- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಲಕ್ಷ್ಮೀ ಪೂಜೆ – (ಸರಳ ಸಂಕ್ಷಿಪ್ತ ವಿಧಾನ)
ಭೂಮಿಗೆ ನೀರು ಪ್ರೋಕ್ಷಿಸಿ ಎರಡು ಚೌಕಾಕಾರಮಂಡ್ಳ ಬರದು ಗಂಧ ಅಕ್ಷತೆ ಹೂಗಳ ಮಡುಗೆಕು. ಬಲಭಾಗದ ಚೌಕಮಂಡ್ಳಲ್ಲಿ ಗಣಪತಿಯನ್ನೂ ಎಡಭಾಗದ ಚೌಕ ಮಂಡ್ಳಲ್ಲಿ ಮಹಾಲಕ್ಷ್ಮಿಯನ್ನೂ ಪೂಜಿಸುವದು. ದೇವರ ಪಟ ಇದ್ದರೆ ಮಂಡ್ಳದ ಎದುರೆ ಮಡಿಕ್ಕೊಂಬದು.
ಆಚಮ್ಯ., ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀ ಮಹಾಲಕ್ಷ್ಮೈ ನಮಃ |
ಆಚಮನ ಮಾಡಿ ಎರಡೂ ಮಂಡ್ಳಕ್ಕೆ ಹೂಗಾಕಿ ಕೈಮುಕ್ಕೊಂಬದು
ಗಿಂಡಿಗೆ ತುಳಸಿಹೂಗಂಧಾಕ್ಷತೆಯನ್ನು ಹಾಕೆಕು –
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಎಡದಕೈಲಿ ಅಕ್ಷತೆ ಮಡಿಕ್ಕೊಂಡು ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಲೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವುದು.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
………… ನಾಮ ಸಂವತ್ಸರೇ …….. ಅಯನೇ …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀ ಮಹಾಗಣಪತಿಪೂರ್ವಕ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಶ್ರೀಮಹಾಲಕ್ಷ್ಮೀಂ ಉದ್ದಿಶ್ಯ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ || (ಕೈಲಿಪ್ಪ ಅಕ್ಷತೆಯ ಎರಡೂ ಮಂಡ್ಳಕ್ಕೆ ಹಾಕುವದು)
ಗಣಪತಿ ಪೂಜೆ : –
ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀ ಮಹಾಗಣಪತಿಪೂಜಾಂ ಕರಿಷ್ಯೇ |
ಒಂದು ಹೂಗು ತೆಗದು ಗಣಪತಿ ಮಂಡ್ಳಕ್ಕೆ ಹಾಕಿ ಕೈ ಮುಗಿವದು.
ಕೈಲಿ ಹೂಗಂಧಾಕ್ಷತೆಗರಿಕ್ಕೆಯ ತೆಕ್ಕೊಂಡು ಗಣಪತಿ ಮಂಡಲಕ್ಕೆ ಅರ್ಚಿಸುವದು –
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||
ಓಂ ಭೂಃ ಗಣಪತಿಂ ಆವಾಹಯಾಮಿ | ಓಂ ಭುವಃ ಗಣಪತಿಂ ಆವಾಹಯಾಮಿ | ಓಗುಂ ಸುವಃ ಗಣಪತಿಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ಗಣಪತಿಂ ಆವಾಹಯಾಮಿ || (ಹೇಳ್ಯೊಂಡು ಕೈಲಿಪ್ಪ ಹೂಗಂಧಾಕ್ಷತೆಕರಿಕ್ಕೆಯ ನಾಲ್ಕು ಸರ್ತಿ ಗಣಪತಿಮಂಡ್ಳಕ್ಕೆ ಹಾಕುವುದು)
ಶ್ರೀ ಮಹಾಗಣಪತಯೇ ನಮಃ , ದ್ವಾದಶ ನಾಮ ಪೂಜಾಂ ಕರಿಷ್ಯೇ – (ಹನ್ನೆರಡು ಸರ್ತಿ ಹೂಗು ಹಾಕೆಕು) –
ಓಂ ಸುಮುಖಾಯ ನಮಃ | ಓಂ ಏಕದಂತಾಯ ನಮಃ | ಓಂ ಕಪಿಲಾಯ ನಮಃ | ಓಂ ಗಜಕರ್ಣಕಾಯ ನಮಃ | ಓಂ ಲಂಬೋದರಾಯ ನಮಃ | ಓಂ ವಿಕಟಾಯ ನಮಃ | ಓಂ ವಿಘ್ನರಾಜಾಯ ನಮಃ | ಓಂ ಗಣಾಧಿಪಾಯ ನಮಃ | ಓಂ ಧೂಮಕೇತವೇ ನಮಃ | ಓಂ ಗಣಾಧ್ಯಕ್ಷಾಯ ನಮಃ | ಓಂ ಫಾಲಚಂದ್ರಾಯ ನಮಃ | ಓಂ ಗಜಾನನಾಯ ನಮಃ | ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಕೈಮುಕ್ಕೊಂಬದು –
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಶ್ರೀಮಹಾಲಕ್ಷ್ಮೀಪೂಜೆ-
ಶ್ರೀ ಮಹಾಲಕ್ಷ್ಮೀಪೂಜಾಂ ಕರಿಷ್ಯೇ (ಲಕ್ಷ್ಮೀಮಂಡ್ಳಕ್ಕೆ ಹೂಗು ಹಾಕುವುದು)
ಕೈಯಲ್ಲಿ ಹೂಗಂಧಾಕ್ಷತೆಯನ್ನು ತೆಗೆದುಕೊಂಡು ಲಕ್ಷ್ಮೀಮಂಡ್ಳಕ್ಕೆ ಅರ್ಚನೆಮಾಡೆಕು –
ಓಂ ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹಿ | ತನ್ನೋ ಲಕ್ಷ್ಮೀಃ ಪ್ರಚೋದಯಾತ್ ||
ಓಂ ಭೂಃ ಮಹಾಲಕ್ಷ್ಮೀಂ ಆವಾಹಯಾಮಿ | ಓಂ ಭುವಃ ಮಹಾಲಕ್ಷ್ಮೀಂ ಆವಾಹಯಾಮಿ | ಓಗುಂ ಸುವಃ ಮಹಾಲಕ್ಷ್ಮೀಂ ಆವಾಹಯಾಮಿ | ಓಂ ಭೂರ್ಭುವಸ್ಸುವಃ ಮಹಾಲಕ್ಷ್ಮೀಂ ಆವಾಹಯಾಮಿ || (ಹೇಳ್ಯೊಂಡು ನಾಕು ಸರ್ತಿ ಹೂಗು ಹಾಕುವದು)
ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗಾಕೆಕು)
ಓಂ ಈಶ್ವರ್ಯೈ ನಮಃ | ಓಂ ಕಮಲಾಯೈ ನಮಃ | ಓಂ ಲಕ್ಷ್ಮೈ ನಮಃ | ಓಂ ಚಲಾಯೈ ನಮಃ | ಓಂ ಭೂತ್ಯೈ ನಮಃ | ಓಂ ಹರಿಪ್ರಿಯಾಯೈ ನಮಃ | ಓಂ ಪದ್ಮಾಯೈ ನಮಃ | ಓಂ ಪದ್ಮಾಲಯಾಯೈ ನಮಃ | ಓಂ ಸಂಪತ್ಯೈ ನಮಃ | ಓಂ ರಮಾಯೈ ನಮಃ | ಓಂ ಶ್ರಿಯೈ ನಮಃ |
ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||
ಶ್ರೀ ಮಹಾಲಕ್ಷ್ಮೈ ನಮಃ ||
(ಅಷ್ಟೋತ್ತರಶತನಾಮ ಬತ್ತರೆ ಈಗ ಮಾಡ್ಳಕ್ಕು. ಮತ್ತೆ ಶ್ರೀಸೂಕ್ತ ಬತ್ತರೆ ಹೇಳ್ಳಕ್ಕು/ಹೇಳ್ಯೊಂಡು ಹೂಗಾಕಲಕ್ಕು).
ಮತ್ತೆ ಎರಡೂ ಮಂಡಲಕ್ಕು ಕ್ರಮವಾಗಿ ನಾಲ್ಕು ಸರ್ತಿ ನೀರು ಬಿಟ್ಟು ಮತ್ತೆ ಹೂ ಗಂಧ ಅಕ್ಷತೆ, ಧೂಪ , ದೀಪ ಸಮರ್ಪಣೆ ಮಾಡುವದು –
ಶ್ರೀ ಮಹಾಗಣಪತಯೇ ನಮಃ, ಶ್ರೀ ಮಹಾಲಕ್ಷ್ಮೈ ನಮಃ
ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ,
ಕ್ಷೀರಂ ನಿವೇದಯಾಮಿ (ಎರಡು ದೇವರಿಗೂ ಪ್ರತ್ಯೇಕ ಪ್ರತ್ಯೇಕ ನೇವೇದ್ಯಕ್ಕಿಪ್ಪದರ ನೇವೇದ್ಯ ಮಾಡಿ) , ತಾಂಬೂಲಂ ಸಮರ್ಪಯಾಮಿ (ತಾಂಬೂಲ ನೇವೇದ್ಯ ಮಾಡೆಕು), ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡೆಕು), ಮಂತ್ರಪುಷ್ಪಂ ಸಮರ್ಪಯಾಮಿ , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಮೂರು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡೆಕು) |
ಶ್ರೀ ಮಹಾಗಣಪತಯೇ ನಮಃ, ಶ್ರೀ ಮಹಾಲಕ್ಷ್ಮೈ ನಮಃ ,ಸರ್ವೋಪಚಾರಪೂಜಾಃ ಸಮರ್ಪಯಾಮಿ |
ಶ್ರೀ ಮಹಾಗಣಪತಯೇ ನಮಃ ಪ್ರಸನ್ನಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಗಣಪತಿಮಂಡ್ಳಕ್ಕೆ ಒಂದು ಹೂಗು ಹಾಕಿ ಒಂದು ಸಕ್ಕಣ ನೀರು) ,
ಶ್ರೀ ಮಹಾಲಕ್ಷ್ಮೈ ನಮಃ , ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಮಹಾಲಕ್ಷ್ಮೀಮಂಡ್ಳಕ್ಕೆ ಒಂದು ಹೂಗು ಹಾಕಿ ಒಂದು ಸಕ್ಕಣ ನೀರು)
ಮತ್ತೆ ಕೈಲಿ ಹೂಗು ಗಂಧ ಅಕ್ಷತೆ ತೆಕ್ಕೊಂಡು ಗಿಂಡಿ/ಕವುಳಿಗೆ ಬಗ್ಗುಸಿ ನೀರುಬಿಡುವುದು –
ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||
ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||
ನೀರು ಹಾಕಿ ಎರಡೂ ಮಂಡ್ಳಕ್ಕು ಹಾಕುವದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.
ಆವಾಹಿತದೇವತಾಃ, ಓಂ ಭೂರ್ಭುವಸ್ಸುವರೋಂ ಉದ್ವಾಸಯಾಮಿ || ಎರಡೂ ಮಂಡ್ಳಂದ ಹೂಗು ತೆಗೆದು ಮೂಸಿ ಹಾಕುವುದು, ಆಚಮನ ಮಾಡುವದು.
ಹರಿಃ ಓಂ | ಶುಭಮ್||
- ಚೆನ್ನೈಬಾವ°