Oppanna.com

ವಿಶೇಷ ಸೌಲಭ್ಯದೊಂದಿಗೆ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು

ಬರದೋರು :   ವಿಜಯತ್ತೆ    on   24/05/2020    1 ಒಪ್ಪಂಗೊ

ವಿಶೇಷ ಸೌಲಭ್ಯದೊಂದಿಗೆ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು-ನೇರ ಪ್ರವೇಶ ಆರಂಭವಾಗಿದೆ

ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರವೂ ಪೈಪೋಟಿಯಿಂದ ವ್ಯವಹರಿಸುವುದನ್ನು ಕಾಣುತ್ತೇವೆ. ಸಾಮಾಜಿಕ, ವ್ಯವಹಾರಿಕ,ಆರ್ಥಿಕ, ವೈದ್ಯಕೀಯ,ಜೊತೆಗೆ ಶೈಕ್ಷಣಿಕ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.ಈ ನಿಟ್ಟಿನಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಗಳು ಬೇಕಾದಷ್ಟು ತಲೆ ಎತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ;ಆಧುನಿಕ ತಂತ್ರಜ್ಞಾನದೊಂದಿಗೆ ಸಂಸ್ಕೃತಿ-ಸಂಸ್ಕಾರಯುತ  ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು ಎನ್ನಬಹುದು.ಈ ನಿಟ್ಟಿನಲ್ಲಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವು ಗಮನ ಸೆಳೆಯುತ್ತದೆ.

ಶಾಲೆಯ ವಿಷೇಷತೆಗಳುಃ- ಇಲ್ಲಿ ಎಲ್.ಕೆ.ಜಿ ಯಿಂದ 10ನೇ ತರಗತಿ ತನಕ ಆಂಗ್ಲ ಮಾಧ್ಯಮವನ್ನು  ಅಳವಡಿಸಿಕೊಳ್ಳುವುದರ ಜೊತೆಗೆ; ಮಕ್ಕಳಲ್ಲಿ ಆತ್ಮವಿಶ್ವಾಸವನ್ನೂ ನಮ್ಮ ಸಂಸ್ಕೃತಿ-ಸಂಸ್ಕಾರವನ್ನೂ ಅವರೊಳಗೆ ಸುಪ್ತವಾಗಿರುವ ಇತರ ಚಟುವಟಿಕೆಗಳನ್ನೂ ಬುದ್ಧಿ ವಿಕಾಸಕ್ಕೆಡೆ ಮಾಡಿ, ಆಯಾಯ ಮಕ್ಕಳ ಅಭಿರುಚಿಗೆ,ತಕ್ಕಂತೆ,ಅವರಿಗೆ,ಹೊರೆಯಾಗದಂತೆ,ತುಂಬಲಾಗುತ್ತದೆ.

ಪ್ರಾರ್ಥನೆಃ=,ವಿಶೇಷತೆ- ಪ್ರತಿದಿನ ಮಕ್ಕಳೆಲ್ಲ ಸಾಮೂಹಿಕವಾಗಿ ಒಂಭತ್ತೂವರೆಯಿಂದ ಹತ್ತು ಗಂಟೆಯ ತನಕ ದೀಪಸ್ತುತಿ, ಗುರುವಂದನೆ, ಸರಸ್ವತಿಸ್ತುತಿ, ವಂದೇಮಾತರಮ್ ,ಎರಡುನಿಮಿಷಗಳಧ್ಯಾನ, ಹನುಮಾನ್ ಚಾಲೀಸ್ ಇವುಗಳ ಜೊತೆಗೆ; ಸೋಮವಾರ ಲಿಂಗಾಷ್ಠಕ, ಮಂಗಳವಾರ ಗಣೇಶ ಪಂಚರತ್ನ, ಬುಧವಾರ ತೋಟಕಾಷ್ಠಕ, ಗುರುವಾರ ಭಗವದ್ಗೀತೆ, ಶುಕ್ರವಾರ ಮಹಾಲಕ್ಷ್ಮಿಯಷ್ಠಕ. ಹೀಗೆ ಪ್ರಾರ್ಥನೆಯಲ್ಲಿ ಆಧ್ಯಾತ್ಮಿಕ ವೈವಿಧ್ಯತೆಗಳಿದ್ದು ಮಕ್ಕಳಿಗೆ ಅವುಗಳೆಲ್ಲದರ ಕಂಠಪಾಠವಾಗಲು ಸಹಕಾರಿಯಾಗಿದೆ. ನಮ್ಮ ಎಳೆಯರಲ್ಲಿ ಸತ್ಸಂಸ್ಕಾರದ ಬೀಜ ಬಿತ್ತುವುದರಲ್ಲಿ ಇದೊಂದು ಸೋಪಾನವಾಗಿದೆ ಎಂಬುದು ಸುಳ್ಳಲ್ಲ. ಪ್ರಾರ್ಥನೆ  ಮುಗಿದ ಬಳಿಕ ಅಂದಿನ ವಿಶೇಷ ವಾರ್ತಾವಾಚನ. ಮುಂದೆ  ಆಯಾಯ ದಿನದಲ್ಲಿ ಹುಟ್ಟು ಹಬ್ಬ ಆಚರಿಸುವ ಮಕ್ಕಳಿಗೆ  ಶಾಲಾ ಮುಖ್ಯ ಶಿಕ್ಷಕರಿಂದ ಶುಭ ಆಶೀರ್ವಚನ, ಜೊತೆಗೆ; ||ಜನ್ಮದಿನಮಿದಂ ಐ ಪ್ರಿಯಾ ಸಖೇ, ಶಂತನೋತುತೇ ಸರ್ವದಾಮುಮ್|| ಸಂಸ್ಕೃತ ಶ್ಲೋಕದೊಂದಿಗೆ ಸಾಮೂಹಿಕ ಶುಭಾಶಯ.  ಮಧ್ಯಾಹ್ನ ಊಟದ ಹೊತ್ತಿಗೆ ಸಿಹಿ ಹಂಚುವಿಕೆ. ಈ ವಿದ್ಯಾಲಯದಲ್ಲಿ ಕರತಾಡನಕ್ಕೂ ಒಂದು ವಶೇಷತೆಯಿದೆ!. “ರಾಮಸ್ಮರಣ ಮನ, ರಾಮ ಸ್ಮರಣ ಮನ; ರಾಮ್,ರಾಮ್, ರಾಮ್” ಹೀಗೆ  ಎಲ್ಲರೂ ಒಕ್ಕೊರಲಿನಿಂದ ವಿಶೇಷ ಧಾಟಿಯಲ್ಲಿ ಹೇಳುವುದಾಗಿದೆ.ಮುಂದೆ ಹತ್ತು ಗಂಟೆಗೆ ಪಾಠದ ತರಗತಿಗಳು ಆರಂಭ. ಮಧ್ಯಾಹ್ನ 12-45 ರಿಂದ 1-45ರ ತನಕ ಊಟದ ಹೊತ್ತು.ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ಶಾಲೆಯಲ್ಲೇ ತಯಾರಿಸುವ ಬಿಸಿಯೂಟ. ಮಧ್ಯಾಹ್ನದೂಟದ ಹೊತ್ತಲ್ಲಿ ಅನ್ನಪೂರ್ಣೆಯ ಸ್ತುತಿ.

ಶಿಕ್ಷಣ ವಿಶೇಷತೆಃ- ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನೊದಗಿಸುವುದಕ್ಕಾಗಿ “ನ್ಯಾಶನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲ್”[N.I.O.S]ಮಾನ್ಯತೆಯೊಂದಿಗೆ ಅದೇ ಪಠ್ಯಕ್ರಮದಲ್ಲಿ ಮುಂದುವರಿಯುತ್ತಿದೆ.  ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಪ್ರಾಥಮಿಕ ಹಂತದ ಮಾತೃರೂಪಿತ ಆಪ್ತತೆಯಲ್ಲಿ ಕನ್ನಡದೊಂದಿಗೆ ಆಂಗ್ಲ ಅಕ್ಷರ ಪರಿಚಯ. ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ, ವಿ.ಸ್ಯಾಟ್. ಮೂಲಕ ಉಪಗ್ರಹಾಧಾರಿತ  ಶಿಕ್ಷಣ,ದೃಶ್ಯ-ಶ್ರವ್ಯಸಾಧನ ಸಹಿತ ತರಗತಿಗಳು, ಎರಡನೆ ತರಗತಿಯಿಂದ ಸಂಸ್ಕೃತ, ಮೂರನೆ ಕ್ಲಾಸಿನಿಂದ ಹಿಂದಿ,ಸೆಟಲೈಟ್ ಕ್ಲಾಸು,ಯೋಗ ಮತ್ತು ಧ್ಯಾನ ತರಗತಿಗಳು,ಕರಾಟೆ,ಯಕ್ಷಗಾನತರಬೇತಿ, ಸಂಕಲಿತ ಶಿಕ್ಷಣಕ್ಕಾಗಿ ಟ್ಯಾಬ್ –ಲ್ಯಾಬ್ ವ್ಯವಸ್ಥೆ, ಸುಸಜ್ಜಿತ ವಿನ್ಯಾಸ ಪ್ರಯೋಗಾಲಯ ಹತ್ತನೇ ತರಗತಿಗೆ ಶಾಲಾವತಿಯಿಂದಲೇ ವಿಶೇಷ ಕೋಚಿಂಗ್ ವ್ಯವಸ್ಥೆಯಿದೆ. ಈ ತನಕದ ಎಂಟು ಎಸ್.ಎಸ್.ಎಲ್.ಸಿ  ತಂಡಗಳೂ ೧೦೦ಶೇಕಡಾ ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶಿಕ್ಷಣಕ್ಕೆ  ಸಂಬಂಧ ಪಟ್ಟ ಹಾಗೂ ಎಲ್ಲಾ ಸಾಹಿತ್ಯ ವೈವಿಧ್ಯತೆಗಳಿರುವ  ಹನ್ನೆರಡು ಸಾವಿರಕ್ಕೂ ಮಿಕ್ಕಿ ಪುಸ್ತಕಗಳಿರುವ ಸುಸಜ್ಜಿತವಾದ ಗ್ರಂಥಾಲಯ. ಕ್ರೀಡಾನುಕೂಲವಿರುವ ವಿಶಾಲ ಆಟದಮೈದಾನ ಇವುಗಳೆಲ್ಲದರ ಪ್ರಯೋಜನವನ್ನು ಮಕ್ಕಳು ಪಡೆಯ ಬಹುದಾಗಿದೆ. ಹಾಗೆಯೇ ಶಾಲಾ ವಾಹನ ಸೌಲಭ್ಯವಿದೆ.

ಸಾಂಸ್ಕೃತಿಕ ಹಬ್ಬಗಳನ್ನೂ ರಾಷ್ಟ್ರೀಯ ಹಬ್ಬಗಳನ್ನೂ ಸಾಮೂಹಿಕವಾಗಿ ಅಭ್ಯಾಗತರನ್ನು ಆಮಂತ್ರಿಸಿ ಆಚರಿಸುವುದು, ರೂಢಿ. ಇವುಗಳಲ್ಲಿ, ಗಣೇಶಚತುರ್ಥಿ, ನೂಲಹುಣ್ಣಿಮೆ, ಶ್ರೀಕೃಷ್ಣಾಷ್ಟಮಿ, ಶಾರದಾಪೂಜೆ, ವ್ಯಾಸಪೂ-ರ್ಣಿಮೆ ಹಾಗೂ ಸ್ವಾತಂತ್ರ್ಯದಿನಾಚರಣೆ ಗಾಂಧಿಜಯಂತಿ, ಮಕ್ಕಳ ದಿನಾಚರಣೆ, ಓಣಂ ಮೊದಲಾದ ರಾಷ್ಟ್ರೀಯ ಹಬ್ಬಗಳನ್ನೂ ಆಚರಿಸುವುದಲ್ಲದೆ; ಮಕ್ಕಳಿಂದ, ಮಕ್ಕಳಿಗಾಗಿ ಪ್ರತಿ ತಿಂಗಳು ’ಪ್ರತಿಭಾ ಭಾರತಿ’ ಹಾಗೂ ’ಜ್ಞಾನದೀಪ್ತಿ’ ಸಾಹಿತ್ಯ ಪ್ರಕಾರದಿಂದ ಕಾರ್ಯಕ್ರಮ ನಡೆಸುವರೆ ಪ್ರೋತ್ಸಾಹ ನೀಡಲಾಗುವುದು.

ವಾರ್ಷಿಕೋತ್ಸವ:- ವರ್ಧಂತ್ತ್ಯುತ್ಸವಕ್ಕೆ ಪೂರ್ವಭಾವಿಯಾಗಿ ಮಕ್ಕಳಿಗೆ ಕೆಲವು ಸಾಹಿತ್ಯ, ಸಾಂಸ್ಕೃತಿಕ, ಸ್ಪರ್ಧಾವೇದಿಕೆಗಳೂ, ಆಟೋಟಕ್ಕೆಹೊಂದಿಕೊಂಡು ’ಪಥಸಂಚಲನ’ ನಡೆಸಲಾಗುವುದು. ಆಟೋಟಗಳಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗ ಮಾಡಿಕೊಂಡು ಸಾದಾರಣ ಎಲ್ಲಾ ತರದ ಸ್ಪರ್ಧೆಗಳನ್ನೂ ಅಳವಡಿಸಲಾಗಿದೆ. ಸಾಹಿತ್ಯ ವಿಭಾಗದಲ್ಲಿ ಪ್ರಬಂಧ, ಕತೆ, ಕವನ, ನೆನಪಿನಶಕ್ತಿ, ರಸ ಪ್ರಶ್ನೆ, ಡ್ರಾಯಿಂಗ್, ಹಾಗೂ ಜಾನಪದ ಹಾಡು, ರಂಗೋಲಿ,ಮುಂತಾದುವುಗಳಿವೆ. ವಾರ್ಷಿಕೋತ್ಸವಕ್ಕೆ ಪೂರ್ವಭಾವಿಯಾಗಿ ವಿಶೇಷ ನುರಿತ ಅಧ್ಯಾಪಿಕೆಯನ್ನು ಆಮಂತ್ರಿಸಿ ನೃತ್ಯ ತರಬೇತಿಯನ್ನೂ ನೀಡಲಾಗುವುದು.

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯವೂ ಭವ್ಯವೂ ಆದ ಕನಸಿನ ಕೂಸಾದ ಈವಿದ್ಯಾಪೀಠವು2001ರಲ್ಲಿ; ಎಲ್.ಕೆ.ಜಿ ತರಗತಿಯಿಂದ ಆರಂಭಗೊಂಡಿದೆ. ಇದೀಗ ಹೈಸ್ಕೂಲಿನಲ್ಲಿ 2019-20 ರ ಮಾರ್ಚಿಯಲ್ಲಿ  S.S.L.C ಒಂಭತ್ತನೇ ತಂಡ ಪರೀಕ್ಷೆ ಬರೆದು ಹೊರಬರಲಿದ್ದಾರೆ. ನಮ್ಮ ಶ್ರೀಗುರುಗಳು ಶಾಲೆ ಪ್ರಾರಂಭದ ದಿನಗಳಲ್ಲೇಆಶೀರ್ಮಂತ್ರಾಕ್ಷತೆ ಅನುಗ್ರಹಿಸಿ ಹೇಳಿದ್ದೇನೆಂದರೆ; “ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳ ಕಾದಿರಿಸುತ್ತಾರೆ.ಆದರೆ ಕಲಿಕೆಯಲ್ಲಿ ಹಿಂದಿರುವವರು ಎಲ್ಲಿಗೆ ಹೋಗಬೇಕು? ಅವರು ಮುಂದೆ ಬರುವುದು ಬೇಡವೇ!?.ನಾವು ಅಂತವರಿಗೂ ಅವಕಾಶ ನೀಡಿ ಮುಂದೆ ತರಬೇಕಾಗಿದೆ”.ಎಂದಿದ್ದರು.   ಸದ್ರಿ ಶ್ರೀಗುರುಗಳ ಅಪೇಕ್ಷೆಯಂತೆ ಬುದ್ಧಿವಂತ ವಿದ್ಯಾರ್ಥಿಗೆ ಮಾತ್ರ ಅಡ್ಮಿಶನಿಗೆ ಅವಕಾಶವನ್ನೀಯದೆ, ಕಲಿಕೆಯಲ್ಲಿ ಹಿಂದಿರುವವರನ್ನೂ ಬುದ್ಧಿವಂತರನ್ನಾಗಿ ಮಾಡುವ ದೊಡ್ಡಗುಣ ಈ ಶಾಲೆ ಪಡೆದಿದೆ.

ಈ ಶಾಲೆಗೆ ಬರುವ  ಪ್ರತಿಯೊಬ್ಬ ಮಗುವನ್ನೂ ಆಪ್ತತೆಯಿಂದ ಮಾತನಾಡಿಸಿ ,ಅವರಲ್ಲಿರುವ ಲೋಪ-ದೋಷಗಳನ್ನು ಗಮನಿಸಿ, ತಿಳಿಹೇಳಿ ಆತ್ಮವಿಶ್ವಾಸ ಮೂಡುವಂತೆ ಮಾಡುವುದರಲ್ಲಿ ಶಿಕ್ಷಕವೃಂದ ಸಫಲರಾಗುತ್ತಾರೆ. ಎಲ್ಲರನ್ನೂ ಬೇಧ ಭಾವವಿಲ್ಲದೆ  ಮುಂದೆ ತರುವ ನಿಟ್ಟಿನಲ್ಲಿ ಆಸ್ಥೆವಹಿಸುವ ಆಡಳಿತ ಮಂಡಳಿಯ,ರಕ್ಷಕ-ಶಿಕ್ಷಕ ಸಂಘದ ಸಂಪೂರ್ಣ ಸಹಕಾರವಿದೆ. ವಿದ್ಯೆಯಲ್ಲಿ, ಬುದ್ಧಿಯಲ್ಲಿ ಹಿಂದುಳಿದವರನ್ನೂ ಹಾಗೂ ಸಮಾಜದ ಎಲ್ಲಾ ಸಮುದಾಯದ ಮಕ್ಕಳನ್ನೂ ಬರಮಾಡಿಕೊಳ್ಳಬೇಕೆಂದು ನಮ್ಮ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆದೇಶದಂತೆ ಈ ವಿದ್ಯಾದೇಗುಲ ಬರಮಾಡಿಕೊಳ್ಳುತ್ತದೆ. ಅವರಲ್ಲಿ ಆತ್ಮೀಯತೆಯಿಂದ ವರ್ತಿಸಿ ಹಿತಕರವಾದ ಪ್ರಭಾವ ಬೀರುವಂತೆ ಮಾಡುವುದರಿಂದ  ಬೆಳಿಗ್ಗೆ ಶಾಲೆಗೆ ಹೊರಡುವ ಮಕ್ಕಳು ಖುಶಿಯಿಂದಲೇ ಹೊರಡುತ್ತಾರೆ. ಒಂದು ನಾಡಿನ ಸಂಪತ್ತೆಂದರೆ ಆ ನಾಡಿನ ಮಕ್ಕಳು. ಮುಂದಿನ ಪ್ರಜೆಗಳು. “ಶಿಕ್ಷಣವು   ಜೀವನವಿಕಾಸದ ಸಾಧನ.ಒಂದು ಮನೆಯ ಮಗುವಿನ  ಸರ್ವತೋಮುಖ ಅಭಿವೃದ್ಧಿಯಾದರೆ; ಆ ಕುಟುಂಬ,ಸಮಾಜ,ಮಾತ್ರವಲ್ಲ ದೇಶವೇ ಅಭಿವೃದ್ಧಿಯಾದಂತೆ”. ಇದು ನಮ್ಮ ಶ್ರೀ ಸಂಸ್ಥಾನ ಈ ವಿದ್ಯಾದೇಗುಲ ಪ್ರಾರಂಭದಿಂದಲೇ   ಅನುಗ್ರಹ ಮಂತ್ರಾಕ್ಷತೆಯಿತ್ತು  ಹರಸಿದ ಸೂಕ್ತಿ.

——೦——

ಶ್ರೀ ಭಾರತೀವಿದ್ಯಾಪೀಠ,ಮುಜುಂಗಾವು,Online admission ,ಸೌಲಭ್ಯಕ್ಕಾಗಿ ಈ ಮೇಲಿನ ಲಿಂಕ್ ನ್ನು ಬಳಸಿ…

ಶಾಲೆಯ ವಿಳಾಸಃ-ಶ್ರೀಭಾರತೀ ವಿದ್ಯಾಪೀಠ,ಮುಜುಂಗಾವು,
ಅಂಚೆಃ ಎಡನಾಡು, ಕಾಸರಗೋಡು ಜಿಲ್ಲೆ-671321, ಮೊಃ-9446283049,
Email –mujungavu@gmail.com

 

 

One thought on “ವಿಶೇಷ ಸೌಲಭ್ಯದೊಂದಿಗೆ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×