Oppanna.com

ಕಥೆ ಪ್ರಥಮ – ಮರಳಿ ಬದುಕಿಂಗೆ

ಬರದೋರು :   ಸಂಪಾದಕ°    on   04/07/2021    4 ಒಪ್ಪಂಗೊ

ರಜನಿ ಭಟ್ ಕಲ್ಮಡ್ಕ

ಚಾವಡಿಯ ಬಡಿವ ಗಡಿಯಾರ ಟಯಿಂ ಟಯಿಂ ಹೇಳಿ ಹತ್ತು ಬಡುದಪ್ಪಗ ರಾಮಣ್ಣ ಮನೆ ಒಳಂದಲೇ ಹೆಂಡತಿಯ ದೆನಿಗೇಳಿದವು “ಇದ ಮಿನಿಯ ಶಂಕರೀ… ಆನೊಂದರಿ ಪೇಟಗೆ ಹೋಗಿ ಬತ್ತೆ. ಕುಣಿಯ ಹೊಗೆಸೊಪ್ಪು ಮುಗುದ್ದು” ಹಲಸಿನ ಮರದ ಮೇಜಿನ ಡ್ರವರಿಂದ ನೂರು ರೂಪಾಯಿ ತೆಗದು ಚಡ್ಡಿಯ ಕಿಸಗೆ ಹಾಕಿದವು. ಅಂಗಿ ಕಿಸೆಲಿ ಹೆರಂದಲೇ ಕೈ ಆಡ್ಸಿ ಚಿಲ್ಲರೆ ಇದ್ದಾಳಿ ನೋಡಿಗೊಂಡು , ಅಂಗಿ ಗುಬ್ಬಿ ಹಾಕಿಗೊಂಡೆ ಹೆರ ಬಂದವು‌.

“ಅಪ್ಪ, ಬಪ್ಪಗ ಎಡಿಗಾರೆ ಚನಿಯಪ್ಪನ ಅಂಗಡಿಂದ ಸೌತೆಕಾಯಿ ಇದ್ದರೆ ತೆಕ್ಕೊಂಬಿರ. ಇಂದು ಬುಧವಾರ ಇದ. ತರಕಾರಿ ಬತ್ತು” ಪೇಟಗೆ ಹೆರಟ ಅಪ್ಪನತ್ರ ಹೆರ ದನವ ಒಳಮ್ಮೆ ಹಾಕುತ್ತಾ ಇದ್ದ ಹೇಮ ಹೇಳಿತ್ತು. ತರಕಾರಿ ನೆಟ್ಟದೂ ಈ ಸರ್ತಿ ಹುಳು ಹಿಡುದು ಆಗದ್ದ ಕಾರಣ ಆರಾದರು ಪೇಟಗೆ ಹೆರಟ್ರೆ ಹೀಂಗೆ ಕೈಲಿ ಹಿಡ್ಕೊಳ್ಳಿ ಹೇಳುದು ಅದರ ಕೆಲಸ.

“ಅಕ್ಕು ಸಿಕ್ಕಿದರೆ ತೆಕ್ಕೊಳ್ತೆ ಆತೊ. ಇದರಾ, ಶಂಕರಿ ನಿನಗೆ ಬಿಪಿಮಾತ್ರೆ ಬೇಕಾ?” ಹೆಂಡತಿಯತ್ರ ಹೆರ ಮೆಟ್ಳು ಇಳಿತ್ತಾ ಕೇಳಿದವು.

“ಬೇಡ, ಕಳುದ ವಾರ ಅಳಿಯ ತಂದದು ನಿಂಗಳ ಮದ್ದುದೆವೊಟ್ಟಿಂಗೆ ಅಲ್ದ , ಮರೆತ್ತೇ ಹೋತ ನಿಂಗಗೆ” ಶಂಕರಿ ಅಕ್ಕ ಪಾತ್ರ ತೊಳದ ಕೈ ಸೆರಗಿಂಗೆ ಉದ್ದುತ್ತ ಹೆರ ಬಂದು ರಾಮಣ್ಣ ಹೆರಡುದನ್ನೇ ನೋಡಿಗೊಂಡಿತ್ತಿದ್ದವು.

“ಮರತ್ತು ಹೋಗಿದ್ದೆ ಇರ್ತರ… ವರ್ಷ ಎಷ್ಟು ಎನಗೆ..ನಲ್ವತ್ತಾ…ಎಪ್ಪತ್ತ ಐದು..ಎಷ್ಟು ? ಎಪ್ಪತ್ತೈದು..ನಿನಗೆ ಪ್ರಾಯ ಆಯಿದಿಲ್ಲೇಳಿ ಎನಗೆ ಆಯಿದಾತ.” ನೆಗೆ ಮಾಡಿಗೊಂಡೇ ಹೆರಟವು.

ಗೆಂಡನ ಮಾತಿಂಗೆ ಮೋರೆ ಹುಳಿ ಮಾಡಿಗೊಂಡವು ಶಂಕರಿ ಅಕ್ಕ. ರಾಮಣ್ಣ ಗೇಟು ದಾಂಟುದನ್ನೇ ನೋಡಿದ ಶಂಕರಿ ಅಕ್ಕ ಮಗಳತ್ರ ಹೇಳಿದವು “ನಿನ್ನ ಅಪ್ಪನ ಖುಷಿ ಕಾಂಬಗ ಈ ಸವಾರಿ ಬಾಯಾರಿನ ಜಾಗಗಾಳಿ”

“ಮತ್ತೆಂತರ? ಅಲ್ಲಿಗೇ ಹೋಪದು. ಇಡೀ ದಿನ ಮೌನ ಮುನಿಯ ಹಾಂಗಿಪ್ಪೋರು ಅಲ್ಲಿಗೆ ಹೆರಟ್ರೆ ಮಾತ್ರ ಕುಶಾಲು ಬಪ್ಪದು. ನವಗೆ ಗೊಂತಿಲ್ಲೇ ಹೇಳಿ ಗ್ರೇಶಿದ್ದವು‌. ಎನಗೆ ಗೊಂತಾದರೂ ಅಪ್ಪನ ಎದುರು ಆನು ಕೇಳುಲೆ ಹೋಯಿದಿಲ್ಲೆ” ಮೊಸರು ಕಡದು ಬೆಣ್ಣೆ ಎತ್ತುಲೆ ಹೆರಟತ್ತು ಹೇಮ.

ರಾಮಣ್ಣ ಪೇಟೆಂದ ಬಸ್ ಹಿಡುದು ವಿಟ್ಲಕ್ಕೆ ಬಂದವು. ಅಲ್ಲಿಂದ ಕೂಡ್ಲೇ ಅವಕ್ಕೆ ಬಾಯರ್ ನ ಬಸ್ ಸಿಕ್ಕಿತ್ತು. ಸೈಡ್ ಸೀಟ್ ಸಿಕ್ಕಿದ ಕಾರಣ ಆರಾಮಲ್ಲಿ ಕೂದು ಬಪ್ಪಲಾತು. ಬಾಯಾರಿನ ಬಸ್ ಸ್ಟಾಪ್ ಬಂದಪ್ಪಗ ಇಳುದವು. ಎರಡು ಕೈ ಹಿಂದಂಗೆ ಕಟ್ಟಿಗೊಂಡು ಅರ್ಧರ್ಧ ಡಾಮರ್ ಎದ್ದ ಮಾರ್ಗಲ್ಲಿ ನಡಕ್ಕೊಂಡಿಪ್ಪಗ ಎದುರಂದ ಅಂಗಾರ ಬಪ್ಪದು ಕಂಡತ್ತು‌

“ಅಣ್ಣೇರೆ, ನಿಂಗಳ ಜಾಗಗೆ ಹೆರಟದಾ?” ದೂರ ನಿಂದೊಂಡೆ ಕೇಳಿತ್ತು.

“ಅಂದ್ ಅಂಗಾರ..ಎನ್ನ ಆ ಜಾಗೆಲಿ ಮಾವಿನ ಮರಲ್ಲಿ ಹೂಗು ಹೋಯಿದು. ಈಗ ಮೆಡಿ ಅಪ್ಪಲಾತು. ಉಪ್ಪಿನ ಕಾಯಿಗೆ ಕೊಯಿಶೆಕ್ಕು. ಅಕ್ಕು ಮತ್ತೆ ಕಾಂಬ” ಹೇಳಿಗೊಂಡು ಬೇಗ ಬೇಗ ನಡವಲೆ ಸುರು ಮಾಡಿದವು.

ರಾಮಭಟ್ರಿಂಗೆ ಬಾಯಾರಿಂಗೆ ಹೋಪದು ಹೇಳಿದರೆ ಸಣಕಲು ಶರೀರಲ್ಲಿ ಜವ್ವನ ಬಂದಷ್ಟು ಖುಷಿ. ಎಷ್ಟಾದರೂ ಹುಟ್ಟಿದ ಊರು ಆರಿಂಗೆ ಇಷ್ಟ ಇರ್ತಿಲ್ಲೆ? ಪ್ರಾಯ ಎಪ್ಪತ್ತು ಅಪ್ಪಲ್ಲಿವರೆಗೆ ಒಂದು ದಿನವೂ ಅವು ಸೋಮಾರಿ ಆದೋರಲ್ಲ. ಕೆಲಸಲ್ಲಿ‌ ತುಂಬಾ‌ ಹುಮ್ಮಸ್ಸು. ಕೃಷಿಲಿ ಹೊಸತನವ ಪ್ರಯತ್ನ ಮಾಡಿಗೊಂಡೇ ಇದ್ದೋರು. ಎನಗೆ ಆ ರೋಗ ಇದ್ದು ಈ ರೋಗ ಇದ್ದು ಹೇಳಿಕ್ಕಿ ಅವರನ್ನೇ ಅವು ಮೂಲೆ ಪಾಲು ಮಾಡಿದೋರಲ್ಲ. ಮಾತನಾಡುವಗಳೂ ಭಯಂಕರ ಉತ್ಸಾಹದ ಚಿಲುಮೆ. ಅವಕ್ಕೆ ನಡವದು ಹೇಳಿರೆ ಆತು. ಅರ್ಧ ವ್ಯಾಯಾಮ ಇದರಲ್ಲೇ ಆವ್ತು ಹೇಳಿ ಅವರ ಆರೋಗ್ಯದ ಗುಟ್ಟು ಹೇಳುವೋರು ಅವು‌! ಅದು ಜಾಗೆ ಮಾರುವಲ್ಲಿವರೆಗೆ ಇದ್ದತ್ತು.

ರಾಮ ಭಟ್ಟ ಶಂಕರಿ ಅಕ್ಕಂದು ಒಳ್ಳೆ ಕುಟುಂಬ. ಅವಕ್ಕೆ ಪಿತ್ರಾರ್ಜಿತವಾಗಿ ಬಂದ ಹತ್ತು ಎಕ್ರೆ ಆಸ್ತಿ ಇತ್ತು. ಅವರ ಅಣ್ಣನುದೆ ಅವರ ಮನೆ ಹತ್ರವೇ ಕೃಷಿ ತೋಟ ಇಪ್ಪೋರು. ಅಣ್ಣ ತೀರಿಹೋದ ಮೇಲೆ ಅಣ್ಣನ ಮಗ ಕೃಷಿ ಮಾಡಿಗೊಂಡು ಬಯಿಂದ.

ರಾಮಣ್ಣಂಗೆ ತೋಟ ರಬ್ಬರ್ ಹೇಳಿ ಒಳ್ಳೆ ಕೃಷಿ ಇದ್ದು. ಮಧ್ಯಮ ವರ್ಗದ ಅವು ಇಪ್ಪ ಇಬ್ರು ಕೂಸುಗಳ ಕಲಿಸಿದ್ದು ಮದುವೆ ಮಾಡ್ಸಿದ್ದು ಶಂಕರಿ ಅಕ್ಕಂಗೆ ಚಿನ್ನ ಮಾಡ್ಸಿದ್ದು ಎಲ್ಲ ಕೃಷಿಂದ ಬಂದ ಆದಾಯಂದಲೇ‌. ಮಾಣಿಯಂಗ ಇರದ್ದ ರಾಮಣ್ಣನ ಮನೆಗೆ ಬಪ್ಪದೋಳಿರೆ ಅವರ ಅಕೆರಿಯಣ ಮಗಳು. ದೊಡ್ಡ ಮಗಳು ಸೀಮಾ ಪುಣೆಲಿಪ್ಪ ಕಾರಣ ಅಪ್ಪ ಅಮ್ಮನ ತಿಂಗಳಿಗೊಂದರಿ ಹೋಗಿ ಮಾತಾಡ್ಸೆಕ್ಕಾದರೆ ಹೇಮನೇ ಆಯೆಕ್ಕು.

ರಾಮಣ್ಣಂಗೆ ರಬ್ಬರ್ ಟ್ಯಾಪಿಂಗ್ ಮಾಡ್ವಗ ಎದೆ ಬೇನೆ ಬಂದದು ಬೆಡ್ ರೆಸ್ಟ್ ಬೇಕೋಳಿ ಆತು. ಅವರಿಬ್ರನ್ನೇ ಬಾಯಾರಿಲಿ ಬಿಡ್ಲೆ ಎಡಿಯಾಳಿ ಸಣ್ಣ ಮಗಳ ಮನಗೆ ಬಂದ ಶಂಕರಿ ಅಕ್ಕನುದೆ ರಾಮಣ್ಣನುದೆ ತಿಂಗಳುಗಟ್ಟೆ ಇರೆಕ್ಕಾಗಿ ಬಂತು. ಅವಗ ಜಾಗೆಯ ಲೀಸಿಂಗೆ ಕೊಟ್ಟವು. ಅದರಲ್ಲೂ ನಷ್ಟ ಬಂದಪ್ಪಗ ಮಕ್ಕಳುದೆ ಅಳಿಯಂದ್ರುದೆ ಜಾಗೆ ಮಾರುವಾಳಿ ಹೇಳಿದವು. ಎನಗೆ ಇನ್ನು ನೋಡ್ಲೆ ಎಡಿಯ ಹೇಳುದು ಮನಗಂಡ ರಾಮಣ್ಣ ಮಾತಾಡದ್ದೆ ಒಪ್ಪಿದವು. ಜಾಗೆ ಕೊಡುವಗ ಅಲ್ಲಿಯೇ ಇದ್ದ ಅರ್ಧ ಎಕ್ರೆ ಮಡುಗಿ ಕೊಡುವ ಹೇಳಿ ವಿನಂತಿ ಮಾಡಿ ಅಪ್ಪಗ” ಎಂತಕೆ ಕೊಡುವಗ ಎಲ್ಲವನ್ನೂ ಕೊಡುವ” ಅಳಿಯಂದ್ರು ಹೇಳಿದವು.
“ಎಂತ ಇಲ್ಲೆ ..ಎನಗೆ ಸತ್ತಪ್ಪಗ ಎನ್ನ ಕಾಷ್ಟಕ್ಕೆ ಎನ್ನದೇ ಜಾಗೆ ಬೇಡದ ” ಹೇಳಿ ಮಾತು ಭಾವನಾತ್ಮಕವಾಗಿ ಹೇಳಿಅಪ್ಪಗ ಮಕ್ಕ ಒಪ್ಪಿದವು. ಮಗಳ ಮನೆಲಿಪ್ಪಗ ಅವರ ಮೊದಲಣ ಉತ್ಸಾಹ ಕಮ್ಮಿ ಆತು. ಮೌನವಾಗಿಪ್ಪಲೆ ಅವು ಇಷ್ಟ ಪಟ್ಟವು‌ ವಾರಕ್ಕೆ ಒಂದರಿ ಪೇಟಗೆ ಹೋವ್ತೆ ಹೇಳುದು, ಬಪ್ಪದು ಮಾತ್ರ ಈ ಜಾಗಗೆ . ಆ ದಿನ ಮಾತ್ರ ರಾಮಣ್ಣ ಭಾರೀ ಚುರುಕು.

ರಾಮಣ್ಣ ರೋಡ್ ಲಿ ಮುಂದೆ ನಡದಪ್ಪಗ ಅವರ ಕೆಮಿಗೆ “ಟಕ್ ಟಕ್” ಹೇಳುವ ಶಬ್ದ ಕೇಳಿತ್ತು. “ಆರಪ್ಪಾ ಮರ ಕಡಿವದಿದು. ಅಲ್ಲ, ಈ ಜನಂಗ ಮಳೆ ಬತ್ತಿಲ್ಲೆ ಬತ್ತಿಲ್ಲೆ ಹೇಳ್ತವು. ಹಾಂಗೆ‌ ಹೇಳಿ‌ ಮರವುದೆ ಕಡಿಯೆಕ್ಕು. ಮರ ಕಡುದರೆ ಮಳೆ ಎಲ್ಲಿಂದ ಬರೆಕ್ಕು.ಎಂತ ಜನಗಂಳೋ.. ಆನೆಂತಕೆ ತಲೆಬಿಸಿ ಮಾಡೆಕ್ಕು. ಎನ್ನ ಮರ ಅಲ್ಲನ್ನೇ ” ಅವಕ್ಕೆ ಅವೇ ಹೇಳಿಗೊಂಡು ಮುಂದೆ ಹೋದವು.

“ಟಕ್ ಟಕ್.‌” ಈಗ ಶಬ್ದ ಹತ್ರಂದ ಕೇಳ್ತಾ ಇದ್ದು.

“ಅಯ್ಯೋ…ಇದು ಆ ತೋಟಂದಲೇ ಬತ್ತಾ ಇಪ್ಪ ಶಬ್ದ. ಆನು ಕೊಚ್ಚಿ ಕ್ರಿಶ್ಚಿಯನ್ ಗೆ ಮಾರಿದ ತೋಟ. ಅದರಲ್ಲಿ ಯಾವ ಮರ ಕಡಿತ್ತಾ ಇಪ್ಪದಪ್ಪಾ?”

ಅಷ್ಟೊತ್ತಿಂಗೆ ರಾಮಣ್ಣನ ಅಣ್ಣನ ಮಗ ಎದುರು ಸಿಕ್ಕಿದ “ಹಾ ಅಪ್ಪಚ್ಚಿ ಜಾಗೆ ನೋಡ್ಲಾ? ಮನಗೆ ಬತ್ತಿರಾ..?” ಅಪ್ಪಚ್ಚಿ ಹತ್ರ ಉಭಯಕುಶಲೋಪರಿ ಮಾತಾಡಿದ.

“ಅತು ಮಗಾ..ಆನು ಹೋಪಗ ಬತ್ತೆ ಆತ ಮಿನಿಯ! ಎನ್ನ ಜಾಗೆಲಿ ಮಾವಿನ ಮೆಡಿ ಬಿಟ್ಟಿದು. ಉಪ್ಪಿನಕಾಯಿಗೆ ಅಕ್ಕಿದ… ಅಲ್ಲ ಈ ಮರ ಕಡಿವ ಶಬ್ದ ಆನು ಮಾರಿದ ಜಾಗೆಂದಲಾ? ಯಾವ ಮರ ಕಡಿವದು ಅದು?”

“ಅಪ್ಪು… ಅದು ಜಂಬೂನೇರಳೆ ಮರ. ಕಳುದ ವರುಷವೇ ಆನು ಡಿಸೋಜನತ್ರ ಬಗೆತ್ತರ ಹೇಳಿತ್ತಿದ್ದೆ. ಆ ಮರ ಕಡಿಶು. ಅದರ ಅಡಿಲಿಪ್ಪ ಒಂದು ಅಡಕ್ಕೆ ಮರವುದೇ ಮೇಲೆ ಬತ್ತಿಲ್ಲೆ. ಇಷ್ಟು ಸಮಯ‌ ಬೇಕಾರು ಬೇಕೂಫಂಗೆ ಮರ ಕಡಿಶುಲೆ. ಅಕ್ಕು ಬತ್ತೆ ಅಪ್ಪಚ್ಚಿ.ಕೆಲಸ ಇದ್ದು. ಅಡಕ್ಕೆ ಕೊಡೆಕ್ಕು ಇಂದು” ತಾನು ಒಳ್ಳೆ ಕೆಲಸ ಮಾಡಿದೆ ಹೇಳಿ ಅವನನ್ನೇ ಹೊಗಳಿಕ್ಕಿ ಅಲ್ಲಿಂದ ಹೋದ. ಹೋಪಗ ಅಪ್ಪಚ್ಚಿಯ ಎರಡು ಮನಸ್ಸಿಲಿ ಪರೆಂಚಿದ” ಈ ಅಪ್ಪಚ್ಚಿಗೆ ಮರುಳು. ಎರಡೆರಡು ಬಸ್ ಹಿಡುದು ನೂರು ರೂಪಾಯಿ ಖರ್ಚು ಮಾಡಿ ಬಪ್ಪದು. ಇಲ್ಲೆಂತ ಗೆಂಟಿದ್ದ ಗರ್ಪುವಂತದ್ದೋಳಿ ಗ್ರೇಶೆಕ್ಕು, ಈ ಅರ್ಧ ಎಕ್ರೆಲಿಲಿ”

ಅವ ತಿರುಗೋಸಿಲಿ ಕಾಣೆ ಆದ್ದೇ ಅಲ್ಲಿಯೇ ಇದ್ದ ಮಾವಿನ ಮರದ ಬುಡಲ್ಲಿ ಕೂದವು ರಾಮಣ್ಣ. ಅಲ್ಲಿಗೆ ಅವಕ್ಕೆ ಜಂಬೂನೇರಳೆ ಮರದ ಕೊಡಿ ಕಾಣ್ತಿತು. ಅದರ ನೋಡಿ ಕಣ್ಣಿನ ತುದಿ ತೇವ ಆತು. “ಅಲ್ಲ ಇದೇ ಮಾಣಿ ಡಿಸೋಜಂಗೆ ಬುದ್ದಿ ಹೇಳಿದೋನು ಸಣ್ಣದಿಪ್ಪಗ ಅವನ ಅಮ್ಮ ಬಡಿವಲೆ ಬಪ್ಪಗ ಓಡಿ ಇದೇ ಜಂಬೂನೇರಳೆ ಮರದ ಕೊಡಿಲಿ ಕೂದು ಅಮ್ಮಂಗೆ ಕೊಂಞಂಣ ಕಟ್ಟಿ ಹಿಡಿನೋಡ ಎನ್ನ ಹೇಳಿದೋನು. ಮರದ ಕೊಡಿಗೆ ಹತ್ತಿಕ್ಕಿ ಮಂಗನ ಹಾಂಗೆ ಹಣ್ಣು ತಿಂದೋನು ಇವ ಅಲ್ದ. ಎಷ್ಟು ನೆನಪುಗ ಈ ಮರದೊಟ್ಟಿಂಗೆ. ಈಗ ಮರವ ಕಡಿವಲೇ ಬುದ್ಧಿ ಹೇಳ್ತ. ಮರಂಗಳೊಟ್ಟಿಂಗೆ ಮಾತಾಡಿದೋರು, ಭಾವನೆ ಮಡುಗಿದೋರು ಇದೆಲ್ಲ ಮಾಡವು”

“ಎನ್ನ ಕೊಲ್ಲುತ್ತಾ ಇದ್ದವು.” ರಾಮಣ್ಣನತ್ರ ಜಂಬೂನೇರಳೆ ಮರ ಕೂಗಿ ಹೇಳಿಗೊಂಡು ಇದ್ದಾಂಗೆ ಕಂಡತ್ತು. ಕುಡಾಣದ ಅಕ್ಕನ ಮನೆಯ ಹತ್ತರಣ ಮನೆಂದ ಕೈಯಾರೆ ತಂದು ಬಿತ್ತು ಹಾಕಿ ಮಾಡಿದ ಸೆಸಿ, ಮರ ಆದ್ದು. ರಾಮಣ್ಣಂಗೂ ಜಂಬೂನೇರಳೆ ಮರಕ್ಕು ಭಾರೀ ಸಂಬಂಧ. ಅವು ಮರಂಗಳನ್ನು ಮಾತಾಡ್ಸುವೋರು.” ಆನು ಎಂತ ಮಾಡಲಿ ಹೇಳು? ಕೆಳಾಣ ಕೆರೆಂದ ನಿನಗೆ ನೀರು ಹಾಕಿ ಬೆಳೆಸಿದ್ದು. ಆನು ಎನ್ನ ಕಣ್ಣಾರೆ ನೀನು ನೆಲಕ್ಕೆ ಬೀಳುದು ನೋಡೆಕ್ಕಾಗಿ ಬತ್ತಲ್ದ‌ ಅವಗ ತಡವಲೆ ಎಡಿತ್ತಿಲ್ಲೆ. ಆನು ಅಸಹಾಯಕ, ಎನ್ನ‌ಭೂಮಿ ಅಲ್ಲ ಇದು” ಸಂಕಟ ಪಟ್ಟವು ರಾಮಣ್ಣ.

ಅಖೇರಿಯಣ ಪೆಟ್ಟು ಬಿದ್ದತ್ತೋಳಿ ಅಪ್ಪಗ ಮರ ಬುಡ ಸಮೇತ ನೆಲಕ್ಕೆ ಬಿದ್ದತ್ತು. ಆ ಟಕ್ ಟಕ್ ಕೊಡಲಿ ಪೆಟ್ಟು ಮರಕ್ಕೆ ಬಿದ್ದದಲ್ಲ. ರಾಮಣ್ಣನ ಹೃದಯದ ಪ್ರತಿ ಬಡಿತವ ನಿಲ್ಸಿದ ಪೆಟ್ಟಾಗಿತ್ತು.

ರಾಮಣ್ಣ ಅಲ್ಲಿಂದ ಎದ್ದೋರು ಅವರ ಜಾಗೆಲಿಪ್ಪ ಮಾವಿನ ಮೆಡಿಯ ನೋಡ್ಲೆ ಹೋಗದ್ದೆ ಸೀದಾ ಮಗಳ ಮನಗೆ ಬಸ್ ಹತ್ತಿದವು.

“ಆನು ಡಿ’ಸೋಜಂಗೆ ಕೊಟ್ಟ ಜಾಗೆಲಿ ಇನ್ನುದೆ ಎಷ್ಟು ಮಾವು ಹಲಸೋಳಿ ಮರಂಗ ಇದ್ದು. ಹಾಂಗಿಪ್ಪಗ ಒಂದೊಂದು ಮರವುದೆ ಹೀಂಗೆ ನೆಲಕ್ಕೆ ಉರುಳುದು ಎನ್ನಂದ ನೋಡ್ಲೆ ಎಡಿಯ ಆನಿನ್ನು ಎನ್ನ ಜಾಗಗೆ ಹೋವ್ತಿಲ್ಲೆ‌” ಅವರ ಮನಸ್ಸು ಆ ನಿಶ್ಚಯವ ಗಟ್ಟಿ ಮಾಡಿತ್ತಿದ್ದು.

ಅಪ್ಪ ಬಂದಿಕ್ಕಿ ಸೀದಾ ಕೋಣೆಗೆ ಹೋದೋರು ಎಂತ ಮಾತಾಡ್ತಾವಿಲ್ಲೇಳಿ ಹೇಮ ಅಪ್ಪನತ್ರ ಬಂದು “ಎಂತಾತಪ್ಪ. ಬಾಯಾರಿಂಗೆ ಹೋದ್ರಾ?” ಕೇಳಿತ್ತು.

“ಅಪ್ಪು… ಅಲ್ಲಿ ಜಂಬೂನೇರಳೆ ಮರ ಕಡುದವು. ಎನಗೆ ನೋಡ್ಲೆ ಎಡಿಯದ್ದೆ ಬಂದೆ”ಬೇಜಾರಲ್ಲಿ ಹೇಳಿದವು.

“ಛೆ,ನಾವು ಜಾಗೆ ಮಾರುವಗ ಒಳ್ಳೊಳ್ಳೆಯ ಮರ ಕಡಿಶಿ ಮಾರೆಕಿತ್ತು. ಈಗ ಡಿಸೋಜಂಗೆ ಒಂದೊಂದು ಮರ ಮಾರಿರು ಎಷ್ಟು ಪೈಸೆ ಸಿಕ್ಕುಗು” ಹೇಮ ಅಸಮಾಧಾನಲ್ಲಿ ಹೇಳಿಗೊಂಡೇ ಹೆರ ಹೋತು. ಅದಕ್ಕೆ ಮರಕಡುದ್ದು ಅಷ್ಟು ಪೈಸೆ ಹೋತಲ್ಲಾಳಿ ಸಂಕಟ.

ರಜ ಹೊತ್ತು ಕಳುದಪ್ಪಗ ಅಟ್ಟುಂಬಳ ಇದ್ದ ಮಗಳತ್ರ ಬಂದು ರಾಮಣ್ಣ “ಇದಾ, ಇದು ಆನು ಬೇಕೋಳಿ ಮಡಗಿದ ಜಾಗೆ ದಾಖಲೆ ಪತ್ರಂಗ‌. ಅದರಲ್ಲಿ ಕೆಲವು ಮರಂಗ ಇದ್ದು ಅದರ ಕಡಿಶಿ ಅದರ ಮಾರುವ ವ್ಯವಸ್ಥೆ ಮಾಡಿ. ಎನಗೆ ಮರ ಕಡಿವದರ ನೋಡ್ಲೆ ಎಡಿತ್ತಿಲ್ಲೆ. ಹಾಂಗಾಗಿ ಆ ಭಾಗಕ್ಕುದೆ ಹೋಪಲೂ ಇಲ್ಲೆ. ಹೇಡಿಗಳ ಹಾಂಗೆ ಒಳವೇ ಕೂರ್ತೆ. ಅಲ್ಲದ್ರು ಎನಗೆ ಆ ಜಾಗೆ ಎಂತಕೆ. ಸತ್ತಮೇಲೆ ಸಾರ್ವಜನಿಕ ಸ್ಮಶಾನ ಆದರೂ ಎಂತ? ಸುಟ್ಟರಾತಿಲ್ಲೆಯ” ಹಾಂಗೆ ಹೇಳಿಕ್ಕಿ ಕೋಣಗೆ ಹೋಗಿ ಮನಿಕೊಡ್ಡಂವು.

“ಅಯ್ಯೋ! ಅಪ್ಪಂಗೆ ಆನು ಹೇಳಿದ್ದು ಬೇಜಾರಾತಾ? ಪಾಪ. ಛೆ, ಆನು ಆ ಸಮಯಲ್ಲಿ ಎಂತಕೆ ಮರಕಡಿಶಿ ಜಾಗೆ ಮಾರೆಕ್ಕಿತ್ತು ಹೇಳಿದೆನೋ” ಭಾರೀ ವ್ಯಥೆ ಮಾಡಿತ್ತು‌ ಹೇಮ.

ರಾಮಣ್ಣನ ಮನಸ್ಸು ಮಾತ್ರ ದಿನವೂ ಕೂಗಿಗೊಂಡೇ ಇತ್ತು.

****
ಎರಡು ಮೂರು ವಾರ ಕಳುದಿಕ್ಕು. ಮನೆ ಒಳವೇ ಇದ್ದ ರಾಮಣ್ಣಂಗೆ ಎಂತ ಆತೋ ಮಗಳ ದೆನಿಗೇಳಿದವು.

“ಆರು ಮಗಳೋ‌‌‌ … ಎನ್ನ ಜಾಗಗೆ ಗಿರಾಕಿ ಇದ್ದು ಹೇಳಿದ ಹಾಂಗಾತು ನೀನು” ರಾಮಣ್ಣ ಕನಸು ಕಂಡೋರ ಹಾಂಗೆ ಕೇಳಿಗೊಂಡು ಬಂದು ಮೆಟ್ಟು ಹಾಕಿ ಹೆರ ಹೆರಟವು.

“ಆನು ಆರನ್ನೂ ಹೇಳಿದಿಲ್ಲೆ ಅಪ್ಪ. ಕನಸು ಕಟ್ಟಿತ್ತಾಳೀ ಈ ಅಪ್ಪಂಗೆ” ಹೇಮ ದನಕ್ಕೆ ಹಿಂಡಿ ಕೊಡ್ಲೆ ತಯಾರು ಮಾಡ್ತಾ ಇತ್ತು. “ಅಪ್ಪಾ° ನಿಂಗ ಈಗ ದೂರ ಹೆರಟದು?”

“ಅದುವಾ… ಎನಗೊಂದರಿ ಬಾಯಾರಿಂಗೆ ಹೋಗಿ ಎನ್ನ ಜಾಗೆಯ ನೋಡಿ ಬರೆಕ್ಕು” ಈ ಸರ್ತಿ ಲೊಟ್ಟೆ ಹೇಳದ್ದೆ ಹೆರಟದು ಮಗಳಿಂಗುದೆ ಹೆಂಡತಿ ಶಂಕರಿ ಅಕ್ಕಂಗುದೆ ಆಶ್ಚರ್ಯ ತಂದಿತ್ತು.

ರಾಮಣ್ಣ ಅವರ ಜಾಗೆ ಹತ್ರ ಬಪ್ಪಗ ಅವಕ್ಕೆ ಆಶ್ಚರ್ಯ ಕಾದಿತ್ತಿದ್ದು. ಅವರ ಜಾಗೆಲಿ ಕೆಲವು ಸೆಸಿಗಳ ಆರೋ ನೆಟ್ಟಿದವು. ಅದರಲ್ಲಿ ಹಲಸು ಮಾವು ಜಂಬೂನೇರಳೆ ಹುಳಿ ಮಾಗುವಾನಿ ಎಲ್ಲ ಇದ್ದತ್ತು. ಬುಡಲ್ಲಿ ನೀರ ಪಸೆ ಇದ್ದತ್ತು. ಅದಕ್ಕೆಲ್ಲ ಆರೋ ನೀರು ಹಾಕಿದ ಹಾಂಗಿತ್ತು. ಆರೋಳಿ ಸುತ್ತಲೂ ನೋಡುವಗ ಅವರ ಮನಗೆ ಮೊದಲು ಕೆಲಸಕ್ಕೆ ಬಂದುಗೊಂಡಿದ್ದ ನಾರಾಯಣನ ಕಂಡತ್ತು.ಆಶ್ಚರ್ಯವುದೆ ಆತು..ಇದೆಕ್ಕೆ ಆರು ಹೇಳಿದ್ದು ಎನ್ನ ಜಾಗೆಲಿ ನೆಡ್ಲೆ! ರಾಮಣ್ಣ ಜವ್ವನಿಗರಾದವೀಗ. ಸುತ್ತಿದ್ದ ಮುಂಡಿನ ಮೇಲೆ ಕಟ್ಟಿ “ನಾರಾಯಣ ಈ ದಾಯ್ತ ಮಲ್ಪು‌ನ ಮುಲ್ಪ” ಅದರ ಹತ್ತರ ಬಂದು ಕೇಳಿದವು.

“ಅಣ್ಣೆರೆ, ಅವು ರಡ್ ವಾರ ದುಂಬು ಎಲ್ಯ ಅಕ್ಕೆರು ಬತ್ತಿದಿತ್ತೇರು. ಅವು ಬಂದಿಪ್ಪಗ ಈ ಸೆಸಿಗಳ ಎಲ್ಲ ಹಾಕುಲೆ ಹೇಳಿದವು. ಹೇಂಗೂ ನಿನಗೆ ಕೆಲಸ ಇಲ್ಲೆನ್ನೆ. ಈ ಜಾಗೆಲಿ ನೆಟ್ಟ ಸೆಸಿಗೊಕ್ಕೆ ನೀರುದೆ ಹಾಕೆಕ್ಕು ಹೇಳಿದವು. ಈಗ ಸಣ್ಣ ಅಕ್ಕಂದಾಗಿ ಎನಗೆ ಮದ್ದಿಂಗೆ ಮಕ್ಕಳತ್ರ ಬೇಡೆಕ್ಕೋಳಿಲ್ಲೆ‌‌” ಅದಕ್ಕೆ ಪ್ರಾಯ ಆಗಿ ದುಡಿವಲೆ ಎಡಿಯದ್ದಿಪ್ಪಗ ಈ ಸಣ್ಣ ಕೆಲಸ ಸಿಕ್ಕಿದ್ದು ಖುಷಿ ಆಗಿತ್ತು. ರಾಮಣ್ಣಂಗೆ ಭಾರೀ ಖುಷಿ ಆತು. ಎನ್ನ ಮಗಳು ಮಾತಿಂಗೆ ಮರ ಕಡಿಶೆಕ್ಕಿತ್ತು ಅಷ್ಟಾದರು ಪೈಸೆ ಸಿಕ್ತಿತು ಹೇಳಿದ್ದು ಎನಗೆ ಬೇಜಾರಾಯಿದೋಳಿ ಅದಕ್ಕೆ ಗೊಂತಾಗಿ ಈ ಕೆಲಸ ಮಾಡಿತ್ತಾ. ಮಗಳ ಬಗ್ಗೆ ಹೆಮ್ಮೆ‌ಆತು. ಈಗ ಕೆಲಸದ ನಾರಾಯಣನುದೆ ಅವುದೆ ನೀರು ಹಾಕಿಗೊಂಡು ಮಾತಾಡಿಗೊಂಡು ಸುಮಾರು ನೆನಪಿನ ಹಂಚಿಗೊಂಡವು.

ಮನಗೆ ಎತ್ತಿಕ್ಕಿ ಮಗಳ ದೆನಿಗೇಳಿ ಒಂದು ಕಾಫಿ ಕೊಡುನೋಡ ಹೇಳಿದವು. ಶಂಕರಿ ಅಕ್ಕನ ದೆನಿಗೇಳಿ ” ಶಂಕರಿ ಇನ್ನು ಎನಗೆ ಎನ್ನ ಜಾಗೆಲಿ ನಾರಾಯಣನೊಟ್ಟಿಂಗೆ ನೀರು ಹಾಕುಲೆ ಇದ್ದು. ಹೆರಡುವಗ ಹಿಂದಂದ ಕೇಳೆಡ ಓಯ್ ದೂರ ಹೆರಟದೋಳಿ. ಆನು ಹೋಪದು ಎಲ್ಲಿಗೆ …. ಎನ್ನದೇ ಜಾಗಗೆ, ಗೊಂತಾತ.” ಜೋರು ನೆಗೆ ಬಂದತ್ತು ಅವಕ್ಕೆ.

ಅಪ್ಪನ ಇಷ್ಟು ಬದುಕಿಸಿದ್ದು ಮರದ ಮೇಲೆ ಇಪ್ಪ ಪ್ರೀತಿ‌. ಪ್ರಕೃತಿಯೊಟ್ಟಿಂಗೆ ಬೆಳದ ಅಪ್ಪ ಅದರಲ್ಲೇ ಸಮಯ ಕಳವಲೆ ಇಷ್ಟ. ಆನು ಕೆಲಸದ ನಾರಾಯಣನತ್ರ ಹೋಗಿ ಸೆಸಿ ನೆಡ್ಲೆ ಹೇಳಿದ್ದು ಎಷ್ಟು ಒಳ್ಳೆದಾತು‌. ಈಗ ಅಪ್ಪ ಮರಳಿ ಬದುಕಿಂಗೆ ಬಂದವು” ಕಾಫಿ ಮಾಡಿ ಅಪ್ಪನ ಕೈಗೆ ಕೊಟ್ಟತ್ತು ಹೇಮಾ.

“ಭಾರೀ ಲಾಯಿಕದ ಸ್ಟ್ರಾಂಗ್ ಕಾಫಿ” ನೆಗೆ ಮಾಡಿಗೊಂಡು ಕಾಫಿಯ ಆರಾಮಲ್ಲಿ ಕುಡಿವ ರಾಮಣ್ಣ ಎನ್ನ ಮರಳಿ ಬದುಕಿಸಿದೆ ಮಗಳೋ ಹೇಳಿ ಮಗಳಿಂಗೆ ಕಣ್ಣಿಲಿಯೇ ಧನ್ಯವಾದ ಹೇಳಿದವು.

4 thoughts on “ಕಥೆ ಪ್ರಥಮ – ಮರಳಿ ಬದುಕಿಂಗೆ

  1. ತುಂಬಾ ಲಾಯ್ಕ ಇದ್ದು ಕಥೆ..ಅಭಿನಂದನೆಗೊ ರಜನೀ

  2. ತುಂಬಾ ತುಂಬಾ ಲಾಯ್ಕಿತ್ತು‌ ಕಥೆ..!!👌👌👌

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×