Oppanna.com: ನಾವೇ ಬೆಳೆಶಿದ ಬೈಲಿಂಗೆ “ನಾಕನೇ ಒರಿಶ”!

ಬೈಲಿನ ಎಲ್ಲಾ ಅಕ್ಕ-ಭಾವಂದ್ರಿಂಗೆ ಹರೇರಾಮ.
ಇದು ನಾವೆಲ್ಲರೂ ನವಗೇ ಧನ್ಯವಾದ ಹೇಳೇಕಾದ ಸಮಯ.
ಅಂತಾ ಕುಶಿ ಯೇವದಿದ್ದು – ಕೇಳುವಿ ನಿಂಗೊ!
ಎಂತ್ಸರ – ಹೇಳಿತ್ತುಕಂಡ್ರೆ, ಮೂರೇ ಒರಿಶ ಹಿಂದೆ ಹುಟ್ಟಿದ ಈ ಬೈಲು ಇಂದು “ನಾಲ್ಕನೇ ಒರಿಶ”ಕ್ಕೆ ಕಾಲು ಮಡಗುತ್ತಾ ಇದ್ದು!!!
ನಾಲ್ಕನೇ ಒರಿಶದ ಯಶಸ್ವಿ ಪಾದಾರ್ಪಣೆಯ ಸಂದರ್ಭಲ್ಲಿ, ಇದಕ್ಕೆ ಕಾರಣೀಭೂತರಾದ ಬೈಲಿನ ಎಲ್ಲ ಬಂಧುಗೊಕ್ಕೂ ಕೃತಜ್ಞತೆ ಹೇಳ್ತಾ ಇದ್ದೆ.

ಈ ಮೂರೊರಿಶಲ್ಲಿ ಬೈಲಿನ ಹುಟ್ಟು- ಬೆಳವಣಿಗೆ ಹೇಂಗಾತು –  ಹೇಳ್ತದರ ಬಗ್ಗೆ ಸಣ್ಣ ವಿವರಣೆ:

 • ಜೆನವರಿ 2009ರ ಕೆಲೆಂಡರಿನ ಒಂದನೇ ತಾರೀಕಿಂಗೆ ಬ್ಲೋಗುಪುಟಲ್ಲಿ ಬೈಲು ಸುರು ಆದ್ಸು.
  (http://oppanna.blogspot.com)
 • ಆ ಸಮಯಲ್ಲಿ ಬೈಲಿನ ಎಲ್ಲೋರ ಶುದ್ದಿಯನ್ನೂ ಒಪ್ಪಣ್ಣ ಮಾಂತ್ರವೇ ಹೇಳೇಕಾಗಿದ್ದತ್ತು.
 • ಒಪ್ಪಣ್ಣ ಶುದ್ದಿ ಹೇಳುದು, ಬೈಲಿನೋರು ಒಪ್ಪ ಕೊಡುದು- ಈ ಕ್ರಮ ಅಂದೇ ಸುರುಆಗಿ, ಬೆಳದತ್ತು.
 • ದನದ ಹಾಲು ಮೆಚ್ಚದ್ದ ಮಾಣಿಗೆ… – ಹೇಳ್ತ ಈ ಶುದ್ದಿಗೆ ನಮ್ಮ ಗುರುಗೊ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗೊ  ಒಪ್ಪಾಶೀರ್ವಾದ ಮಾಡಿದವು.
  ಗುರುಗ ಬೈಲಿಂಗೇ ಬಂದು ಆಶೀರ್ವಾದ ಮಾಡಿದ್ಸು ಅದು ಆರಂಭ. (ಶುದ್ದಿ ಸಂಕೊಲೆ)
 • 2009ರ ಅಖೇರಿಯಾಣ ಶುದ್ದಿ – ದಶಂಬ್ರ ಕೊನೇವಾರ; ಐವತ್ತೊಂದನೇದು – ಓಜುಪೇಯಿ ಅಜ್ಜನ ಬಗ್ಗೆ ಹೇಳಿದ್ಸು.
  ಆ ಶುದ್ದಿಗೆ ಒಪ್ಪಾಶೀರ್ವಾದ ಕೊಟ್ಟ ಗುರುಗೊ – ಈ ಬೈಲಿ ಶುದ್ದಿಗೊ ನಿಂಬಲೆಡಿಯ – ಹೇದು ಆದೇಶ ಕೊಟ್ಟವು. (ಶುದ್ದಿ ಸಂಕೊಲೆ)
  ಇದು ಬೈಲಿನ ಎಲ್ಲೋರಿಂಗೂ ಆನೆಬಲ ಕೊಟ್ಟತ್ತು.
 • ಮುಂದೆ, 2010ರ ಜೆನವರಿಲಿ ಅಜ್ಜಕಾನಬಾವ,ಪೆರ್ಲದಣ್ಣ, ಬೀಸ್ರೋಡುಮಾಣಿ, ಸಂಕೊಳಿಗ ಬಾಬಣ್ಣನವರ ಅಮೋಘ ಸಹಕಾರಲ್ಲಿ ಬೈಲು “website” ಬೆಳಗಿ ಬಂತು.
  ಅವರ ಸಹಕಾರವ ಬೈಲಿನ ಪರವಾಗಿ ನೆನೆಸಿಗೊಳ್ತು.
  ಕಪ್ಪು ಬಣ್ಣದ ಗೋಡೆಲಿ ಶುದ್ದಿ ಕಂಡುಗೊಂಡಿಪ್ಪ 2010 ರ ಮೋಡೆಲು ಈಗಳೂ ಬೈಲಿನ ಕೆಲವು ಜೆನ ನೆಂಪುಮಾಡಿಗೊಳ್ತವು.
 • ಈ ಸಂದರ್ಭಲ್ಲಿ ಗುರುಗಳ ವಿಶೇಷ ಆಶೀರ್ವಚನ ಸಿಕ್ಕಿದ್ದು ಬೈಲಿನ ಸೌಭಾಗ್ಯ.
 • ಗುರುಗೊ, ಪಟಂಗೊ, ಗಾದೆಗೊ, ಮದ್ದುಗೊ, ಅಡಿಗೆಗೊ – ಹೀಂಗೆ ಅನೇಕ ವಿಭಾಗಂಗಳ ಆರಂಭ ಮಾಡಿತ್ತು.
  ಬೈಲಿನ ಆರಂಭಿಕ ಸೃಷ್ಠಿಲಿ ಮಾಷ್ಟ್ರುಮಾವನ ವಿಶೇಷ ಮಾರ್ಗದರ್ಶನವ ಇಲ್ಲಿ ಸ್ಮರುಸಿಗೊಳ್ತು.
 • ಹಿರಿಯರಾದ ದೊಡ್ಡಮಾವ ಬೈಲಿಂಗೆ ಶುದ್ದಿ ಹೇಳುಲೆ ಸುರುಮಾಡಿದವು; ಹಳೇ ಹವ್ಯಕ ಭಾಶೆಲಿ.
  ಇದು ಬೈಲಿನ ಶುದ್ದಿ ಸಾಮರ್ಥ್ಯವ ಹೆಚ್ಚುಮಾಡ್ತ ವಿಶ್ವಾಸ ಒದಗುಸಿತ್ತು. (ಶುದ್ದಿ ಸಂಕೊಲೆ)
 • ಕ್ರಮೇಣ, ಬೈಲು ಬೆಳದತ್ತು – ಬೆಳಕ್ಕೊಂಡೇ ಹೋತು.
  ಶರ್ಮಪ್ಪಚ್ಚಿ, ಬೊಳುಂಬುಮಾವ, ಅಜ್ಜಕಾನಬಾವ, ಪೆರ್ಲದಣ್ಣ -ಎಲ್ಲೋರುದೇ ಬಂದು ಶುದ್ದಿ ಹೇಳುಲೆ ಸುರುಮಾಡಿದವು.
 • “ಬೈಲಿಲಿ ಇಂದೆಂತಾತು” ಹೇಳ್ತದರ ನೋಡುವೋರ ಪಟ್ಟಿ ಬೆಳದತ್ತು. ಶುದ್ದಿಗೊ, ಒಪ್ಪಂಗೊ ಎಲ್ಲವೂ ಬಪ್ಪದು ಜಾಸ್ತಿ ಆತು.
 • ಒಬ್ಬ ವೆಗ್ತಿ ನಿರ್ವಹಣೆ ಮಾಡ್ತ ಮಟ್ಟಂದ ಮೇಗೆ ಹೋಗಿ ಅಪ್ಪದ್ದೇ, ಬೈಲ ಬಂಧುಗೊ -ಅಪ್ಪಚ್ಚಿ ಭಾವಂದ್ರು ನಿರ್ವಹಣಾ ಸಹಕಾರ ನೀಡಿದವು, ಇಂದೂ ಹಾಂಗೇ ನೆಡಕ್ಕೊಂಡು ಬತ್ತಾ ಇದ್ದು.
 • ಒಪ್ಪಣ್ಣಂದೇ, ಹಲವಾರು ಬೈಲಬಂಧುಗಳುದೇ ಸೇರಿ ಶುದ್ದಿ ಹೇಳಿಗೊಂಡು 2010 ಪೂರೈಸಿದವು.
 • 2011 ಜೆನವರಿಲಿ ಮೂರನೇ ಒರಿಶಕ್ಕೆ ಕಾಲು ಮಡಗುತ್ತ ಸಮೆಯಲ್ಲಿ ನಮ್ಮ ಗುರುಗೊ “ಬೈಲು ಒಳ್ಳೆದಾಗಲಿ” ಹೇಳಿಗೊಂಡು ಮತ್ತೊಂದರಿ ಹರಸದವು. (ಸಂಕೊಲೆ)
  ಶ್ರೀ ಶ್ರೀ ಆಶೀರ್ವಾದ ಸಿಕ್ಕಿರೆ ಬೆಳಗದ್ದೆ ಇಪ್ಪ ವಸ್ತು ಯಾವದು!!?
 • 2011ರಲ್ಲಿ ಬೈಲಿನ ಹಳೆಯ ಕರಿ ರೂಪಂದ ಬೆಳಗಿದ ಹೊಸರೂಪಕ್ಕೆ ಬಂತು.
  ಸಂಕೊಳಿಗೆ ಬಾಬಣ್ಣ, ಅಜ್ಜಕಾನ ಬಾವ, ಪೆರ್ಲದಣ್ಣ – ಇದ್ದರೆ ನವಗೆಂತ ಹೆದರಿಕೆ – ಅಲ್ಲದಾ?!
 • ಹೊಸ ರೂಪಲ್ಲಿ ಹೇಮಾರ್ಸಿ ಮಡಗಿದ ಎಷ್ಟೋ ವಿಶಯಂಗೊ ಸುಲಾಬಲ್ಲಿ ಸಿಕ್ಕುತ್ತ ನಮುನೆ ಜೋಡಣೆ ಆತು. ಬೈಲು ಹೊಸ ವೇಗಲ್ಲಿ ಬೆಳಗಿತ್ತು.
  ಬೈಲಿನ ಆರು ಬೇಕಾರೂ ನೆರೆಕರೆಗೆ ಬಂದು ಶುದ್ದಿ ಹೇಳುಲಕ್ಕು – ಹೇಳ್ತ ವೆವಸ್ತೆ ಮಾಡಿ ಆತು.
  ಇದರಿಂದಾಗಿ ನೆರೆಕರೆ ತುಂಬ ದೊಡ್ಡ ಆತು; ಶುದ್ದಿಗೊ ಒಂದಲ್ಲ ಒಂದು ಬೈಲಿಲಿ ಬಂದುಗೊಂಡೇ ಇದ್ದು!!
 • 2011ರ ಎಪ್ರಿಲ್ ಹತ್ತನೇ ತಾರೀಕಿಂಗೆ, ನಮ್ಮ ಯೇನಂಕೂಡ್ಳಣ್ಣನ ಉಸ್ತುವಾರಿಲಿ, ಅವರ ಮನೆ ಜೆಗಿಲಿಲಿ ಬೈಲ ಬಾಂಧವರೆಲ್ಲ ಒಂದರಿ ಸೇರ್ತ ಹಾಂಗೆ ಆತು.
  ಕಾರ್ಯಕ್ರಮ ಆತಿಥ್ಯ ಮಾಡಿದ ಆ ಮನೆಯೋರಿಂಗೆ ಬೈಲಿನ ಅನಂತ ಕೃತಜ್ಞತೆಗೊ ಇದ್ದು.
  ಹಿರಿಯರಾದ ಶರ್ಮಪ್ಪಚ್ಚಿ ಆ ಕಾರ್ಯಕ್ರಮದ ವರದಿಯ ಚೆಂದಕೆ ಬೈಲಿಂಗೆ ಹೇಳಿದ್ದವು (ಶುದ್ದಿ ಸಂಕೊಲೆ)
  ಇದರಿಂದಾಗಿ, ಬೈಲಿಲಿ ಮಾಂತ್ರ ಕಂಡುಗೊಂಡಿದ್ದ ನೆರೆಕರೆ ನೆಂಟ್ರುಗೊ ಮುಖತಃ ಕಂಡು ಮಾತಾಡಿ ಆತ್ಮೀಯತೆ ಹೆಚ್ಚುಮಾಡಿಗೊಂಡವು.
 • ವಿದ್ವಾನಣ್ಣ ನೂರಾರುಮೈಲು ಪ್ರಯಾಣ ಮಾಡಿ ಆ ದಿನ ನವಗೆ ಮಾರ್ಗದರ್ಶನ ಮಾಡಿದ್ದು ಕಾರ್ಯಕ್ರಮದ ವಿಶೇಷ ಆಗಿದ್ದತ್ತು.
 • ಈಗೀಗ ಬೈಲಿಲಿ ಅಪ್ಪ ಪ್ರತಿಯೊಂದು ಜೆಂಬ್ರಲ್ಲಿಯೂ “ಬೈಲಿನೋರು ಆರಾರು ಇದ್ದವೋ” ಹೇಳಿ ಹುಡ್ಕಿ ಹೋಪಷ್ಟು ಆತ್ಮೀಯತೆ ಬಂದು ಬಿಟ್ಟಿದು.
 • ಆಸಕ್ತ ನೆರೆಕರೆ ಗುಂಪು ಈ ಒರಿಶಕ್ಕೆ ಕೆಲವು ವಿಶೇಷ ಗುರಿ ಹೊಂದಿಗೊಂಡಿದವು, ಅದೆಲ್ಲವೂ ಒದಗಿ ಬರಳಿ ಹೇಳ್ತದು ನಮ್ಮ ಹಾರೈಕೆ.
 • ಇಂದು 2012ರ ಜೆನವರಿ ಒಂದು; ಬೈಲಿಂಗೆ ಮತ್ತೊಂದೊರಿಶ!!!
  ನೆರೆಕರೆ ಬೆಳೆತ್ತಾ ಇದ್ದು, ಬೆಳಕ್ಕೊಂಡೇ ಇದ್ದು.
  ಗುರುಗಳ ಆಶೀರ್ವಾದ ಸಿಕ್ಕುತ್ತ ನಿರೀಕ್ಷೆಲಿ ನಾವೆಲ್ಲರೂ ಇದ್ದು.
 • ನೂರಾರು ಜೆನ ಶುದ್ದಿ ಹೇಳ್ತಾ ಇದ್ದವು.
 • ಸಾವಿರಾರು ಜೆನ ಒಪ್ಪ ಕೊಡ್ತಾ ಇದ್ದವು
 • ಲಕ್ಷಾಂತರ ಜೆನ ಶುದ್ದಿಗಳ ಕೇಳ್ತಾ ಇದ್ದವು.
 • ಬನ್ನಿ, ನಿಂಗಳೂ ಒಂದಾಗಿ ಬೈಲಿಲಿ ಸೇರಿಗೊಳ್ಳಿ.

ಓರುಕುಟ್ಟುತ್ತ ಪುಟ ಮೋರೆಪುಟ, ಹೀಂಗಿರ್ಸು ಎಷ್ಟು ಬಂದರೂ, ಸತ್ವಯುತವಾದ ಶುದ್ದಿಗಳ ಹೇಳ್ತವಕ್ಕೂ – ಕೇಳ್ತವಕ್ಕೂ ಏನೇನೂ ಕೊರತೆ ಇಲ್ಲೆ – ಹೇಳ್ತರ ಬೈಲು ತೋರುಸಿಕೊಟ್ಟಿದು.
ಈ ಅಮೋಘ ಕೊಡುಗೆ ಎಲ್ಲವೂ ನಿಂಗಳಿಂದಾಗಿ.

ಇನ್ನು ಮುಂದೆಯೂ ನಾವು ಹೀಂಗೇ ಇಪ್ಪ. ಎಲ್ಲೋರ ಸಹಕಾರ ಬೇಡ್ತಾ ಇದ್ದೆ.

|| ಹರೇರಾಮ ||

ಸೂ:
ಬೈಲಿಂಗೆ ಜೆನ ಹೇಂಗೆ ಬತ್ತಾ ಇದ್ದವು? – ಹೇಳ್ತ ವಿವರ ಇಲ್ಲಿದ್ದು:
1. 2009ರಲ್ಲಿ Oppanna.blogspot ಇಪ್ಪಗಾಣ ಒಂದೊರಿಶಲ್ಲಿ ಇಪ್ಪತ್ತುಸಾವಿರಂದ ಮೇಗೆ ಪುಟಂಗಳ ನೋಡಿದ್ದವು.
2. 2010ರ ಜೆನವರಿಂದ, ಇಂದಿನ ಒರೆಂಗೆ “ಆರು ಲಕ್ಷ ಸರ್ತಿ” ಪುಟಂಗಳ ನೋಡಿದ್ದವು!  ಎಲ್ಲವೂ ನಿಂಗಳಿಂದಾಗಿ.

~
ಬೈಲಿನ ಪರವಾಗಿ
Admin@Oppanna.Com

Admin | ಗುರಿಕ್ಕಾರ°

   

You may also like...

27 Responses

 1. ಪೆರ್ಮುಖ ಈಶ್ವರ ಭಟ್ಟ says:

  ಒಪ್ಪಣ್ಣಂಗೆ ೪ ನೇ ಹುಟ್ಟು ಹಬ್ಬದ ಸುಸಂದರ್ಭಲ್ಲಿ ಶುಭಾ ಶ ಯಂಗೊ..ಜಗತ್ತಿನ ಹವ್ಯಕರ ಕೊಂಡಿ ಆಗಿ ಆದಿ ಶಂಕರಾಚಾರ್ಯರ ತತ್ವಂಗಳ, ಮಹಾ ಸಂಸ್ಥಾನದ ಆಶಯಂಗಳ ಕಥೆ ರೂಪಲ್ಲಿ ಸರಳವಾಗಿ ನಿರೂಪಣೆ ಮಾಡುವ ಒಪ್ಪಣ್ಣ & ಸಂಗಡಿಗರಿಂಗೆ ಅಭಿನಂದನೆಗಳು. ಮಂತ್ರ ಸಂಗ್ರಹ ತುಂಬಾ ಪ್ರಯೋಜನಕಾರಿ ಆವುತ್ತಾ ಇದ್ದು. ಲೇಖನಂಗಳೆಲ್ಲವನ್ನೂ ಸುಲ ಭ ಲ್ಲಿ ಕೈಗೆ ಸಿಕ್ಕುವ ಹಾಂಗೆ ಮಡುಗಿದ್ದು ಶ್ಲಾಘನೀಯ….

 2. ವಿದ್ಯಾ ರವಿಶಂಕರ್ says:

  ಹರೇರಾಮ ಒಪ್ಪಣ್ಣಂಗೆ.

  ಅಭಿನಂದನೆಗೊ. ನೂರ್ಕಾಲ ಬಾಳಿ ಬೆಳಗಲಿ ಈ ಬೈಲು ಹೇಳಿ ಎನ್ನ ಹಾರೈಕೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *