Oppanna.com

'ಅಡಿಗೆ ಸತ್ಯಣ್ಣ'- ಭಾಗ 35 (ದೀಪಾವಳಿ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   07/11/2013    9 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣ ದೀಪಾವಳಿ ವಿಶೇಷಾಂಕ ಹೇದ ಕೂಡ್ಳೆ ಅಡಿಗೆ ಸತ್ಯಣ್ಣ ಅಡಿಗೆ ಕೊಟ್ಟಗೆಲಿ ಪಟಾಕಿ ಹೊಟ್ಟಿಸದನೋ ಹೇದು ನಿಂಗೊ ಗ್ರೇಶಿರೆ ಅದಕ್ಕ ಆನು ಜೆನ ಅಲ್ಲ. ಹಾಂಗೇದು ಪಟಾಕಿ ಹೊಟ್ಟಿಸಿದ್ದನಿಲ್ಲೆಯೋ ಕೇಟ್ರೆ –  ಹೊಟ್ಟಿಸಿದ್ದ°, –  ಬಾಯಿ ಪಟಾಕಿ – ಅಡಿಗೆ ಕೊಟ್ಟಗೆಲಿ.  ದೀಪಾವಳಿ ಸಮಯಲ್ಲಿ ಹೊಟ್ಟಿಸಿದ ಕಾರಣ ಅದು ದೀಪಾವಳಿ ಪಟಾಕಿ. ಅದು ಇಲ್ಲಿಗೆ ಎತ್ತಿಯಪ್ಪಗ ದೀಪಾವಳಿ ವಿಶೇಷಾಂಕ. ಅಂಬಗ ನೋಡುವೊ° ಎಂತಡ ಶುದ್ದಿ – 
~
12.10.2013
ಮನ್ನೆ ದೊಡ್ಡಜ್ಜನ ಒರುಶಾಂತ ಹೇದು ಅಡಿಗೆ ಸತ್ಯಣ್ಣ° ನಾಕು ದಿನ ಅಲ್ಲಿ ಬಾಕಿ ಆದ್ದು ಗೊಂತಿದ್ದನ್ನೆ
ಅಡಿಗೆ ಸತ್ಯಣ್ಣ ನಾಕು ದಿನ ಅಲ್ಲಿ ಇದ್ದ ಕಾರಣ ಕುಂಠಾಂಗಿಲ ಬಾವನ ಕೆಮಿಗೆ ಗಾಳಿ ಹೊಕ್ಕಿತ್ತ ಸಂಶಯ
ಒರುಶಾಂತ ಕಳುದು ಓ ಮನ್ನೆ ಅಡಿಗೆ ಸತ್ಯಣ್ಣನೂ ಮಗಳು ರಮ್ಯನೂ ಕೊಡೆಯಾಲಕ್ಕೆ ಹೋಗಿತ್ತವು ರಮ್ಯಂಗೆ ಚೂಡಿದಾರ, ಅಬ್ಬಗೆ ಸೀರೆ, ಅಣ್ಣಂಗೆ ಪೇಂಟಂಗಿ, ಸ್ವಯಂ ಸತ್ಯಣ್ಣಂಗೆ ಸಾಮಾನ್ಯ ಆಕಾಶನೀಲಿಯುದೆ ರಜ ಅರಶಿನ ಕಂದು ಮಿಶ್ರಿತ ಕೆಂಪು ಕಪ್ಪು ಪಚ್ಚೆ ಸೇರಿದ ಬಣ್ಣದ ಬೆಳಿ ಅಂಗಿ ಆಗ್ಬೇಕು ದೀಪಾವಳಿಗೆ ಕುಲ್ಯಾಡಿಕರ್ಸಿಂದ ಹೇದೊಂಡು
ಕುಲ್ಯಾಡಿಕಾರನಲ್ಲಿಂದ ಹೆರಟು ಹೆರಬಪ್ಪಗ ಕುಂಠಾಂಗಿಲ ಬಾವ° ಎದುರೆ ಪ್ರತ್ಯಕ್ಷ ಆದ°
ಸರಿ ನಮ್ಮ ಸತ್ಯಣ್ಣ ಅಲ್ಲದೋಳಿ ನಿಂದು ಮಾತಾಡಿಗೊಂಡಿದ್ದಾಂಗೆ ತಾಜುಮಾಲಿಂಗೊ ಹೋಪೋ° ಹೇದು ತೀರ್ಮಾನ ಆತು ಚಾಯೆ – ಬನ್ಸು ಹೇಂಗಿಕ್ಕು ನೋಡುವೋ° ಹೇದು
ಅಲ್ಲಿ ಕೂದೊಂಡು ಅದೂ ಇದೂ ಒರುಶಾಂತದ್ದು ಹೇದು ಮಾತಾಡ್ಯೊಂಡಿಪ್ಪಗ ಅಡಿಗೆ ಸತ್ಯಣ್ಣ° ಹೇದ°, ಇದಣ್ಣೋ ನಿಂಗಳ ಅಣ್ಣ ಲೆಕ್ಚೆರು ಇದ್ದ°ಲ್ಲದಾ… ಬರೇ ಪಾಪ ಮನುಷ್ಯ ಮಿನಿಯಾ
ಕುಂಠಾಂಗಿಲ ಹಾ° ಹೇದು ತಳಿಯದ್ದೆ ಕೂದನೋ?!, ಸತ್ಯಣ್ಣನ ಕ್ರಮಲ್ಲಿ ಅವನೂ ಸುರುಮಾಡಿದ° – “ಅಂಬಗ ಬಾಕಿದ್ದವ° ಎಂತ ಪೆದಂಬನೋ?!”
ಸತ್ಯಣ್ಣ° ಎಂತ ಅದಕ್ಕೆಲ್ಲ ಸಮಜಾಯಿಸಿ ಕೊಟ್ಟೊಂಡು ಕೂರ್ತನೋ?! , ಸತ್ಯಣ್ಣ ಹೇದ° – “ಅಲ್ಲ ಹೇದು ಆನೆಂತಕೆ ಹೇಳೆಕು?!”
ಪುಣ್ಯ! ಅಲ್ಲ ಹೇದರೆ ಬ್ಯಾರಿ ಆತು ಹೇದು ಪುಣ್ಯಾದಿಗ° ಕುಂಠಾಂಗಿಲ ಬಾವ° ಸುರುಮಾಡಿದ್ದನಿಲ್ಲೆ 😀
**
2
ದೀಪಾವಳಿಯ ಎರಡು ದಿನ ಮದಲು ಬಂಬ್ರಾಣಲ್ಲಿ ಅನುಪ್ಪತ್ಯ
ಅಡಿಗೆ ಸತ್ಯಣ್ಣನೊಟ್ಟಿಂಗೆ ಹೋಪ ರಂಗಣ್ಣಂಗೆ ರೆಜಾ ಮಕ್ಕಳಾಟಿಗೆ ಇಪ್ಪದಾದರೂ ಬೇರವು ಮಾತಾಡ್ವಾಗ ಅದೆಂತ್ಸರ ಮಾತಾಡ್ಸು ಹೇದು ಕೆಮಿ ಕೊಟ್ಟು ಓಂಗುತ್ತ ಕ್ರಮ ಇಲ್ಲೆ.
ಹಾಂಗೇದು ಕೆಮಿ ಹತ್ರೆ ಆರಾರು ಮಾತಾಡ್ವವಾಗ ಕೆಮಿ ಕಟ್ಟಿ ಕೂಬಲೂ ಇಲ್ಲೆ.
ಮನ್ನೆ ಬಂಬ್ರಾಣ ಅನುಪ್ಪತ್ಯಲ್ಲಿ ಆಚಿಗೆ ಆರೋ ಇಬ್ರು ಅಜ್ಜಂದ್ರು ಮಾತಾಡ್ಸು ಕೇಳಿತ್ತು. ಎಂತದೋ ಪೊದು ವಿಶಯ ಕಾಣ್ತು
“ಕೂಸು ಎಂತ ಕಲ್ತಿದು?”
“ಡಿಗ್ರಿ ಮುಟ್ಟ ಆಯ್ದು”.
ರಂಗಣ್ಣಂಗೆ ಸಣ್ಣಕೊಂದು ಕುತೂಹಲ ಸುರುವಾತು. ಸತ್ಯಣ್ಣನತ್ರೆ ಕೇಟ° – ಡಿಗ್ರಿ ಮುಟ್ಟ ಹೇದರೆ ಎಂತರ ಮಾವ?
ಸತ್ಯಣ್ಣಂಗೆ ಮತ್ತೆ ಅದರ ವಿವರುಸದ್ದೆ ನಿಮುರ್ತ್ತಿ ಇದ್ದ?!
ಸತ್ಯಣ್ಣ° ಹೇದ° – ಡಿಗ್ರಿ ಮುಟ್ಟ ಹೇದರೆ ಡಿಗ್ರಿ ಒರೆಂಗೆ ಹೋಯ್ದು,  ಪಾಸು ಆಯ್ದೋ, ಮಾರ್ಕು ಎಟ್ಟು ಹೇದೆಲ್ಲ ತೊಳಚ್ಚಲಾಗ ಹೇದು ಅರ್ಥ 😀
**
3
ಅಡಿಗೆ ಸತ್ಯಣ್ಣಂಗೆ ದೀಪಾವಳಿ ಮುನ್ನಾಣ ದಿನ ಕೋಡಿಮೂಲೆಲಿ ತಿಥಿ
ರಂಗಣ್ಣಂಗೆ ಅಂದೆತ್ಸೋ ಹೋದಲ್ಲಿ ಅಲ್ಲಿ ಉದಿಯಪ್ಪಾಣ ಪಲಾರ ಆಗಿ ರಜ ಹೊತ್ತಪ್ಪಗ ಹೊಟ್ಟೆ ಉಬ್ಬರಿಸಿತ್ತು.
ಗೇಸು ಹೇಳ್ತರ್ಲಿ ಸಂಶಯ ಇಲ್ಲೆ
ಆರೋ ಹೇದವು ಕುಪ್ಪಿಸರ್ಬತ್ತು – ಲಿಂಮ್ಕ, ಕೋಕ ಹಾಂಗಿರ್ಸು ಕುಡುದರೆ ಸಮ ಆವ್ತು.
ರಂಗಣ್ಣಂಗೆ ಆ ರಾಸಾಯನಿಕ ಹಾಕಿದ ಕಾಟುಗಳ ಕುಡಿವಲೆ ಇಷ್ಟ ಆತಿಲ್ಲೆ. ಹಾಂಗಿರ್ಸರ ಕುಡಿವಲಾಗ ಹೇದು ಪೆರ್ಲ ಡಾಕುಟ್ರಣ್ಣ ಹಲವು ಸರ್ತಿ ಹೇದ್ದು ನೆಂಪಾತು.
ರಂಗಣ್ಣ ಸೀದ ಹತ್ರೆ ಇಪ್ಪ ಅಂಗುಡಿಗೆ ಹೋದ, ಒಂದು ಕುಪ್ಪಿ ಕ್ಲಬ್ಬು ಸೋಡ  ತೆಕ್ಕೊಂಡು ಬಂದ, ಒಂದು ಲಿಂಬೆಹುಳಿ, ರೆಜ ಸಕ್ಕರೆ ಹಾಕಿ ಅದಕ್ಕೆ ಸೋಡ ಹಾಕಿ ಸೋಡಸರ್ಬತ್ತು ಹೇದು ಕುಡುದ. ಎರಡು ತೇಗು ಬಂದ್ಸೇನೋ ಅಪ್ಪು…
ಸತ್ಯಣ್ಣ ಹೇದ° – ಇಟ್ಟು ಜಾಗ್ರತೆ ಮಾಡ್ತ ನೀನು ಬೆಶಿನೀರಿಲ್ಲಿ ಲಿಂಬುಳಿ ಹಿಂಡಿ ಜೇನ ಹಾಕಿ ಕುಡುದರೆ ರಾಸಾಯನಿಕ ಇಲ್ಲದ್ದರ ಕುಡುದ ಫಲ ಆದರೂ ಸಿಕ್ಕುತ್ತಿತ್ತೋ° 😀
**
4
ಕೋಡಿಮೂಲೆ ತಿಥಿ ಅಡಿಗ್ಗೆ ಮುಗಿಶಿಕ್ಕಿ ಬಂದ ಮರದಿನ ಅಡಿಗೆ ಸತ್ಯಣ್ಣಂಗೆ ಮನೆಲಿ ದೀಪಾವಳಿ.
ಉದೆಗಾಲಕ್ಕೆ ಬೇಗ ಎಣ್ಣೆ ಕಿಟ್ಟಿ ನೀರುಕಾಸಿ ಬೆಶಿನೀರಿಲಿ ಮೀಯೆಕು ಹೇದು ಹೊತ್ತೋಪಗಾಣ ಮೀಯಾಣ ಆಗಿಕ್ಕಿ ಚೆರಿಗೆ ಭರ್ತಿ ಮಾಡಿ ಮಡಿಗಿ ಆಯ್ದು
ಇನ್ನು ಹೋಳಿಗೆ ಹೇದು ದೊಡ್ಡ ಐಟಂ ಹೆರಟ್ರೆ ಆಗ ಹೇದು ತೋರಿತ್ತು.
ಮನೆ ಎದುರೆ ಪಾತ್ರ ತೊಳೆತ್ತಲ್ಲಿಪ್ಪ ನೇಂದ್ರ ಕೊನೆ ಹಾಕಿದ್ದದು ಕಡುಡು ನೇಲ್ಸಿ ಮಡಿಗಿದ್ದದು ಹಣ್ಣಾಗಿ ಹದಾ ಇಪ್ಪದು ಕಂಡತ್ತು
ಅದರ್ನೇ ಕಡದು ಹಲ್ವ ಮಾಡಿ ಆತು ಸ್ವೀಟು ಲೆಕ್ಕಕ್ಕೇದು . ಗಂಟೆ ಹನ್ನೆರಡು ಕಳುದ್ದು.
ಇನ್ನು ಒರಗದ್ರೆ ಆಗ ಹೇದು ಸತ್ಯಣ್ಣ ಹಸೆ ಬಿಡುಸಿದ°
ಶಾರದಕ್ಕಂಗೆ ಚಕ್ಕುಲಿ ಮಾಡಿರಕ್ಕು ಹೇದು ಎಳಕ್ಕ ಆತು. ಮೆತ್ತಂಗೆ ಆಯೇಕು ಹೇದು ಮೈದ ಚಕ್ಕುಲಿಯನ್ನೇ ಮಾಡಿದ್ಸು.
ಹಾಂಗೆ ಚಕ್ಕುಲಿ ಮಾಡಿ ಮುಗಿಶಿಯೂ ಆತು . ಡಬ್ಬಿಲಿ ಹಾಕಿ ಮುಚ್ಚಿ ಮಡಿಗಿಯೂ ಆತು. ಗಂಟೆ ನಾಕು ಆತು. ನೀರು ಕಾಸಲೆ ಅಡಿಗೆ ಕೊಟ್ಟಗೆಲಿ ಒಲಗೆ ಕಿಚ್ಚುಹಾಕಿ ಬಂದು ನೀರು ಕಾವನ್ನಾರ ಒರಗಲಕ್ಕನ್ನೇದು ಮನಿಗಿತ್ತು.
ಐದು ಗಂಟಗೆ ಎದ್ದಪ್ಪಗ ಶಾರದಕ್ಕಂಗೆ ನೆಂಪಾತು ಚಕ್ಕುಲಿಗೆ ಉಪ್ಪು ಹಾಕಲೆ ಮರದ್ದು. 🙁
ಸತ್ಯಣ್ಣ° ಹೇದ° – ಹೇಂಗೂ ನಿನಗೆ ಗುರುವಾರ ಉಪವಾಸ ಇದ್ದನ್ನೇ. ಅಂದು ಉಪ್ಪುಹಾಕಿ ಎಂತರ್ನೂ ತಿಂಬಲಾಗ ಹೇಯ್ದವನ್ನೇ ಜೋಯಿಸಣ್ಣ°. ಅಂದಿಂಗೆ ನಿನಗೆ ಪಲಾರಕ್ಕೆ ಇದುವೇ ಆತು ನೋಡು.
**
5
ಎಲ್ಲೋರ ಮನೆಲಿ ನಡೆತ್ತಾಂಗೆ ಅಡಿಗೆ ಸತ್ಯಣ್ಣನಲ್ಲೂ ಸಣ್ಣಕೆ ದೀಪಾವಳಿ
ರಮ್ಯನ ಕಾಳೇಜಿಲ್ಲಿ ಪ್ರೆಂಡುಗೊ ಸಾವಿರ ಸಾವಿರಕ್ಕೆ ಪಟಾಕಿ ತೆಗದ್ದವಡ
“ನವಗೂ ರಜಾ ಪಟಾಕಿ ತರೇಕು ಅಪ್ಪ°” –  ಹೇದು ಅಡಿಗೆ ಸತ್ಯಣ್ಣನತ್ರೆ ರಮ್ಯ ಒರಂಜಿತ್ತು
ಬೇಪಲೇ ಬೇಡ. ಅದಕ್ಕೆಲ್ಲ ಪೈಸೆ ಹಾಕಿ ಕಿಚ್ಚೊತ್ತಿಸಿ ಬೂದಿ ಮಾಡಿ ಹಾಳು ಮಾಡ್ಳಾಗ . ಬೇಕಾರೆ ಆ ಪೈಸಗೆ ನಿನಗೆ ಬೇಕಪ್ಪದು ಬೇರೆಂತಾರು ತೆಕ್ಕೊ ಹೇದ° ಅಡಿಗೆ ಸತ್ಯಣ್ಣ°. ಅಲ್ಲ., ನಿನಗೆ ಹಾಂಗೂ ಶಬ್ದ ಕೇಳೇಕ್ಕಾರೆ ಹಸಿ ಹಾಳೆ ತಂದು ಜಾಲಿಗೆ ಜೆಪ್ಪುವೊ. ಶಬ್ಧ ಬಕ್ಕು.
ಅಂದರೆ ರಮ್ಯನ ಪ್ರೆಂಡುಗೊ ಎಲ್ಲೋರು ಪಟಾಕಿ ಅಟ್ಟಕ್ಕೆ ತೆಗದ್ದೆ ಇಟ್ಟಕ್ಕೆ ತೆಗದ್ದೆ , ಅಟ್ಟು ಹೊಟ್ಟಿಸಿದ್ದೆ ಇಟ್ಟು ಹೊಟ್ಟಿಸಿದ್ದೆ ಹೇದು ಹೇಳ್ವಾಗ ಮನಸ್ಸು ಕೇಳುತ್ತೋ
“ಇಲ್ಲೆಪ್ಪ°, ಅದಾಗ. ಜಾಲು ಸಾನ ಹಸಿ. ಮಳೆಗಾಲ ಬಿಡ್ತೇ ಇಲ್ಲೆ. ಈ ಚೆಂಡಿ ಜಾಲಿಲ್ಲಿ ಜೆಪ್ಪಿರೆ ಎಮ್ಮೆ ಬೆನ್ನಿಂಗೆ ಬಡುದ ಶಬ್ದವೂ ಕೇಳ. ರಜ ಪಟಾಕಿ ತಾರದ್ರೆ ಆಗಲೇ ಆಗ” ಹೇದು ಗೆಂಟು ಹಿಡುದತ್ತಯ್ಯ ರಮ್ಯ
ಸತ್ಯಣ್ಣ ಹೇದ° – “ ನೋಡು ಮಗಳೋ…, ಎಟ್ಟೋ ಜೆನ ಬಡವರಿದ್ದವು, ಅನಾಥರಿದ್ದವು, ಅನಾರೋಗ್ಯಂದ ಮದ್ದು ಮಾಡ್ಳೆ ಎಡಿಯದ್ದವು ನಮ್ಮವೇ ಇದ್ದವು. ನೀನು ಪಟಾಕಿಗೆ ಹಾಕುತ್ತ ಪೈಸೆ ಅವಕ್ಕಾರಿಂಗಾರು ಕೊಟ್ರೆ ಅದುವೇ ದೊಡ್ಡ ಒಂದು ಸಾರ್ಥಕ ಕೆಲಸ ಅಕ್ಕು ಮಗಳೋ. ಯೋಚನೆ ಮಾಡು” – ಹೇದ ಸತ್ಯಣ್ಣ°
ರಮ್ಯಂಗೆ ಈಗ ಅದು ವಿಷಯ ಅಪ್ಪಾದ್ದೇ ಹೇದು ಮನಸ್ಸಿಂಗೆ ನಾಂಟಿತ್ತು. ಅಂದರೂ ಪಟಾಕಿ ಇಲ್ಲದ್ದೆ ಎಂತರ ಇದು ದೀಪಾವಳಿ !
ರಮ್ಯ ಹೇತು – “ಅಕ್ಕಪ್ಪ° ನಿಂಗೊ ಐನ್ನೂರಕ್ಕೆ ಪಟಾಕಿ ತನ್ನಿ, ಅಟ್ಟೇ ಪೈಸೆ ನಿಂಗೊ ಹೇಳ್ತ ಅವಕ್ಕೂ ಕೊಟ್ಟಿಕ್ಕಿ. ಅಲ್ಲಿಗೆ ಸಮ ಆವ್ತು”
ಸತ್ಯಣ್ಣಂಗೆ ಸಂದಿಗ್ಧ. ಎಂತ ಮಾಡ್ವೆ ಈಗ!. ಅಕೇರಿಗೆ ಸತ್ಯಣ್ಣ° ಒಪ್ಪಣ್ಣ ಪ್ರತಿಷ್ಠಾನದ ಆರೋಗ್ಯ ನಿಧಿಗೆ 500/- ತೆಗದುಮಡುಗಿಕ್ಕಿ ಮತ್ತೆ ಹೋಗಿ ಮಗಳ ಒತ್ತಾಯಕ್ಕೆ ರಜ ಪಟಾಕಿ ಹೊತ್ತೊಂಡು ಬಪ್ಪಲೆ ಹೆರಟ°. ಮಕ್ಕೊಗೆ ಇಲ್ಲದ್ದ ದೀಪಾವಳಿಯೋ! ಹೇದೂ ತೋರಿತ್ತು ಅಡಿಗೆ ಸತ್ಯಣ್ಣಂಗೆ  😀
**
6
ಅಂತೂ ಪಟಾಕಿ ವಿಷಯಲ್ಲಿ ಅಡಿಗೆ ಸತ್ಯಣ್ಣಂಗೂ ಒಂದು ಸಮಾಧಾನ ಬಂದು ರಮ್ಯಂಗೂ ಒಂದು ಮಟ್ಟಿನ ಸಮಾಧಾನ ಆಗಿಕ್ಕಿ ಇಬ್ರೂ ಒರ್ಮೈಸಿ, ಅಡಿಗೆ ಸತ್ಯಣ್ಣ ಪಟಾಕಿ ತಪ್ಪಲೆ ಬೈಕ ಮೆಟ್ಟಿ ತೊಳುದಾತು
ಪೆರ್ಲಕ್ಕೆ ಎತ್ತಿಯಪ್ಪಗ – ‘ಕಣ್ಯಾರಲ್ಲಿ ಚೀಪು’ ಹೇದವಾರೋ
ಬದಿಯಡ್ಕಕ್ಕೆ ಎತ್ತಿಯಪ್ಪಗ ನಾಲ್ಕನೇ ಮಾಳಿಗೆಲಿರ್ತ ನಮ್ಮ ಬೆಂಗ್ಳೂರ ಬಾವ° ಎದುರಾದ° ಬಸ್ಸುಸ್ಟೇಂಡಿನತ್ರೆ ನಿಂದೊಂಡಿದ್ದಲ್ಯಂಗೆ
ಕಂಡಪ್ಪಗ ನಿಂದು ಮಾತಾಡುಸದ್ದೆ ಹೋಪಲೆಡಿತ್ತೋ. ಓ ಅಂದು ಕೋಡಿ ಕಳುದು ಓ ಮನ್ನೆ ಪುಣ್ಯಾಯ ಕಳುದ್ದದಲ್ಲದ! ಅಡಿಗೆ ಸತ್ಯಣ್ಣನೇ ಹೋದ್ದಲ್ಲದ!
ಏನು – ತಾನು…. ಮಾಣಿ ಎಂತ ಮಾಡ್ತ° ,  ಮಾಣಿ ಎಂತ ಹೇಳ್ತ° ಹೇದು ಕೇಳ್ತರೊಟ್ಟಿಂಗೆ ಬೆಂಗ್ಳೂರ್ಲಿ ಹಬ್ಬ ಜೋರಿದ್ದೋದೂ ಕೇಟ° ಅಡಿಗೆ ಸತ್ಯಣ್ಣ°
“ಅಪ್ಪು ಸತ್ಯಣ್ಣ, ಹಬ್ಬಕ್ಕೆ ಊರ್ಲಿ ನಿಂಬಲೆ ಈ ಸರ್ತಿ ಎಡೆ ಇಲ್ಲೆ. ಬೆಂಗ್ಳೂರಿಂಗೆ ಎತ್ತೆಕು. ಈ ವೊರಿಶ ಬೆಂಗ್ಳೂರ ಹಬ್ಬ ನೋಡ್ವೋ ಹೇದು ಇದ್ದೆ”  – ಹೇದ ಬೆಂಗ್ಳೂರ ಭಾವ°
“ಅಪ್ಪು, ಈ ಸರ್ತಿ ‘..ಗಳಲ್ಲಿ’ ಹಬ್ಬಕ್ಕೆ  ಕೊಟ್ಟಿಗೆ ರಸಾಯನ ಅಲ್ಲದ್ದೆ ಬೇರೆಂತ ಸಿಕ್ಕ ಎಷ್ಟು ಎಕ್ಕಳ್ಸಿರೂ  ಅಲ್ಲದ.?! – ಪಟಾಕಿ ತಪ್ಪಲೆ ಬಂದ ಅಡಿಗೆ ಸತ್ಯಣ್ಣ ಚಟಾಕಿ ಬಿಟ್ಟ°
ಅದೆಂತ ಇದ್ದು ಭಾವ ನಮ್ಮೂರ್ಲಿಲ್ಲದ್ದಷ್ಟು ವಿಶೇಷ ಬೆಂಗ್ಳೂರ ಹಬ್ಬಲ್ಲಿ ?! – ಅರಡಿಯದ್ದೆ ಕೇಳಿದ° ಅಡಿಗೆ ಸತ್ಯಣ್ಣ°
“ಹಾಂಗೇನಿಲ್ಲೆಪ್ಪ ರೆಜಾ ಅಲಂಕಾರ, ಪಟಾಕಿ, ರಂಗೋಲಿ …” – ಬೆಂಗ್ಳೂರ ಭಾವ ಹೇಳಿ ಮುಗಿಶಿದ್ದನಿಲ್ಲೆ, ಅಷ್ಟ್ರೊಳ ಅಡಿಗೆ ಸತ್ಯಣ್ಣಂಗೆ ನೆಂಪಾತು – ಓಹೋ!!! ಇದು ನಿಂಗಳೇಯೋ ಎಂಗಳ ರಂಗಣ್ಣಂಗೂ ರಂಗೋಲಿ ಕಲಿಶಿದ್ದದು !! 😀
“ಹುಂ.. ಅದಾ ಎನ್ನ ಬಸ್ಸು ಬಂತು, ಅಂಬಗ ಕಾಂಬೊ ಸತ್ಯ್ಯಣ್ಣ” ಹೇದು ಬೆಂಗ್ಳೂರು ಭಾವಯ್ಯ ಸೀತ ಹೆರಟ°.
ಬಹುಶಃ ಭಾರಿ ಅಂಬೆರ್ಪಿಲಿ ಇರೆಕ್ಕು ಬೆಂಗ್ಳೂರು ಭಾವಯ್ಯ°, ಅಲ್ಲದ್ದರೆ ನಾಕು ಮಾತಾಡಿಯೇ ಹೋವ್ತಿತ್ತವು ಹೇದು ಗ್ರೇಶಿಗೊಂಡ° ಸತ್ಯಣ್ಣ°.
ವಾಚಿ ನೋಡಿರೆ ಗಂಟೆ ಏಳು ಆಗಳೇ ದಾಂಟಿದ್ದು. ಇನ್ನೆಂತರ ಕಣ್ಯಾರಕ್ಕೆ ಹೋವ್ಸು?! ಬದಿಯಡ್ಕ ಬೆಡಿಮಮ್ಮುವತ್ರೆ ಇದ್ದರೆ ಅಲ್ಲಿಂದಲೇ ತೆಕ್ಕೊಂಬದು ಹೇದು ಬೈಕ ತಿರ್ಗುಸಿದ ಅಡಿಗೆ ಸತ್ಯಣ್ಣ. 😀
**
7
ದೀಪಾವಳಿ ದಿನ ಅಡಿಗೆ ಸತ್ಯಣ್ಣಂಗೆ  ಹಗಲಿಂಗೆ ಎಲ್ಲ್ಯೂ ಅನುಪ್ಪತ್ಯ ಒಪ್ಪಿದ್ದದು ಇತ್ತಿಲ್ಲೆ.
ಹಾಂಗಾಗಿ ಮನೆಲಿಯೇ . ರಜೆ ಲೆಕ್ಕ.
ಉದಿಯಪ್ಪಾಣ ಒಂದರಿಯಾಣದ್ದೆಲ್ಲಾ ಆಗಿಕ್ಕಿ ಸತ್ಯಣ್ಣ ಚಾವಡಿಲಿ ಕೂದೊಂಡು ಟಿವಿದರ ಹಿಡ್ಕೊಂಡು ಗುಬ್ಬಿ ಒತ್ತಿಗೊಂಡಿತ್ತಿದ್ದ°
ಅಷ್ಟಪ್ಪಗ ಸತ್ಯಣ್ಣನ ಮೊಬೈಲು ಕಿಣಿಕುಟ್ಟಿತ್ತು.
ಸತ್ಯಣ್ಣ° ಮೊಬೈಲ ತೆಗದು ಕೆಮಿಗೆ ಒತ್ತಿ ಹಿಡ್ಕೊಂಡು ‘ಹರೇ ರಾಮ’ ಹೇದ°.
‘ವಿಶ್ಶ್ಯೂ  ಯೆ ಹೆಪ್ಪಿ ದೀವಾಳಿ’ – ಆಚಿಗೆಂದ
“ಏ°.., ಅಪ್ಪು , ಆನು ಅಡಿಗೆ ಸತ್ಯಣ್ಣ ಮಾತಾಡುಸ್ಸು. ಅಪ್ಪು ಇಂದು ದೀಪಾವಳಿ “ – ಸತ್ಯಣ್ಣ° ಹೇದ°
ಪುನಃ ಆಚಿಗೆಂದ – ‘ವಿಶ್ಶ್ಯೂ ಹೆಪ್ಪಿ ದೀವಾಳಿ’
‘ಎಂತರ??!’ – ಸತ್ಯಣ್ಣ° ವಾಪಾಸ್ಸು
‘ಅಪ್ಪ°!, ಇದು ಇವ್ವು ದೀಪಾವಳಿ ಶುಭಾಶಯ ಹೇದ್ದದಪ್ಪ° ನಿಂಗೊಗೆ’  – ಆಚಿಗೆಂದ ದೊಡ್ಡ ಮಗಳು ರಾಧೆಯ ಸೊರ ಕೇಟತ್ತು.
“ಹ್ಹೋ .. ಹಾಂಗೋ!! ಅಕ್ಕು ನಿಂಗೊಗೂ ದೀಪಾವಳಿ ಶುಭಾಶಯಂಗೊ ಆಶೀರ್ವಾದಂಗೊ..
              ಇದಾ ಅಬ್ಬೈಲಿ ಕೊಡ್ತೆ” – ಹೇದಿಕ್ಕಿ ಸತ್ಯಣ್ಣ ಶಾರದಕ್ಕನ ಕೈಲಿ ಕೊಟ್ಟ° 😀
ಶಾರದಕ್ಕ° ದೊಡ್ಡ ಮಗಳೈಲಿ ಮಾತಾಡ್ತಷ್ಟು ಮಾತಾಡಿಕ್ಕಿ, ತಂಗೆ ರಮ್ಯನ ಕೈಗೆ ದಾಂಟುಸಿತ್ತು ಮೊಬೈಲ.
[ಈಗ ಟೀಕೆಮಾಡ್ತೋರು ಕೇಳುಗು ಆಚಿಗೆಂದ ವಿಶ್ಶ್ಯೊ ಯೆ ಹೇದು ಹೇದ್ದದು ಹೇದು ಸತ್ಯಣ್ಣಂಗೆ ಹೇಂಗೆ ಗೊಂತಾತು?!
ಹಾಂಗೆ ಪ್ರತಿಯೊಂದರ್ನೂ ಬಿಡುಸಿ ಬಿಡುಸಿ ಹೇಳ್ಳೆ ನಮ್ಮದೆಂತ್ಸು ‘ಚೈನು’ ಕತೆಯೋ?! .  ಅದು.. ಅಕ್ಕ° ತಂಗೈಲಿ ಮಾತಾಡ್ವಾಗ ಗೊಂತಾದ್ದು. ಆತನ್ನೇ :D]
**
8
ದೀಪಾವಳಿ ದಿನ ಹೊತ್ತೋಪಗ… ಎಂತಕೆ .. ಅಲ್ಲ ಅಲ್ಲ  , ಉದಿಯಪ್ಪಳೇ… ತೆಕ್ಕೋ … ಪಟ ಪಟ ಡಬೋ ಡಿಬೋ ದುಸ್ಸು ಬುಸ್ಸು ಫಟ್ ಹೇದು ನಾಕು ಹೊಡೆಂದ ಕೇಳ್ಳೆ ಸುರುವಾತು.
ಆದರೆ ಅಂದು ಹೊತ್ತೋಪಗಂಗೆ ಅಡಿಗೆ ಸತ್ಯಣ್ಣಂಗೆ ಕಲ್ಲುಗುಂಡಿಗೆ ಹೋಗಿ ಎತ್ತೆಕ್ಕಾಗಿದ್ದ ಕಾರಣ ಸತ್ಯಣ್ಣಂದು ಉದಿಯಪ್ಪಳೇ ಪಟಾಕಿ
ರಮ್ಯಂಗೆ ತಂದರ್ನೂ ಕಿಚ್ಚು ಕೊಟ್ಟು ಬೆಣಚ್ಚಿ ನೋಡಿ ಶಬ್ದ ಕೇಟದಾತು.
ಎಲ್ಲ ಮುಗುದಪ್ಪಗ ರಮ್ಯ ಹೇತು – “ಅಪ್ಪ°, ಈಗೀಗ ಪಟಾಕಿಗೆ ಹೆಚ್ಚು ಶಬ್ದವೇ ಇಲ್ಲೆ ಅಪ್ಪ°. ಮದಲಿಂಗೆಲ್ಲ ಬಯಂಕರ ಶಬ್ದ ಕೇಳುಗು.
ಸತ್ಯಣ್ಣ ಹೇದ°- ಅದು ಮಗಳೋ..,  ಮದಲಿಂಗೆ ನೀನು ಸಣ್ಣ ಅಲ್ಲದ. ಸಣ್ಣ ಕೆಮಿಗೆ ಶಬ್ದ ಜೋರಿಂಗೆ ಕೇಳುಗು. ಈಗ ನೀನು ದೊಡ್ಡ ಆಯ್ದೆ ಅಲ್ಲದ. ಸಾದಾರಣದ್ದೆಲ್ಲ ನಿನ್ನ ಕೆಮಿಗೆ ನಾಟ 😀
**
9
ಎಲ್ಲೋರಲ್ಲಿ ಆವ್ತಾಂಗೆ ಅಡಿಗೆ ಸತ್ಯಣ್ಣನಲ್ಲಿಯೂ ದೀಪಾವಳಿ ಅಪ್ಪು.
ಆದರೆ ಈ ಸರ್ತಿ ನರಕ ಚತುರ್ದಶಿ, ಅಮಾಸೆ, ಪಾಡ್ಯ , ಎಣ್ಣೆಕಿಟ್ಟಿ ಮೀಯ್ಸು, ಕೊಟ್ಟಿಗೆ ರಸಾಯನ, ಬಲೀಂದ್ರ ಬರ್ಸುಸ್ಸು, ಗೋಪೂಜೆ, ಲಕ್ಷ್ಮೀಪೂಜೆ ಎಲ್ಲವೂ ಒಂದೇ ದಿನಲ್ಲಿ ಒಂದೇ ಹೊತ್ತಿಲ್ಲಿ ಮುಗುಶೆಕ್ಕಾಗಿ ಬಂತು.
ಎಂತಕೇದರೆ ಮರದಿನಕ್ಕೆ ಅಡಿಗೆ ಸತ್ಯಣ್ಣ ಇಲ್ಲೆ ಮನೆಲಿ. ಹೊತ್ತೋಪಗಂಗೆ ಕಲ್ಲುಗುಂಡಿಗೆ ಹೋಗಿ ಮುಟ್ಟಿ ಆಯೇಕು.  ಓ ಅಂದೇ ಹೇದ್ದಲದಾ.. ಮದಲೇ ಬುಕ್ ಆದ್ದು, ತಪ್ಪುಸುವಾಂಗೆ ಇಲ್ಲೆ.
ಇದರೆಡಕ್ಕಿಲ್ಲಿ ರಮ್ಯನ ಕೋಲೇಜಿಂಗೆ ಹಬ್ಬಕ್ಕೆ ಮೂರು ದಿನ ರಜೆ.
ಹಾಂಗಾಗಿ ಹಬ್ಬಕ್ಕೆ ಊರಿಂಗೆ ಹೋಗದ್ದ ರಮ್ಯನ ಕಾಲೇಜು ಹೋಸ್ಟೇಲು ಪ್ರೆಂಡುಗೊ ಎಡಿಗಾರೆ ರಮ್ಯನ ಮನಗೆ ಬತ್ತದಾಗಿ ಮಾತುಕತೆ ಆಗಿದ್ದತ್ತು. 
ಎಣ್ಣೆಕಿಟ್ಟಿ ಮಿಂದಾದಪ್ಪಗ ಫೋನು ಬಂತು – ‘ಎಂಗ ಬತ್ತಾ ಇದ್ಯೋ ಇದ್ದ್ಯೊ ಮಜ್ಜಾನಕ್ಕೆ’- ಹೇದು.
ಸತ್ಯಣ್ಣಂಗೆ ಪ್ರೆಂಡುಗೊ ಮಜ್ಜಾನ ಊಟಕ್ಕೆ ಬತ್ತವು ಹೇದು ರಮ್ಯ ಹೇತು.
ಓಹ್ಹ್.. ಸಂತೋಷವೇ, ಬರ್ಲಿ ಬರ್ಲಿ ಹೇದು ಸತ್ಯಣ್ಣಂಗೂ ಕೊಶಿ ಆತು.
ಅಡಿಗೆ ಸತ್ಯಣ್ಣ°  ರಫಕ್ಕನೆ ರಂಗಣ್ಣಂಗೆ ಫೋನ ಮಾಡಿ ಹೇದ° “ರಮ್ಯನ ಪ್ರೆಂಡುಗೊ ಬತ್ತವಡವೋ°, ನೀನು ಬೇಗ ಬಾ” 😀
**
10
ರಂಗಂಗೆ ಹುಕುಂ ಆತು ಫೋನಿಲ್ಲಿ. ರಂಗಣ್ಣನೂ ಹಾಜರಿ ಆಗಿ ಆತು.
ಅಮಾಸೆಗೇದು ಕಡದು ಮಡಿಗಿದ ಕೊಟ್ಟಿಗೆ ರಸಾಯನ ಅಂದೇ ಮಾಡಿಕ್ಕುವೋ ಹೇದು ಅವ್ವು ಬರೇಕಾರೆ ಬೇಶಿ ರೆಡಿ.
ಮಗಳ ಪ್ರೆಂಡುಗೊ ಬತ್ತವು ಹೇದು ಶಾರದೆ ಬೇಗ ಬೇಗನೆ ರಜಾ ಕಾರಕಡ್ಡಿಯೂ ಮಾಡಿತ್ತು.
ಹೇಂಗೂ ಜಿಲೇಬಿ ಮೆಶಿನು ಕೈಲಿ ಇದ್ದನ್ನೆ! ಸತ್ಯಣ್ಣ° ರಪಕ್ಕನೆ ಇಪ್ಪತ್ತೈದು ಜಿಲೇಬಿಯೂ ಮಾಡಿ ಮಡಿಗಿದ°.
ರಂಗಣ್ಣ ಒಟ್ಟಿಂಗೆ ಇತ್ತಿದ್ದ ಕಾರಣ, ಕೊಟ್ಟಿಗ್ಗೆ ರಸಯಾನದೊಟ್ಟಿಂಗೆ ಮೆಣಸುಕಾಯಿ, ಕೊದಿಲೂ ಮಾಡಿದ್ದಾತು ಸತ್ಯಣ್ಣಂಗೆ. ಅಶನ ಹೇಂಗೂ ಕರೇಲಿ ಮಡಿಗಿರಾತನ್ನೆ ಪ್ರತ್ಯೇಕ. ಅಶನ ಬೆಂದಪ್ಪಗ ಒಂದು ಒಗ್ಗರಣೆ ಹಾಕಿರೆ ಚಿತ್ರಾನ್ನವೂ ಆತು. ಎಡಕ್ಕಿಲಿ ಒಂದು ಮೇಲಾರಕ್ಕೆ ಕಡದು ಕೂಡಿಯೂ ಆತು.
ಸುಮಾರು ಹನ್ನೊಂದು ಮುಕ್ಕಾಲಕ್ಕೆ ಐದಾರು ಪ್ರೆಂಡುಗಳ ದಂಡು ಬಂದು ಎತ್ತಿದ್ದು.
ಅವಿನ್ನು ಚೂಡಿದಾರ ಹಾಕ್ಯೊಂಡು ಬಂದ್ಸೋ ಜೀನ್ಸು ಪೇಂಟಂಗಿ ಹಾಕ್ಯೊಂಡು ಬಂದ್ಸೋ ಕೇಳಿರೆ ರಂಗಣ್ಣನತ್ರೆ ಕೇಳಿ ಆಯೇಕ್ಕಷ್ಟೆ 😀
ಬಂದ ಪ್ರೆಂಡುಗಳ ಹತ್ರೆ ಅದು ಇದು ಮತ್ತೊಂದು ಮದಲೊಂದು ಹೇದು ಮನೆಯೋರನ್ನೂ ಗುರ್ತ ಮಾಡ್ಸಿ ಮಾತಾಡಿದ್ದಾತು.
ಪಳ್ಳಿಲಿ ಬಾಂಕು ಕೊಟ್ಟು ರಜಾ ಹೊತ್ತಾದಪ್ಪಗ ಶಾರದಕ್ಕ ಎಲ್ಲೋರಿಂಗು ಬಟ್ಳು ಮಡಿಗಿ ಕೂಬಲೇಳಿ ಬಡಿಸಿತ್ತು. ರಮ್ಯ ಬಟ್ಳು ಮಡುಗಲೆ, ಗ್ಲಾಸು ಮಡುಗಲೆ, ಗ್ಲಾಸಿಂಗೆ ನೀರೆರವಲೆ ಎಲ್ಲ ಸೇರಿತ್ತು.
ಎಲ್ಲೋರು ಲಾಯಕಲ್ಲಿ ರುಚಿ ರುಚಿ ಆಗಿದ್ದು ಹೇದು ನಕ್ಕಿ ನಕ್ಕಿ ಉಂಡವು.
ಉಂಡಿಕ್ಕಿ ರಜಾ ಹೊತ್ತಪ್ಪಗ ಇನ್ನೆಂತ ಹೆರಡುದು ಹೇದು ಎದ್ದ ಪ್ರೆಂಡುಗೊ – “ನಿನ್ನ ಅಮ್ಮ ತುಂಬ ರುಚಿ ರುಚೀ ಅಡಿಗೆ ಮಾಡ್ತಾರೆ ಕಣೆ. ಸ್ವೀಟು ಸಾಂಬಾರಂತೂ  ತುಂಬ ಚಲೋ ಆಗಿದೆ ಕಣೆ ರಮ್ಯ. ಥೇಂಕ್ಸ್” – ಹೇದವು
ಸತ್ಯಣ್ಣ° ಬಾಯಿತುಂಬ ಎಲೆ ಅಡಕ್ಕೆ ತುಂಬುಸಿಯೊಂಡವ ಹೆರ ಜಾಲ ಕೊಡಿಗೆ ಹೋಗಿ ತೆಂಗಿನ ಬುಡಕ್ಕೆ ಪಿಚಕ್ಕನೆ ತುಪ್ಪಿದ°. 😀
 ಬಾಯಿಲಿ ಒಳುದ್ದರ ಗಜ ಗಜನೆ ಅಗುಕ್ಕೊಂಡು ಮನೆ ಹಿಂದೆ ಕೊಟ್ಟಗೆಲಿ ದನಕ್ಕೆ ಬೆಳುಗುಲು ಹಾಕುಲೆ ನಡದ°. 😀
**
11
ಅಡಿಗೆ ಸತ್ಯಣ್ಣನ ಮನಗೆ ಬಂದ ರಮ್ಯನ ಕೂಸುಗೊ ಉಂಡೆಲ್ಲಾದಿಕ್ಕಿ ಇನ್ನು ಹೋಪದು ಹೇದು ಹೆರಟು ಜಾಲಿಂಗಿಳುದು ಹಿಂದೆ ಎತ್ತರ ಇಪ್ಪ ಮೆಟ್ಟ ಸುರ್ಕೊಂಡು ರಮ್ಯಂಗೆ ಟಾಟಾ ಮಾಡಿಯಾತು.
ಚಾಯದ ಗ್ಲಾಸ ಕರೇಂಗೆ ನೂಕಿದ ರಂಗಣ್ಣ ಇನ್ನು ಆನುದೆ ಹೆರಡುದು ಹೇದು ಎದ್ದ°
“ಎಂತ್ಸೋ ಅಂಬೇರ್ಪು. ರೆಜ ಕೂರೋ°” ಹೇದವು ಅಡಿಗೆ ಸತ್ಯಣ್ಣ°
“ಇನ್ನು ಕೂದೆಂತ್ಸರ ಮಾಡ್ಸು ಮಾವ°? ರಮ್ಮಿ ಆಡ್ವೋ ಹೇದರೆ ರಮ್ಯನ ಪ್ರೆಂಡುಗಳೂ ಹೋಗಿ ಆತು. ಗಂಟೆ ಎರಡು ಆತು . ನವಗಿನ್ನು ಕಲ್ಲುಗುಂಡಿಗೆ ಹೋಗಿ ಮುಟ್ಳೆ ಇಲ್ಯ!” – ರಂಗಣ್ಣ ಹೇದ°
“ಅದು ಸರಿಯೇ, ಅಲ್ಲದ್ದರೆ ಈ ರಂಗಣ್ಣ ಇಲ್ಲಿಯೇ ಕೃಷ್ಣನ ಒಡ್ಡೋಲಗ ಶುರು ಮಾಡುಗು” ಹೇದು ಗ್ರೇಶಿದ ಸತ್ಯಣ್ಣ ‘ಹೂಂ’ಕುಟ್ಟಿಕ್ಕಿ ಎದ್ದಿಕ್ಕಿ ಅಬ್ಬಿಕೊಟ್ಟಗ್ಗೆ ಹೆರಟ°. 😀
**
12
ಸರೀ ಮೂರೂ ಕಾಲಕ್ಕೆ ಇಬ್ರೂ ಹೆರಟು ರೆಡಿ ಆದವು ಕಲ್ಲುಗುಂಡಿಗೆ ಹೋಪಲೆ.
ಹೇಂಗೂ ಅಡಿಗೆ ಸತ್ಯಣ್ಣಂಗೆ ಇರುಳು ಒಂಬತ್ತು ಗಂಟೆಂದ ಮೇಗೆ ಡ್ಯೂಟಿ ಹೇಯ್ದವು. ಅಲ್ಲದ್ದೆ ಬೇಕಾಟ್ಟು ಜೆನವೂ ಇದ್ದು ಅಲ್ಲಿ.
ಹಾಂಗೆ ಹೆರಟು ಜಾಲಿಂಗೆ ಇಳುದಪ್ಪಗ ಎರಡ ಹನಿ ಹನಿಕ್ಕಿದಾಂಗೆ ಆತು.
ರಂಗಣ್ಣ° ಹೇದ° – “ಅಪ್ಪೋ ಮಾವ°, ದೀಪಾವಳಿ ದಿನ ಇನ್ನು ಮಳೆ ಬಂದರೆ ತಂದ ‘ಮೋದಿ’ ಪಟಾಕಿ ಎಂತಕ್ಕು?
ಸತ್ಯಣ್ಣ° ಹೇದ° – ಅಪ್ಪದೆಂತರ, ‘ಮನಮೋಹನ’ ಪಟಾಕಿ ಅಕ್ಕು ಅಷ್ಟೇ  😀
 

***  😀  😀  😀  ***

9 thoughts on “'ಅಡಿಗೆ ಸತ್ಯಣ್ಣ'- ಭಾಗ 35 (ದೀಪಾವಳಿ ವಿಶೇಷಾಂಕ)

  1. ಸತ್ಯಣ್ಣನ ಹೊಗೆಸೊಪ್ಪು ಕುಣಿಯವೋ? ಲಾಯಿಕಕ್ಕೆ ಕೊಣಿಶಿದ್ದದೋ? ಕಲ್ಲುಗುಂಡಿಲಿ ಸತ್ಯಣ್ಣನತ್ರೆ ಆಂದೆ ಮಾತಾಡ್ತೆ.

  2. ಸತ್ಯಣ್ಣಂಗೆ ಅಡಕ್ಕೆ ಮರದ ಹಾಳೆಯ ಸುರುಟಿ ಮನೆಚಿಟ್ಟಗೆ ಬಡುದು ಬೆಡಿ ಹೊಟ್ಟುಸುವ ಕೆಣಿ ಗೊಂತಿಲ್ಲೆಯೋ ಹೇಳಿ. ಅಂತೂ ದೀಪಾವಳಿ ವಿಶೇಷವಾಗಿ ಕಳುದತ್ತು. ರಮ್ಯನ ಫ್ರೆಂಡುಗೊ ಬಂದ ಗೌಜಿ, ರಂಗಣ್ಣನ ಬೆಡಿ ಎಲ್ಲವುದೆ ರೈಸಿದ್ದು. ಮಳಗೆ ಪುಸ್ಕ ಆದ ಬೆಡಿ ಮನಮೋಹನ ಬೆಡಿ ಆದ್ದದು ತುಂಬಾ ಲಾಯಕಿತ್ತು.

  3. ಥೇ೦ಕ್ಸ್ ಹೇಳಿ ಹೋದವು.
    ಮನಸಿಲಿ ,
    ಬ೦ದದ್ದು ಕುಸಿ ಆಯಿತು ,ಆದರೆ ಹೊರಟಿದ್ದು ಇನ್ನೂ ಕುಸಿ ಆಯಿತು
    { ಬತ್ತನವು ಕುಸಿ ಆ೦ಡ್,ಪಿದಾಡನ್ನುವು ಬುಕ್ಕಲಾ ಕುಸಿ ಆ೦ಡ್}
    ಹೇಳಿ!!! ರ೦ಗಣ್ಣ್ ಕೆನ್ನೆ ಕ೦ಡು ಪಿಚಕ್ಕನೆ ,ಪಿಚಕಾರಿ ಆದದ್ದು ,ರ೦ಗೇರಿತ್ತು.

  4. ‘ಸತ್ಯಣ್ಣ’ನ ದೀಪಾವಳಿ ಪಟಾಕಿ ಅಜನೆ ಜೋರಿತ್ತು. ಕೇಳಿ ಕುಶಿ ಆತು,ಬಾಲ್ಯ ನೆಂಪಾತು,ಧನ್ಯವಾದಂಗೊ…

  5. { ಅಕೇರಿಗೆ ಸತ್ಯಣ್ಣ° ಒಪ್ಪಣ್ಣ ಪ್ರತಿಷ್ಠಾನದ ಆರೋಗ್ಯ ನಿಧಿಗೆ 500/- ತೆಗದುಮಡುಗಿ…}
    ಹಾಂಗಾದರೂ ಸತ್ಯಣ್ಣ ಒಂದು ಒಳ್ಳೆಯ ಕೆಲಸ ಮಾಡಿದನ್ನೆ… ಸತ್ಯಣ್ಣನ ಮೆಚ್ಚಕ್ಕಾದೆ… 🙂

  6. ದೀಪಾವಳಿಗೆ ಸತ್ಯಣ್ಣನ (ಬಾಯಿ)ಪಟಾಕಿ ಭರ್ಜರಿ ಆತು.

  7. { ಸಾಮಾನ್ಯ ಆಕಾಶನೀಲಿಯುದೆ ರಜ ಅರಶಿನ ಕಂದು ಮಿಶ್ರಿತ ಕೆಂಪು ಕಪ್ಪು ಪಚ್ಚೆ ಸೇರಿದ ಬಣ್ಣದ ಬೆಳಿ ಅಂಗಿ }
    🙂
    ಸತ್ಯಣ್ಣ ಕಲರ್ಫುಲ್!!

  8. ಮಹಿಳಾ ಸಮಾಜದ ಕಾರ್ಯಕ್ರಮ, ಅಡಿಗ್ಗೆ ಸತ್ಯಣ್ಣ. ಊಟ ಆಗಿ ಹೆಮ್ಮಕ್ಕೊ ಸತ್ಯಣ್ಣನ ಮಧ್ಯ ಕೂರ್ಸಿಂಡು ಇಂಟರ್ವ್ಯೂ ಮಾಡಿಂಡಿತ್ತಿದ್ದವಡ. ಸಾರಿಂಗೆ ಹೊರಿವದು, ಕಾಯಿಹಾಲು ಮಾಡುವದು, ಒಬ್ಬೊಬ್ಬರದ್ದು ಒಂದೊಂದು ಪ್ರಶ್ಣೆ. ಹತ್ತೈವತ್ತು ಹೆಮ್ಮಕ್ಕಳ ಮಧ್ಯೆ ಸತ್ಯಣ್ಣನ ಕಂಡು ಆರೋ ಕೇಳಿದವಡ—ಇವನ ಹೆಸರು-ಸತ್ಯಣ್ಣನೋ ಅಲ್ಲ-ಕಲಿಯುಗದ ಕ್ರಿಷ್ಣಣ್ಣನೋ???????????.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×