Oppanna.com

ಮಾಸಿಕ ತಿಥಿ ಸಂಕ್ಷಿಪ್ತ ವಿಧಾನ

ಬರದೋರು :   ಚೆನ್ನೈ ಬಾವ°    on   15/09/2019    0 ಒಪ್ಪಂಗೊ

ಚೆನ್ನೈ ಬಾವ°

ಪಿಂಡಬಲಿಪ್ರದಾನ – ಸಂಕ್ಷಿಪ್ತ ವಿಧಾನ

ಮದಲೇ ಹೇದಾಂಗೆ ಕಾಲಾಯ ತಸ್ಮೈ ಹೇಳ್ಸರ ನೆಂಪುಮಡಿಕ್ಕೊಂಡು ತಿಂಗಳು ತಿಂಗಳು ಮಾಸಿಕ ಮಾಡ್ಳೆ ಎಡಿತ್ತಿಲ್ಲೆ, ವೊರಿಶಕ್ಕೊಂದು ತಿಥಿಮಾಡಿಗೊಂಬಲೂ ಎಡಿತ್ತಿಲ್ಲೆ ಆದ್ರೆ ಮಾಡ್ಳೆ ಮನಸ್ಸಿದ್ದು  ಹೇಳ್ತೋರಿಂಗೆ ಸಂಕ್ಷಿಪ್ತವಿಧಾನಲ್ಲಿ ಮಾಸಿಕಶ್ರಾದ್ಧ ವಿಧಿ ಇಲ್ಲಿ ಬರದ್ದು. ಇದರ್ನೇ ವಾರ್ಷಿಕಶ್ರಾದ್ಧಕ್ಕೂ ಕಟ್ಟುಕಟ್ಳೆ ಮಾಡ್ಳೆ ಉಪಯೋಗುಸಲಕ್ಕು. ನೆಂಪಿರಳಿ.. ಇದು ಏನೂ ಎಡಿಯದ್ದವಕ್ಕೆ ಮಾಂತ್ರ!

ಮೂರು ದರ್ಭೆಯ ಒಂದು ಪವಿತ್ರ, 16ದರ್ಭೆಯ (ಕೊಡಿದರ್ಭೆ) ಎರಡು ಕಟ್ಟು (ವಾರ್ಷಿಕ ಶ್ರಾದ್ಧಕ್ಕಾದರೆ 16ರದ್ದು ಒಂದು 64ರದ್ದು ಒಂದು ., ಒತ್ತೆ ಪಿಂಡದವಕ್ಕಾದರೆ 16 ದರ್ಭೆಯ ಒಂದು ಕಟ್ಟು ಮಾಂತ್ರ ಸಾಕು ) , ರಜ ಕುಂಟುದರ್ಭೆಯನ್ನೂ ಮದಲೆ ತಯಾರಿ ಮಾಡಿಮಡಿಕ್ಕೊಂಡು ಮಿಂದೊಂಡು ನೀರುತೆಕ್ಕೊಂಡು ಬಂದು ಕೂಪದು. ದೀಪವ ಮೂಡಹೊಡೆಲಿ ಹೊತ್ತಿಸಿ ಮಡಿಕ್ಕೊಂಬದು.

 

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋsಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ವಿಷ್ಣೋ ವಿಷ್ಣೋ ವಿಷ್ಣುಃ

ವಿಷ್ಣುಸ್ಮರಣೆ ಮಾಡಿಗೊಂಡು ತಲಗೆ ನೀರು ಪ್ರೋಕ್ಷಿಸಿಗೊಂಬದು. (ವಿಷ್ಣು ಸ್ಮರಣೆ ಮಾಡಿದಲ್ಯಂಗೆ ನಮ್ಮ ಬಾಹ್ಯಾಭ್ಯಂತರ ಶುಚಿ ಆವ್ತು ಹೇಳ್ತದು ನಮ್ಮ ನಂಬಿಕೆ. )

ಆಚಮ್ಯ, ಪ್ರಾಣಾನಾಯಮ್ಯ, ಪ್ರಣವಸ್ಯ ಪರಬ್ರಹ್ಮ ಋಷಿಃ….
ಮೂಡಮೋರೆಯಾಗಿ ಕೂದೊಂಡು ಆಚಮನ ಮಾಡಿ ಪವಿತ್ರ ಹಾಕ್ಯೊಂಡು ಒಂದು ಪ್ರಾಣಾಯಾಮ ಮಾಡುವದು.

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಗಿಂಡಿಗೆ ಹೂಗಂಧ ಅಕ್ಕಿಕಾಳು ತುಳಶಿ ಹಾಕುವದು.

16ರ ದರ್ಭೆಕಟ್ಟು ಎರಡು ಒಟ್ಟಿಂಗೆ ಹಿಡ್ಕೊಂಡು (ಒತ್ತೆ ಪಿಂಡದವಾದರೆ ಆ 16ರ ಒಂದು ಕಟ್ಟವ ಒಂದರನ್ನೇ) ಬಿಳಿ ಹೂ ಅದರ್ಲಿ ಮಡುಗಿ ಕೈಲಿ ಹಿಡ್ಕೊಂಡು  ಸಂಕಲ್ಪ

…………. ಶುಭಪುಣ್ಯತಿಥೌ , ಪ್ರಾಚೀನಾವೀತಿ, ಅಸ್ಮತ್ ಪಿತುಃ (ಮಾತುಃ) ಆದ್ಯಮಾಸಿಕ ಶ್ರಾದ್ಧೇ ಪಿತೃ-ಪಿತಾಮಹ-ಪ್ರಪಿತಾಮಹಾನಾಂ ………………………………..   …………………………………..     ……………………………… ಶರ್ಮಾಣಾಂ …………………. ಗೋತ್ರಾಣಾಂ (ಮಾತೃ-ಪಿತಾಮಹೀ-ಪ್ರಪಿತಾಮಹೀನಾಂ ………..…… …………… …………..…. ದಾಯೀನಾಂ …..….. ಗೋತ್ರಾಣಾಂ) ವಸು-ರುದ್ರ-ಆದಿತ್ಯರೂಪಾಣಾಂ ಪ್ರೀತ್ಯರ್ಥಂ ಪಿಂಡಬಲಿಪ್ರದಾನಂ ಕರಿಷ್ಯೇ ||    (ಕೈಲಿಪ್ಪ ದರ್ಭೆಕಟ್ಟವ ದೀಪದ ಬುಡಲ್ಲಿ ಮೂಡಕೊಡಿಯಾಗಿ ಮಣೆ ಮೇಗೆ ಮಡಗುವದು)

ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ ||   (ಆ ದರ್ಭೆಕಟ್ಟಕ್ಕೆ ಅಕ್ಕಿ ಕಾಳು ಹಾಕಿ ನಮಸ್ಕಾರ ಮಾಡುವದು)

ತೆಂಕಕ್ಕೆ ಮೋರೆಮಾಡಿ ಕೂದುಗೊಂಡು ಎದುರೆ ನೀರು ಪ್ರೋಕ್ಷಣೆ ಮಾಡಿ ವೃತ್ತ ಮಂಡಲವ ಬರೆದು ಗಂಧ ಬೊಟ್ಟು ಮಡುಗಿ ಎಳ್ಳು ಮಡುಗುವದು. ಮಣೆಲಿ ಮಡಿಗಿದ ಒಂದು 16ರ ( ವಾರ್ಷಿಕ ತಿಥಿ ಆದರೆ 64ರ) ಒಂದು ಕಟ್ಟು ದರ್ಭೆ ಕೈಲಿ ತೆಕ್ಕೊಂಡು ಕಟ್ಟು ಬಿಡಿಸಿ ಬರೆದ ವೃತ್ತ ಮಂಡಲದ ಮೇಗೆ ತೆಂಕಕೊಡಿಯಾಗಿ ಹರಗಿ ಅದರ ಮೇಗಂಗೆ ತಿಲೋದಕ ಬಿಡುವುದು. (ಒತ್ತೆ ಪಿಂಡದವಾದರೆ 16ರ ಆ ಒಂದುಕಟ್ಟವ)

ಮೂರುಪಿಂಡದರಾದರೆ –

ತಟ್ಟೆಲಿ ಮೂರು ಪಿಂಡ ಮಾಡಿ ಮಡುಗಿ ಕೈಯಲ್ಲಿ ಒಂದು ಪಿಂಡವನ್ನು ಹಿಡ್ಕೊಂಡು  –

ಅಸ್ಮತ್ ಪಿತುಃ (ಮಾತುಃ) ಆದ್ಯಮಾಸಿಕ ಶ್ರಾದ್ಧೇ  ಅಸ್ಮತ್ ಪಿತೃಭ್ಯಃ …………………………… ಶರ್ಮಭ್ಯಃ  ……………  ಗೋತ್ರೇಭ್ಯಃ ವಸುರೂಪೇಭ್ಯಃ ಅಯಂ ಪಿಂಡ ಸ್ವಧಾ ನಮಃ | ( ಮಾತೃಭ್ಯಃ …………………….. ದಾಯೀಭ್ಯಃ ………………… ಗೋತ್ರಾಭ್ಯಃ  ವಸುರೂಪಾಭ್ಯಃ )   (ಒಂದನೇ ಪಿಂಡವ ಆ ದರ್ಭೆಹಾಸಿನ ಕೆಳಾಣ ಭಾಗಲ್ಲಿ ಮಡುಗುವದು.

ಎರಡ್ನೇ ಪಿಂಡವ ಕೈಲಿ ಹಿಡ್ಕೊಂಡು –  ಅಸ್ಮತ್ ಪಿತಾಮಹೇಭ್ಯಃ ……………..…….ಶರ್ಮಭ್ಯಃ …………………… ಗೋತ್ರೇಭ್ಯಃ ರುದ್ರರೂಪೇಭ್ಯಃ ಅಯಂ ಪಿಂಡ ಸ್ವಧಾ ನಮಃ  || (ಪಿತಾಮಹೀಭ್ಯಃ …………………… ದಾಯೀಭ್ಯಃ ………..…. ಗೋತ್ರಾಭ್ಯಃ  ರುದ್ರರೂಪಾಭ್ಯಃ)   ಮದಲಾಣ ಪಿಂಡದ ಮೇಗಾಣ ಭಾಗಲ್ಲಿ ನೆಡುಕೆ ಎರಡ್ನೇ ಪಿಂಡವ ಮಡುಗುವದು.

ಮೂರ್ನೇ ಪಿಂಡವ ಕೈಲಿ ಹಿಡ್ಕೊಂಡು – ಅಸ್ಮತ್ ಪ್ರಪಿತಾಮಹೇಭ್ಯಃ  ………………….  ಶರ್ಮಭ್ಯಃ ………………..  ಗೋತ್ರೇಭ್ಯಃ ಆದಿತ್ಯರೂಪೇಭ್ಯಃ ಅಯಂ ಪಿಂಡ ಸ್ವಧಾ ನಮಃ || (ಪ್ರಪಿತಾಮಹೀಭ್ಯಃ ………….……. ದಾಯೀಭ್ಯಃ ……..……ಗೋತ್ರಾಭ್ಯಃ ಆದಿತ್ಯರೂಪಾಭ್ಯಃ )  ಪಿಂಡವ ಮದಲಾಣ ಎರಡು ಪಿಂಡದ ಮೇಗಾಣ ಹೊಡೆಲಿ  ಮಡುಗುವದು.

ಕೈಲಿ ಎಳ್ಳು ಹಿಡ್ಕೊಂಡು ಮೂರು ಪಿಂಡಗಳ ಮೇಲೆ ನೀರು ಬಿಡುವುದು – ಪಿಂಡಸ್ಯೋಪರಿ ತಿಲೋದಕಮ್ |

 

[ಒತ್ತೆಪಿಂಡದವರಾದರೆ ಒಂದು ಪಿಂಡವ ಮಾಂತ್ರ ಮಾಡಿ ಕೈಲಿ ತೆಕ್ಕೊಂಡು –

ಅಸ್ಮತ್ ಪಿತುಃ (ಮಾತುಃ) ಆದ್ಯಮಾಸಿಕಶ್ರಾದ್ಧೇ ಅಸ್ಮತ್ ಪಿತೃ-ಪಿತಾಮಹ-ಪ್ರಪಿತಾಮಹೇಭ್ಯಃ  ……………………. ………………………….. ……………………………. ಶರ್ಮಭ್ಯಃ ……………….. ಗೋತ್ರೇಭ್ಯಃ ವಸು-ರುದ್ರ-ಆದಿತ್ಯ ರೂಪೇಭ್ಯಃ (ಮಾತೃ-ಪಿತಾಮಹೀ-ಪ್ರಪಿತಾಮಹೀಭ್ಯಃ ……………………………. ……………………….. …………………. ದಾಯೀಭ್ಯಃ …………. ಗೋತ್ರಾಭ್ಯಃ ವಸು-ರುದ್ರ-ಆದಿತ್ಯರೂಪಾಭ್ಯಃ)  ಅಯಂ ಪಿಂಡ ಸ್ವಧಾ ನಮಃ ಹೇಳಿಕ್ಕಿ ಪಿಂಡವ ದರ್ಭಯ ಕೊಡಿಲಿ ಮೇಗೆ ಮಡಿಗಿ ಪಿಂಡದ ಮೇಗೆ ಒಂದು ತಿಲೋದಕ ಬಿಡುವದು. ]

ಮೂರುಪಿಂಡದವಕ್ಕೆ ಬಲಿಬಾಳೆ ಮಡುಗುತ್ತ ಕ್ರಮ-

ಮತ್ತೆ ಮಣೆಯಲ್ಲಿಮಡಿಕ್ಕೊಂಡಿಪ್ಪ ಎರಡ್ನೇ ದರ್ಭಕಟ್ಟವ (16ರ ದರ್ಭೆಕಟ್ಟ)  ಕೈಯಲ್ಲಿ ತೆಕ್ಕೊಂಡು ಕಟ್ಟ ಬಿಡುಸಿ  ಪಿಂಡದ ಬಲದೊಡೆಲಿ ಹೇದರೆ  ಕರ್ತೃವಿನ ಎದುರು ಎಡಭಾಗದಲ್ಲಿ ಪಿಂಡದ ಈಚಿಕೆ ತೆಂಕಕೊಡಿಯಾಗಿ ದರ್ಭೆಯನ್ನು ಹಾಸಿ ತಿಲೋದಕ ಬಿಟ್ಟು ಬಲಿಬಾಳೆಯ ಕೈಲಿ ಹಿಡ್ಕೊಂಡು – ಅಸ್ಮತ್ ಪಿತುಃ (ಮಾತುಃ) ಆದ್ಯ ಮಾಸಿಕ ಶ್ರಾದ್ಧೇ ಅಸ್ಮತ್ ಪಿತೃಪಿತಾಮಹಪ್ರಪಿತಾಮಹೇಭ್ಯಃ ………………………….   ……………………………     ……………………………  ಶರ್ಮಭ್ಯಃ  ……………… ಗೋತ್ರೇಭ್ಯಃ ವಸು-ರುದ್ರ-ಆದಿತ್ಯರೂಪೇಭ್ಯಃ  (ಮಾತೃ-ಪಿತಾಮಹೀ-ಪ್ರಪಿತಾಮಹೀಭ್ಯಃ ……………..…… ………………………… …………..…… ದಾಯೀಭ್ಯಃ  ………………ಗೋತ್ರಾಭ್ಯಃ ವಸು-ರುದ್ರ-ಆದಿತ್ಯರೂಪಾಭ್ಯಃ ) ಅಯಂ ಬಲಿ ಸ್ವಧಾ ನಮಃ ||   ಬಲಿಬಾಳೆಯ ಆ ದರ್ಭೆ ಹಾಸಿದರ ಮೇಗಂದ ಬಡಗಕೊಡಿಯಾಗಿ ಮಡುಗುವದು.

[ಒತ್ತೆ ಪಿಂಡದವಕ್ಕೆ ಬಲಿಬಾಳೆ ಮಡುಗುತ್ತ ಕ್ರಮ –

ಬಲಿಬಾಳೆಯ ಕೈಲಿ ತೆಕ್ಕೊಂಡು ಅಸ್ಮತ್ ಪಿತುಃ(ಮಾತುಃ) ಆದ್ಯಮಾಸಿಕಶ್ರಾದ್ಧೇ  ಅಸ್ಮತ್ ಪಿತೃಪಿತಾಮಹಪ್ರಪಿತಾಮಹೇಭ್ಯಃ  ………………………………….. ……………………….  …………………………. ಶರ್ಮಭ್ಯಃ ………………….. ಗೋತ್ರೇಭ್ಯಃ ವಸು-ರುದ್ರ-ಆದಿತ್ಯರೂಪೇಭ್ಯಃ    (ಮಾತೃ-ಪಿತಾಮಹೀ-ಪ್ರಪಿತಾಮಹೀಭ್ಯಃ ————— ————-   ———— ದಾಯೀಭ್ಯಃ  ———— ಗೋತ್ರಾಭ್ಯಃ ವಸು-ರುದ್ರ-ಆದಿತ್ಯರೂಪಾಭ್ಯಃ) ಅಯಂ ಬಲಿ ಸ್ವಧಾ ನಮಃ ಹೇಳಿಕ್ಕಿ ಬಲಿಬಾಳ ಪಿಂಡದ ಕೆಳಭಾಗಲ್ಲಿ ದರ್ಭೆಮೇಗಂದ ಬಡಗಕೊಡಿಯಾಗಿ ಮಡುಗುವದು. ] ಬಲೇರುಪರಿ ತಿಲೋದಕಂ ಹೇಳಿ ಹೇಳಿಕ್ಕಿ ಬಲಿಬಾಳಗೆ ಒಂದು ತಿಲೋದಕ ಬಿಡುವದು.

ಮತ್ತೆ ಕೈಲಿ ಎಳ್ಳು ತುಳಸಿ ದರ್ಭೆ ಹಿಡ್ಕೊಂಡು ನೀರು ಸೇರಿಸಿ ಪಿಂಡಬಲಿಬಾಳಗೆ ಅಪ್ರದಕ್ಷಿಣಾಕಾರವಾಗಿ ತಂದು ಪ್ರಥಮ ದ್ವಿತೀಯ ತೃತೀಯ ಪಿಂಡದಮೇಗಂಗೆ ಕ್ರಮವಾಗಿ ತಿಲೋದಕ ಬಿಡುವದು –

ಅಸ್ಮತ್ ಪಿತುಃ ಆದ್ಯಮಾಸಿಕ ಶ್ರಾದ್ಧೇ ಅಸ್ಮತ್ ಪಿತೃಭ್ಯಃ  ………..  ಶರ್ಮಭ್ಯಃ ……….  ಗೋತ್ರೇಭ್ಯಃ ವಸುರೂಪೇಭ್ಯಃ ಸ್ವಧಾ ನಮಃ | (ಮಾತೃಭ್ಯಃ ….. ದಾಯೀಭ್ಯಃ ….ಗೋತ್ರಾಭ್ಯಃ)    ಪಿಂಡಬಲ್ಯೋಪರಿ ತಿಲೋದಕಮ್ |  ಸುರೂವಾಣ ಪಿಂಡದ ಮೇಗಂಗೆ ನೀರು ಬಿಡುವದು.

ಅಸ್ಮತ್ ಪಿತಾಮಹೇಭ್ಯಃ …………..ಶರ್ಮಭ್ಯಃ …….. ಗೋತ್ರೇಭ್ಯಃ ರುದ್ರರೂಪೇಭ್ಯಃ ಸ್ವಧಾ ನಮಃ  ||  (ಪಿತಾಮಹೀಭ್ಯಃ ….. ದಾಯೀಭ್ಯಃ ….ಗೋತ್ರಾಭ್ಯಃ)  ಪಿಂಡಬಲ್ಯೋಪರಿ ತಿಲೋದಕಮ್ |  ಎರಡ್ನೇ ಪಿಂಡದ ಮೇಗಂಗೆ ನೀರು ಬಿಡುವದು.

ಅಸ್ಮತ್ ಪ್ರಪಿತಾಮಹೇಭ್ಯಃ ……. ಶರ್ಮಭ್ಯಃ ……… ಗೋತ್ರೇಭ್ಯಃ ಆದಿತ್ಯ ರೂಪೇಭ್ಯಃ ಸ್ವಧಾ ನಮಃ || (ಪ್ರಪಿತಾಮಹೀಭ್ಯಃ ….. ದಾಯೀಭ್ಯ ……… ಗೋತ್ರಾಭ್ಯಃ) ಪಿಂಡಬಲ್ಯೋಪರಿ ತಿಲೋದಕಮ್ |  ಮೂರ್ನೇ ಪಿಂಡದ ಮೇಗಂಗೆ ನೀರು ಬಿಟ್ಟು ಕೈಲಿಪ್ಪದರೆಲ್ಲ  ಬಲಿಬಾಳಗೆ ಹಾಕುವುದು.

[ಒತ್ತೆಪಿಂಡದವೂ ಇದೇ  ಕ್ರಮಲ್ಲಿ ಮೂರು ತಿಲೋದಕವ ಒಂದು ಪಿಂಡದಮೇಗೆ ಬಿಟ್ಟು ಅಕೇರಿಗೆ ಕೈಲಿಪ್ಪದರ ಬಲಿಬಾಳಗೆ ಹಾಕುವದು.]

ಹಾಲು ಜೇನು ಮೊಸರು ತುಪ್ಪ ಎಳ್ಳು ಮಿಶ್ರಮಾಡಿ ಪಿಂಡಬಲಿಬಾಳೆ ಸುತ್ತ ಅಪ್ರದಕ್ಷಿಣಾಕಾರವಾಗಿ ಬಿಡುವದು –

ಅನೇನ ಪಂಚಾಮೃತೋದಕೇನ ತೃಪ್ತಿರಸ್ತು |

ಪಿಂಡವ ರಜ ಆಡುಸಿ ಅಥವಾ ಮೂರು ಕುಂಟುದರ್ಭೆ ತೆಕ್ಕೊಂಡು ಮೇಗಂದ ಕೆಳಂತಾಗಿ ಉದ್ದಿಗೊಂಡು – ಪಿಂಡಂ ಉದ್ವಾಸಯಾಮಿ | , ಬಲಿಬಾಳೆಯ ತುಸು ಎಳೆದು – ಬಲಿಂ ಉದ್ವಾಸಯಾಮಿ |

ಎರಡು ಅಕ್ಕಿ ಕಾಳು ಕೈಯಲ್ಲಿ ಹಿಡ್ಕೊಂಡು ನೀರುಬಿಟ್ಟು ತಟ್ಟೆಗೆ ಹಾಕುವದು – ಅನೇನ ಆದ್ಯಮಾಸಿಕ ಪಿಂಡಬಲಿಪ್ರದಾನಕರ್ಮಣಾ ಶ್ರೀ ಮಹಾವಿಷ್ಣುಃ ಪ್ರೀಯತಾಮ್ | ಓಂ ತತ್ಸತ್ ||

ಉಪವೀತಿ | ಆಚಮ್ಯ | (ಆಚಮನ ಏವಾಗಳೂ ಮೂಡಮೋರೆಮಾಡಿಕೂದೊಂಡೇ ಮಾಡೆಕ್ಕಾದ್ದು)

ಪ್ರಾಚೀನಾವೀತಿಯಾಗಿ ಬಲಿಬಾಳೆಯ ಬಲಿಬಾಳೆಯ ಅಡಿಲಿಪ್ಪ ದರ್ಭೆ ಸಹಿತ ಹೆರ ತೆಕ್ಕೊಂಡೋಗಿ  ಇಲ್ಲಿ ಮಡಿಕ್ಕೊಂಡಿತ್ತಿದ್ದಾಂಗೆ ಬಡಗ ಕೊಡಿಯಾಗಿ ಕಾಕಗೆ ಮಡುಗಿ, ಪಿಂಡವ ನೀರಿಲ್ಲಿ ವಿಸರ್ಜಿಸಿ ಉಪವೀತಿ ಮಾಡಿಗೊಂಡು ಕೈಕಾಲು ತೊಳಕ್ಕೊಂಡು ಬಪ್ಪದು.

ಹರಿಃ ಓಮ್ ||

 ** ** **

ವಿ.ಸೂ : ಆದ್ಯಮಾಸಿಕಶ್ರಾದ್ಧೇ ಹೇದಿಪ್ಪಲ್ಲಿ ಪ್ರತಿಸಾಂವತ್ಸರಿಕ ತಿಥಿಗೆ ಪಿತುಃ/ಮಾತುಃ ಪ್ರತಿಸಾಂವತ್ಸರಿಕಶ್ರಾದ್ಧೇ ಹೇಳಿಯೂ ಮಾಸಿಕ ಶ್ರಾದ್ಧಕ್ಕೆ –

1ನೇ ಮಾಸಿಕ – ಆದ್ಯಮಾಸಿಕಶ್ರಾದ್ಧೇ

2 ನೇ ಮಾಸಿಕ – ದ್ವಿತೀಯಮಾಸಿಕಶ್ರಾದ್ಧೇ

3 ನೇ ಮಾಸಿಕ – ತೃತೀಯಮಾಸಿಕಶ್ರಾದ್ಧೇ

4 ನೇ ಮಾಸಿಕ – ಚತುರ್ಥಮಾಸಿಕಶ್ರಾದ್ಧೇ

5 ನೇ ಮಾಸಿಕ – ಪಂಚಮಮಾಸಿಕಶ್ರಾದ್ಧೇ

6 ನೇ ಮಾಸಿಕ – ಷಷ್ಠಮಮಾಸಿಕಶ್ರಾದ್ಧೇ

7 ನೇ ಮಾಸಿಕ – ಸಪ್ತಮಮಾಸಿಕಶ್ರಾದ್ಧೇ

8 ನೇ ಮಾಸಿಕ  – ಅಷ್ಟಮಮಾಸಿಕಶ್ರಾದ್ಧೇ

9 ನೇ ಮಾಸಿಕ (ಐದುವರೆಮಾಸಿಕ) – ಊನ ಷಾಣ್ಮಾಸಿಕಶ್ರಾದ್ಧೇ

10 ನೇ ಮಾಸಿಕ – ದಶಮಮಾಸಿಕಶ್ರಾದ್ಧೇ

11 ನೇ ಮಾಸಿಕ – ಏಕಾದಶಮಾಸಿಕಶ್ರಾದ್ಧೇ

12 ನೇ ಮಾಸಿಕ – ದ್ವಾದಶಮಾಸಿಕಶ್ರಾದ್ಧೇ

13 ನೇ ಮಾಸಿಕ – ತ್ರಯೋದಶಮಾಸಿಕಶ್ರಾದ್ಧೇ

14 ನೇ ಮಾಸಿಕ – ಚತುರ್ದಶಮಾಸಿಕಶ್ರಾದ್ಧೇ

15 ನೇ ಮಾಸಿಕ -ಪಂಚದಶಮಾಸಿಕಶ್ರಾದ್ಧೇ

16 ನೇ ಮಾಸಿಕ – ಊನಮಾಸಿಕಶ್ರಾದ್ಧೇ  ಹೇಳಿ ಬದಲ್ಸಿಗೊಂಡು ಹೇಳುವದು.

** **

ಕೃಪೆ : ತುಪ್ಪೆಕ್ಕಲ್ಲು ಗೋಪಾಲ ಭಾವ°

 

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×