Oppanna.com

ಓಡು ಹುಳು ಗೊತ್ತಿದ್ದಾ ನಿಂಗೊಗೆ? -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಬರದೋರು :   ಶರ್ಮಪ್ಪಚ್ಚಿ    on   23/05/2020    1 ಒಪ್ಪಂಗೊ

ಬೈಲಿನ ಓದುಗರಿಂಗೆ ಹೊಸ ಲೇಖಕಿಯ ಪರಿಚಯ ಮಾಡುಸಲೆ   ಆನು ಇಷ್ಟಪಡ್ತೆ.
 ಸೀಮೆ ಬದಲಿದ ಹಾಂಗೆ ಹವ್ಯಕ ಭಾಷೆಲಿ ರಜ ರಜ ವ್ಯತ್ಯಾಸ ಇಪ್ಪದು ನವಗೆಲ್ಲಾ ಗೊಂತಿಪ್ಪದೇ.
ಈಗ ನಿಂಗೊಗೆ ಪರಿಚ ಮಾಡ್ಸುತ್ತಾ ಇಪ್ಪದು ಪಂಜಸೀಮೆಯ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಇವರ.
ಇವು ಓದಿದ್ದು ಎಣ್ಮೂರು ಹಿರಿಯ ಪ್ರಾಥಮಿಕ ಶಾಲೆ, ಬಾಳಿಲ‌ ವಿದ್ಯಾಭೋಧಿನಿ ಪ್ರಾಥಮಿಕ ಹಾಂಗೂ ಪ್ರೌಢ ಶಿಕ್ಷಣ ಶಾಲೆಗಳಲ್ಲಿ.
ಪಿಯುಸಿ, ಸಂತ ಫಿಲೋಮಿನ ಕಾಲೇಜು ಪುತ್ತೂರು ಮತ್ತೆ ಡಿಗ್ರಿ ಪತ್ರಿಕೋದ್ಯಮ ಉಜಿರೆ ಲ್ಲಿ. ಈಗ ಗೃಹಿಣಿಯಾಗಿ ಕೃಷಿ್ಯೇ ವೃತ್ತಿ. ಅಡಿಕೆ, ರಬ್ಬರ್, ತೆಂಗು , ಒಳ್ಳೆಮೆಣಸು  ಬೆಳೆಸುತ್ತವು.  ಇವಕ್ಕೆ ಹವ್ಯಕಲ್ಲಿ ಬರವದು ಇಷ್ಟ ಹೇಳ್ತವು.
ಕೀರಿಕ್ಕಾಡು ನಾರಾಯಣ ಭಟ್ ಮತ್ತೆ ಆರ್ ಗಾಯತ್ರಿ ಇವರ ಮಗಳಾದ ಇವು ಕೈ ಹಿಡುದ್ದದು  ಪಾಟಾಜೆ ಪಂಡಿತ ಗಣಪಯ್ಯ ಹಾಗೂ ಪಿ.ಜಿ. ಸಾವಿತ್ರಿ ದಂಪತಿಯ ಪುತ್ರರಾದ ಪಿ.ಜಿ ಕೃಷ್ಣ ಮೂರ್ತಿಯವರ.
ಮದುವೆಗೆ ಮೊದಲು ಇವು ಅಶ್ವಿನಿ ಕೀರಿಕ್ಕಾಡು ಹೇಳಿ ಅಂಕಣ ಬರಕ್ಕೊಂಡು ಇತ್ತಿದ್ದವು, ಈಗ ಅಶ್ವಿನಿ ಮೂರ್ತಿ ಅಯ್ಯನಕಟ್ಟೆ ಹೇಳಿ ಸುಳ್ಯ ನ್ಯೂಸ್ ವೆಬ್ಸೈಟಿಲ್ಲಿ ಒಂದು ವರ್ಷಂದ ಅಂಕಣ ಬರೆತ್ತಾ ಇದ್ದವು.
ಇವರ ಬರಹಂಗಳ ಓದಿ ಒಪ್ಪ ಕೊಟ್ಟು ಪ್ರೋತ್ಸಾಹ ಕೊಡುವೊ°. ಇವರಿಂದ ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಹವ್ಯಕ ಭಾಷೆಗೆ ಒದಗಲಿ ಹೇಳಿ ಹಾರೈಸುವೊ°
-ಶ್ರೀಕೃಷ್ಣ ಶರ್ಮ ಹಳೆಮನೆ
ಓಡು ಹುಳು ಗೊತ್ತಿದ್ದಾ ನಿಂಗೊಗೆ?
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಅಜ್ಜಿ ಮೈ ಎಲ್ಲಾ ಪರಡಿಕೊಂಡು  ಜಗಲಿಲ್ಲಿ ನಿಂದು ಕೊಂಡಿತ್ತು.  ಅಜ್ಜ ಒಳಂದ ಬಂದಪ್ಪಗ ಎಂತ ಪರಡುತ್ತೆ ಮಾರಾಯ್ತಿ ,  ಎರು ಹೊಗ್ಗಿದ್ದಾ ಹೇಂಗೆ ಹೇಳಿ ಕೇಳಿಯಪ್ಪಗ ಅಜ್ಜಿಯ ಪಿತ್ತ ನೆತ್ತಿಗೆ ಏರಿತ್ತು. ಎಲ್ಲಾ ನಿಂಗಳೇ ಮಾಡಿದ್ದು ಅಟ್ಟಲ್ಲಿ ಇಪ್ಪ ಬೈ ಹುಲ್ಲಿನ ಆನು ಕರುಬಿಡುವಾಗಲೇ ತೆಗವಲೇ ಆಳುಗಳ ಹತ್ರ ಎಂತಕೆ ಹೇಳಿದ್ದು? ಈಗ ನೋಡಿ ಎನ್ನ ತಲೆಂದ ಹಿಡದು ಕಾಲಿನವರೆಗೆ  ಓಡುಹುಳುಗೊ ಹತ್ತಿ ಕೂತಿದವು. ಇಡಿ ಮೈ ವಾಸನೆ ಬತ್ತಾ ಇದ್ದು. ಹಾಲಿಗೂ ಬಿದ್ತತ್ತೋ  ಏನೋ. ಎಲ್ಲಾ ಎನ್ನ ಕರ್ಮ ಹೇಳಿ ಪರೆಂಚಿಕೊಂಡು ಹೋದ ಹೆಂಡತಿಯನ್ನೇ ನೋಡಿ ಅಜ್ಜ   ಬಾಕಿ.  ಓಹ್ ಇದೊಂದು  ಬಾಕಿ ಇತ್ತು ಹೇಳಿ ಅಜ್ಜ ತೋಟಕ್ಕೆ ಹೋದವು.
ಮಕ್ಕೊಗೆ ರಜೆ ಇದ್ದು ಹೇಳಿ  ಊರಿಂಗೆ ಮಗ ಸೊಸೆ ಬಂದಿದವು. ಅಜ್ಜಿಗೆ ಎಲ್ಲದರಲ್ಲೂ ಉಮೇದು ಜಾಸ್ತಿ ಆಯಿದು. ಒಂದಾದ ಮೇಲೆ ಒಂದು ಕೆಲಸ ಮಾಡತಾ ಇದ್ದು. ಹೊತ್ತು ಹೋದ್ದೇ ಗೊತ್ತಾಯಿದಿಲ್ಲೆ.  ಅಷ್ಟರಲ್ಲಿ ‌ಪುಳ್ಳಿ ಬೊಬ್ಬೆ ಹೊಡಕೊಂಡು ಬಂದ. ಅಜ್ಜಿ ಆನು ಅಬ್ಬಿಲಿ ಮೀಯೆ.ಅಲ್ಲಿ ಇಡಿ‌ ಹುಳುಗೊ ಇದ್ದವು. ನೋಡುವಾಗಲೇ ಹೆದರಿಕೆ ಆವುತು. ಆನು ಅಪ್ಪನ ಹತ್ರ ಇಂದೇ ಬೆಂಗಳೂರಿಂಗೆ ಹೊರಡ್ಲೆ ಹೇಳ್ತೆ. ಎಡಿಯ ಅಜ್ಜಿ ಇಲ್ಲಿ , ಇದಾ ನೋಡು ತಲೆಗೆಲ್ಲಾ ಹತ್ತಿದ್ದು, ನೀನೆ ತೆಗೆ‌ ಹೇಳಿ ಕೂಗುವ ಪುಳ್ಳಿಯ ಕರೆಲಿ ಕೂರಿಸಿ‌  ಹಣಿಗೆಲ್ಲಿ ಬಾಚಿ ಬಾಚಿ ಹೇನು ತೆಗೆದ ಹಾಂಗೆ ತೆಗತ್ತು.
 ಓಹ್ ಎಂತರ ಮಾಡುದಪ್ಪಾ ಈ ಓಡುಹುಳುಗಳ? ಬೊಡುಸಿ ಮಡಗಿದವು ಎನ್ನ, ಹೇಳಿ  ಅಜ್ಜಿ ಬೇಜಾರು ಮಾಡಿಕೊಂಡತ್ತು.
ಹಳ್ಳಿಲಿ‌  ಮೀವಲೆ ಅಬ್ಬಿ ಲಾಯ್ಕ ಇಲ್ಲೆ ಆನು ಬತ್ತಿಲ್ಲೆ ಹೇಳಿ ಸೊಸೆ ಹೇಳ್ತು ಹೇಳಿ ಹೊಸ ನಮೂನೆಯದ್ದು ಕಟ್ಟಿ ಆತು, ಬೆಳಿ ಬೆಳಿ ಟೈಲ್ಸ್ ಹಾಕಿ ಆತು. ಎಂಗೊಗೆ ಪ್ರಾಯ ಆತನ್ನೆ . ಮೈ ಕೈಗೆಲ್ಲಾ ಎಣ್ಣೆ ಪಸೆ ಮಾಡೆಕ್ಕಾವುತು . ಗಂಟು‌ ಬೇನೆಗೆ ಒಳ್ಳೆದಾವುತು. ಎಣ್ಣೆ ಪಸೆ ಮಾಡಿ ಮೀವಲೆ ಕಲ್ಲು ಹಾಸಿದ ಹಳೆ ಅಬ್ಬಿಯೇ
ಪಸ್ಟು್.   ಮಕ್ಕೊ‌  ಹಾಂಗಾರು ಮನೆಗೆ ಬರಲಿ  ಹೇಳಿ ಹೊಸ ಅಬ್ಬಿ ಮಾಡಿದ್ದು, ಈ ಓಡು ಹುಳುವಿಂದಾಗಿ  ಮಕ್ಕೊ  ಇನ್ನೂ  ಮನೆಗೆ ಬಾರದ್ದರೆ ಎಂತರ ಮಾಡುದಪ್ಪಾ ಹೇಳಿ ಅಜ್ಜಿ ತಲೆಗೆ ಕೈ ಮಡುಗಿ ಕುಳಿತತ್ತು.
ಎಲ್ಲಿಂದ ಪ್ರತ್ಯಕ್ಷವಾದವಪ್ಪ ಈ ಓಡು ಹುಳುಗೊ,  ಎಂಗೊ ಸಣ್ಣಾದಿಪ್ಪಗ ಕುರುವಾಯಿ ಹೇಳಿ ದೊಡ್ಡದೊಂದು ಬತ್ತಿತ್ತು, ಅದು ತೆಂಗಿನಮರ ಹಾಳು ಮಾಡಿತ್ತು ಹೇಳಿ ಕಂಡ ಹಾಂಗೆ ಕೊಲ್ಲುತ್ತಿದ್ದೆಯ, ಅವು ಯಾವಾಗಾದರೊಂದರಿ ಬತ್ತಿದ್ದವಷ್ಟೆ.  ಹೀಂಗೆ ರಾಶಿ ರಾಶಿ ಬಪ್ಪ  ಹುಳುಗಳ ನೋಡಿರೆ ಹೆದರಿಕೆಯೂ ಅವುತು, ಹೇಸಿಗೆಯೂ ಆವುತು.  ಉಡುಗಿ  ಉಡುಗಿ  ಕಿಚ್ಚಿಂಗೆ ಹಾಕಿರೂ ಮತ್ತೆ ಮತ್ತೆ ಬಪ್ಪ ಹುಳುಗೊ ಈಗದ ರಕ್ಕಸರ ಹಾಂಗೆ ಕಾಣ್ತು.   ಹಗಲು ಕಣ್ಣಿಂಗೆ ಕಾಣವು,  ಬೈಸಾರಿ ೬ ಗಂಟೆ ಅಪ್ಪದೇ ಸರಿ ಸುರುಸುರು ಹೇಳಿ ಮನೆ ಒಳಂಗೇ ಬಪ್ಪಲೆ ಸುರು ಮಾಡತ್ತವು. ಅವಕ್ಕೆ ಆರು‌ಗಂಟೆ ಹೇಳ್ತವೋ ಅರಡಿತ್ತಿಲ್ಲೆ.
ಹಟ್ಟಿಲಿ ಬೈ ಹುಲ್ಲು ಇಡೀ ಹತ್ತಿ ಕೂತಿದವು. ದನ ಈ ಬೈ ಹುಲ್ಲಿನ ಮೂಸಿಯೂ ನೋಡ್ತಿಲ್ಲೆ ವಾಸನೆ ಬತ್ತು ಹೇಳಿ . ಹಸಕ್ಕು ಹಸಕು ವಾಸನೆ. ಮಳೆಗಾಲಕ್ಕೆ ಬೇಕು ಹೇಳಿ ಕಂತೆ, ಕಂತೆ ತೆಕ್ಕೊಂಡದರ ಎಂತರ ಮಾಡುದು. ಮಳೆಗಾಲ ಲ್ಲಿ ಹುಲ್ಲು ತಪ್ಪಲೂ ಎಡಿಯ.  ಅವು ನಮಗೆ ದನ ಬೇಡ , ಸಾಂಕುಲೆ  ಎಡಿಯಾ ಹೇಳಿದವು. ಆನೇ ಇರಲಿ ಮಕ್ಕೊ ಬಪ್ಪಗ ಹಾಲು, ತುಪ್ಪ ಎಲ್ಲಾ ಮನೆಯದೇ ಇದ್ದರೆ ಲಾಯ್ಕ, ಹಟ್ಟಿಗೊಂದು ದನ ಬೇಕೇ ಬೇಕು ಹೇಳಿ ಹಠ ಮಾಡಿದ್ದು. ಇನ್ನೆಂತರ ಗತಿ ಹೇಳಿ ಅಜ್ಜಿಗೆ ಒರಗಿರೆ ನಿದ್ದೆ ಯೂ ಬತ್ತಿಲ್ಲೆ. ಒಟ್ಟಾರೆ ಈ ಓಡು ಹುಳುಗೊ ಎಲ್ಲವ ಹಾಳು ಮಾಡಿದವು.
ಕಣ್ಣಿಂಗೆ ನಿದ್ದೆ ಹತ್ತಿತ್ತು ಹೇಳುವಾಗ ಮೈ ಮೇಲೆ ಎಂತದೋ ಹರದ ಹಾಂಗಾತು. ಅಲ್ಲಿಗೆ ಕುಡುಗಿ ತಿರುಗಿ ಮನಗಿರೆ ಕೆಮಿಯೊಳ ಎಂತದೋ ಹೋದ ಹಾಂಗಾತು . ಎಂತಪ್ಪಾ ಹೇಳಿ ಟಾರ್ಚ್ ಹಾಕಿ ನೋಡಿರೆ ಇಡೀ ಮೈಲಿ , ಹಾಸಿಗೆಲಿ , ಗೋಡೆಲಿ ಓಡುಹುಳುಗೊ ಹರಿತ್ತಾ ಇದ್ದವು. ಹೆದರಿ ಬೊಬ್ಬೆ ಹೊಡದ ಅಜ್ಜಿಯ ಸ್ವರ ಕೇಳಿ ಅಜ್ಜ ಓಡಿ ಬಂದು ಲೈಟ್ ಹಾಕಿಯಪ್ಪಗ ನಡುಗಿಕೊಂಡಿಪ್ಪ ಅಜ್ಜಿ ಕಂಡತ್ತು. ಇಡೀ ಕೋಣೆಯ ಬಿಟ್ಟ ಕಣ್ಣಿಂದ  ನೋಡುವ ಅಜ್ಜಿಯ ಕಂಡು ,ಎಂತ ಮಾರಾಯ್ತಿ ಕನಸಿಲಿದೇ ಓಡು ಹುಳುಗೊ ಬಂದವಾ ಹೇಳಿ  ಕೇಳಿಯಪ್ಪಗಾ ಅಜ್ಜಿ ನಾಚಿತ್ತು.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ವಿಳಾಸ
ಅಶ್ವಿನಿ ಕೆ .ಎನ್
ಶಾರದಾ ನಿಲಯ
ಬಾಳಿಲ
ಸುಳ್ಯ ತಾಲ್ಲೂಕು
೫೭೪೨೧೨
94499 13840
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಓಡು ಹುಳು ಗೊತ್ತಿದ್ದಾ ನಿಂಗೊಗೆ? -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

  1. ಕತೆ ಒಳ್ಳೆ ಕುತೂಹಲ ಹುಟ್ಡುಸಿತ್ತು. ನಿಜ ವಿಷಯ ಗೊಂತಾಗಿಯಪ್ಪಗ ನೆಗೆ ಬಂತು. ಅಪ್ಪು ಕೆಲವೊಂದರಿ ಹೀಂಗೆ ಅಪ್ಪದಿದ್ದು. ಲಾಯಕಿತ್ತು ಓಡು ಹುಳ. ಅಶ್ವಿನಿ ಅಕ್ಕನ ಶುದ್ದಿಗೊ ಬೈಲಿಂಗೆ ಬತ್ತಾ ಇರಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×