Oppanna.com

ಸಮಸ್ಯೆ 75:ಆಟಿ ಸಮ್ಮಾನಕ್ಕು ಪುರುಸೊತ್ತಿರ

ಬರದೋರು :   ಸಂಪಾದಕ°    on   19/07/2014    17 ಒಪ್ಪಂಗೊ

ಈ ವಾರ ಕುಸುಮ ಷಟ್ಪದಿಲಿ ಸಮಸ್ಯೆ :

                                     “ಆಟಿ ಸಮ್ಮಾನಕ್ಕು ಪುರುಸೊತ್ತಿರ”

ಆಟಿ ತಿಂಗಳಿಲಿ ಹೊಸ ಮದುಮಕ್ಕೊಗೆ ಮಾವಗಳಲ್ಲಿ ಸಮ್ಮಾನ  ಮಾಡ್ತದು ನಮ್ಮ ಸಂಪ್ರದಾಯ . ಬೈಲಿನ ಕೆಲವು ಜವ್ವನಿಗರು ಪ್ರತಿ ವರ್ಷ ಸಮ್ಮಾನ ಇರ್ತಿದ್ದರೆ ಒಳ್ಳೆದು ಹೇಳ್ತವು ,ಅದಿರ್ಲಿ .. ಎಂತಗೆ ಪುರುಸೊತ್ತಿರ ಹೇಳಿ ಸಮಸ್ಯೆಗೆ ಪರಿಹಾರ ಹುಡುಕ್ಕುವನೋ ?

17 thoughts on “ಸಮಸ್ಯೆ 75:ಆಟಿ ಸಮ್ಮಾನಕ್ಕು ಪುರುಸೊತ್ತಿರ

  1. ಓಟೆ ಚೀಪಿದ°ನಾಲ್ಕು
    ಕಾಟುಮಾವಿನ ಗೊಜ್ಜಿ
    ಊಟ ಮಾಡೊಗ ಹೊಸಮದಿಮ್ಮಾಯನು |
    ಕಾಟಿಪಳ್ಳದ ಮಾಣಿ
    ಕೇಟನುಂಗಿಲನಂದೆ
    ಆಟಿಸಮ್ಮಾನಕ್ಕೆ ಪುರುಸೊತ್ತಿರ ||

  2. ಘಾಟು ವಾಸನೆ ಬಪ್ಪ
    ಚಾಟು ತಿನ್ನೆಡಿರೊ° ಕೊ೦
    ಡಾಟಲ್ಲಿ ಮಧುಮಾಸ ಕಳುಶಿ ಬನ್ನಿ|
    ಗೂಟ ಬಿಡುಸಿದ ಕ೦ಜಿ
    ಯೋಟ ಓಡಿರೆ ಮು೦ದೆ
    ಆಟಿ ಸಮ್ಮಾನಕ್ಕು ಪುರುಸೊತ್ತಿರ !!

  3. ಅತ್ತೆಗಳ ಕತೆ ಬೇಕಾ ಮುಳಿಯದಣ್ಣಾ ಇದಾ…

    ರೋಟರಿ ಕ್ಲಬ್ಬಿಲ್ಲಿ
    ಕೂಟ ಮಾಡಿರೆ ಹಗಲು
    ಕಾಟು ಧಾರಾವಾಹಿಗಿರುಳು ನೋಡಿ
    ನೀಟು ಫರ್ನೀಚರಿನ
    ಸೂಟೆ ಬುದ್ಧಿಯ ಮಾಡಿ
    ರಾಟಿ ಸಮ್ಮಾನಕ್ಕು ಪುರುಸೊತ್ತಿರ. 🙂

    ಭಿನ್ನ ದೃಷ್ಟಿಯ ಉದ್ದೇಶ ವಷ್ಟೇ ಇಲ್ಲಿಪ್ಪದು…

  4. ರೇಟು ಚಿನ್ನದ್ದೇರೆ
    ನೋಟು ಪೈಸೆಯ ಬಿಚ್ಚ
    ಗೋಟಡಕ್ಕೆಯ ಕೆರಸಿ ತಿಂಬ ಜಾತಿ
    ಕಾಟು ಬೆಂದಿಲೆ ಉಂಬ
    ಘಾಟಿ ಮಾವಗಳಿಂಗ
    ದಾಟಿ ಸಮ್ಮಾನಕ್ಕು ಪುರುಸೊತ್ತಿರ || 🙂

    1. ಹ.ಹ್ಹಾ .. ಮಾವುಗಳ ಕತೆಯೂ ಹೀಂಗೋ !! ರಸವತ್ತಾಯಿದು ಶೈಲಜಕ್ಕಾ ..

  5. ಕಾಟುಬಲ್ಲೆಯ ಕಡುಶಿ
    ತೋಟ ಒತ್ತರೆ ಮಾಡಿ
    ಗೋಟುಕಾಯಿಯ ಹೊತ್ತು ತ೦ದ ಮೇಲೆ |
    ಈಟು ತಪ್ಪಲೆ ಪೆರ್ಲ
    ಪೇಟಗೋಪಲೆ ಇದ್ದು
    ಆಟಿ ಸಮ್ಮಾನಕ್ಕು ಪುರುಸೊತ್ತಿರ ||

  6. ಚೋಟುದ್ದ ಒಪ್ಪಕ್ಕ
    ಸಾಟಿಯು ಮದಿಮ್ಮಾಯ
    ಕೂಟಮೈತ್ರಿಯು ಸಮಕೆ ಕೂಡಿಬಂತು |
    ಊಟಿ ಸುತ್ತಿದ ಮತ್ತೆ
    ಘಾಟಿ ಹತ್ತಿದ ಜೋಡಿ
    ಗಾಟಿ ಸಮ್ಮಾನಕ್ಕು ಪುರುಸೊತ್ತಿರ ||

    1. ಮುತ್ತಿನು೦ಗಿಲವ ಹಿಡು
      ದತ್ತೆ ಮಾವನೆ ನಾಳೆ
      ಬತ್ತವಡ ಸಮ್ಮಾನ ಮಾಡಿಬಿಡುಲೆ |
      ಹೆತ್ತ ಮಗಳಾ ಮೋರೆ
      ಹೊತ್ತು ಕ೦ತಿದ ಮೇಲೆ
      ಕತ್ತಲೆಲಿಯೂ ಹೊಳಗು ಪುರುಸೊತ್ತಿಲಿ ||

    2. ಚೋಟುದ್ದ ಕೂಸಿಂಗೆ ಮಾಣಿ ಸಿಕ್ಕುದು ಕಷ್ಟವೆ …. ಇಂದಿರತ್ತೆ ಕೂಟ ಮೈತ್ರಿ ನೋಡಿ ಕೂಸಿಂಗೆ ಮದುವೆ ಮಾಡ್ಸಿದ್ದು ಒಳ್ಳೆದಾಯಿದು .ನಿಂಗೊ ನೋಡಿದ್ದು ವೈಜಯಂತಿ ಪಂಚಾಂಗವೋ ?

  7. ನಾಟಿ ವೈದ್ಯರದೆ ಕುಡಿ
    ನೋಟ ಬೀರುವ ಕೂಸು
    ಮಾಟಗಾತಿಗೆ ಕೊಟ್ಟೆ ಮಾಲೆ, ಮುತ್ತು I
    ‘ಕೋಟಿ ಸೇರಲಿ ಬಾಳಿ
    ನೋಟಲ್ಲಿ”!! ಹೇಳಿತ್ತ –
    ದಾಟಿ ಸಮ್ಮಾನಕ್ಕು ಪುರುಸೊತ್ತಿರ !! II

    ವೈದ್ಯರದೆ ಕುಡಿ =ವೈದ್ಯರ ವಂಶ
    ಕುಡಿ ನೋಟ =ಮನಸೆಳವ ನೋಟ
    ಬಾಳಿನ +ಓಟ =ಬಾಳಿನೋಟ
    ಹೇಳಿತ್ತು +ಅದು + ಆಟಿ = ಹೇಳಿತ್ತದಾಟಿ

    1. ರಚನೆ ಲಾಯ್ಕ ಆಯಿದು ಭಾಗ್ಯಕ್ಕ . ಇನ್ನೂ ಒಂದೆರಡು ಚರಣ ಬರದು ಪೂರ್ತಿ ಅರ್ಥ ಬಪ್ಪ ಹಾಂಗೆ ಮಾಡ್ಳಕ್ಕು. ಒಂದು ಚರಣಲ್ಲಿ ಅಪೂರ್ಣ ಅನುಸುತ್ತು ..

      1. ಅಣ್ಣ ,ಕೆಲವೆಲ್ಲ ಅಪೂರ್ಣ ಆಗಿದ್ದರೆ ಅರ್ಥಪೂರ್ಣವಾಗಿರ್ತು .ಪದ್ಯಲ್ಲಿ ಬರೆಯದ್ದದು ಅವಕ್ಕವಕ್ಕೆ ( ಪ್ರತಿ ವರ್ಷ ಆಟಿ ಸಮ್ಮಾನ ಬೇಕು ಹೇಳುವೊರಿಂಗೆ )ಬೇಕಾದ ಹಾಂಗೆ ಅರ್ಥ ಮಡಿಗೊ೦ಬಲೆ ಬಿಟ್ಟದು.

  8. ಊಟ-ಕೂಟ
    ಮೇಟಿ ಕೆಲಸದವಂಗೆ
    ಸೂಟಿಯುದೆ ಧಾರಾಳ
    ಊಟಕ್ಕು ಕೂಟಕ್ಕು ಹೋಪ ಲೆಡಿಗು |
    ನೋಟುಗಳ ಲೆಕ್ಕಿಸುವ
    ಕಾಟುಕುಕ್ಕೆಯ ರವಿಗೆ
    ಆಟಿ ಸಮ್ಮಾನಕ್ಕು ಪುರುಸೊತ್ತಿರ ||
    (ಮೇಟಿ=ಕೃಷಿ,ಸೂಟಿ=ರಜೆ,ಲೆಕ್ಕಿಸು=ಎಣಿಸು)

    1. ನೋಟುಗಳ ಎಣುಸಿ ಎಣುಸಿ ಸಂಬಂಧ0ಗಳೇ ದೂರ ಆಗಿ ಹೋಕೋ ಮಾವಾ ? ಪದ್ಯ ರಸವತ್ತಾಯಿದು .

  9. ಸೂಟುಬೂಟಿನ ಹಾಕಿ
    ಕೋಟಿ ಪೈಸೆಯ ತರೆಕು ,
    ಮೇಟಿ ಕೆಲಸದ ಮಾಣಿ ಮಾಂತ್ರ ಬೇಡ |
    ಪೇಟೆ ಹುಡುಗನ ಹುಡುಕಿ
    ದಾಂಟಿಸಿರೆ ಮಗಳವ
    ಕ್ಕಾಟಿ ಸಮ್ಮಾನಕ್ಕು ಪುರುಸೊತ್ತಿರ ||

    1. ಸ೦ಗತಿ ಅಪ್ಪು ಇಂದಿರತ್ತೆ . ಲಾಯ್ಕ ಆಯಿದು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×