Oppanna.com

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 4

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   26/09/2019    0 ಒಪ್ಪಂಗೊ

ಪರಯಿ ಪೆಟ್ಟ ಪಂದಿರುಕುಲಂ
{ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 4

ವರರುಚಿ ದಂಪತಿಗಳ  ಹನ್ನೊಂದು ಮಕ್ಕಳೂ ಬೇರೆ ಬೇರೆ ದಿಕೆ ಇದ್ದರೂ ರೆಜ ದೊಡ್ಡಪ್ಪಗ ಅವಕ್ಕೆಲ್ಲ ‘ ನಾವೆಲ್ಲ ಒಂದೇ ಅಬ್ಬೆಪ್ಪನ ಮಕ್ಕೊ’ ಹೇಳಿ ಗೊಂತಾತು. ವರರುಚಿಯ ಕಾಲಾ ನಂತರ ಅಬ್ಬೆಪ್ಪನ ಶ್ರಾದ್ಧ ಮಾಡ್ಲೆ ಬೇಕಾಗಿ ಎಲ್ಲೋರು ದೊಡ್ಡ ಮಗ ಅಗ್ನಿಹೋತ್ರಿಯ ಮನೆಲಿ ಸೇರುದು ಹೇಳಿಯೂ ಮಾತಾಡ್ಯೊಂಡವು.
“ಬೇರೆ ಬೇರೆ ಜಾತಿಯವು ಬಂದು ತಿಥಿ ಮಾಡ್ಲೆ ಸೇರ್ತರೆ ಎಂಗೊ ತಿಥಿ ಮಾಡ್ಸಲೆ ಬತ್ತಿಲ್ಲೆ” ಹೇಳಿದವು ಪುರೋಹಿತರು.
“ಮನೆ ಒಳಾಂಗೆ ಬಪ್ಪಲಾಗದ್ದ ಜಾತಿಯವೆಲ್ಲ ನಿಂಗಳ ತಮ್ಮಂದ್ರು ಹೇಳಿಂಡು ಇಲ್ಲಿಗೆ ಬಂದು ತಿಥಿ ಮಾಡ್ತರೆ ಎನಗೆ ಅಡಿಗೆ ಮಾಡ್ಲೆಡಿಯ. ತಿಥಿ ಎಲ್ಲ ತುಂಬಾ ಶುದ್ದಲ್ಲಿ ಆಯೆಕಾದ್ದು. ಅವ್ವೆಲ್ಲ ಇಲ್ಲಿ ಬಂದು ತಿಥಿ ಮಾಡ್ಲಕ್ಕಾರೆ ಮತ್ತೆಂತರ ಶುದ್ಧ? ” ಅಗ್ನಿಹೋತ್ರಿಯ ಹೆಂಡತಿಗೂ ಈ ವಿಶಯಲ್ಲಿ ಗೆಂಡನತ್ರೆ ಅಸಮಾಧಾನ ಆತು.
ಅಗ್ನಿಹೋತ್ರಿ ಹೇಳಿದ,° “ನಿಂಗೊಗೆಲ್ಲ ಅವರ ಗೊಂತಿಲ್ಲೆ,ಇರುಳಪ್ಪಗ ಎನ್ನೊಟ್ಟಿಂಗೆ ಬನ್ನೀ, ಆನು ತೋರ್ಸುತ್ತೆ” ಹೇಳಿ ಪುರೋಹಿತರನ್ನೂ,ಹೆಂಡತಿಯನ್ನೂ ಕರಕ್ಕೊಂಡು ಮನೆಂದ ಹೆರ ಬಂದ°.
ತಿಥಿ ದಿನ ಅಲ್ಲದ್ದೆ ಬಾಕಿ ಒಳುದ ದಿನಂಗಳಲ್ಲಿ ತಮ್ಮಂದ್ರಾರೂ ಮನೆಯೊಳಾಂಗೆ ಬಪ್ಪಲಿಲ್ಲೆ. ಅದಕ್ಕೆ ಬೇಕಾಗಿ ಅವು ಬಂದಿಪ್ಪಗ ನಿಂಬಲೆ ಅಗ್ನಿಹೋತ್ರಿ ಮನೆಯ ಹೆರಾಣ ಹೊಡೆಲಿ ಹತ್ತು ಸಣ್ಣ ಸಣ್ಣ ಕೊಟ್ಟಗೆ ಕಟ್ಸಿದ್ದ°. ನೆಡು ಇರುಳಪ್ಪಗ ಅವು ಎಲ್ಲೋರು ಆ ಕೊಟ್ಟಗೆ ಹತ್ರಂಗೆ ಬಂದವು. ಒಂದು ಕೊಟ್ಟಗೆಯ ಜೆಗುಲಿಗೆ ಹತ್ತಿಯಪ್ಪಗ
“ಈಗ ನಿಂಗೊ ಎನ್ನ ಮುಟ್ಯೊಂಡು ಕೊಟ್ಟಗೆಯ ಒಳಾಂಗೆ ನೋಡಿ” ಹೇಳಿದ°. ಅಗ್ನಿಹೋತ್ರಿಯ ಹೆಂಡತಿಯೂ,ಪುರೋಹಿತರೂ ಹಾಂಗೇ ಮಾಡಿದವು.
ಅಷ್ಟಪ್ಪಗ ಅವಕ್ಕೆ ಅಲ್ಲಿ ಶಂಖ,ಚಕ್ರ ಎಲ್ಲ ಹಿಡ್ಕೊಂಡು ಚತುರ್ಭುಜ ಸಮೇತನಾದ ಮಹಾವಿಷ್ಣು ಮನುಗಿದ ಹಾಂಗೆ ಕಂಡತ್ತಾಡ. ಅವನ ಮೈಂದ ಹೆರ ಬಪ್ಪ ಬೆಣಚ್ಚು ಕಂಡು ಅವಕ್ಕೆ ಆಶ್ಚರ್ಯ ಆಗಿ ಬಾಯಿಂದ ಮಾತೇ ಹೆರಟಿದಿಲ್ಲೆ .ಪ್ರತಿಯೊಂದು ಕೊಟ್ಟಗೆಲೂ ಇದೇ ಅನುಭವ.
ಬೇರೆ ಬೇರೆ ಜಾತಿ ಹೇಳಿ ವೆತ್ಯಾಸ ಇದ್ದರೂ ಇವೆಲ್ಲ ಯೇವದೋ ಕಾರಣಕ್ಕೆ ಭೂಮಿಲಿ ಹುಟ್ಟಿದ ದಿವ್ಯ ಪುರುಷರು ಹೇಳಿ ಅಗ್ನಿಹೋತ್ರಿಯ ಹೆಂಡತಿಗೂ,ಪುರೋಹಿತರಿಂಗೂ ಗೊಂತಾದ ಕಾರಣ ಅವು ತಿಥಿ ಒಟ್ಟಿಂಗೆ ಮಾಡುಗ ಆಕ್ಷೇಪ ಹೇಳಿದ್ದವಿಲ್ಲೆ.
ಅಂದರೂ ಅಗ್ನಿಹೋತ್ರಿಯ ಹೆಂಡತಿಗೆ ಅಡಿಗೆ ಮಾಡ್ಲೆ ಸಮ ಆಗಿಂಡಿದ್ದತ್ತಿಲ್ಲೆ. ಕಾರಣ ಬೇರೆಂತದೂ ಅಲ್ಲ, ಅವು ಹತ್ತು ಜೆನ ಬಪ್ಪಗಳೂ ತಿಥಿಗೆ ಅಡಿಗೆ ಮಾಡ್ಲಿಪ್ಪ ಒಂದೊಂದು ವಿಶೇಶವಾದ ಸಾಮಾನು ತಕ್ಕು. ಅವು ತಂದ ಸಾಮಾನು/ ನೆಟ್ಟಿಕಾಯಿ ಹಾಕಿ ಹತ್ತು ಪ್ರತಿ ಅಡಿಗೆಯೂ ಆಯೆಕು.
ಆದರೆ ಅವರಲ್ಲಿ ಪಾಕ್ಕನಾರ್ ” ಹೇಳುವ ಮಗ° ಯೇವಗಲೂ ಮಾಂಸವನ್ನೇ ತಪ್ಪದು. ಮನೆ ಯೆಜಮಾಂತಿಗೆ ಅದರ ಅಡಿಗೆ ಮಾಡ್ಲೆ ಮನಸ್ಸೇ ಬಪ್ಪಲಿಲ್ಲೆ.
ಆದರೂ ಮದಲೇ ಗೆಂಡ°
“ಅವು ತಂದದರ ಮಾಡಿ ಹಾಕೆಕು,ಎಡೇಲಿ ಚೋದ್ಯ ಬೇಡ” ಹೇಳಿ ಹೇಳಿದ ಕಾರಣ ಮನಸ್ಸಿಲ್ಲದ್ದ ಮನಸ್ಸಿಲ್ಲಿ ಅದು ಅಡಿಗೆ ಮಾಡಿ ಬಳ್ಸುದು. ಪುರೋಹಿತರುದೆ “ಇದೇಕೆ ಹೀಂಗೆ?” ಹೇಳಿ ಕೇಳದ್ದೆ ಉಂಡಿಕ್ಕಿ ಹೋಕು. ಹಾಂಗಾಗಿ ಅದಕ್ಕೆ ಈ ಒಂದು ಸಮಸ್ಯೆಯ ಆರತ್ರೂ ಹೇಳ್ಲೆಡಿಯದ್ದ ಹಾಂಗಾತು.
ಒಂದು ಸರ್ತಿಯಾಣ ತಿಥಿಗೆ ಪಾಕ್ಕನಾರ್ ಬಪ್ಪಗ ದನದ ಕೆಚ್ಚಲಿನ ಕೊಯ್ದು ಒಂದು ಎಲೆಲಿ ಸುಂದಿ ತಂದ°. ಇದರ ಕಂಡು ಆ ಹೆಮ್ಮಕ್ಕೊಗೆ ತಡವಲೇ ಎಡ್ತಿದಿಲ್ಲೆ.
“ಶ್ಶೋ..ಗೋಮಾತೆಯ ಕೆಚ್ಚಲನ್ನೇ ತೆಕ್ಕೊಂಡು ಬಂದು ಅಡಿಗೆ ಮಾಡಿ ಕೊಡೆಕು ಹೇಳಿರೆ ಆನೆಂತ ಮಾಡುದು? ದನವ ಗೋಮಾತೆ ಹೇಳಿ ಪೂಜೆ ಮಾಡುವ ನಾವು ಅದರ ಕೆಚ್ಚಲಿನ ಅಡಿಗೆ ಮಾಡಿ ಬಟ್ಟಕ್ಕೊಗೆ ಬಳ್ಸುದಾ? ಎನಗೆ ಎಂತಾದರೂ ಇದರ ಅಡಿಗೆ ಮಾಡಿ ಬಳ್ಸಲೆ ಎಡಿಯ” ಹೇಳಿ ಮನಸಿಲ್ಲಿ ಗ್ರೇಶಿಕ್ಕಿ  ಪಾಕ್ಕನಾರ್ ತಂದ ಆ ಸೊಪ್ಪಿಲ್ಲಿ ಸುಂದಿದ ದನದ ಕೆಚ್ಚಲಿನ ನಾಲ್ಕಂಕಣದ ಮನೆಯ ನಡು ಜಾಲಿನ ಕರೇಲಿ ಹೊಂಡ ಮಾಡಿ ಮುಚ್ಚಿತ್ತು.
ತಿಥಿಗೆ ಬಟ್ಟಕ್ಕೊಗೆ ಬಳ್ಸುವ ಹೊತ್ತಿಲ್ಲಿ ಯೇವಗಾಣಾಂಗೆ ಹತ್ತು ಬಗೆ ಇಲ್ಲೆ!!
ಪಾಕ್ಕನಾರ್ ಕೇಳಿದ°
“ಆನು ತಂದ ಸಾಮಾನಿನ ಅಡಿಗೆ ಮಾಡಿದಾಂಗೆ ಕಾಣ್ತಿಲ್ಲೆ. ಎಂತಾತು? ಎಂತಕೆ ಮಾಡದ್ದದು?”
ಅಗ್ನಿಹೋತ್ರಿ ಹೆಂಡತಿಯ ಮೋರೆ ನೋಡಿದ°
“ಏಕೆ ಮಾಡಿದ್ದಿಲ್ಲೆ, ಅವ° ತಂದದರ ಅಡಿಗೆ ಮಾಡದ್ದೆ ತೆಗದು ಮಡುಗಿದ್ದೆಂತಕೆ?”
ಆ ಸಾಧ್ವಿ ಹೆಮ್ಮಕ್ಕೊಗೆ ಕಣ್ಣಿಲ್ಲಿ ನೀರೇ ಬಂತು
“ಗೋಮಾತೆಯ ಕೆಚ್ಚಲು ತಂದು ಅಡಿಗೆ ಮಾಡ್ಲೆ ಕೊಟ್ಟರೆ ಆನು ಹೇಂಗೆ ಅಡಿಗೆ ಮಾಡುದು?ಎನ್ನಂದ ಅದು ಖಂಡಿತ ಎಡಿಯ” ಹೇಳಿ ಗೆಂಡನತ್ರೆ ಹೇಳಿತ್ತು.
“ಅಂಬಗ ಅದೆಲ್ಲಿದ್ದು? ಎಂತ ಮಾಡಿದೆ?” ಕೇಳಿದ°.
“ಅದರ ಮಣ್ಣಿಲ್ಲಿ ಹುಗುದು ಹಾಕಿದ್ದೆ,ಎನಗದರ ನೋಡ್ಲೆ ಸಾನೂ ಎಡಿಯದ್ದೆ ಹಾಂಗೆ ಮಾಡಿದ್ದಷ್ಟೆ” ಹೇಳಿತ್ತದು.
“ಅಂಬಗ ಈಗಲೇ ಅದರ ಹುಗುದು ಹಾಕಿದಲ್ಲಿಗೆ ಹೋಗಿ ನೋಡಿ” ಪಾಕ್ಕನಾರ್ ಹೇಳಿದ°.
ಅಂಬಗಳೇ ಅದು ನಡುಜಾಲಿಂಗೆ ಬಂದು ನೋಡುಗ ಆ ಜಾಗೆಲಿ ಒಂದು ಬಳ್ಳಿ ಹುಟ್ಟಿದ್ದು. ಸಣ್ಣ ಸಣ್ಣ ಸೊಪ್ಪಿಪ್ಪ ಆ ಬಳ್ಳಿಲಿ ದನ ಮಲೆಯ ಹಾಂಗಿದ್ದ ಸಣ್ಣ ಸಣ್ಣ ಕಾಯಿಗಳೂ ತುಂಬಾ ಇದ್ದತ್ತು.
ಅಗ್ನಿಹೋತ್ರಿಯ ಹೆಂಡತಿಗೆ ಅದರ ಕಂಡು ಆಶ್ಚರ್ಯ ಆತು. ಅದು ಅಂಬಗಳೇ ಒಳ ಹೋಗಿ ಗೆಂಡನತ್ರೆ ವಿಶಯ ಹೇಳಿತ್ತು.
“ಅದರ್ಲಿಪ್ಪ ಕಾಯಿಗಳ ಕೊಯ್ದು ಈಗಳೇ ತಾಳು ಮಾಡಿ ತನ್ನೀ, ಮತ್ತೆ ಬಟ್ಟಕ್ಕೊಗೆ ಬಳ್ಸಿರೆ ಸಾಕು” ಹೇಳಿದ° ಪಾಕ್ಕನಾರ್.
ಆ ಹೆಮ್ಮಕ್ಕೊಗೆ ಸಮದಾನ ಆತು. ಅಂಬಗಳೇ ಹೋಗಿ ಆ ಕಾಯಿಗಳ ಕೊಯ್ದು ತಾಳು ಮಾಡಿ ತಂದು ಬಳ್ಸಿತ್ತು.
ದನದ ಕೆಚ್ಚಲಿಂದ ಹುಟ್ಟಿದ ಬಳ್ಳಿಲಿ ಆದ ಕಾಯಿಯೇ ತೊಂಡೆಕಾಯಿ.(ಕೋವಲ್/ ಕೋವಯ್ಕ ಹೇಳ್ತವು ಇದರ ಮಲೆಯಾಳಲ್ಲಿ )
ಅಂದಿಂದ ಮತ್ತೆ ತೊಂಡೆಕಾಯಿಯ ಒಂದು ವ್ಯಂಜನ ಇಲ್ಲದ್ದೆ ತಿಥಿ ಮಾಡುವ ಕ್ರಮ ಇಲ್ಲೆ.
“ಕೋವಲುಂ ಕೋಳ್ಯಿಯುಂ ಉಳ್ಳಿಡತ್ತ್ ಬಲಿಯಿಡಣಮೆನ್ನಿಲ್ಲ” ಹೇಳಿ ಮಲೆಯಾಳಲ್ಲಿ ಒಂದು ಗಾದೆಯೇ ಇದ್ದು.
ತೊಂಡೆಚಪ್ಪರ(ತೊಂಡೆ ಬಳ್ಳಿ) ಮನೆಲಿದ್ದರೆ ಪಿತೃಗೊಕ್ಕೆ ಸಂತೋಶ ಆವ್ತಾಡ. ಹಾಂಗಾಗಿ ಆ ಮನೆಲಿ ತಿಥಿ ಮಾಡದ್ರೂ ಯಾವುದೇ ದೋಶ ಇಲ್ಲೇ, ಪಿತೃಗೊಕ್ಕೆ ಸಂತೃಪ್ತಿ ಆವ್ತು ಹೇಳಿ ಇದರ ಅರ್ಥ.
(ಹಾಂಗೇ ಆ ಗಾದೆಯ ಮುಂದಾಣ ಭಾಗ ಕೋಳಿಯಿಪ್ಪ ಮನೆಲೂ ಬಲಿ ಹಾಕೆಕಾದ ಅಗತ್ಯ ಇಲ್ಲೆ,ಕಾರಣ ಎಂತ ಹೇಳಿರೆ ಎಷ್ಟು ಶುದ್ಧ ಮಾಡಿರೂ ಕೋಳಿಗೊ ಬಲಿಬಾಳೆ ಮಡುಗುವಲ್ಲಿ ಅಶುದ್ಧ ಮಾಡದ್ದಿರವು)
ದನದ ಕೆಚ್ಚಲಿಂದ ಹುಟ್ಟಿದ ಕಾಯಿ ಆದ ಕಾರಣ ಕೇರಳಲ್ಲಿ ತೊಂಡೆಕಾಯಿಗೆ ನಿಷೇಧ. ಶುಭ ಕಾರ್ಯಂಗಳಲ್ಲಿ ತೊಂಡೆಕಾಯಿ ಉಪಯೋಗಿಸುವ ಕ್ರಮ ಇಲ್ಲೆ.

ಇನ್ನೂ ಇದ್ದು……

ಪ್ರಸನ್ನಾ ಚೆಕ್ಕೆಮನೆ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×