Oppanna.com

ಸ್ವಯಂವರ : ಕಾದಂಬರಿ : ಭಾಗ 06 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   01/07/2019    1 ಒಪ್ಪಂಗೊ

ಒಪ್ಪಕ್ಕನ ಹೋಟೆಲಿಂಗೆ ಕರಕ್ಕೊಂಡು ಹೋಗಿ ದೋಸೆ ತಿನ್ಸಿಕ್ಕಿ ,ಅಲ್ಲಿಯೇ ಹತ್ತರೆ ಇಪ್ಪ ಒಂದು ಜವುಳಿ ಅಂಗಡಿಂದ ಅದಕ್ಕೆ ನಾಲ್ಕು ಅಂಗಿ ಅದೂ,ಇದೂ ಎಲ್ಲ ತೆಗದು ಕೊಟ್ಟು, ಅಲ್ಲೇ ಹತ್ತರೆ ಇಪ್ಪ ಗುರ್ತದವರ ಮನಗೆ ಕರಕ್ಕೊಂಡು ಹೋಗಿ ಒಪ್ಪಕ್ಕನ ಲಾಯ್ಕಲ್ಲಿ ಮೀಶಿ ,ಹೊಸ ಅಂಗಿ ಹಾಕ್ಸಿ, ಪೌಡರು,ಬೊಟ್ಟು ಎಲ್ಲ ಹಾಕಿ ಆಸ್ಪತ್ರೆಗೆ ಬಪ್ಪಗ ಅಲ್ಲಿ ಗೌಜಿಯೋ ಗೌಜಿ.

“ವೋಪರೇಷನ್ ಮಾಡಿದಲ್ಲಿಂದ ಹೆರ ತಂದು ಮನುಶಿದ ಕೂಡ್ಲೇ ಸುಶೀಲಂಗೆ ನೆಂಪಾದ್ದು ಒಪ್ಪಕ್ಕ°.

” ಎನ್ನ ಮಗಳೆಲ್ಲಿದ್ದು…ಎನಗೀಗ ಅದರ ನೋಡೆಕು.. ಮಗಳೂ….ಒಪ್ಪಕ್ಕೋ…..ಬಾ…..ಎಲ್ಲಿದ್ದೇ…..” ಕೈಗೆ ಸಿಕ್ಕುಸಿದ ವಯರುಗಳ ಎಲ್ಲ ಎಳದಿಡ್ಕಿ ಅದು ಆರ್ಭಟೆ ಕೊಡ್ಲೆ ಸುರು ಮಾಡಿತ್ತು.

“ನಿಂಗಳ ಮಗಳು ಈಗ ಬಕ್ಕು. ಅದರೊಟ್ಟಿಂಗೆ ಆರೋ ಹೆಮ್ಮಕ್ಕೊ ಇತ್ತಿದ್ದವು. ಊಟ ಕೊಡ್ಲೋ ಮತ್ತೋ ಕರಕ್ಕೊಂಡು ಹೋಗಿಕ್ಕು” ಹೇಳಿ ಅಲ್ಲಿಪ್ಪ ನರ್ಸುಗೊ ಎಲ್ಲ ಹೇಳಿರೂ ಅದು ಕೇಳಿದ್ದೇಯಲ್ಲೆ.

“ಎನಗಾರೂ ಇಲ್ಲೆ.ಆರಾರು ಎನ್ನ ಮಗಳ ಕದ್ದೊಂಡು ಹೋದ್ದಾದಿಕ್ಕು.ಎನ್ನ ಮಗಳೊ..ನಿನ್ನ ನೋಡೆಕೆನಗೆ.ನಿನ್ನ ಅಮ್ಮ ದಿನಿಗೇಳ್ತು..ಬೇಗ ಬಾ..ಎನ್ನ ಮಗಳ ಒಂದರಿ ಕರಕ್ಕೊಂಡು ಬನ್ನೀ. ಅದಕ್ಕೆ ಹೆದರಿಕೆ ಅಕ್ಕು….” ಇದರ ಬೊಬ್ಬೆ, ಗಲಾಟೆ ನೋಡಿ ಅಲ್ಲಿಪ್ಪವಕ್ಕೆಲ್ಲ ಕೋಪವೇ ಬಂತು.

“ನೀನು ಹೀಂಗೆ ಗಲಾಟೆ ಮಾಡ್ಲಾಗ,ಇಲ್ಲಿಪ್ಪವಕ್ಕೆಲ್ಲ ತೊಂದರೆ ಆವ್ತು. ಸುಮ್ಮನೇ ಹರಟೆ ಮಾಡದ್ದೆ ಕಣ್ಣು ಮುಚ್ಚಿ ಮನುಗು.ಬಾಳಂತಿಗೊ ಹಾಂಗೆ ಬೊಬ್ಬೆ ಹಾಕಲಾಗ”

ಅಂದರೂ ಅದು ಕೇಳಿದ್ದೇಯಿಲ್ಲೆ.ಮನುಗಿದಲ್ಲಿಂದಲೇ ಉರುಡಿ ಹೊಡಚ್ಚಿ ಆರ್ಭಟೆ ಕೊಡ್ಲೆ ಸುರು ಮಾಡ್ಯಪ್ಪಗ ನರ್ಸುಗೊ ಡಾಕ್ಟರ ಹತ್ತರೆ ಹೋಗಿ ಹೇಳಿದವು. ಡಾಕ್ಟರ ಬಂದು ಅದಕ್ಕೆ ಸಮದಾನ ಮಾಡಿತ್ತು.

“ಈ ಸಮಯಲ್ಲಿ ನಿಂಗೊ ಹೀಂಗೆ ಆರ್ಭಟೆ ಹಾಕಿ ಗಲಾಟೆ ಮಾಡಿ, ಬೊಬ್ಬೆ ಹಾಕಿರೆ ನಿಂಗಳ ಆರೋಗ್ಯ ಹಾಳಕ್ಕು.ಈಗ ಎಂಗೊ ಸೂಜಿ ಕುತ್ತಿ ಒರಗುಸೆಕಾತು.ಆದರೆ ನಿನ್ನ ಮಗಂಗೆ ಹಾಲು ಕೊಡೆಡದೋ? ಹಾಂಗಾಗಿ ಆ ಕೆಲಸ ಮಾಡದ್ದದು.ಮಗಳು ಈಗ ಬಕ್ಕು” ಡಾಕ್ಟರ್ ಹಾಂಗೆ ಹೇಳಿಕ್ಕಿ ಹೆರ ಬಂದಪ್ಪಗ ಸುಶೀಲನ ಉರುಳಾಟ,ಬೊಬ್ಬೆ ಕಮ್ಮಿ ಆದರೂ ಕೂಗುದು ನಿಲ್ಸಿದ್ದಿಲ್ಲೆ.

“ಎನ್ನ ಮಗಳೂ….ಎನ್ನ ಬಿಟ್ಟಿಕ್ಕಿ ಎಲ್ಲಿಗೋದೇ…..ಎನಗೀಗ ಮಗಳು ಬೇಕು…..ಅಯ್ಯೋ ದೇವರೇ ಅಂದು ಎನ್ನಬ್ಬೆಯು ಎನ್ನ ಕಾಣದ್ದಿಪ್ಪಗ ಹೀಂಗೇ ಕೂಗಿಕ್ಕು. ಅದೇ ಗತಿ ಎನಗೂ ಆತನ್ನೇ..ಅಬ್ಬೇ…‌.ಎನ್ನದು ತಪ್ಪಾತು……ಅಬ್ಬೇ…..ಅಬ್ಬೇ…..”
ಅದೇ ಹೊತ್ತಿಂಗೆ ದೊಡ್ಡಮ್ಮನು, ಒಪ್ಪಕ್ಕನು ಅಲ್ಲಿಗೆತ್ತಿದವು.ಅವರ ಕಂಡ ಕೂಡ್ಲೆ ಲಿಲ್ಲಿ ನರ್ಸು ಓಡಿಂಡು ಬಂದು ಹೇಳಿತ್ತು
“ಅಕ್ಕಾ° ಇಲ್ಲಿ ಕೆಳಾಣ ಅಂತಸ್ತಿಲ್ಲಿ ನಿಂಗಳ ಪೈಕಿಯವು ಆರೋ ಐಸಿಯುವಿಲ್ಲಿ ಇದ್ದವಾಡ.ನಿಂಗಳ ಯೆಜಮಾನರು ನಿಂಗೊ ಬಂದಪ್ಪಗ ಅಲ್ಲಿಗೆ ಕಳ್ಸಲೆ ಹೇಳಿದ್ದವು”

ದೊಡ್ಡಮ್ಮಂಗೆ ರಜ ಗಡಿಬಿಡಿ ಆತು.ಅವು ಒಂದು ಶಾಲೆಲಿ ಟೀಚರು.ಅವರೊಟ್ಟಿಂಗೆ ಕೆಲಸ ಮಾಡುವ ಮತ್ತೊಂದು ಟೀಚರು ಹೆರಿಗೆಗೆ ಈ ಆಸ್ಪತ್ರೆಗೆ ಬಂದ ಕಾರಣ ಅವು ಅದರ ನೋಡ್ಲೆ ಬೇಕಾಗಿ ಇಲ್ಲಿಗೆ ಬಂದದು. ಇಲ್ಲಿಗೆತ್ತುಗ ಅದರ ಹೆರಿಗೆಗೆ ಕರಕ್ಕೊಂಡು ಹೋಯಿದವು ಹೇಳಿ ಗೊಂತಾಗಿ ವಾಪಾಸು ತಿರುಗಿ ಹೆರಟಪ್ಪಗ ಅವಕ್ಕೆ ಸುಶೀಲನ ಕಂಡದು.ಹೆರಿಗೆ ಬೇನೆಲಿ ಹೊಡಚ್ಚುವ ತಂಗೆ ಹತ್ತರೆ ಹೋಗಿ ಧೈರ್ಯ ಹೇಳೆಕು ಹೇಳಿ ಗ್ರೇಶಿರೂ ಮನಸು ಒಂದರಿ ಉಯ್ಯಾಲೆ ಆಡಿತ್ತು.

ಬೇಕೋ,ಬೇಡದೋ ಹೇಳುವ ಆಲೋಚನೆಲಿಪ್ಪಗ ನರ್ಸುಗೊ ಗಡಿಬಿಡಿಲಿ ಓಡುದು ಕಂಡದು.ಒಟ್ಟಿಂಗೆ ಒಪ್ಪಕ್ಕನೂ ಕೂಗಿಂಡು ಹೆರ ಬಂದದು. ಇಷ್ಟರವರೆಗೆ ಆ ಕೂಸಿನ ಕಾಣದ್ದರೂ ಅದರ ಗಡ್ಡದ ಹತ್ತರೆ ಇಪ್ಪ ಸಣ್ಣ ಚುಕ್ಕೆಯ ಹಾಂಗಿದ್ದ ಮಜ, ಸುರುಳಿ ಸುರುಳಿ ತಲೆಕಸವು,ಕಣ್ಣೀರು ತುಂಬಿಂಡಿದ್ದರೂ ಪಟಪಟ ಬಡಿವ ಚೆಂದದ ರೆಪ್ಪೆ ಇಪ್ಪ ಕಣ್ಣುಗೊ ಇದೆಲ್ಲ ಸುಶೀಲನ ಮಗಳೇ ಈ ಒಪ್ಪಕ್ಕ° ಹೇಳಿ ಗುರುತಿಸುಲೆ ಕಷ್ಟವೇ ಆಯಿದಿಲ್ಲೆ.

ಗೆಂಡ ಬೇಡ ಹೇಳಿರೂ ಅದರ ಅವಸ್ಥೆ ಕಂಡು ಕರಕ್ಕೊಂಡು ಹೋದ್ದದವು.

ಆ ದಿನೇಸ ಹೇಂಗೆ ನೋಡಿಕೊಳ್ತೋ,ಹೊಟ್ಟೆ ತುಂಬ ಊಟ ಆದರು ಕೊಡ್ತೋ ಇಲ್ಯೋ? ಅಪ್ಪನಮನೆಲಿ ಎಲ್ಲದರಲ್ಲೂ ಹೆರಿ ಪಾಲು ಎನಗೆ ಹೇಳಿ ತರ್ಕಮಾಡಿಯಾದರು ತೆಕ್ಕೊಂಡಿದ್ದ ಸುಶೀಲಂಗೆ ಈಗ ಹೀಂಗಿದ್ದ ಸ್ಥಿತಿ ಬಂದರೆ ತಡವಲೆಡಿಗೋ……’

“ಮೇಡಂ..ಈ ಮಗುವಿನ ನೋಡೆಕೂಳಿ ಆಗಂದ ಗಲಾಟೆ ಮಾಡ್ತಾಯಿದ್ದವು.ಒಂದರಿ ಬೇಗ ಕರಕ್ಕೊಂಡು ಹೋಗಿ.ಎಂಗೊಗೆ ಆ ರೋಗಿಯ ಹಠ ನೋಡಿಯೇ ಬೊಡುದತ್ತು ” ಇವರ ದೂರಂದ ಕಂಡ ಮತ್ತೊಂದು ನರ್ಸು ಬಂದು ಹೇಳಿತ್ತು.

ಈಗ ದೊಡ್ಡಮ್ಮಂಗೆ ಎಂತ ಮಾಡೆಕೂಳಿ ಗೊಂತಾಯಿದಿಲ್ಲೆ. ಒಪ್ಪಕ್ಕನ ಸುಶೀಲನ ಹತ್ರಂಗೆ ಕಳ್ಸಿಕ್ಕಿ , ಕೆಳ ಅಂತಸ್ತಿಲ್ಲಿಪ್ಪ ರೋಗಿಯ ನೋಡ್ಲೆ ಹೋಪದಾ, ಅಲ್ಲ, ಹಸಿ ಬಾಳಂತಿ ಕೂಗಿ ಗಲಾಟೆ ಮಾಡುಗ ಒಂದರಿ ಹೋಗಿ ಸಮದಾನ ಮಾಡುದಾ ..ಯೇವದರ ಮದಾಲು ಮಾಡುದು ,ಒಟ್ಟಾರೆ ಅಯ್ಯನಮಂಡೆ ಆತನ್ನೇಳಿ ಒಂದು ನಿಮಿಷ ಸುಮ್ಮನೇ ನಿಂದತ್ತು ದೊಡ್ಡಮ್ಮ.

“ದೊಡ್ಡಮ್ಮಾ..ನಾವು ಅಮ್ಮನ ನೋಡುವನಾ?” ಒಪ್ಪಕ್ಕ° ಸಣ್ಣಕೆ ಹೆದರಿ ಹೆದರಿ ದೊಡ್ಡಮ್ಮನ ಹತ್ತರೆ ಕೇಳಿತ್ತು.ಅದರ ಮಾತು ಕೇಳುಗ ದೊಡ್ಡಮ್ಮಂಗೆ ಎದೆಲಿ ಸಂಕಟ ಆತು‌.ಈ ಸಣ್ಣ ಪ್ರಾಯದ ಕೂಸು ಆಡಿಂಡು,ಕೊಣುಕ್ಕೊಂಡು ಸಂತೋಶಲ್ಲಿರೆಕಾದ್ದು ಬಿಟ್ಟು ಬೇರೆಯವರತ್ರೆ ಒಂದು ಅಕ್ಷರ ಮಾತಾಡ್ಲೆ ಎಷ್ಟು ಹೆದರುತ್ತು.ಇದಕ್ಕೆ ಕಾರಣ ಆರು?

“ಕೂಸುಗೊ ಯೇವಗಲೂ ಧೈರ್ಯಲ್ಲಿ ಇರೆಕು.ಆರಿಂಗೂ ಹೆದರ್ಲಾಗ.ನಮ್ಮ ಬುದ್ದಿ ಮಾತ್ರ ನಮ್ಮ ಕೈಲಿದ್ದರೆ ಆರತ್ರೆ ಮಾತಾಡ್ತರೂ ಹೆದರಿಕೆ ಇಲ್ಲೆ” ಅವು ಕೋಲೇಜಿಂಗೆ ಸೇರುವ ಸಮಯಲ್ಲಿ ಅಜ್ಜಿ ಹೇಳಿದ ಮಾತು ನೆಂಪಾತು.

ಇದೇ ಮಾತನ್ನೇ ಅಲ್ಲದೋ ಅಜ್ಜಿ ಸುಶೀಲಂಗೂ ಹೇಳಿದ್ದದು.ಆದರೆಂತ ಅದರ ರೂಪವೇ ಅದಕ್ಕೆ ಮುಳುವಾತು.ಬುದ್ದಿ ಉಪಯೋಗಿಸದ್ದೆ ‘ಚೆಂದ ಕಂಡವರ ಅಪ್ಪ° ‘ ಹೇಳಿ ಹೇಳುವಾಂಗೆ ಸುಶೀಲ ನಡವ ಹಜೆ ತಪ್ಪಿತ್ತು.

“ಛೇ…..ಈ ಬೇಡದ್ದ ಆಲೋಚನೆಗೊ ಬಂದರೆ ಹಾಂಗೇ. ಇಡೀ ದಿನ ತಲೆ ಹಾಳು.ಈಗಲೇ ಗಂಟೆ ಹನ್ನೆರಡಾಗಿಂಡು ಬಂತು.ಕೂಸಿಂಗೆ ಒರಕ್ಕು ತೂಗುತ್ತು ಪಾಪ! ಎಲ್ಲಿ ಮನುಶುದೋ, ಎಂತದಕ್ಕೂ ಇಲ್ಲಿವರೆಗೆ ಬಂದದಕ್ಕೆ ಸುಶೀಲನ ಕಂಡು ಒಂದರಿ ಮಾತಾಡ್ಸಿಕ್ಕಿಯೇ ಹೋಪದು ‘ ಹೇಳಿ ಒಪ್ಪಕ್ಕನನ್ನು ಕರಕ್ಕೊಂಡು ಸುಶೀಲ ಇಪ್ಪ ರೂಮಿನ ಬಾಗಿಲಿಂಗೆತ್ತಿಯಪ್ಪಗ ಹಿಂದಂದ ಆರೋ ” ಶೈಲಾ..ಬೇಗ ಬಾ…..” ಹೇಳುದು ಕೇಳಿ ದೊಡ್ಡಮ್ಮ, ಒಪ್ಪಕ್ಕ° ಇಬ್ರೂ ತಿರುಗಿ ನೋಡಿದವು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಈವರೆಗೆ:

ಪ್ರಸನ್ನಾ ಚೆಕ್ಕೆಮನೆ

One thought on “ಸ್ವಯಂವರ : ಕಾದಂಬರಿ : ಭಾಗ 06 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಕತೆ ರೈಸುತ್ತಾ ಇದ್ದು. ಮುಂದುವರಿಯಲಿ. ಕಂತುಗೊ ಸರಿಯಾಗಿ ಬತ್ತಾ ಇದ್ದು. ಅಂತೂ ಸುಖಾಂತ್ಯ ಖಂಡಿತಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×