Oppanna.com

ಆಯುಧ ಪೂಜೆ – (ಸಂಕ್ಷಿಪ್ತ ವಿಧಾನ)

ಬರದೋರು :   ಚೆನ್ನೈ ಬಾವ°    on   24/10/2020    0 ಒಪ್ಪಂಗೊ

ಚೆನ್ನೈ ಬಾವ°

ಆಯುಧ ಪೂಜೆ – (ಸಂಕ್ಷಿಪ್ತ ವಿಧಾನ)

ಕಾಲಕ್ಕೆ ತಕ್ಕ ಕೋಲ, ಕಾಲಾಯ ತಸ್ಮೈ ನಮಃ ಹೇಳ್ತ ಪೀಠಿಕೆಯೊಟ್ಟಿಂಗಾವ್ತು ಚುಟುಕಿಲ್ಲಿ ಆಯುಧಪೂಜೆ ಕೆಣಿ ಹೇಂಗೆ ಕೇಳ್ತವಕ್ಕೆ ಮಾಂತ್ರ ಈ ಶುದ್ದಿ. ಬಾಕಿದ್ದೋರು ಅವರವರ ಕುಲಪುರೋಹಿತರ ಮಾರ್ಗದರ್ಶನಲ್ಲೇ ಮಾಡೆಕು.  ಪೂಜೆ ಮಾಡೆಕು ಆದರೆ ಮಂತ್ರ ಕ್ರಮ ಎಲ್ಲ ಬತ್ತಿಲ್ಲೆ ಹೇದಿಪ್ಪವಕ್ಕೆ ಅವರವರ ಶ್ರದ್ಧಾಭಕ್ತಿಶಕ್ತಿಗನುಗುಣವಾಗಿ ಪೂಜೆ ಮಾಡ್ಳೆ ಸಕಾಯ ಅಪ್ಪಲೆ ಈ ಸಂಕ್ಷಿಪ್ತ ವಿಧಾನ. ನಮಃ ಹೇದಪ್ಪಗ ನಮಸ್ಕಾರ ಮಾಡೆಕು ಅರ್ಘ್ಯ ಆಚಮನ ಹೇಳ್ವಾಗ ನೀರುಬಿಡೆಕು ಹೇದು ಗೊಂತಿಪ್ಪವಂಗೆ ಯಾವ ಪೂಜೆಯೂ ಬಂಙದ್ದು ಅಲ್ಲ.

ಪೂಜೆ ಹೇದರೆ ಮನಗೆ ಬಂದ ಒಬ್ಬ ಅತಿಥಿಗೆ ಸತ್ಕಾರ ಹೇಂಗೆ ಮಾಡ್ತೋ ಹಾಂಗೇ ದೇವರಿಂಗೂ ಒಬ್ಬ ಅತಿಥಿಯಾಗಿ ಉಪಚಾರಮಾಡ್ತದೇ ಪೂಜೆ. ಉಪಚಾರ ಹೇಳ್ತಲ್ಲಿ ಪಂಚೋಪಚಾರ , ಷೋಡಶೋಪಚಾರ, ಹೇದೆಲ್ಲ ಇದ್ದು. ಷೋಡಶೋಪಚಾರ ಮಾಡಿರೆ ಒಪ್ಪ ಉಪಚಾರ ಮಾಡಿದಾಂಗೆ ಆವ್ತು. ಮಂತ್ರ ತಂತ್ರಂದಲೂ ಶ್ರದ್ಧಾಭಕ್ತಿಯೇ ಮುಖ್ಯ . ಅದು ಬರೇ ಏಕುಟಿಂಗೆ ಇಪ್ಪದು ಅಪ್ಪಲಾಗ ಅಷ್ಟೇ. ದೇವರಿಂಗೆ ನಾವು ಮಾಡುವ ಷೋಡಶೋಪಚಾರ ಏವುದಯ್ಯ ಹೇದರೆ – ಧ್ಯಾನ ಆವಾಹನ ಪಾದ್ಯ ಅರ್ಘ್ಯ ಆಚಮನ ವಸ್ತ್ರ ಗಂಧ ಅಕ್ಷತೆ ಪುಷ್ಫ ಧೂಪ ದೀಪ ನೈವೇದ್ಯ ತಾಂಬೂಲ ನೀರಾಜನ ಪ್ರದಕ್ಷಿಣ ನಮಸ್ಕಾರ. ಆಯಾ ದೇವತೆಗಳ ಧ್ಯಾನಶ್ಲೋಕ ಹೇದುಗೊಂಡು ಆಯಾದೇವರ ಹೆಸರು  ಹೇಳಿಗೊಂಡು … ಸಮರ್ಪಯಾಮಿ ಮಾಡಿರೆ ಒಪ್ಪ ಉಪಚಾರವೂ ಆತು ಪೂಜೆಯೂ ಆತು. ಅಕೇರಿಗೊಂದು ಬ್ರಹ್ಮಾರ್ಪಣ. ಬಾಕಿ ಗೌಜಿ ಎಲ್ಲ ಅಲಂಕಾರಕ್ಕೆ ಅಟ್ಟೇ.   ಇದಿಷ್ಟು ಪೀಠಿಕೆಂದ ಭಕ್ತಿಂದ ಸಂಕ್ಷಿಪ್ತವಾಗಿ ಪೂಜೆ ಮಾಡ್ಳೆ ಸುರುಮಾಡುವನೋ.

ನೆಲಕ್ಕಂಗೆ ನೀರು ಪ್ರೋಕ್ಷಣೆ ಮಾಡಿ ಎರಡು ಚೌಕಾಕಾರ ಮಂಡ್ಳ ಬರದು ಗಂಧ ಅಕ್ಷತೆ ಹೂಗು ಮಡುಗೆಕು. ಬಲದೊಡೆಲಿ ಇಪ್ಪ ಚೌಕಮಂಡ್ಳ ಗಣಪತಿದು ಎಡದೊಡೆಲಿ ಇಪ್ಪದು ದುರ್ಗೆದು. ಅದರ ಮೇಗೆ ನಿಂಗಳ ಆಯುಧಂಗಳ ಮಡುಗಿ ಬಲದೊಡೆ ಮಂಡ್ಳಲ್ಲಿ ಗಣಪತಿಗೂ ಎಡದೊಡೆ ಮಂಡ್ಳಲ್ಲಿ ದುರ್ಗಗೂ ಪೂಜೆ. ದುರ್ಗಾಪೂಜೆಯೊಟ್ಟಿಂಗೆ ಆಯುಧಂಗಳಿಂಗೂ ಒಟ್ಟಿಂಗೆ ಪೂಜೆ.  ಎದುರೆ ದೀಪ ಹೊತ್ತುಸಿಮಡುಗಿ –

ಆಚಮ್ಯ., ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀ ದುರ್ಗಾಯೈ ನಮಃ |

ಆಚಮ್ಯ ಮಾಡಿ ಗುರುಹಿರಿಯರ ಮನೆದೇವರ ಗಣಪತಿ ದುರ್ಗೆಯ ಮನಸಾ ಧ್ಯಾನಿಸಿಗೊಂಡು

ಗಿಂಡಿಗೆ ತುಳಸಿಹೂಗಂಧಾಕ್ಷತೆಯ ಹಾಕೆಕು –

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಎಡದಕೈಲಿ ಅಕ್ಷತೆ ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಗೆ ಮಡಿಕ್ಕೊಂಡು  ಮುಂದಾಣ ಸಂಕಲ್ಪ ಮಾಡುವದು.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |

ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

 ………… ನಾಮ ಸಂವತ್ಸರೇ  …….. ಅಯನೇ  …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ  ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀ ಮಹಾಗಣಪತಿಪೂರ್ವಕ – ಮಂತ್ರದೇವತಾ – ಯಂತ್ರದೇವತಾ – ಆಯುಧದೇವತಾ-ಶಕ್ತಿದೇವತಾ ಶ್ರೀ ದುರ್ಗಾಪರಮೇಶ್ವರೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ || (ಕೈಲಿಪ್ಪ ಅಕ್ಷತೆಯ ಎರಡೂ ಮಂಡ್ಳಕ್ಕೆ ಹಾಕುವದು)

ಪುನಃ ಕೈಲಿ ಹೂ ಗಂಧ ಅಕ್ಷತೆಯ ತೆಕ್ಕೊಂಡು ಎರಡೂ ಮಂಡ್ಳಕ್ಕೆ ಹಾಕ್ಯೊಂಡು ಹೇಳುವದು -– ಗಂಧಾಕ್ಷತಪುಷ್ಪಾಣಿ ಸಮರ್ಪಯಾಮಿ

ಗಣಪತಿ ಪೂಜೆ : – ಬಲದೊಡೆಲಿಪ್ಪ ಗಣಪತಿಮಂಡ್ಳಕ್ಕೆ ಪೂಜೆ ಮಾಡುವದು

ಶ್ರೀ ಮಹಾಗಣಪತಿಪೂಜಾಂ ಕರಿಷ್ಯೇ | ಗಣಪತಿ ಮಂಡ್ಳಕ್ಕೆ ಹೂಗು ಹಾಕುವದು.

ಕೈಲಿ ಗಂಧಾಕ್ಷತೆಯನ್ನು ತೆಕ್ಕೊಂಡು ಗಣಪತಿ ಮಂಡ್ಳಕ್ಕೆ ಅರ್ಚನೆ  –

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||

ಓಂ ಭೂಃ ಗಣಪತಿಂ ಆವಾಹಯಾಮಿ | ಓಂ ಭುವಃ ಗಣಪತಿಂ ಆವಾಹಯಾಮಿ | ಓಗುಂ ಸುವಃ ಗಣಪತಿಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ಗಣಪತಿಂ ಆವಾಹಯಾಮಿ || (ಹೇಳಿಗೊಂಡು ಕೈಲಿಪ್ಪ ಹೂಗಂಧಾಕ್ಷತೆಯ ನಾಲ್ಕು ಸರ್ತಿ ಗಣಪತಿಮಂಡ್ಳಕ್ಕೆ ಹಾಕುವದು)

ಶ್ರೀ ಮಹಾಗಣಪತಯೇ ನಮಃ ,  ದ್ವಾದಶ ನಾಮ ಪೂಜಾಂ ಕರಿಷ್ಯೇ – (ಹನ್ನೆರಡು ಸರ್ತಿ ಹೂಗು ಹಾಕುವದು) –

ಓಂ ಸುಮುಖಾಯ ನಮಃ | ಓಂ ಏಕದಂತಾಯ ನಮಃ | ಓಂ ಕಪಿಲಾಯ ನಮಃ | ಓಂ ಗಜಕರ್ಣಕಾಯ ನಮಃ | ಓಂ ಲಂಬೋದರಾಯ ನಮಃ | ಓಂ ವಿಕಟಾಯ ನಮಃ | ಓಂ ವಿಘ್ನರಾಜಾಯ ನಮಃ | ಓಂ ಗಣಾಧಿಪಾಯ ನಮಃ | ಓಂ ಧೂಮಕೇತವೇ ನಮಃ | ಓಂ ಗಣಾಧ್ಯಕ್ಷಾಯ ನಮಃ | ಓಂ ಫಾಲಚಂದ್ರಾಯ ನಮಃ | ಓಂ ಗಜಾನನಾಯ ನಮಃ | ದ್ವಾದಶನಾಮಪೂಜಾಂ ಸಮರ್ಪಯಾಮಿ ||

ಶ್ರೀ ದುರ್ಗಾಪೂಜೆ – ಎಡದೊಡೆಲಿಪ್ಪ ದುರ್ಗಾಮಂಡ್ಳಕ್ಕೆ ಪೂಜೆ

ಶ್ರೀ ದುರ್ಗಾಪೂಜಾಂ ಕರಿಷ್ಯೇ (ದುರ್ಗಾಮಂಡ್ಳಕ್ಕೆ ಹೂಗು ಹಾಕುವದು)

ಕೈಲಿ ಹೂಗಂಧಾಕ್ಷತೆಯ ತೆಕ್ಕೊಂಡು ದುರ್ಗಾಮಂಡಲಕ್ಕೆ ಅರ್ಚನೆ –

ಓಂ ಕಾತ್ಯಾಯನಾಯ ವಿದ್ಮಹೇ ಕನ್ಯಕುಮಾರಿ ಧೀಮಹಿ | ತನ್ನೋ ದುರ್ಗಿಃ ಪ್ರಚೋದಯಾತ್ ||

ಓಂ ಭೂಃ ದುರ್ಗಾಂ ಆವಾಹಯಾಮಿ | ಓಂ ಭುವಃ ದುರ್ಗಾಂ ಆವಾಹಯಾಮಿ | ಓಗುಂ ಸುವಃ ದುರ್ಗಾಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ದುರ್ಗಾಂ ಆವಾಹಯಾಮಿ || (ಹೇಳಿಗೊಂಡು ನಾಕು ಸರ್ತಿ ಹೂಗು ಹಾಕುವದು)

ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗು ಹಾಕುವದು)

ಓಂ ದುರ್ಗಾಯೈ ನಮಃ | ಓಂ ಶಾಂತ್ಯೈ ನಮಃ | ಓಂ ಶಾಂಭವ್ಯೈ ನಮಃ | ಓಂ ಭೂತಿದಾಯಿನೈ ನಮಃ| ಓಂ ಶಂಕರಪ್ರಿಯಾಯೈ ನಮಃ | ಓಂ ನಾರಾಯಣೈ ನಮಃ | ಓಂ ಭದ್ರಕಾಳೈ ನಮಃ |  ಓಂ ಶಿವದೂತ್ಯೈ ನ್ಮಃ | ಓಂ ಮಹಾಲಕ್ಷ್ಮೈ ನ್ಮಃ | ಓಂ ಮಹಾಮಾಯಾಯೈ ನಮಃ | ಓಂ ಯೋಗನಿದ್ರಾಯೈ ನಮಃ | ಓಂ ಚಂಡಿಕಾಯೈ ನಮಃ | ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಯಂತ್ರಮೂರ್ತಯೇ ಶ್ರೀದುರ್ಗಾಪರಮೇಶ್ವರ್ಯೈ ನಮಃ  ( ಯಂತ್ರಂಗೊಕ್ಕೆ ಹೂಗು ಹಾಕುವದು)
ದ್ವಿಚಕ್ರ/ತ್ರಿಚಕ್ರ/ಚತುಷ್ಚಕ್ರಮೂರ್ತಯೇ ಶ್ರೀದುರ್ಗಾಪರಮೇಶ್ವರ್ಯೈ ನಮಃ (ವಾಹನಂಗೊಕ್ಕೂ ಹೂಗು ಹಾಕುವದು)

ಶ್ರೀ ಮಹಾಗಣಪತಯೇ ನಮಃ,  ಶ್ರೀ ದುರ್ಗಾಯೈ ನಮಃ (ಎರಡೂ ಮಂಡ್ಳಕ್ಕೂ  ಕ್ರಮವಾಗಿ ನಾಲ್ಕು ನಾಲ್ಕು ಸರ್ತಿ ನೀರು ಹೂಗು ಗಂಧ ಅಕ್ಷತೆ, ಧೂಪ , ದೀಪ ಸಮರ್ಪಣೆ ಮಾಡುವುದು) –

ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ, ಇದಂ ಅಮೃತಂ ನಿವೇದಯಾಮಿ (ಎರಡು ದೇವರಿಂಗೂ ಪ್ರತ್ಯೇಕ ಪ್ರತ್ಯೇಕ ಹಾಲು ಹಣ್ಣು ಭಕ್ಷ್ಯ ಭೋಜ್ಯ ಮಡುಗಿ ನೇವೇದ್ಯ ಮಾಡಿ ತೆಗದು ಸ್ಥಳಶುದ್ಧಿಮಾಡಿ) , ತಾಂಬೂಲಂ ಸಮರ್ಪಯಾಮಿ (ದೇವರೆದುರೆ ತಾಂಬೂಲ ಮಡುಗಿ ನೇವೇದ್ಯಮಾಡಿ) ,  ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡಿ , ಆರತಿ ಅಲಂಕರಿಸಿದ ಯಂತ್ರ, ವಾಹನಂಗೊಕ್ಕೂ ತೋರುಸಿ ) , ಮಂತ್ರಪುಷ್ಪಂ ಸಮರ್ಪಯಾಮಿ , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, ಸರ್ವೋಪಚಾರಪೂಜಾಃ ಸಮರ್ಪಯಾ (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಪ್ರದಕ್ಷಿಣೆ ಬಂದು ದೇವರಿಂಗೆ ಹೂಗಾಕಿ ಹೊಡಾಡುದು)  |

ಕೈ ಮುಕ್ಕೊಂಬದು –

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ

ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ |

ಶ್ರೀ ಮಹಾಗಣಪತಯೇ ನಮಃ ಪ್ರಸನ್ನಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಗಣಪತಿಮಂಡ್ಳಕ್ಕೆ ಒಂದು ಹೂಗು ಹಾಕಿ ಒಂದು ಸಕ್ಕಣ ನೀರು) ,

ದುರ್ಗಾಯೈ ನಮಃ ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ದುರ್ಗಾಮಂಡ್ಳಕ್ಕೆ ಒಂದು ಹೂ ಹಾಕಿ ಒಂದು ಸಕ್ಕಣ ನೀರು)

ಮತ್ತೆ  ಬಲಕೈಲಿ ಹೂಗು ಗಂಧ ಅಕ್ಷತೆ ಹಿಡ್ಕೊಂಡು ಗಿಂಡಿಂದ ನೀರುಬಿಡುವದು –

ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |

ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||

ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||

ನೀರು ಹಾಕಿ ಎರಡು ಮಂಡ್ಳಕ್ಕೂ ಯಂತ್ರ ವಾಹನಂಗೊಕ್ಕೂ  ಹಾಕುವುದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.

ಆವಾಹಿತದೇವತಾಃ, ಓಂ ಭೂರ್ಭುವಸ್ಸುವರೋಂ ಉದ್ವಾಸಯಾಮಿ || ಎರಡೂ ಮಂಡಲದಿಂದ ಹೂ ತೆಗೆದು ಮೂಸಿ ಹಾಕುವುದ, ಆಚಮನ ಮಾಡುವುದು.

ಹರಿಃ ಓಂ | ಶುಭಮ್||

** **

ಚಕ್ರದಡಿಗೆ ಲಿಂಬುಳಿ ಮಡುಗುದು ಎಲ್ಲ ಸ್ಥಳೀಯ ಪದ್ಧತಿಗಳ ಚಾಚೂತಪ್ಪದೆ ಪಾಲುಸುದು. ಕೀ ಹಾಕಿ ಯಂತ್ರ/ವಾಹನ ಚಾಲನೆ ಮಾಡಿ ದೇವರ ಮನಸ್ಸಿಲ್ಲಿ ಧ್ಯಾನಿಸಿಗೊಂಡು ಮುಂದಂಗೆ ಸಾಗುವದು.

  • ಚೆನ್ನೈ ಭಾವ°
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×