Oppanna.com

ಪ್ರಬಂಧ ದ್ವಿತೀಯ – ಕೋವಿಡ್ ನಂತರದ ಜೀವನ ಶೈಲಿ

ಬರದೋರು :   ಸಂಪಾದಕ°    on   03/07/2021    1 ಒಪ್ಪಂಗೊ

ಸಹನಾ ಕಾಂತಬೈಲು, ಸಂಪಾಜೆ

ಪ್ರಕೃತಿಯ ಲೀಲೆಗೊ ನಿಗೂಢ ಆಗಿರುತ್ತು. ಅದು ಕೋವಿಡ್ ಹೇಳುವ ಸಾಂಕ್ರಾಮಿಕ ಪಿಡುಗಿನ ನಮ್ಮ ಜಾಲಿಂಗೆ ಇಡಿಕ್ಕಿಕ್ಕಿ ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದು. ನಮ್ಮ ಕಲಿಯುವಿಕೆ, ಮಾಡುವ ಕೆಲಸ, ಉದ್ಯೋಗ ಪಡಕ್ಕೊಂಬ ವಿಧಾನಲ್ಲಿ ತೀವ್ರ ಗತಿಲಿ ಬದಲಾವಣೆ ಅಪ್ಪ ಕಾಲ ಸುರು ಆಯಿದು. ಹತ್ತಾರು ತಲೆಮಾರುಗೊ ಕಳುದ ಮೇಲೆ ಅನುಭವಕ್ಕೆ ಬಪ್ಪ ಹಾಂಗಿಪ್ಪ ವಿಪರೀತ ಪರಿಸ್ಥಿತಿ ಒಂದಕ್ಕೆ ನಾವು ಸಾಕ್ಷಿ ಆವುತ್ತಾ ಇದ್ದೆಯ. ಜಗತ್ತಿನ ಎಲ್ಲಾ ಕಡೆ ಒಂಥರಾ ದುಗುಡ, ಅತಂತ್ರ, ಹತಾಶೆ, ಅಸ್ಪಷ್ಟತೆಯ ವಾತಾವರಣ. ಬದುಕಿನ ಯಾವುದೋ ಸಂದರ್ಭಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ಬಪ್ಪ ಕಷ್ಟ ಸಾರ್ವತ್ರಿಕ ಆಗಿ ಇಡೀ ಮನುಕುಲಕ್ಕೇ ಹಬ್ಬಿದರೆ ಎಂತ ಅಕ್ಕು? ಈಗ ಅದೇ ಆಯಿದು. ಇದು ಮಾನವ ಜನಾಂಗಕ್ಕೇ ಸವಾಲಾಗಿಪ್ಪ ಕಠಿಣ ಸಂದರ್ಭ. ಕೊರೊನಾ ವೈರಸ್ ಜಾತಿ, ವರ್ಗ, ಅಂತಸ್ತು, ಲಿಂಗ, ಬಡವ, ಶ್ರೀಮಂತ ಯಾವ ತಾರತಮ್ಯವನ್ನೂ ಮಾಡದ್ದೆ ಎಲ್ಲರಲ್ಲೂ ಉಂಟಾವುತ್ತು. ಮನುಷ್ಯ ಜನಾಂಗವು ಎಷ್ಟು ದುರ್ಬಲ ಹೇಳುವ ಸತ್ಯವ ಈ ಕೊರೊನಾ ವೈರಸ್ ತೋರಿಸಿಕೊಟ್ಟಿದು.

ಕೊರೊನಾ ವೈರಸ್ ಹಾವಳಿ ತುಂಬಿದ 2020 ಕಠಿಣ ವರ್ಷದ ಬೆಶಿಯ ಹಬೆ ಇನ್ನೂ ನಮ್ಮ ಆವರಿಸಿದ್ದು. ಪ್ರಸ್ತುತ ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಇಡೀ ದೇಶಕ್ಕೆ ದೇಶವೇ ತತ್ತರಿಸಿದ್ದು. ಮಲೇರಿಯ, ಫ್ಲೂ, ನ್ಯುಮೋನಿಯ ಜ್ವರದ ಹಾಂಗೆ ಕೋವಿಡ್ ಜ್ವರವುದೆ ನಮ್ಮ ಬದುಕಿಲಿ ಇನ್ನು ಜೊತೆಯಾಗಿಯೇ ಇರುತ್ತಾ ಅಥವಾ ಮಾಯ ಆವುತ್ತಾ ಹೇಳುವ ಪ್ರಶ್ನೆಗೆ ಕಾಲವೇ ಉತ್ತರುಸೆಕ್ಕಷ್ಟೆ. ಸದ್ಯಕ್ಕಂತೂ ಇದು ಹೊರಟುಹೋಪ ಲಕ್ಷಣ ಕಾಣುತ್ತಿಲ್ಲೆ. ಬದಲಾಗಿ ದಿನಂದ ದಿನಕ್ಕೆ ಹೆಚ್ಚಾವುತ್ತಾ ಇದ್ದು. ಸಂಕಷ್ಟ ತಂದ ಕೊರೊನಾ ಬದುಕಿಂಗೆ ಹಲವು ಪಾಠಂಗಳ ಕಲಿಶಿದ್ದು.

ಭೂಮಿಗೆ ಒಡೆಯ ಹೇಳಿ ಹಾಂಕಾರ ಮಾಡಿಗೊಂಡಿದ್ದ ಮನುಷ್ಯನ ಮೂಗು, ಬಾಯಿಗೆ ಬೀಗ ಹಾಕಿದ ಕೊರೊನಾ ಕ್ರಿಮಿ ನಮ್ಮ ಆಡಂಬರವ ತುಂಡು ಮಾಡಿ ಸರಳ ಜೀವನದ ಸಾರ್ವಕಾಲಿಕ ಸತ್ಯವ ನಮಗೆ ಮನವರಿಕೆ ಮಾಡಿದ್ದು. ಪೂರ್ವಿಕರ ಕಾಲದ ಪ್ರಕೃತಿಯೊಟ್ಟಿಂಗೆ ಇಪ್ಪ ಬದುಕು ನಿಜಕ್ಕೂ ಮೌಲ್ಯಯುತ ಆದ್ದು ಹೇಳುದರ ಈಗ ನಮಗೆ ಅರ್ಥ ಅಪ್ಪ ಹಾಂಗೆ ಮಾಡಿದ್ದು. ಕೊಳ್ಳುಬಾಕ ಸಂಸ್ಕೃತಿಯ ತಕ್ಕಮಟ್ಟಿಂಗೆ ನಿಲ್ಲಿಸಿದ್ದು ಕೊರೊನಾ ಕಾಲ. ಪೇಟೆಲಿ ಉದ್ಯೋಗ ಮಾಡುವವರಲ್ಲಿ ಕೆಲವು ಜನಂಗೊ ಉದ್ಯೋಗ ಬಿಟ್ಟು, ಹಳ್ಳಿಗೆ ವಾಪಾಸಾಗಿ ಕೃಷಿ ಕೈಗೊಂಡದು ಕೊರೊನಾ ಕಲಿಸಿದ ಪಾಠಂದಲೇ. ಕೊರೊನಾ ಪಿಡುಗು ನಾವು ಇಲ್ಲಿವರೆಗೆ ಬೆಳೆಶಿಕೊಂಡು ಬಂದ ಪರಸ್ಪರ ಸಂಬಂಧಂಗೊಕ್ಕೆ ಮಾರಣಾಂತಿಕ ಕೊಡಲಿ ಪೆಟ್ಟು ನೀಡಿದ್ದು. ದೇಶಗಳ ನಡುಗೆ, ರಾಜ್ಯಗಳ ನಡುಗೆ, ಜನ ಸಮುದಾಯಗಳ ನಡುಗೆ ಇಪ್ಪ ಸಂಬಂಧಂಗೊ ಪರಸ್ಪರ ಶಂಕೆ, ಅಪನಂಬಿಕೆಗೆ ಕಾರಣ ಆಯಿದು. ಕೊರೊನಾ ಹೇಂಗೆ ಪರಸ್ಪರ ಶಂಕೆಗೆ ಕಾರಣ ಆಯಿದು ಹೇಳುದರ ಬಗ್ಗೆ ಎನ್ನ ಸ್ವಂತ ಅನುಭವವ ಹೇಳುತ್ತೆ. ಕಳೆದ ತಿಂಗಳು ಆನು ಯಾವುದೋ ಕೆಲಸದ ನಿಮಿತ್ತ ಮಂಗಳೂರಿಂಗೆ ಹೋಗಿತ್ತಿದ್ದೆ. ಅಲ್ಲಿ ಒಂದು ಪುಸ್ತಕದ ಅಂಗಡಿಲಿ ಎನಗೆ ಬೇಕಾದ ಪುಸ್ತಕವ ವಿಚಾರಿಸಿಗೊಂಡು ಇತ್ತಿದ್ದೆ. ಅದು ಮಧ್ಯಾಹ್ನದ ಹೊತ್ತು. ಆ ಅಂಗಡಿ ಹತ್ತರೆಯೇ ಮನೆ ಮಾಡಿಗೊಂಡು ಇಪ್ಪ ಎನ್ನ ಸಾಹಿತಿ ಮಿತ್ರ ಒಬ್ಬ ಪುಸ್ತಕ ಖರೀದಿಸುಲೆ ಅಲ್ಲಿಗೆ ಬಂದಿತ್ತಿದ್ದ. ಎನ್ನ ನೋಡಿ ಬೆಚ್ಚಿ ಬಿದ್ದು ‘ಹೇಂಗಿದ್ದಿ? ಸೌಖ್ಯವಾ?’ ಅಷ್ಟೇ ಕೇಳಿ ಎನ್ನ ಉತ್ತರಕ್ಕೂ ಕಾಯದ್ದೆ, ಪುಸ್ತಕವನ್ನೂ ತೆಕ್ಕೊಳ್ಳದ್ದೆ ‘ಎನಗೆ ಒಂದು ಅರ್ಜೆಂಟ್ ಕೆಲಸ ಇದ್ದು. ಬತ್ತೆ’ ಹೇಳುತ್ತಾ ಅಲ್ಲಿಂದ ಪಲಾಯನ ಮಾಡಿದ. ಹಿಂದೆಯೆಲ್ಲ ಆನು ಮಂಗಳೂರಿಂಗೆ ಬಂದ ಸುದ್ದಿ ಅವಂಗೆ ಗೊಂತಾದರೆ ಸಾಕು ಆನಿಪ್ಪಲ್ಲಿಂಗೆ ಓಡಿ ಬಂದು ಒತ್ತಾಯಪೂರ್ವಕ ಎನ್ನ ಅವರ ಮನೆಗೆ ಕರಕ್ಕೊಂಡು ಹೋಕು. ಊಟ, ಕಾಫಿ-ತಿಂಡಿಯ ಸಮಾರಾಧನೆ ಮಾಡಿಯೇ ಕಳುಸುಗು. ಅದೆಲ್ಲ ಈಗ ಮಧುರ ನೆನಪಷ್ಟೇ ಆಯಿದು. ಇನ್ನು ಹಾಂಗಿಪ್ಪ ದಿನ ಬತ್ತಾ ಹೇಳಿ ಗೊಂತಿಲ್ಲೆ.

ಜೀವನಶೈಲಿಲಿ ಒಂದು ಪ್ರಮುಖ ಬದಲಾವಣೆ ಆದ್ದದು ಸಾಮಾಜಿಕ ಸಂಪರ್ಕದ ವಿಚಾರಲ್ಲಿ. ಬಂಧುಮಿತ್ರರ ಮನೆಗೊಕ್ಕೆ ಸೌಹಾರ್ದ ಭೇಟಿ ಕೊಡುದು, ಹಬ್ಬ ಹರಿದಿನಂಗೊ, ಮದುವೆ, ಉಪನಯನ ಇಂತಾ ಸಾಮಾಜಿಕ ಕಾರ್ಯಕ್ರಮಂಗೊ ಅದರ ಹಿಂದಾಣ ವೈಭವ ಹಾಂಗೂ ಪ್ರಾಧಾನ್ಯತೆಯ ಕಳಕ್ಕೊಂಡು ಅನುಸರಣೆಗೆ ಮಾತ್ರ ಉಳುಕ್ಕೊಂಡಿದು. ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಇತ್ಯಾದಿ ಹಬ್ಬಂಗಳ ಜಾತಿ ಬೇಧ ಇಲ್ಲದ್ದೆ ಎಲ್ಲರೂ ಕೂಡಿ ಆಚರಿಸಿಗೊಂಡಿದ್ದದು ಸರಿಯಷ್ಟೆ. ಈಗ ಅವರವರ ಮನೆಲೇ ಹಬ್ಬ! ಅಲ್ಲದ್ದೆ ಗ್ರಾಮೀಣ ಸಂಸ್ಕೃತಿಯ ನೆನಪ್ಪು ಮಾಡುವ ಆಟಿಡೊಂಜಿ ಕೂಟ, ಹಲಸಿನ ಹಬ್ಬ, ಕೆಸರು ಗದ್ದೆ ಓಟ, ಕಂಬಳ, ಭೂತದ ಕೋಲ, ಜಾತ್ರೆ ಇತ್ಯಾದಿ ಎಲ್ಲ ಉತ್ಸವವೂ ಈಗ ಇಲ್ಲದ್ದ ಕಾಲ ಆಯಿದು.

ಕೊರೊನಾ ಕಾಲ ಅತ್ಯಂತ ನಿರಾಶಾದಾಯಕ, ಮನಕಲಕುವ ಸಮಯ. ಖರ್ಚು ಮಾಡುವ ಅಭ್ಯಾಸ ಇಪ್ಪವುದೆ ಕೋವಿಡ್-19ರ ಕಾಲಲ್ಲಿ ಅಗತ್ಯ ಆಧಾರಿತ ಆಗಿ ಬದಲಾಯಿದವು. ಐಷಾರಾಮಿ ಜೀವನ ಕಡಮ್ಮೆ ಆಯಿದು. ಈಗ ದೈನಂದಿನ ಅಗತ್ಯ ವಸ್ತುಗೊಕ್ಕೆ ಮಾತ್ರ ಖರ್ಚು ಮಾಡುತ್ತವು. ದೇಶ-ವಿದೇಶಗಳ ಪ್ರವಾಸಿ ತಾಣಂಗೊಕ್ಕೆ ಭೇಟಿ ಕೊಡುದು, ಮಾಲುಗೊಕ್ಕೆ ಹೋಪದು, ಹೋಟೆಲು, ಸಿನೆಮಾ ಇತ್ಯಾದಿ ಮನರಂಜನೆಯ ತಿರುಗಾಟಂಗೊ ಕಡಮ್ಮೆ ಆಯಿದು. ಅಷ್ಟು ಅಗತ್ಯ ಇದ್ದರೆ ಮಾತ್ರ ಪೇಟೆಗೆ ಹೋವುತ್ತವು. ಮಾಸ್ಕ್, ಸ್ಯಾನಿಟೈಸರ್ ನಮ್ಮ ಜೀವನದ ಭಾಗ ಆಯಿದು. ಗಾಂಧೀಜಿ ಹೇಳಿದ ಹಾಂಗೆ ಭೂಮಿ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯವ ಪೂರೈಸುತ್ತೇ ಹೊರತು ದುರಾಸೆಯ ಅಲ್ಲ. ಈ ಕೋವಿಡ್ ವ್ಯಾಧಿ ಪರಿಸರ, ಜೀವಜಾಲದ ಸಂರಕ್ಷಣೆ, ಅದರ ಮಾನದಂಡಂಗಳ ನಮ್ಮ ಸಾಮಾನ್ಯ ಪ್ರಜ್ಞೆಗೆ ನಿಲುಕುವಷ್ಟು ಸರಳಗೊಳಿಸಿಪ್ಪದು ಗಮನಿಸುವಂತದ್ದು.

ಜೀವನಕ್ರಮವ ಬಾಧಿಸಿದ ಇನ್ನೊಂದು ಮುಖ್ಯ ಅಂಶ ಮಕ್ಕಳ ಕಲಿಕೆಗೆ ಸಂಬಂಧಪಟ್ಟದು. ಶಾಲೆಗೊ ಕೊರೊನಂದಾಗಿ ಮುಚ್ಚಿದ ಕಾರಣ ಮಕ್ಕೊಗೆ ಶಾಲೆಗೆ ಹೋಗಿ ಪಾಠ ಕೇಳುದು ಇಲ್ಲದ್ದ ಹಾಂಗೆ ಆಯಿದು. ಪರ್ಯಾಯವಾಗಿ ಆನ್‌ಲೈನ್ ಶಿಕ್ಷಣ ರೂಢಿಗೆ ಬಯಿಂದು. ಆಟ ಆಡಿ ಕಲಿಯೆಕ್ಕಾದ ಸಣ್ಣ ಮಕ್ಕಳಂದ ಹಿಡುದು ತಾಂತ್ರಿಕ ಹಾಂಗೆ ವೈಜ್ಞಾನಿಕ ಕಲಿಕೆಯೂ ಇದೇ ವಿಧಾನಕ್ಕೆ ಒಳಪಟ್ಟಿದು. ಸಣ್ಣ ಮಕ್ಕಳ ಅಮ್ಮಂದಿರಿಂಗೆ ಒತ್ತಡ ಹೆಚ್ಚಾಯಿದು. ಎಂತಕೆ ಹೇಳಿದರೆ ಮಾಷ್ಟ್ರಕ್ಕೊ ಕಲುಶುದರ ಅಮ್ಮಂದ್ರೇ ಕಲಿಶೆಕ್ಕಾವುತ್ತು.

ಮನೆಂದಲೇ ಕೆಲಸ ಮಾಡುವ ವಿಧಾನ (ವರ್ಕ್ ಫ್ರಮ್ ಹೋಮ್) ಕೋವಿಡ್‌ನ ನಂತರ ಬಂದ ಒಂದು ಬೆಳವಣಿಗೆ. ಎಷ್ಟೋ ಸಾಫ್ಟ್‌ವೇರ್ ಇಂಜಿನಿಯರುಗೊ ಈಗ ಬೆಂಗಳೂರಿಂದ ಊರಿಂಗೆ ಬಂದು ಮನೆಲಿಯೇ ಕಂಪ್ಯೂಟರ್ ಮುಂದೆ ಕೂದುಗೊಂಡು ಕೆಲಸ ಮಾಡ್ತಾ ಇದ್ದವು. ಈ ಪ್ರಕ್ರಿಯೆಲಿ ಎಷ್ಟೋ ಜನ ಕೆಲಸ ಕಳಕ್ಕೊಂಡವೂ ಇದ್ದವು. ನಾವೀಗ ನೇರ ಸಂಪರ್ಕವ ಎಷ್ಟು ಕಳಕ್ಕೊಂಡು ಬಿಟ್ಟಿದೆಯ! ತರಗತಿಂದ ಹಿಡಿದು ಮದುವೆ-ಉಪನಯನ, ಅಂತ್ಯಸಂಸ್ಕಾರ ಪ್ರತಿಯೊಂದರವರೆಗೆ ಯಾವುದೇ ಜನಸೇರುವ ಕಾರ್ಯಕ್ರಮ ಇಂದು ರದ್ದಾಯಿದು.

ಇದರ ಬರವ ಹೊತ್ತಿಂಗೆ ಎನ್ನ ಅತ್ತಿಗೆ ಮನೆ ಹತ್ತರೆ ಇಪ್ಪ ಮೈದುನನ ಹೆಂಡತಿ ಎನಗೆ ಫೋನ್ ಮಾಡಿ ಹೇಳಿತ್ತು, ‘ಅಕ್ಕ, ನಿನಗೆ ಸಂಗತಿ ಗೊಂತಿದ್ದಾ? ಒಂದು ವಾರಂದ ಅತ್ತಿಗೆಗೆ, ಅಣ್ಣಂಗೆ, ಅವರ ಮಗಂಗೆ ಜೋರು ಜ್ವರ. ಅಣ್ಣಂಗಂತೂ ಉಸಿರಾಟದ ಸಮಸ್ಯೆ ಸುರು ಆಯಿದು. ಇಂದು ಸುಳ್ಯ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡುವಗ ಎಲ್ಲರಿಂಗೂ ಕೊರೋನಾ ಹೇಳಿ ಹೇಳಿದವಡ. ಅಲ್ಲಿ ಆಕ್ಸಿಜನ್ ಸೌಕರ್ಯ ಇಲ್ಲದ್ದ ಕಾರಣ ಅಣ್ಣನ ಕೂಡ್ಳೆ ಮಂಗಳೂರಿಂಗೆ ಹೋಗಿ ಎಡ್ಮಿಟ್ ಅಪ್ಪಲೆ ಹೇಳಿದವಡ. ಈಗ ಅಣ್ಣ ಮಂಗಳೂರು ಆಸ್ಪತ್ರೆಲಿ ಐಸಿಯುಲಿ ಇದ್ದವು’ ಇದರ ಕೇಳಿ ಎನಗೆ ಶಾಕ್. ಬೇರೆ ಯಾವ ರೋಗ ಬಂದರೂ ರೋಗಿಗಳ ಹೋಗಿ ನೋಡಿ, ಅವಕ್ಕೆ ಸಮಾಧಾನ ಹೇಳಿ ಬಪ್ಪಲೆ ಆವುತ್ತು. ಆದರೆ ಈ ಕೋವಿಡ್ ರೋಗ ಎಷ್ಟು ಭಯಾನಕ ಹೇಳಿದರೆ ರೋಗಿಗಳ ಹತ್ತರೆ ಸುಳಿವಲೂ ಆಗ. ಅವು ನಮ್ಮ ಅಮ್ಮ, ಅಪ್ಪ, ಮಕ್ಕೊ, ರಕ್ತಸಂಬಂಧಿ ಆರೇ ಆಗಿರಲಿ. ಹಾಂಗಾಗಿ ಎಂಗೊಗೆ ಅಣ್ಣ, ಅತ್ತಿಗೆಯ ನೊಡುವ ಆಶೆ ಬಲವಾಗಿದ್ದರೂ ಅಸಹಾಯಕರಾಗಿ ಮನೆಲೇ ಇದ್ದೆಯ. ಈಗ ಕೋವಿಡ್ ಎರಡನೇ ಅಲೆ ನಮ್ಮ ನರಕಕ್ಕೆ ತಳ್ಳಿದ್ದು. ಹತ್ತರಣ ಆತ್ಮೀಯರು, ಬಂಧುಗೊ ಅದಕ್ಕೆ ಬಲಿ ಆವುತ್ತಾ ಇಪ್ಪದು ನೋವು ತತ್ತಾ ಇದ್ದು. ಇಂದು ಇದ್ದವು ನಾಳೆ ಇಲ್ಲದ್ದ ಪರಿಸ್ಥಿತಿ ನಿರ್ಮಾಣ ಆಯಿದು. ಎಲ್ಲದಕ್ಕಿಂತ ದುರಂತದ ಸಂಗತಿ ಹೇಳಿದರೆ ಅಗಲಿದ ಆಪ್ತರ ಅಂತಿಮ ದರ್ಶನ ಪಡೆವ ಹಾಂಗೆ ಇಲ್ಲೆ. ಕೋವಿಡ್ ಪೀಡಿತರ ಭೇಟಿಯಾಗಿ ಸಾಂತ್ವನ ಹೇಳ್ಲೆ ಅವಕಾಶ ಇಲ್ಲೆ. ಇದು ಪರಮ ಸಂಕಟದ ಸನ್ನಿವೇಶ. ಇಂತಹ ಕಾಯಿಲೆ ಮುಂದೆ ಯಾವ ಕಾಲಕ್ಕೂ ಬಾರದ್ದೇ ಇರಲಿ. ಈ ಕಾಯಿಲೆ ಆದಷ್ಟು ಬೇಗ ನಮ್ಮ ಬಿಟ್ಟು ಹೋಗಲಿ. ನಮ್ಮ ಎಲ್ಲರ ಜೀವನ ಮೊದಲಿನ ಹಾಂಗೆ ಆಗಲಿ.

ಸುದೀರ್ಘ ಸೊರಂಗ ಪ್ರಯಾಣದ ಕಡೆಂಗೆ ಬೆಳಕಿನ ಕಿರಣ ಖಂಡಿತವಾಗಿ ಕಾಣುತ್ತು ಅಲ್ಲದಾ?

One thought on “ಪ್ರಬಂಧ ದ್ವಿತೀಯ – ಕೋವಿಡ್ ನಂತರದ ಜೀವನ ಶೈಲಿ

  1. ಕೊರೋನಾ ನಂತರ ನಮ್ಮ ಸಮಾಜಲ್ಲಿ ಆವುತ್ತಾ ಇಪ್ಪ ಬದಲಾವಣೆಗಳ ಒಳ್ಳೆಯ ಶೈಲಿಲಿ ಮಂಡಿಸಿದ ಲೇಖಕಿಗೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×