Oppanna.com

ಶುದ್ಧ ಮುದ್ರಿಕೆ-ಭಾಗ-5(ಕ್ಷಯ ಸೂತಕ)

ಬರದೋರು :   ವಿಜಯತ್ತೆ    on   31/05/2020    2 ಒಪ್ಪಂಗೊ

ಶುದ್ಧ ಮುದ್ರಿಕೆ-ಭಾಗ-5
ಕ್ಷಯ ಸೂತಕ
ವೃದ್ಧಿಸೂತಕ(ಜನನ)ದ ಬಗ್ಗೆ ರಜ ತಿಳ್ಕೊಂಡಾತು.ಇನ್ನು ಕ್ಷಯ ಸೂತಕ *ಹೊಲೆ* ಅರ್ಥಾತ್ ಸತ್ತಸೂತಕದ ಮೈಲಿಗೆ, ಶುದ್ಧ ನೋಡುವೊ°.ವೃದ್ಧಿಸೂತಕದಾಂಗಲ್ಲ ಇದು. ರಜ ಕಡ್ಪವೇ.ಮೃತರ ಮಕ್ಕೊಗಂತೂ ತೀರಾ ಸರಳ ಅಲ್ಲ!.ಅಪ್ಪನೋ ಅಬ್ಬೆಯೋ ಅಗಲಿದ ದುಃಖ ಬೇರೆ.
1.ಮದಾಲು ದೂರ ಇದ್ದ ಮಕ್ಕೊಗೆ , ಪುರೋಹಿತರಿಂಗೆ, ಅತೀ ಹತ್ತರಾಣ ಸಂಬಂಧಿಕರಿಂಗೆ ಹೇಳೆಕ್ಕು.
2. ಜೀವಹೋದ ದೇಹವ ನಾಲ್ಕು ಗಂಟೆಯೊಳ ದಹನ ಮಾಡೆಕ್ಕಡ.(ತುಂಬಾ ಹೊತ್ತು ಮಡಗಿರೆ; ಕೆಟ್ಟ ವೈರಸ್‌ ಬಪ್ಪದು).ಜೀವಲ್ಲಿಪ್ಪವಕ್ಕೆ ಇದು ದೋಶ.
3. ತೆಂಕು-ಬಡಗು ದರ್ಭೆಹಾಸಿ ,ಹಾಂಗೇ ತೆಂಕ ತಲೆಬಪ್ಪಾಂಗೆ ಮನುಷಿ;ದೊಡಾ ಬೆಳಿವೇಸ್ಟಿ ಮೋರೆಸಹಿತ ಮುಚ್ಚುವದು.
4. ಮೂರುಕುಡ್ತೆ ಅಕ್ಕಿಯ ಎರಡು ಪಾಲು ಮಾಡಿ  ಅದರ ಮೇಲೆ ಸೊಲುದ ತೆಂಗಿನಕಾಯಿಯ  ಒಡದು ಎರಡು ಕಡಿ ಮಾಡಿ, ಎರಡರಲ್ಲಿಯೂ ದನದ ತುಪ್ಪ ಹಾಕಿ ಅದಲ್ಲಿ ಕೋಲುತ್ರಿ(ಮಡ್ಳಕಡ್ಡಿಲಿ ಬೆಳಿವಸ್ತ್ರಸುಂದಿದ ಬತ್ತಿ)ಮಾಡಿ ಹೊತ್ತುಸಿ ತಲೆಯ ಮೇಲೆ ನೆಲಲ್ಲಿ ಮಡಗೆಕ್ಕು.ಇದಲ್ಲಿ ಆರಿದಾಂಗೆ ತುಪ್ಪ ಎರೆಕು .(ಈ ಮೂರರ ಸಂಖ್ಯೆ ಬೇರೆ ಸಂದರ್ಭಲ್ಲಿ ವರ್ಜಯ ಇದಕ್ಕಾಗಿ)
5. ಈ ಕಾಯಿಕಡಿಯ ಒಟ್ಟು ಜೋಡ್ಸಿಕಟ್ಟಿ ಹೆರಕೊಂಡೋಪಗ ಶವ ಮುಚ್ಚಿದ ವಸ್ತ್ರದ ಕೊಡಿಲಿ ಕಟ್ಟಿ ಒಟ್ಟಿಂಗೆ ಮಡಗಲಿದ್ದು.
6.ಮತ್ತೆ ಪಂಚಪಾತ್ರೆ(ಚೆಂಬು ಅಥವಾ ಹಿತ್ತಾಳೆ ಗ್ಲಾಸು)ಲಿ ಕಾಶಿತೀರ್ಥ ಇದ್ದರೆ ಅದರ ಸೇರ್ಸಿದ ನೀರುದೆ ಹಾಕಿ ಅದಕ್ಕೊಂದು ತುಳಸಿ ಹೂಗು, ಸಕ್ಕಣ, ಹಾಕಿ ಮಡಗೆಕ್ಕು.
7.ಬಂದವೆಲ್ಲ ಶವದ ಮೋರೆಂದ ಚೂರು ವಸ್ತ್ರ ಜಾರ್ಸಿ ಕಾಶಿತೀರ್ಥ ಬಾಯಿಗೆ ಬಿಟ್ಟು ಹೊಡಾಡಿಕ್ಕಿ ಹೋಪಕ್ರಮ.
8.ಶವ ಮನುಷೆಂಡಿಪ್ಪಗ ದಹನಕ್ಕೊರೆಗೆ ಸುಮ್ಮನೆ ಕೂರದ್ದೆ ವಿಷ್ಣು ಸಹಸ್ರನಾಮ ಅಥವಾ ಭಗವದ್ಗೀತೆ ಓದಿರೆ ಎಲ್ಲಾ ರೀತಿಂದಲೂ ಒಳ್ಳೆದು.
9.ಎಂಗೊ ಮಕ್ಕೊ ಅಬ್ಬೆ+ಅಪ್ಪನ ಸಂದರ್ಭಲ್ಲಿ ಓದಿದ್ದಿಯೊಂ.
10.ಬಂದವಕ್ಕೆ ದಹನಕಳುದು ಹೋಪಗ ಅಕ್ಕಿ+ ತೆಂಗಿಕಾಯಿ ಕೊಟ್ಟು ಕಳುಸುವ ಕ್ರಮ ಇದ್ದು .
11.ಜೀವಹೋದ ಶವ ಮನುಷಿದ ಲಾಗಾಯ್ತಿಂದ ದಹನ ಕಾರ್ಯ ಮುಗಿವ ವರೆಗೆ ಆ ಮನೆಲಿ ಒಲಗೆ ಕಿಚ್ಚಾಕಿ, ಆಹಾರ, ಪಾನೀಯವಾಗಲೀ ಎಂತದೂ ತಯಾರುಸಲೆ ಆಗ.ಕೊಡ್ಳೂ ಆಗ.(ಅದಕ್ಕಾಗಿಯೇ ಈ ಸಂದರ್ಭ ಹೊರತಾಗಿ ಮನಗೆ ಬಂದವಕ್ಕೆ ಆಸರಿಂಗೆ ಕೊಡದ್ದೆ ಇಪ್ಪಲೂ ಕುಡಿಯದ್ದೆ ಇಪ್ಪಲೂ ಆಗ ಹೇಳುವ ಶಾಸ್ತ್ರ.)
12.ಹಶುವಪ್ಪ ಕುಞ್ಞಿಮಕ್ಕೊ ಇದ್ದರೆ ಹತ್ತರಾಣ ಮನಗೆ ಕರಕ್ಕೊಂಡು ಹೋವುತ್ತವು.
13.ಹಾಂಗೇ ಬೇರೆ ಆರೇ ನೆಂಟ್ರು ಅಲ್ಲಿಗೆ ಬಂದವು ದಹನ ಮುಗಿಯದ್ದೆ ಹಿಂತಿರುಗಲಾಗ.ಬಂದವಕ್ಕೆ ಆಸರಿಂಗೆ ಕೇಳುವ,ಕೊಡುವ ಕ್ರಮ ಈ ಸಂದರ್ಭಲ್ಲಿ ನಿಷಿದ್ಧ.(ಈ ಕಾರಣಂದ ನಿತ್ಯಲ್ಲಿ ಬಂದವಕ್ಕೆ ಆಸರಿಂಗೆ ಕೊಡದ್ದೆ ಕಳುಗಲಾಗ ಹೇಳುವದು.)
 14.ಅಡಕೆ ಮರದ ಸಳಕ್ಕೆಯ  ಅಡ್ಡ+ನೀಟ ಮಡಗಿಕಟ್ಟಿ ಅದರ ಮೇಲೆ ಹಸಿಮಡಲು(ತೆಂಗಿನ ಮಡಲು)ಮಡಗಿ ಅದರಮೇಲೆ ಶವ ಮನುಷುವ ಕ್ರಮ.ಅದಕ್ಕಾಗಿಯೇ ಶವ ಸುಡ್ಕಳಕ್ಕೆ ಕೊಂಡೋಪಗ ಎಲ್ಲರೂ *ನಾರಾಯಣ ,ನಾರಾಯಣ*  ಹೇಳುವ ಕ್ರಮ ಇದ್ದು.
ಹಸಿಮಡಲು ತುಂಡುಮಾಡದ್ದೆ ಹಾಕುದು ಈ ಸಮಯಲ್ಲಿ.ಅದಕ್ಕಾಗಿಯೇ ಬೇರೆ ಸಮೆಲಿ  ಇಡೀ ತಂದು ಜಾಲ್ಲಿ ಹಾಕಲಾಗ ಹೇಳ್ತವು.
15.ಮತ್ತೊಂದು ವಿಷಯ ಕಾಷ್ಟ ಮಾಡ್ಳೆ ಉಪಯೋಗ ಮಾಡಿದ ಕೊಟ್ಟು (ಹಾರೆ),ಪಿಕ್ಕಾಸುಗಳ ಹನಿಕ್ಕಾಲ್ಲಿ ತಂದು ಮಡಗುದು.ಈ ವಿಷಯಕ್ಕಾಗಿಯೇ ನಿತ್ಯಲ್ಲಿ
 ಪಿಕ್ಕಾಸು ಹನಿಕ್ಕಾಲ್ಲಿ(ಮಾಡಿನಕರೆ)ಮಡಗಲಾಗ.
ಹಾಂಗೇ  ಮಕ್ಕೊ ಮಿಂದು ಚೆಂಡಿ ಹಿಂಡದ್ದೆ ಪ್ರತಿ ಕಾರ್ಯ ವನ್ನೂ ಮಾಡುವ ಕ್ರಮ.(ಅದಕ್ಕಾಗಿಯೇ ಬೇರೆ ದಿನಲ್ಲಿ ಚೆಂಡಿ ಹಿಂಡದ್ದೆ ಒಳಬಪ್ಪಲಾಗ ಹೇಳುದು.)
16.ಬಂದವು ದಹನಕಾರ್ಯ ಮುಗುದು ಅವರ ಮನಗೆ ವಾಪಾಸು ಹೋಗಿ ಮದಾಲು  ಅನಿಶುದ್ಧಿ (ದನದ ತುಪ್ಪ) ತಲಗೆ ,ಹೊಕ್ಕುಳಿಂಗೆ ಹಾಕಿ ಅಭ್ಯಂಜನ  ಮೀಯದ್ದೆ ಒಳಹೋಪಲಾಗ.(ಅನಿಶುದ್ಧಿ ವೈರಸ್ ನಿರೋಧಕ)
17.ಇವು ಆಸರಿಂಗೆ ನೀರು ಕುಡಿಯೆಕ್ಕಾರೂಲ ಮೀಯೆಕ್ಕು.(ಈ ಸಮಯಲ್ಲೇ ಕೆಟ್ಟ ವೈರಸ್ ಉಂಟಪ್ಪದು ಹಾಂಗಾಗಿಯೇ ಹೊಟ್ಟಗೆ ಎಂತದೂ ತೆಕ್ಕಂಬಲಾಗ).
18.ಅವರವರ ಆರೋಗ್ಯ ಕಾಪಾಡ್ಳೆ ನಮ್ಮ ಹವ್ಯಕರಿಂಗೆ ಪೂರ್ವ ಪರಂಪರೆಂದಲೇ ಬಂದ ಕಟ್ಟುಕಟ್ಟಳೆ.
19.ಹವ್ಯಕರ ಈ ಒಂದು ಸಂದರ್ಭಲ್ಲಿ ಹರಿಜನರಿಂಗೂ ರಜಾ ಕೆಲಸ ಎಂತಾಳಿರೆ; ಕಾಷ್ಟದ ತಯಾರಿ ಗಂಡಿ+ ಮಾವಿನಮರದ ಸೌದಿ + ತೆಂಗಿನಕಾಯಿಸಿಪ್ಪೆ ತಯಾರಿಮಾಡಿಕೊಡುವದು ಹರಿಜನರು.
20.. ದಹನ ಮಾಡಿಕ್ಕಿ ಬಪ್ಪಾಗ ಮೃತರ ಮಕ್ಕೊ ಹಿಂತಿರುಗಿ  ನೋಡ್ಳಾಗ. ಮಾರಣೆ ದಿನ ಉದಿಯಪ್ಪಗಳೆ ಅಲ್ಲಿಗೆ ಹೋಗಿ ನೋಡುವದು.
21. ಮಾರಣೆದಿನ ಉದಿಯಪ್ಪಗ ಮೃತರ ಮಕ್ಕೊ ದಹನಮಾಡಿದ ಜಾಗ್ಗೆ ಹೋಗಿ ಎಲ್ಲಾ ಸರಿಯಾಗಿ ಹೊತ್ತಿದ್ದೋ ನೋಡೆಕ್ಕು. ಬಾಕಿಇದ್ದರೆ ಅದರೆಲ್ಲಾ ಕೂಡ್ಸಿ ಹೊತ್ತುಸೆಕ್ಕು.
22.ದಹನ ಮಾಡಿದ ಮರುದಿನದ ಉದಿಯಪ್ಪಗಂದ ದಶಕ್ರಿಯೆವರೆಗೆ  ಚೆರು(ಬೆಳ್ತಿಗೆಅಕ್ಕಿ,ನೀರು ಇಂಗಿಸಿದ ಅನ್ನ)ಮಡಗಿ ಜಾಲ ತಲೆಲಿ ಅಂತ್ಯೇಷ್ಟಿ ಹೇಳಿ ಒಂದು ಕಾರ್ಯ ಹಿರಿಮಗ ಮಾಡ್ಳಿದ್ದು.ಅದಕ್ಕೆ ಎಲ್ಲಾ ಮಕ್ಕಳೂ ಸೇರೆಕ್ಕು.
23. ಸತ್ತ ನಾಲ್ಕನೆ ದಿನ ಬೂದಿಕೂಡುವ ಶಾಸ್ತ್ರ(ಇದಕ್ಕೆ ಪುರೋಹಿತರು ಬರೆಕು)ಇದ್ದು.ದಹನ ಮಾಡಿದಲ್ಲಿಂದ ಎಲುಬಿನ ತುಂಡು ತೆಗದು ಮಡಗುವ ಕ್ರಮ(ತೀರ್ಥ ಕ್ಷೇತ್ರಂಗೊಕ್ಕೆ ಹೋಗಿ ಕ್ಷೇತ್ರಪಿಂಡ ಹಾಕ್ತರೆ ತೆಗದು ಮಡಗುತ್ತವು(ಮನೆಒಳ ಮಡಗಲಿಲ್ಲೆ)ತೆಂಗಿನಮರಕ್ಕೆ ಕಟ್ಟಿಯೋ ಕೊಟ್ಟಗೆ ಮಾಡಿಲ್ಲಿಯೋ ಮಡಗುತ್ತವು.)
24. ಕರ್ತೃ  (ಹಿರಿಮಗ), ದಶ, ಹನ್ನೊಂದರಲ್ಲಿ ಬೊಜ್ಜ, ಹನ್ನೆರಡರಲ್ಲಿ ಶಪಿಂಡಿ. ಅದರಮಾರಣೆದಿನ ಪತಂಗ.(ಇದು ಕಳುದ ಮೇಲಾತಷ್ಟೆ ಹಿರಿಮಗ; ಮನೆ ಹೆರಡ್ಳೆ)
25. ಕುಟುಂಬದವಕ್ಕೆ ಹತ್ತು ದಿನ ಸೂತಕ.ನಿತ್ಯಪೂಜೆ ಶುಭಕಾರ್ಯ ಏವದೂ ಆಗ.
26. ಅಬ್ಬೆ+ಅಪ್ಪನ ಋಣವ ಮಕ್ಕೊಗೆ ತೀರ್ಸಲೆಡಿಯಡ. ಅವರ ಅಂತ್ಯಕಾರ್ಯವ ಲೋಪ ಇಲ್ಲದ್ದೆ ಮಾಡಿರೆ; ಕಿಂಚಿತ್ತಾದರೂ ಕರ್ತವ್ಯ ಮಾಡಿದಾಂಗೆ ಹೇಳುಗು ಪುರೋಹಿತರು.
27.ಈ ಸಮಯಲ್ಲಿ  ಕುಂಬಳಕಾಯಿ ಕೊರದು ಒಂದು ಕ್ರಿಯೆ ಇರ್ತು.
28. ಹವ್ಯಕರಲ್ಲಿ  ನಿತ್ಯ ಹೊರತಾಗಿ ಶುಭಕಾರ್ಯಕ್ಕೆ ಕುಂಬಳಕಾಯಿ ಉಪಯೋಗ ಇಲ್ಲೆ.ಪೂಜಗೆ ಅಡ್ಡಿಇಲ್ಲೆ.(ಆದರೆ..ನೂತನ ವಧೂವರರ ಊಟಕ್ಕೆ ದೆನಿಗೇಳ್ತರೆ ಆಗ.)
29. ನಾವು ಜನ್ಮದಿನಾಚರಣೆ ನಕ್ಷತ್ರ (ನಿತ್ಯ ನಕ್ಷತ್ರ )ಹೊಂದಿಗೊಂಡು ಮಾಡುವದು.ತಿಥಿಮಾಡುವದು ಹಿರಿಯವು ಸತ್ತದಿನ ಏವ ತಿಥಿ ಬತ್ತೋ(15 ತಿಥಿ ಗಳಲ್ಲಿ) ಅದರ ನೋಡಿ ಮಾಡುವದು.
30. ಹುಟ್ಳೆ ಹುಣ್ಣಮೆಯೂ ಸಾವಲೆ ಅಮವಾಸ್ಯೆ ಅಥವಾ ದ್ವಾದಶಿ  ಒಳ್ಳೆದು ಹೇಳ್ತು ಕೇಳಿದ್ದೆ.ನಾವು ಬಯಸಿದಾಂಗೆ ಒಂದೂ ಆವುತ್ತಿಲ್ಲೆ. ಮತ್ತೆ ಒಳ್ಳೆದು+ಕೆಟ್ಟದು ಎಲ್ಲಾ ನಕ್ಷತ್ರ ತಿಥಿಗಳಲ್ಲೂ ಇದ್ದದೆ
ವಿ.ಸೂ –ಎನ್ನ ಗಮನಕ್ಕೆ ಬಂದದರ ಬರದ್ದೆ. ಇದಲ್ಲಿ ಕೆಲವು ಬಿಟ್ಟು ಹೋದ್ದದೂ ಇಕ್ಕು.
~~~~****~~~~~
(ಲೇ~~ವಿಜಯಾಸುಬ್ರಹ್ಮಣ್ಯ,ಕುಂಬಳೆ).

2 thoughts on “ಶುದ್ಧ ಮುದ್ರಿಕೆ-ಭಾಗ-5(ಕ್ಷಯ ಸೂತಕ)

  1. ಒಳ್ಳೆ ಮಾಹಿತಿ ಇಪ್ಪ ಶುದ್ದಿ.

  2. ಉಪಯುಕ್ತ ಲೇಖನಮಾಲೆ ಸುರುಮಾಡಿದ್ದಿ. ಕೊಶಿ ಆತು. ಮಾಹಿತಿಗೊ ತಿಳುವಳಿಕೆಗೆ ಬಂದುಗೊಂಡಿರಲಿ . ನಮಸ್ಕಾರ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×