Oppanna.com

ಸ್ವಯಂವರ : ಕಾದಂಬರಿ – ಪ್ರಸನ್ನಾ ವಿ. ಚೆಕ್ಕೆಮನೆ

ಬರದೋರು :   ಗುರಿಕ್ಕಾರ°    on   27/05/2019    1 ಒಪ್ಪಂಗೊ

ನಮಸ್ಕಾರ

ಚೆಕ್ಕೆಮನೆ ಪ್ರಸನ್ನಕ್ಕನ ವಿನೂತನ ಕಾದಂಬರಿ – ಧಾರಾವಾಹಿ : “ಸ್ವಯಂವರ”

ನಮ್ಮ ಬೈಲಿನ ಅನುಭವೀ ಬರೆಹಗಾರ್ತಿಗಳಲ್ಲಿ ಒಬ್ಬರದಾದ ಚೆಕ್ಕೆಮನೆ ಪ್ರಸನ್ನಕ್ಕನ ಎಲ್ಲೋರಿಂಗೂ ಗುರ್ತ ಇಕ್ಕು.

ಶಾಲಗೆ ಹೋಪಗಳೇ ಕತೆ ಕವನಂಗಳ ಬರದು ಬಹುಮಾನ ಗಳಿಸಿದರೂ ಮದುವೆ ಕಳುದು ದಶಕದ ಅನಂತರ, 2010ರಲ್ಲಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಕತೆ ಬರವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪುನಃಪ್ರವೇಶ. ಬರದ ಮೊದಲ ಕತೆಗೇ ದ್ವಿತೀಯ ಬಹುಮಾನ ಬಂದದು ಬರವಣಿಗೆಲಿ ಉತ್ಸಾಹ ತುಂಬಿತ್ತು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ, ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ, ತಿರುವನಂತಪುರದ “ಸಂಸ್ಕೃತಂ” ಪ್ರತಿಷ್ಠಾನದ ಉದಯೋನ್ಮುಖ ಲೇಖಕರಿಂಗೆ ನೀಡುವ ಪುರಸ್ಕಾರ, ಇತ್ಯಾದಿ ಹಲವು ಪುರಸ್ಕಾರಂಗೊ ಇವರ ಪ್ರತಿಭೆಯ ಹುಡ್ಕಿಗೊಂಡು ಬಯಿಂದು.

2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮೂಲಕ ಮೊದಲ ಕವನಸಂಕಲನ ‘ಇನಿದನಿ’ ಬಿಡುಗಡೆ. 2015 ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಗಳಿಸುವ ಮೂಲಕ ಶ್ರೀಗುರುಗಳ ಅನುಗ್ರಹಂದ ಮರಳಿ ಸಾಹಿತ್ಯ ಕ್ಷೇತ್ರಲ್ಲಿ ಆಸಕ್ತಿ ವಹಿಸಿದ್ದು‌. ಕೇರಳ ಸರಕಾರದ ಎರಡನೇ ಕ್ಲಾಸಿನ ಕನ್ನಡ ಪಾಠ ಪುಸ್ತಕಲ್ಲಿ “ನನ್ನ ಕೃಷಿ” ಹೇಳುವ ಕವನ ಪಠ್ಯವಾಗಿ ಸೇರ್ಪಡೆ ಆಯಿದು.
ಕನ್ನಡದ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲೂ ಕತೆ,ಕವನ ಲೇಖನ ಪ್ರಕಟ ಆತು‌.
ಇಷ್ಟರವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆದ ಕನ್ನಡ ಕಥೆಗಳ ಸಂಕಲನ “ಮನದ ಮಲ್ಲಿಗೆ” ೨೦೧೮ರಲ್ಲಿ ಬಿಡುಗಡೆ ಆಯಿದು ‌.

ಇದುವರೆಗೆ ಕನ್ನಡ, ಹವ್ಯಕ, ಮಲೆಯಾಳಂ ಭಾಷೆಲಿ ಹಲವಾರು ಕತೆ,ಕವನ ಲೇಖನ ಬರದ್ದವು. ಹವ್ಯಕ ಲಘು ಬರಹಂಗೊ ಹತ್ತಾರು ಇದ್ದು..

ಇಷ್ಟರ ಒಟ್ಟಿಂಗೆಯೇ, ತುಂಬು ಕುಟುಂಬದ ಹಿರಿ ಸೊಸೆಯಾಗಿ ಜವಾಬ್ದಾರಿ ನಿರ್ವಹಿಸುತ್ತಾ ಇದ್ದವು. ಇವು ಚೆಕ್ಕೆಮನೆ ಶ್ರೀ ವೆಂಕಟಕೃಷ್ಣರ ಧರ್ಮಪತ್ನಿ.

ಸ್ವಯಂವರ – ಇದು ಇವರ ನೂತನ ಹವ್ಯಕ ಕಾದಂಬರಿ. ಇವರ ಬರೆಹಂಗಳ ಪ್ರೋತ್ಸಾಹಿಸಿ, ಈ ಕಾದಂಬರಿಯನ್ನೂ ಪ್ರೋತ್ಸಾಹಿಸಿ ಹರಸೆಕ್ಕೂದು ಕೋರಿಕೆ..

~

ಬೈಲಿನ ಪರವಾಗಿ
Admin@Oppanna.com

ಪ್ರಸನ್ನಕ್ಕನ ಕಾದಂಬರಿ “ಸ್ವಯಂವರ” – ಪ್ರತಿ ಸೋಮವಾರ ಧಾರಾವಾಹಿಯಾಗಿ ನಮ್ಮ ಮುಂದೆ.

ಎಲ್ಲೋರುದೇ ಪ್ರೋತ್ಸಾಹಿಸೇಕು ಹೇದು ನಮ್ಮ ಕೋರಿಕೆ.

 

Prasanna Chekkemane
ವಿಷು ಸ್ಪರ್ಧೆ ೨೦೧೯ ರಲ್ಲಿ ಪ್ರಶಸ್ತಿ ಭಾಜನರಾದ ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ – ಪ್ರಶಸ್ತಿ ಸ್ವೀಕಾರ

One thought on “ಸ್ವಯಂವರ : ಕಾದಂಬರಿ – ಪ್ರಸನ್ನಾ ವಿ. ಚೆಕ್ಕೆಮನೆ

  1. ಹವ್ಯಕ ಸಾರಸ್ವತ ಲೋಕಕ್ಕೆ ಇವರ ಹೆಚ್ಚೆಚ್ಚು ಕೃತಿಗೊ ಬರಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×