು. ಪಂಚಪರ್ವ ತಿಥಿಗಳ ವಿಶೇಷಲ್ಲಿ ನೂಲಹುಣ್ಣಿಮೆಯೂ ಒಂದು. ಹೊಸದಾಗಿ ಉಪನಯನ ಆದವಕ್ಕೆ ಅಂದು ಉಪಾಕರ್ಮ ಮಾಡ್ತವು. ಎಲ್ಲರೂ(ಜೆನಿವಾರ ಇದ್ದವು) ಜೆನಿವಾರ ಬದಲಿಸೆಕ್ಕಾದ ದಿನ. ಅಲ್ಲದ್ದೆ ಹೆಣ್ಣು ಮಕ್ಕ ತಮ್ಮ ತಮ್ಮ ಸ್ವಂತ ಅಣ್ಣ-ತಮ್ಮಂದಿರಂಗೆ ಅಥವಾ ಬೇರೆಯವಕ್ಕೆ ಸೋದರರು ಹೇಳಿ ಭಾವನಾತ್ಮಕವಾಗಿ ಸಾಂಕೇತಿಕವಾಗಿ ಕಟ್ಟುವ ಕಂಕಣ. ಆದರೆ ಈಗೀಗ ಬಗೆಬಗೆ ಬಣ್ಣಂದ, ಬಗೆಬಗೆ ಆಕಾರಂದ ತಯಾರು ಮಾಡಿದ್ದದರ ಕಟ್ಟಿಗೊಂಡು ಸಂತೋಷ ಪಡುವವೇ ಆಗಿ ಅದರ ಒಳಾರ್ಥದ ಬಗೆ ತಿಳಿತ್ತವಿಲ್ಲೆ. ಸಮಾಜಲ್ಲಿ ಅದರ ಅರ್ಥವ ತಿಳುದು ವ್ಯವಹರಿಸಿರೆ ರಜ ಅತ್ಯಾಚಾರ, ಅನಾಚಾರ ಕಮ್ಮಿ ಅಕ್ಕು ಹೇಳಿದವು.

ಅಧ್ಯಕ್ಷರಾದ ಶ್ರೀಯುತ ದೊಡ್ಡಮಾಣಿ ಶ್ಯಾಮರಾಜರು ಶಾಲಾಮಕ್ಕೊಗೆ ಮಾತಾಶ್ರೀಗೊಕ್ಕೆ ಶುಭಹಾರೈಕೆ ತಿಳಿಸಿದವು. ಪ್ರಾರ್ಥನೆ ೯ನೇ ಕ್ಲಾಸಿನ ಹುಡುಗಿಯರಾದ ಶ್ರೀಜಾ, ರೇಷ್ಮಾ, ಚೈತ್ರ ಇವು ಮೂರು ಜನ ಹಾಡಿದವು. ೮ನೇ ಕ್ಲಾಸಿನ ಸುಧನ್ವ ಸ್ವಾಗತಿಸಿ, ೧೦ನೇ ಕ್ಲಾಸಿನ ಶ್ವೇತಾ ಧನ್ಯವಾದ ಮಾಡಿತ್ತು. ವೇದಿಕೆಲಿದ್ದ ಅತಿಥಿಗಳೂ ಅಧ್ಯಕ್ಷರೂ ಮಕ್ಕಳ ಕೈಗೆ ರಾಖಿ ಕಟ್ಟಿದವು. ಎಲ್ಲರಿಂಗೂ ಕಲ್ಲುಸಕ್ಕರೆ ಹಂಚುವುದರೊಟ್ಟಿಂಗೆ ಕಾರ್ಯಕ್ರಮ ಮುಗದತ್ತು.

ವಿಜಯತ್ತೆ

   

You may also like...

4 Responses

  1. Rameshwara Bhat. S says:

    ಪಾಡ್ಯ-ಯುಗಾದಿ ಪಾಡ್ಯ, ಬಿದಿಗೆ- ಸೋಮನಬಿದಿಗೆ, ತದಿಗೆ- ಅಕ್ಷಯತದಿಗೆ, ಚೌತಿ- ವಿನಾಯಕ ಚೌತಿ, ಪಂಚಮಿ- ನಾಗರಪಂಚಮಿ, ಇತ್ಯಾದಿ ತಿತಿ ಗಳ ಹೆಸರು ಗಳ ಸಣ್ಣದಿಪ್ಪಗ ಆ ನು ಬಾ ಯಿ ಪಾ ಠ ಮಾಡಿದರೂ ಈಗ ಮರದು ಹೊಯಿದು. ಲೇಖನ ಓದುವಾಗ ಅದರ ಮಹತ್ವ ಗೊಂತಾ ತು .ಧನ್ಯವಾದಗಳು

  2. ಸೇಡಿಗುಮ್ಮೆ ರಮೇಶ್ವರಭಟ್ಟರಿಂಗೆ ಅನಂತ ಧನ್ಯವಾದಂಗೊ ತುಂಬ ಹಿಂದೆ ಬರದ್ದದರ ನೋಡಿ ತಿಳುಕ್ಕೊಂಡಿದರನ್ನೆ ಎನ್ನ ಬರಹ ಈ ರೀತಿಲಿ ಸಾರ್ತಕತೆ ಆತು ಹೇಳ್ಲೆ ಸಂತೋಷಾವುತ್ತು.

  3. ಹರಿ ನಾರಾಯಣ ಭಟ್ಟ says:

    ಪಾಡ್ಯ – ಬಲಿಪಾಡ್ಯ,, ಕ್ರಮೆಣ ಅಮಾವಾಸ್ಯೆ – ಮಹಾಲಯ ಅಮಾವಾಸ್ಯೆ ಈ ಪಟ್ಟಿಯನ್ನು ವೆಬ್ನಲ್ಲಿ ಹುಡುಕುತ್ತಾ ;ಇಲ್ಲೆ ಬಂದು ನಿಮ್ಮಭಳಗವನ್ನು ಮ್
    ಎರಿದೆ. ನಮ್ಮ ಊರ ದೆವಾಲಯ “ಮುಜಂಗಾವು” ಲೆಖನದಲ್ಲಿ ಓದಿ ಬಹಳ ಸಂತೊಷವಾಯಿತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *