Oppanna.com

ಸ್ವಯಂವರ : ಕಾದಂಬರಿ : ಭಾಗ 05 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   24/06/2019    2 ಒಪ್ಪಂಗೊ

ನರ್ಸು ಕೇಳಿದ ಮದ್ದೆಲ್ಲ ತಂದು ಕೊಟ್ಟಿಕ್ಕಿ , ದೊಡ್ಡಪ್ಪ ಪರಂಚಿಂಡಿದ್ದರೂ ಕೆಮಿಗೆ ಹಾಕದ್ದೆ ದೊಡ್ಡಮ್ಮ ಒಪ್ಪಕ್ಕನನ್ನು ಕರಕ್ಕೊಂಡು ಆಸ್ಪತ್ರೆಯ ಹೆರ ಬಂತು.ಅಲ್ಲಿ ನಿಲ್ಸಿಂಡಿಪ್ಪ ಬೆಳಿ ಕಾರಿನ ಮುಂದಾಣ ಬಾಗಿಲು ತೆಗದು ಕೂದಿಕ್ಕಿ ಒಪ್ಪಕ್ಕನನ್ನು ಹತ್ತರೆ ಕೂಬಲೆ ಹೇಳಿತ್ತು.

“ಈ ನಡು ಇರುಳು ಅದರನ್ನು ಕಟ್ಯೊಂಡು ಎಲ್ಲಿಗೆ? ಆನು ಬತ್ತಿಲ್ಲೆ ‌.ನೀನೇ ಹೋಗು” ಅವರ ಹಿಂದಂದ ಬಂದ ದೊಡ್ಡಪ್ಪ ಹೇಳ್ಯಪ್ಪಗ ದೊಡ್ಡಮ್ಮ ತಲೆ ಆಡ್ಸಿತ್ತು.

“ಈ ಕೂಸಿಂಗೆ ಎರಡು ಅಂಗಿಯನ್ನು ತೆಗದು ಕೊಡು.ಕಾಲಿಲ್ಲಿ ಜೋಡುದೆ ಇಲ್ಲೆ.ಅಂಗುಡಿ ಇದ್ದರೆ ಅದನ್ನು ತೆಗದು ಕೊಡು” ದೊಡ್ಡಪ್ಪ ರಜ ಪೈಸೆ ಕಿಸೆಂದ ತೆಗದು ಕಾರಿನೊಳಾಂಗೆ ಕೈ ನೀಡಿ ದೊಡ್ಡಮ್ಮನ ಬೇಗಿಂಗೆ ಹಾಕಿದವು.

“ಬಾಯಿಲಿ ಹೇಳುದು ಕೇಳಿರೆ ನಿಂಗೊ ಪಾರೆಕಲ್ಲಿನಷ್ಟು ಗಟ್ಟಿ ಮನಸಿನ ಮನುಶ್ಯ° ಹೇಳಿ ಜಾನ್ಸುಗು. ಈಗ ನೋಡಿ. ಆನು ಎಂತಾರು ಹೇಳ್ವ ಮದಲೇ ಪೈಸೆ ಕೊಟ್ಟದಾರು?” ದೊಡ್ಡಮ್ಮ ನೆಗೆ ಮಾಡಿಂಡು ದೊಡ್ಡಪ್ಪಂಗೆ ಕೈ ಬೀಸಿ ಟಾಟಾ ಮಾಡಿಕ್ಕಿ ಕಾರು ಬಿಡ್ಲೆ ಸುರು ಮಾಡಿತ್ತು.

ಒಪ್ಪಕ್ಕ ಕಾರಿಲ್ಲಿ ಕೂದ್ದದು ಸುರು.ಅದು ಮನೆಂದ ಹೆರ ಹೋದ್ದದೇ ಕಮ್ಮಿ. ಅದರ ಅಮ್ಮ ಎಲ್ಲಿಗೂ ಹೋಪಲಿಲ್ಲೆ. ದೂರಂದ ಜೀಪು, ಕಾರು ಹೋಪದು ನೋಡಿದ್ದಷ್ಟೆ ಹೊರತು ಅದು ಇಷ್ಟರವರೆಗೆ ಅದರ್ಲಿ ಹತ್ತಿದ್ದಿಲ್ಲೆ‌.

ಮೆಸ್ತಂಗಿಪ್ಪ ಕಾರಿನ ಸೀಟಿನ ಮೆಲ್ಲಂಗೆ ಮುಟ್ಟಿ ಮುಟ್ಟಿ ನೋಡುವ ಆ ಕೂಸಿನ ಕಾಂಬಗ ಆ ದೊಡ್ಡಮ್ಮನ ಮನಸು ಕರಗಿದ ಹಾಂಗಾತು.

ಎಣ್ಣೆ ಹಾಕದ್ದೆ ಕೆಂಚು ಕೆಂಚಾದ ತಲೆ ಕಸವು ಬಾಚದ್ದೆ ಜೆಡಕ್ಕು ಕಟ್ಟಿದ ಹಾಂಗಿದ್ದು.ಅದರ ಅಬ್ಬೆ ಮಗಳ ಸರಿಯಾಗಿ ನೋಡ್ತಿಲ್ಲೆ ಹೇಳುದಕ್ಕೆ ಸಾಕ್ಷಿ ಹೇಳುವ ಹಾಂಗಿದ್ದತ್ತು ಅದರ ಮಣ್ಣು ಹಿಡ್ಕಟೆ ಮೈ, ಬೂದಿ ನೆಗದ ಕಾಲು,ಮಣ್ಣು ತುಂಬಿ ಉದ್ದ ಬೆಳದರೂ ತೆಗೆಯದ್ದ ಉಗುರು. ಅಂಗಿಯಂತೂ ಎಲ್ಲಿ ಇಷ್ಟು ಹಳತ್ತಿದ್ದತ್ತೋ ಗೊಂತಿಲ್ಲೆ. ಅವರ ಮನೆಲಿ ಕಾಲುದ್ದುವ ವಸ್ತ್ರ ಕೂಡ ಇದರಿಂದ ಶುಭ್ರ ಇದ್ದತ್ತು.

ಸುಶೀಲನು ಎಲ್ಲರ ಹಾಂಗಿದ್ದರೆ ಈಗ ಇಷ್ಟು ಸಣ್ಣ ಕೂಸಿಂಗೆ ಈ ಗತಿ ಬತ್ತಿತೋ,ಆರು ಎಷ್ಟು ಹೇಳಿರೂ ಕೇಳದ್ದೆ ,ಮನೆತನ ,ಮರ್ಯಾದೆ ಯಾವುದಕ್ಕೂ ಬೆಲೆ ಕೊಡದ್ದೆ “ಆನದರನ್ನೇ ಮದುವೆ ಅಪ್ಪದು, ಬದ್ಕುತ್ತರೆ ಅದರೊಟ್ಟಿಂಗೆ, ಇಲ್ಲದ್ರೆ ಸಾಯ್ತೆ” ಹೇಳಿ ಹಠ ಮಾಡಿ ಆ ಕಲ್ಲು ಕೆತ್ತಲೆ ಬಂದ ದಿನೇಸನೊಟ್ಟಿಂಗೆ ಓಡಿಂಡು ಬಯಿಂದನ್ನೆ..

ಮನೆ ಮಗಳು ಬೇರೆ ಜಾತಿದರ ಮದುವೆ ಆದರೆ ಮರ್ಯಾದೆ ಹೋವ್ತು ಹೇಳಿ ಅಬ್ಬೆ ಅದರ ಅಟ್ಟದ ಕಪ್ಪು ಉಗ್ರಾಣಲ್ಲಿ ಬಾಗಿಲು ಹಾಕಿ ಕೂರ್ಸಿರೂ ಎಷ್ಟು ಉಪಾಯ ಮಾಡಿ ಅಲ್ಲಿಂದ ತಪ್ಸಿಕೊಂಡಿದು……..” ಹಳೆ ನೆಂಪುಗೊ ಆ ದೊಡ್ಡಮ್ಮನ ಮನಸಿನ ಹಿಂಡುಗ ಅವರ ಬಾಯಿಂದ “ಛೇ……” ಹೇಳಿ ಒಂದು ಉದ್ಗಾರ ಬಂತು.

ಸೀಟಿಲ್ಲಿ ಮೊಳಪ್ಪೂರಿ ನಿಂದು ಹೆರಾಂಗೆ ನೋಡಿಂಡು ಅಲ್ಲಿ ಓಡುವ ಬಣ್ಣ ಬಣ್ಣದ ಬೆಣಚ್ಚು ನೋಡ್ತಾ ಇಪ್ಪ ಒಪ್ಪಕ್ಕ° ದೊಡ್ಡಮ್ಮ ಕಾರು ನಿಲ್ಸಿಯಪ್ಪಗ ತಿರುಗಿ ನೋಡಿತ್ತು.
“ಬಾ..ನಾವು ಇಲ್ಲೇ ಒಂದರಿ ಹೋಗಿಂಡು ಬಪ್ಪೋ°. ದೊಡ್ಡಮ್ಮ ಅದರ ಕೈ ಹಿಡ್ಕೊಂಡು ಕಾರಿಂದ ಹೆರ ಇಳುದು , ಕಾರಿನ ಬಾಗಿಲು ಹಾಕಿಕ್ಕಿ ಅಲ್ಲೇ ಎದುರ ಇಪ್ಪ ಒಂದು ಕಟ್ಟೋಣದ ಒಳಾಂಗೆ ಕರಕ್ಕೊಂಡು ಹೋತು.

ಅಲ್ಲಿ ತುಂಬಾ ಮೇಜು ,ಕುರ್ಚಿ ಎಲ್ಲ ಮಡಿಕ್ಕೊಂಡಿದ್ದತ್ತು.ಇಷ್ಟು ಚಂದ ಇಲ್ಲದ್ರೂ ಒಂದು ಪೊಟ್ಟು ಮೇಜು ಅದರ ಮನೆಲಿ ಇದ್ದತ್ತು.ಹಾಂಗೆ ಒಪ್ಪಕ್ಕಂಗೆ ಅದು ಮೇಜು ಹೇಳಿ ಗೊಂತಾದ್ದು.

ದೊಡ್ಡಮ್ಮ ಅದರ ಒಂದು ಕುರ್ಚಿಲಿ ಕೂರ್ಸಿಕ್ಕಿ ” ನಿನಗೆ ತಿಂಬಲೆ ಎಂತ ಬೇಕು?” ಕೇಳಿತ್ತು.

“ಎನಗೆ ಹೆಜ್ಜೆ ಮಾತ್ರ ಸಾಕು.ಕೋಳಿ,ಮೀನೆಲ್ಲ ಆನು ತಿಂತಿಲ್ಲೆ.ಅದರೆಲ್ಲ ನಾವು ತಿಂಬಲಾಗಾಳಿ ಅಮ್ಮ ಹೇಳಿದ್ದು” ಹಶುವಾಗಿ ಬಚ್ಚಿದರೂ ಆ ಸಣ್ಣ ಕೂಸಿನ ಬಾಯಿಂದ ಬಂದ ಮಾತು ಕೇಳಿ ದೊಡ್ಡಮ್ಮಂಗೆ ಸಮದಾನ ಆತು. ಇದಿಷ್ಟನ್ನಾರ ಮಾಂಸಾಹಾರ ತಿಂದಿದಿಲ್ಲೆ.ಅಷ್ಟಾರು ಒಳ್ಳೆ ಬುದ್ದಿ ಹೇಳಿಕೊಟ್ಟಿದು ಸುಶೀಲ ಮಗಳಿಂಗೆ.

ಒಂದು ಜನ ಅಲ್ಲಿಗೆ ಬಂದು ದೊಡ್ಡಮ್ಮನತ್ರೆ ಎಂತೋ ಕೇಳಿಕ್ಕಿ ಹೋತು.ದೊಡ್ಡಮ್ಮನು ಅದರತ್ರೆ ಮಾತಾಡಿಕ್ಕಿ ನೆಗೆ ಮಾಡಿ ತಲೆ ಆಡ್ಸಿದವು.ದೊಡ್ಡಮ್ಮನ ನೆಗೆ ಕಾಂಬಗ ಅದಕ್ಕೆ ಅಮ್ಮ ನೆಗೆ ಮಾಡಿರೂ ಹೀಂಗೇ ಕಾಂಗಾ ಹೇಳಿ ಆತು.ಒಪ್ಪಕ್ಕಂಗೆ ನೆಂಪು ಬಂದ ಮತ್ತೆ ಅದರ ಅಮ್ಮ ಒಂದು ದಿನವು ನೆಗೆ ಮಾಡಿದ್ದರ ನೋಡಿದ್ದಿಲ್ಲೆ ಅದು.

“ಎಂತರ ನೀನು ಆಲೋಚನೆ ಮಾಡುದು? ಇದರ ತಿನ್ನು” ದೊಡ್ಡಮ್ಮ ಅವರ ಎದುರು ತಂದು ಮಡುಗಿದ ತಟ್ಟೆಲಿಪ್ಪ ಬೆಳೀ ಉರೂಟು ದೋಸೆಯ ಒಂದು ಕರೇಂದ ಸಣ್ಣ ತುಂಡು ಮಾಡಿ ಒಪ್ಪಕ್ಕನ ಬಾಯಿಗೆ ಕೊಟ್ಟತ್ತು.

“ಎಷ್ಟು ಲಾಯ್ಕ…..ಹಾ….ಆನಿಷ್ಟ್ರವರೆಗೆ ತಿಂದಿದಿಲ್ಲೆ” ಒಪ್ಪಕ್ಕಂಗದು ಭಾರೀ ರುಚಿ ಆತು.

“ಆನೊಂದರಿ ಮುಟ್ಟೆಕಾ?” ದೊಡ್ಡಮ್ಮನತ್ರೆ ಕೇಳಿಕ್ಕಿ ಅದು ಮೆಲ್ಲಂಗೆ ಅದರ ಮುಟ್ಟಿ ನೋಡಿತ್ತು.

“ಇಷ್ಟ್ರವರೆಗೆ ತಿಂದಿದಿಲ್ಯಾ? ಇದರ ಹೆಸರು ಉದ್ದಿನದೋಸೆ. ನಿನ್ನಮ್ಮ ಎಂತ ಇದರ ಮಾಡಿಕೊಡದ್ದದು? ಇನ್ನು ನಿನ್ನ ಮನಗೆ ಹೋದಪ್ಪಗ ಅಮ್ಮನತ್ರೆ ಕೇಳು, ಏಕೆ ಉದ್ದಿನದೋಸೆ ಮಾಡಿ ಕೊಟ್ಟಿದಿಲ್ಲೆ ಹೇಳಿ?” ದೊಡ್ಡಮ್ಮಂಗೆ ಈ ಕೂಸಿನತ್ರೆ ಮಾತಾಡುಗ ಸುಶೀಲನ ಮನೆ ಪರಿಸ್ಥಿತಿ ಹೇಂಗಿಕ್ಕು ಹೇಳಿ ಕಲ್ಪನೆ ಕೂಡ ಮಾಡ್ಲೆಡಿಯದ್ದಷ್ಟು ಸಂಕಟ ಆತು.ಆಚೊಡೆಂಗೆ ಮೋರೆ ತಿರುಗಿಸಿ ಸೆರಗಿಲ್ಲಿ ಕಣ್ಣುದ್ದಿ ಒಪ್ಪಕ್ಕಂಗೆ ದೋಸೆ ತುಂಡು ಮಾಡಿ ಕೊಡುಗ ಅವರ ಮನಸಿಲ್ಲಿ
“ಎನಗೆ ನಾಳಂಗೆ ಕುಞಿ ದೋಸೆಯೇ ಆಯೆಕಬ್ಬೇ.ಬೇರೆಂತ ಮಾಡಿರೂ ಆನು ತಿನ್ನೇ.ಅದಕ್ಕೆ ಮಂದ ರವೆಯು,ಗಟ್ಟಿ ತುಪ್ಪವು ಆಯೆಕೂಳಿ” ಪೆಟ್ಟಿಕೋಟು ಹಾಕಿ ಒಲೆ ಬುಡಲ್ಲಿ ನಿಂದು ಕೈಲಿ ಬಟ್ಲು ತಿರುಗ್ಸಿಂಡು ತರ್ಕ ಮಾಡುವ ಸುಶೀಲೆಯ ಚಿತ್ರವೇ ಕಂಡುಕೊಂಡಿತ್ತು…

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಈವರೆಗೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 05 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಒಪ್ಪಕ್ಕನ ದೊಡ್ಡಪ್ಪನ ಮನೋಧರ್ಮದ ಅನಾವರಣ ಆತು. ಒಪ್ಪಕ್ಕಂಗೆ ಇವರ ಆಸರೆ ಸರಿಯಾಗಿ ಸಿಕ್ಕುತ್ತೋ ನೋಡೆಕ್ಕಷ್ಟೆ.

  2. ಒಪ್ಪಕ್ಕ ಕೂಸಿನ ಗ್ರೇಶಿ ಮನಸ್ಸು ಚುರುಕ್ ಹೇಳಿತ್ತು. ಕತೆ ಏವತ್ರಾಣ ಹಾಂಗೆ ರೈಸಿತ್ತು. ಇನ್ನಾಣ ಸೋಮವಾರ ಬರಲಿ ಬೇಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×