Oppanna.com

“ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29}

ಬರದೋರು :   ವಿಜಯತ್ತೆ    on   24/05/2015    8 ಒಪ್ಪಂಗೊ

“ಬೆಳೂಲಿಂಗೆ ಬಡಿಯೆಕ್ಕು, ಬತ್ತಕ್ಕೆ ತಾಗೆಕ್ಕು” {ಹವ್ಯಕ ನುಡಿಗಟ್ಟು-29}

ಕೆಲಾವು ವರ್ಷ ಹಿಂದಾಣ ಮಾತು.ಮನೆಲಿ ಒಂದು ಶುಭಕಾರ್ಯ ನಿಜಮಾಡಿ ಜಾಲಿಂಗೆ ಚೆಪ್ಪರ ಹಾಕುವ ಗೌಜಿ. “ಐತ್ತಪ್ಪೆ ಬತ್ತಿಜ್ಯೆನೊ!?.ಈತ್ ಬೇಲೆತ ಅರ್ಜಂಟ್ ಉಪ್ಪ್ ನಾಗ ಆಯಾಗ್ ರಜೆ ಮಾಳ್ಪೊಡೊ? ನಿಕ್ಳೆಗ್ ಅಗತ್ಯ ಬೋಡಾನಾಗ ಸಾಲಕೊರ್ಪೆ,ಸಾಮಾನು ಬೋಡಾಯಿನಾವ್ ಕೊರ್ಪೆ.ಒವು ಒಂಜಿಲಾ ಉಪಕಾರ ಇಜ್ಜಿಯತ್ತೋ!?”ಬಾರದ್ದ ಕೆಲಸದಾಳಿನ ಬಂದ ಆಳಿನತ್ರೆ ಸಮಾ ಬಯಿದೊವು ಅಜ್ಜಂ. ಅಷ್ಟಪ್ಪಗ ಒಳಾಂದ ಅಜ್ಜಿ..,  “ಆ ಭಟ್ಯನ ಎಂತಕೆ ಬಯಿವದು? ಅದು ಪಾಪ, ಹೀಂಗಿದ್ದ ಸಮೆಲಿ ರಜೆ ಮಾಡುವ ಮನುಷ್ಯನೇ ಅಲ್ಲ”. ಹೇಳಿಗೊಂಡವು.

“ನಿನ ಗೊಂತಿಲ್ಲೆ ಸಂಗತಿ!. ಬಟ್ಯಂಗೆ ಗೊಂತಿದ್ದು ಈ ಮಾತು ಐತ್ತಪ್ಪುಗೆ ತಾಗ್ಲೆ ಇಪ್ಪದು ತನಗಲ್ಲಾಳಿ. ಅದು ಹೋಗಿ ಈ ವರದಿಯ ಐತ್ತಪ್ಪು ಹತ್ರೆ ಬಿಕ್ಕದ್ದಿರ.ಅಂಬಗ ಅದು ನಾಟುದು ಆರಿಂಗೆ?  “ಬೆಳೂಲಿಂಗೆ ಬಡಿಯೆಕ್ಕು, ಬತ್ತಕ್ಕೆ ತಾಗೆಕ್ಕು” ಹೇಳಿದೊವು ಅಜ್ಜಂ. ರಜ ಹೊತ್ತಿಲ್ಲಿ ಒಳ ಬಂದ ಅಜ್ಜನತ್ರೆ ಎನ್ನ ಕುತೂಹಲ ಬಿಚ್ಚಿದೆ.

“ಅಜ್ಜ.., ಬೆಳೂಲಿಂಗೆ ಬಡುದರೆ ಬತ್ತಕ್ಕೆ ತಾಗುದು ಹೇಂಗೆ?”.

“ಅದುವೋ! ಬತ್ತದ ಕೊಯಿಲು ಮುಗುದು ಬತ್ತ ಬಡುದು ಜಾಲ ತಲೆಲಿ ಬೆಳೂಲ ಮುಟ್ಟೆ ಓಶುತ್ತವಲ್ಲೊ?ರಜ ದಿನ ಕಳುದು ಆ ಬೆಳೂಲಿನ ವಾಪಾಸು ಬಡಿತ್ತದು ನೋಡಿದ್ದಿಯೊ?ಅದರಲ್ಲಿ ಒಳುದ ಬತ್ತ ಸಿಕ್ಕುಗಿದ!.ಅದು ಸಿಕ್ಕೆಕ್ಕಾರೆ ಆ ಬೆಳೂಲಿಂಗೆ  ಕೊತ್ತಳಿಂಕೆ ತುಂಡಿಲ್ಲಿ ಬಡಿಯೆಕ್ಕು. ಅದಲ್ಲಿದ್ದ ಬತ್ತಕ್ಕೆ ತಾಗೆಕ್ಕು.ಆ ಬತ್ತ ಎರಡ್ನೇ ಕ್ಲಾಸ್ ಬತ್ತ.ಆ ಬತ್ತವ ರಜ ಮೆರುದು ದನಗೊಕ್ಕೆ ಮಡ್ಡಿ ಮಡಗಿ ಕೊಟ್ಟತ್ಕಂಡ್ರೆ ಬೇರೆ ಹಿಂಡಿ ಕೊಡೆಕೂದಿಲ್ಲೆ.ಒಳ್ಳೆ ಹಾಲು ಸಿಕ್ಕುಗು.”

ಅಜ್ಜ ಹೇಳಿಯಪ್ಪಗ ಎನ ನೆಂಪಾತು.  ಸುಮಾರು ಕೆಲಸದ ಹೆಣ್ಣುಗೊ ಜಾಲಿಲ್ಲಿ ಕೂದಂಡು ಬೆಳೂಲು ಹರಗಿ ಊರ ವರ್ತಮಾನ ಹೇದೊಂಡು ದಡಾ..ದಡ..ನೆ ಬೆಳೂಲು ಬಡಿವ ದೃಶ್ಯ ಕಣ್ಣಿಂಗೆ ಕಟ್ಟಿತ್ತಿದ.ವಾಹ್..,ಹೀಂಗಿದ್ದ ಜೀವನಾನುಭವದ ಮಾತುಗಳಲ್ಲಿ ಹಿಂದೆ ಹಳ್ಳಿಗಳಲ್ಲಿ ಬದುಕು ನೆಡೆಶಿಗೊಂಡಿದ್ದ ರೀತಿ-ರಿವಾಜೂ ಗೊಂತಾತು. ಅದರ ತಿರುಳೂ ಸಿಕ್ಕಿತ್ತು.

ಅಂತೂ ಈ ನುಡಿಗಟ್ಟಿನ ತಾತ್ಪರ್ಯ ಬಪ್ಪ ಹಾಂಗಿದ್ದ ಸಂಗತಿ; ರಾಜಕಾರಿಣಿಗಳಲ್ಲಿ, ಆಫೀಸುಗಳಲ್ಲಿ, ಮನೆ ಒಳ, ನಮ್ಮ-ನಿಮ್ಮೊಳ ಹೆಚ್ಚಿನ ಸಂದರ್ಭಲ್ಲಿ ನೆಡೆತ್ತು. ಆರಿಂಗೋ ನಾಟ್ಳೆ; ಆರನ್ನೋ ಮಾಧ್ಯಮ ಮಾಡಿಗೊಂಬದು!.

—–೦—–

8 thoughts on ““ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29}

  1. ಒಳ್ಳೆ ನುಡಿಗಟ್ಟು.

  2. ಪಾರಗೆ ಜೆಪ್ಪಿ ಪಳ್ಳಂದ ಎಮ್ಮೆ ಏಳುಸುತ್ತಾಂಗೆ.. ., ಶಾಮಣ್ಣನ ಮೀಸೆ ಸಬಿನುಸ್ಪೆಕ್ಟ್ರ ದಡಾರನೆ ಮೇಜಿಂಗೆ ಜೆಪ್ಪುತ್ತಾಂಗೆ ಆಯಿಕ್ಕಪ್ಪೋ ಇದುದೆ!!

    ವಿವರಿಸಿದ್ದು ಪಷ್ಟಾಯ್ದು ವಿಜಯತ್ತೆ. ಹರೇ ರಾಮ

  3. ಭಾಗ್ಯಲಕ್ಷ್ಮಿಗೆ ಬತ್ತದ ಕೃಷಿ ಚಿತ್ರಣ ಕಣ್ಣ ಮುಂದೆ ಬಂತು ಹೇಳುದು ಎನಗೆ ಅತ್ಯಂತ ಕುಶಿ ಕೊಟ್ಟತ್ತು. ಹಳೆ ಬೇರು ಒಳಿಯೆಕ್ಕು , ಇದರ ಬರದ್ದರ ಸಾರ್ಥಕತೆ ಬಂತೆನಗೆ ಧನ್ಯವಾದ ಈ ಸೊಸಗೆ .

  4. ಈ ಗಾದೆ ಮಾತಿನ ಆನು ಸುರು ಕೇಳುದು . ವಿಜಯತ್ತೆಯ ವಿವರಣೆ ಲಾಯಿಕಾಯಿದು . ಒಂದರಿ ಬತ್ತದ ಕೃಷಿಯ ಚಿತ್ರಣ (ಸಣ್ಣದಿಪ್ಪಗ ನೋಡಿದ್ದು) ಹೂಡುವಲ್ಲಿಂದ ಪತ್ತಾಯಕ್ಕೆ ಸೇರ್ಸುವಲ್ಲಿವರೆಗೆ ಕಣ್ಣ ಮುಂದೆ ಬಂತು .
    ಇದರ ಓದಿ ಮುಗಿಶಿಯಪ್ಪಗ ‘ಟು ಇನ್ ಒನ್ ‘ ಹೇಳುವಾಂಗೆ — ”ಹೇರದ್ದೊರು ಹೆತ್ತರೆ ಊರಿಡೀ ನಾತ ” ಹೇಳುವ ಗಾದೆ ಮಾತು ನೆನಪ್ಪಾತು . ವಿಜಯತ್ತೆ ಶೈಲಿಲೇ ವಿವರಣೆ ಚೆಂದ .

  5. ಅರ್ಥಗರ್ಭಿತ ನುಡಿಗಟ್ಟು. ತಾಗೆಕ್ಕಾದವಕ್ಕೆ ತಾಗೆಕ್ಕಾದ ಹಾಂಗೆ ಬೇರೆಯವರ ಮೂಲಕ ಎತ್ತುಸುವದು.
    ತಾನೂ ಹಾಂಗೆ ಮಾಡ್ಲಾಗ ಹೇಳ್ತ ಪಾಠವೂಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×