- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
–ಉಪ್ಪುಸೊಳೆ ಹಾಕುವ ಕ್ರಮ—
{ತುಂಬ ಜೆನ ಜೆಂಬಾರಲ್ಲಿ ಕಂಡಪ್ಪಗ ಎನ್ನತ್ರೆ ಉಪ್ಪುಸೊಳೆ,ಉಪ್ಪು ಮಾವಿನಕಾಯಿ ಹಾಕುವ ಕ್ರಮ ಬರೆಯಿ ಹೇಳಿದ್ದೊವು. ಈಗೀಗ ಪೇಟೆಲಿದ್ದ ಕೂಸುಗೊಕ್ಕೆ ಹಲಸು,ಮಾವು ಸಿಕ್ಕೀರೂ ಅದರ ಉಪಯೋಗಿಸಿಗೊಂಬಲೆ ಗೊಂತಿರುತ್ತಿಲ್ಲೆ. ಅದಕ್ಕಾಗಿ ಬರೆತ್ತಾ ಇದ್ದೆ.}
ಬೇಕಪ್ಪ ಸಾಮಾನುಃ- 1.ಬೆಳದ ಹಲಸಿನ ಕಾಯಿಸೊಳೆ ಅಜಪ್ಪಿದ್ದು [ಪೆಟ್ಟಾದ, ನಜ್ಜುಗುಜ್ಜಾದ ಸೊಳೆ ಹಾಕಲಾಗ,ಹಾಂಗಿಪ್ಪ ಸೊಳೆ ಕೊಳೆತ್ತು.] ಸಾದಾರಣ 10 ಕೆ.ಜಿ ಸೊಳೆ. 2.ಎರಡು ಕೆ.ಜಿ ಉಪ್ಪು.3.ಹಾಕಿ ಮಡುಗಲೆ ಪ್ಲಾಸ್ಟಿಕ್ ಬರಣಿ.
ಹಾಕುವ ಕ್ರಮಃ- ತೊಳದು ಒಣಗಿದ ಪ್ಲಾಸ್ಟಿಕ್ ಬರಣಿಗೆ ಮದಾಲು ಒಂದ್ರಜ ಉಪ್ಪು ಬಿಕ್ಕೆಕ್ಕು.ಮತ್ತೆ ಕ್ರಮಾಗತವಾಗಿ ಒಂದು ಪದರ ಸೊಳೆ,ಒಂದು ಪದರ ಉಪ್ಪು[ಉಪ್ಪು ಬಿಕ್ಕಿರಾತು], ಹೀಂಗೆ ಹಾಕೆಂಡು ಬರೆಕು. ಮೇಗಂದ ಲಾಸ್ಟಿಂಗೆ ರಜ ಉಪ್ಪು ಬಿಕ್ಕಿಕ್ಕಿ ಮುಚ್ಚಲು ಮುಚ್ಚಿ ಮಡುಗೆಕ್ಕು. ಮಾರಣೆ ದಿನ ಕೈ ಒಣಗಿಸಿಯೊಂಡು; ಹಾಕಿದ ಸೊಳೆಯ ಒಂದಾರಿ ಅಡಿಮೇಲು ಮಾಡೆಕ್ಕು.ಅದಲ್ಲಿ ನೀರು ಎದ್ದಿರುತ್ತು. ಹಾಕುವ ಹೊತ್ತಿಂಗೆ ಬರಣಿಲಿ ತುಂಬ ಕಂಡ್ರೆ;ಮರುದಿನ ಅದು ಸುಗ್ಗಿ ಪಾತ್ರೆಲಿ ಅರ್ಧ ಆಗಿರುತ್ತು.ದಿನಲ್ಲಿ ಎರಡು ಸರ್ತಿ ಹೀಂಗೆ ಕೈ ಹಾಕೆಕ್ಕು. ಸುಗ್ಗಿದ್ದಕ್ಕೆ ವಾಪಾಸು ಅದರ ಮೇಲಂದ ಅಜಪ್ಪಿದ ಸೊಳೆಯ ಹಾಕಲಕ್ಕು. ಹೀಂಗೆ ದಿನಾ ಆ ಪಾತ್ರೆಲಿ ತುಂಬುವನ್ನಾರ ಹಾಕೆಕ್ಕು. ಬರಣಿ ತುಂಬಿತ್ತು ಇನ್ನು ಹಿಡಿಯ ಹೇದಪ್ಪಗ ಕೈ ಒಂದಾರಿ ಹಾಕಿ, ಮೇಗಂದ ಒಂದು ಗೆನಾ ಪ್ಲಾಸ್ಟಿಕ್ ಕಾಗದ ಮುಚ್ಚಿ ಮಡಗೆಕ್ಕು.ಎದ್ದ ಉಪ್ಪುನೀರಿಲ್ಲಿ ಸೊಳೆ ಮುಂಗಿರೆಕು. ಇದು ಸಾದಾರಣ ಒಂದು ತಿಂಗಳಪ್ಪಗ ಉಪ್ಪು ಸೊಳೆಯ ಪಾಕ ಬತ್ತು. ಇನ್ನು ಉಂಡ್ಳಕಾಳೋ ಪಲ್ಯವೋ ಒಡೆಯೋ ರೊಟ್ಟಿಯೋ ಬೇಕಾದ್ದರ ಬೇಕಪ್ಪಷ್ಟು ತೆಗದು ಮಾಡಿಗೊಂಬಲಕ್ಕು. ಹಾಂ…ಸೊಳೆ ತುಂಬುಸುವಗಾಗಲಿ, ತೆಗವಗಾಗಲಿ ಚೆಂಡಿ ಕೈ ಹಾಕಲಾಗ ನೆಂಪಿರೆಕು.
ವಿ . ಸೂಃ- ನಿಂಗೊಗೆ ತಾಳಿಂಗೋ ದೋಸಗೋ ಆರಾರು ಕೊಟ್ಟಿದ್ದ ಸೊಳೆ ಹೆಚ್ಚಾದರೆ ಪ್ಲಾಸ್ಟಿಕ್ ಕರಡಿಗೆಲಿ ಹಾಕಿ ಈ ನಮುನೆಲಿ ಮಡಗೀರೂ ಅಕ್ಕು. ಉಪ್ಪು ಒಂದು ಅಂದಾಜಿಲ್ಲಿ ಹಾಕಲಕ್ಕು ತೊಂದರೆ ಇಲ್ಲೆ.ನೀರಪಸೆ ಸೇರದ್ದೆ ಇದ್ದರಾತು. ನೀರಪಸೆ ಸೇರೀರೆ ಹೆಚ್ಚು ದಿನ ಒಳಿಯ. ಕೊಳಗು, ಅಥವಾ ಸೀಂತೆಲು ಬಕ್ಕು.
-ಉಪ್ಪುಮಾವಿನ ಕಾಯಿ ಹಾಕುವ ಕ್ರಮ-
ಕಾಟು ಮಾವಿನ ಕಾಯಿಯನ್ನೇ ಉಪ್ಪಿಲ್ಲಿ ಹಾಕುವ ಕ್ರಮ,ಕೆಲವು ಹುಳಿ ಇಪ್ಪ ಕಶಿ ಮಾವಿನಕಾಯಿಯನ್ನೂ ಹಾಕಲಾವುತ್ತು.
ಬೇಕಪ್ಪ ಸಾಮಾನುಃ-1.ಬೆಳದ ಪೆಟ್ಟಾಗದ್ದ ಮಾವಿನಕಾಯಿ ಐವತ್ತು. 2.ಉಪ್ಪು ಒಂದು ಕೆ.ಜಿ[ದೊಡ್ಡ ಮಾವಿನಕಾಯಿ ಆದರೆ ಒಂದ್ರಜ ಉಪ್ಪು ಹೆಚ್ಚಿಗಿರಲಿ], 3. ಕೊದಿಶಿ ತಣಿಶಿದ ನೀರು ನಾಲ್ಕು ಲೀಟರು. 4.ಇಷ್ಟು ಹಿಡಿವ ಪ್ಲಾಸ್ಟಿಕ್ ಡ್ರಮ್.
ಹಾಕುವ ಕ್ರಮಃ- ಕೊದಿಶಿ ತಣಿಶಿದ ನೀರಿಲ್ಲಿ ಉಪ್ಪುಕರಡ್ಸೆಕ್ಕು.[ಉಪ್ಪು ಮದಾಲು ಹಾಕಿ ಕೊದಿಶೀರು ಅಕ್ಕು. ಮಾವಿನಕಾಯಿಗೆ ಎರವಗ ಉಪ್ಪುನೀರು ಬೆಶಿ ಇಪ್ಪಲಾಗ].ಮಾವಿನಕಾಯಿಯ ಒಣಕ್ಕು ವಸ್ತ್ರದ ತುಂಡಿಲ್ಲಿ ಉದ್ದಿ ಚೊಕ್ಕಮಾಡಿ ಪ್ಲಾಸ್ಟಿಕ್ ಬರಣಿಲಿ ತುಂಬುಸೆಕ್ಕು. ಮತ್ತೆ ಮೇಗಂದ ಉಪ್ಪು ಕರಡ್ಸಿದ ನೀರಿನ ಎರೆಕು.ಆ ಮೇಲೆ ಒಣ ಪ್ಲಾಸ್ಟಿಕ್ ಕಾಗದ ಮೇಗಂದ ಮುಚ್ಚಿ ಬರಣಿ ಮುಚ್ಚಲಾಕಿ ಮಡಗೆಕ್ಕು.ಇದಕ್ಕೆ ಸೊಳೆ ಹಾಂಗೆ; ಕೈಹಾಕೆಕ್ಕೂಳಿಲ್ಲೆ. ಆದರೆ ಮಾವಿನಕಾಯಿ ಉಪ್ಪುನೀರಿಲ್ಲಿ ಮುಂಗೆಂಡಿದ್ದೊ ನೋಡೆಕ್ಕೊಂದಾರಿ.
ಈ ಉಪ್ಪುಮಾವಿನಕಾಯಿಯ; ಚಟ್ಣಿ, ತಾಳು,ಹಸಿಗೊಜ್ಜು, ಬೇಶಿದಗೊಜ್ಜಿ, ಬೋಳುಕೊದಿಲು,ಬೇರೆ ತರಕಾರಿ ಒಟ್ಟಿಂಗೆ ಹಾಕಿ ಬೋಳುಬೆಂದಿ ಹೀಂಗೆ ವೆರೈಟಿ ಪದಾರ್ಥ ಮಾಡ್ಳಕ್ಕು. ಉಪ್ಪುಮಾವಿನಕಾಯಿಗೆ, ಉಪ್ಪುಸೊಳಗೆಲ್ಲ ಬೆಳ್ಳುಳ್ಳಿ ಒಗ್ಗರಣೆ ಹಾಕೀರೆ ರುಚಿ ಹೆಚ್ಚು.
+ + + + +
ಸೊಳೆ ಹಾಕುಲೆ ಸರಿ ಅರಡಿಯದ್ದೊವಕ್ಕೆ ಒಳ್ಳೆ ಮಾಹಿತಿ ವಿಜಯಕ್ಕ .
ಒಳ್ಳೆ ಮಾಹಿತಿ.
Anu bandippaga Uppilli Hakida Soleya Talu, Rotti, Undalakalu ella madi kodekatho
ಬಾಲಣ್ಣ, ಕೆಲವು ನಾತಂಗೊಕ್ಕೆ ಕಲವು ಹೆಸರಿದ್ದಿದ.ಉದಾಃ ಗಬ್ಬು,ಘಾಟು, ಪೊಡಸು.ಹೀಂಗೆಲ್ಲ. ಆ ನಮುನೆಲಿ ಉಪ್ಪು ಸೊಳೆ ಹಾಳಾಗಿ ವಾಸನೆ ಬಪ್ಪಲೆ ಸುರುವಾದರೆ ’ಸೀಂತೆಲು’ ಹೇಳ್ತವಿದ. ಅದು ತುಳುವಿನ ಶಭ್ದ ಆಗಿಪ್ಪಲೂ ಸಾಕು. ನಮ್ಮ ಭಾಷೆಲಿ [ಗ್ರಾಮ್ಯಲ್ಲಿ] ತುಳು, ಮಲೆಯಾಳ ಬೆರೆಕ್ಕೆ ಇದ್ದನ್ನೆ. ಮತ್ತೆ.., ಸೊಳೆ ಹಾಕಿಕ್ಕಿ, ಮೇಗಂದ ಕಲ್ಲು ಮಡಗುದು ಸೊಳೆ ಮೇಗಾಣ ಪದರವೂ ಉಪ್ಪುನೀರಿಲ್ಲಿ ಮುಂಗಿ ನಿಂಬಲೆ. ಮದಲಿಂಗೆ ಈ ಪ್ಲಾಸ್ಟಿಕ್ಕು ಎಲ್ಲ ಇಲ್ಲೆನ್ನೆ!. ಹಾಂಗಾಗಿ ನಿಂಗಳ ಅಜ್ಜಿ ಕಲ್ಲು ಮಡಗೆಂಡಿದ್ದದು. ಮತ್ತೆ.., ಭೂತ-ಪ್ರೇತಾಲ್ಲ ಸೊಳಗೆ ಬಾರ. ಕೂಸುಗಳ ಹೆದರ್ಸೆಡಿನ್ನು!!!.
ಅದೆಂತರ ವಿಜಯಕ್ಕಾ ಸೀಂತೆಲು -ತುಳು ವೋ !
* ಕೆಲವು ಜೆನ ಅಜ್ಜಿಯಕ್ಕೋ ಸೊಳೆ ಹಾಕಿಕ್ಕಿ ಅದರ ಮೇಗೆ ಒಂದು ಕಲ್ಲು ಮಡಗುತ್ತದರ ಕಂಡಿದೆ ,ಅದೆಂತಕೆ ?
* ಆ ” ಭೂತಯ್ಯ ” ಸಿನೆಮಲ್ಲಿ ಒಬ್ಬ ಖಾಲಿ ಉಪ್ಪಿನ ಕಾಯಿ ಕರಡಿಗೆ ಕೊಟ್ಟಿದ ನೆಂಪಿದ್ದೋ .ಆವಾ ಆದರೆ ಜೆನ ಆಗದ್ದಿಲ್ಲೇ ….
ಹಃ…ಹಃ ಹೀಂಗಿಪ್ಪ ಅಳಿಯಂದ್ರನ್ನೇ ಹುಡುಕ್ಕುತ್ತಾ ಇದ್ದೆ!!..ಕೆಲವು ಸರ್ತಿ ಕರಡಿಗೆಯೂ ಇಲ್ಲೆ, ಅಳಿಯನನ್ನೂ ಕಾಣೆ. ಹೇದಪ್ಪದೂ ಇದ್ದಿದ!!!.
ನಿಂಗೊ ಹೇದ್ಸು ಒಳ್ಳೆದಕ್ಕೇ ಆತು. ಆದರೆ… ಎನಗೆ ನಿಂಗೊ ಉಪ್ಪುಸೊಳೆ ಹಾಕಿದ್ದರ್ನೇ ಕರಡಿಗೆಲಿ ಹಾಕಿ ಕೊಟ್ರೇ ಸಮ ಅಕ್ಕಟ್ಟೆ. ಬೇಕಾಟ್ಟು ತೆಗದಿಕ್ಕಿ ಬಾಕಿದ್ದರೆ ಹಾಂಗೆ ಮುಚ್ಚಿ ಮಡಿಗಿಕ್ಕುವೆ. ಮುಗುದರೆ ಕರಡಿಗೆ ತೊಳದು ನಿಂಗೊಗೆ ಎತ್ತಿಸಿಕ್ಕುವೆ. ಇನ್ನಾಣ ಸರ್ತಿಗೆ ಕರಡಿಗೆ ಹುಡ್ಕುತ್ತಾಂಗೆ ಅಪ್ಪಲಾಗಲ್ಲದಾ ನಿಂಗೊಗೆ!